Tag: ಕ್ಷಿಯೊಮಿ ಮೊಬೈಲ್

  • ರಿಪೇರಿ ವೇಳೆ ಬ್ಲಾಸ್ಟ್ – ಹೊತ್ತಿ ಉರಿದ ಮೊಬೈಲ್

    ರಿಪೇರಿ ವೇಳೆ ಬ್ಲಾಸ್ಟ್ – ಹೊತ್ತಿ ಉರಿದ ಮೊಬೈಲ್

    ಕೋಲಾರ: ರಿಪೇರಿ ಮಾಡುತ್ತಿದ್ದ ವೇಳೆ ಬ್ಲಾಸ್ಟ್ ಆಗಿ ಮೊಬೈಲ್ ಹೊತ್ತಿ ಉರಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿರುವ ಸಾಯಿರಾಂ ಎಂಟರ್ ಪ್ರೈಸಸ್‍ನಲ್ಲಿ ನಡೆದಿದೆ.

    ಅಂಗಡಿಯಲ್ಲಿ ಕೆಲಸ ಮಾಡುವ ಸುರೇಶ್ ಎಂಬುವರು ಇಂದು ಮುಂಜಾನೆ 10.30ರ ಸಮಯದಲ್ಲಿ ಚಾರ್ಜ್ ಹಾಕಿ ರಿಪೇರಿ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಕ್ಷಿಯೊಮಿ ಕಂಪನಿಯ ಮೊಬೈಲ್ ಹೊತ್ತಿ ಉರಿಯುತ್ತಿರುವ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಮಡಿವಾಳ ಗ್ರಾಮದ ವರುಣ್ ಕುಮಾರ್ ಎಂಬುವವರಿಗೆ ಸೇರಿದ ಮೊಬೈಲ್ ಇದಾಗಿದ್ದು, ರಿಪೇರಿಗೆಂದು ನೀಡಿದ್ದರು. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.