Tag: ಕ್ಷಿಪಣಿ ಪರೀಕ್ಷೆ

  • ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ

    ಯುದ್ಧ ಕಾರ್ಮೋಡ; ಭಾರತ ಸಮರಭ್ಯಾಸ – ಪಾಕ್‌ನಿಂದ ಫತಾಹ್ ಕ್ಷಿಪಣಿ ಪರೀಕ್ಷೆ

    ನವದೆಹಲಿ: ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತದ ಮೂರು ಸೇನೆಗೆ ಸಮರಭ್ಯಾಸವನ್ನು ಶುರು ಮಾಡಿದ್ದು ಈ ನಡುವೆ ಪಾಕಿಸ್ತಾನವು ಫತಾಹ್ ಕ್ಷಿಪಣಿಯನ್ನು (Pakistan Missile) ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ವರದಿಗಳು ತಿಳಿಸಿವೆ. ಈ ಕ್ಷಿಪಣಿಯು 120 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.

    ಪಾಕಿಸ್ತಾನದ ಸೇನೆಯು (Pakistan Army) ಈ ಕ್ಷಿಪಣಿಯನ್ನು ಗೌಪ್ಯ ಸ್ಥಳದಿಂದ ಉಡಾಯಿಸಿದೆ. ಫತಾಹ್ ಕ್ಷಿಪಣಿಯು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಶತ್ರು ಗುರಿಗಳನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಪರೀಕ್ಷೆಯು ಪಾಕಿಸ್ತಾನದ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಯುದ್ಧ ನಡೆದರೆ ನಾವು ಭಾರತದ ಜೊತೆ ನಿಲ್ಲಬೇಕು – ಪಾಕ್‌ನಲ್ಲಿರುವ ಪಶ್ತೂನ್‌ ಮುಸ್ಲಿಮರಿಗೆ ಕರೆ

    s 400 triumf india 1

    ಈ ಕ್ಷಿಪಣಿ ಪರೀಕ್ಷೆಯು ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಮತ್ತು ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಡೆದಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಎರಡೂ ದೇಶಗಳು ತಮ್ಮ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿವೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಯು ಪ್ರಾದೇಶಿಕ ಭದ್ರತೆಯ ಬಗ್ಗೆ ಹೊಸ ಆತಂಕಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 2 ಜಲವಿದ್ಯುತ್ ಯೋಜನೆಗಳಿಗೆ ಚಾಲನೆ – ಪಾಕ್‌ಗೆ ಶಾಕ್‌

    ಪಾಕಿಸ್ತಾನದ ಸೇನಾ ವಕ್ತಾರರೊಬ್ಬರು ಈ ಪರೀಕ್ಷೆಯನ್ನು ರಕ್ಷಣಾತ್ಮಕ ಕಾರ್ಯತಂತ್ರದ ಭಾಗ ಎಂದು ವಿವರಿಸಿದ್ದಾರೆ. ಈ ಕ್ಷಿಪಣಿಯು ದೇಶದ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಈ ಪರೀಕ್ಷೆಯ ಸಮಯವು ಭಾರತದೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆ ಜೋರಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ – ಮುಂದಿನ ಸಿಜೆಐ ಪೀಠಕ್ಕೆ ಅರ್ಜಿ ವರ್ಗಾವಣೆ

  • ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ

    ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ

    ನವದೆಹಲಿ: ಪಹಲ್ಗಾಮ್‌ ಪೈಶಾಚಿಕ ಕೃತ್ಯಕ್ಕೆ ಭಾರತ ಪ್ರತೀಕಾರದ ಪಣ ತೊಟ್ಟಿದೆ. ಕಾಶ್ಮೀರದಲ್ಲಿ ರಕ್ತಪಾತ ಹರಿಸಿದ ಉಗ್ರರನ್ನು ಹುಡುಕಿ ಹುಡುಕಿ ಯಾವ ಬಿಲದಲ್ಲಿ ಅಡಗಿದ್ದರೂ ಹೊರಗೆಳೆದು ಹೊಡೆಯುತ್ತೇವೆ. ಉಗ್ರರು ಊಹೆಯೂ ಮಾಡದಂತ ಶಿಕ್ಷೆ ಅನುಭವಿಸ್ತಾರೆ ಅಂತ ಪ್ರಧಾನಿ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ.

    ಬಿಹಾರದ ಮಣ್ಣಿನಲ್ಲಿ ನಿಂತು ಇಡೀ ಪ್ರಪಂಚಕ್ಕೆ ಸಾರಿ ಹೇಳ್ತಿದ್ದೇನೆ. ಪ್ರತಿಯೊಬ್ಬ ಭಯೋತ್ಪಾದಕ, ಸಂಚುಕೋರರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸ್ತೇವೆ ಅಂದಿದ್ದಾರೆ. ಅಲ್ಲದೆ, ಸಾರ್ವಜನಿಕ ರ‍್ಯಾಲಿ ಆರಂಭಕ್ಕೆ ಮುನ್ನ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು, ಮೋದಿ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ಎಂಐಎಂ ಮುಖ್ಯಸ್ಥ ಓವೈಸಿ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡ್ಬೇಕು ಅಂದಿದ್ದಾರೆ. ಈ ಮಧ್ಯೆ, ಉಗ್ರರ ಪಾಲಿನ ಸ್ವರ್ಗ ಪಾಕಿಸ್ತಾನಕ್ಕೆಕ್ಕೆ ಭಾರತ ರಾಕೆಟ್ ವಾರ್ನಿಂಗ್ ಕೂಡ ರವಾನಿಸಿದೆ.

    ಅರಬ್ಬೀ ಸಮುದ್ರದಲ್ಲಿ ಐಎನ್‌ಎಸ್ ಸೂರತ್ ನೌಕೆಯಿಂದ ಸಮರಾಭ್ಯಾಸ ಆರಂಭಿಸಿದೆ. ಜೊತೆಗೆ `ಆಕ್ರಮಣ್’ ಹೆಸರಿನಲ್ಲಿ ಸುಖೋಯ್, ರಫೇಲ್ ಜೆಟ್‌ಗಳ ಸಮೇತ ಡ್ರಿಲ್ ಮಾಡಿವೆ. ಪಾಕಿಸ್ತಾನ ಬೆಳಗ್ಗೆ ಕ್ಷಿಪಣಿ ಪ್ರಯೋಗ ಮಾಡಿದ್ದ ಒಂದೇ ಗಂಟೆಯಲ್ಲಿ ಭಾರತ ಕೂಡ ಯುದ್ಧಭ್ಯಾಸ ಮಾಡಿ ಮುಯ್ಯಿಗೆ ಮುಯ್ಯಿ ಕೊಡಲು ನಾವೂ ಸನ್ನದ್ಧರಿದ್ದೇವೆ ಅಂತ ಸಂದೇಶ ರವಾನಿಸಿದೆ.

    ದೇಶಿಯವಾಗಿ ನಿರ್ಮಿಸಲಾದ, ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯನ್ನು ಯುದ್ಧನೌಕೆ ʻಐಎನ್‌ಎಸ್‌ ಸೂರತ್‌ʼನಿಂದ ಅರಬ್ಭಿ ಸಮುದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

  • ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್

    ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್

    ಭುವನೇಶ್ವರ: ಅಳಿವಿನಂಚಿನಲ್ಲಿರುವ ಆಲೀವ್ ರಿಡ್ಲಿ (Olive Ridley) ಕಡಲಾಮೆಗಳ (Sea Turtles) ಸಂರಕ್ಷಣೆಗಾಗಿ ಒಡಿಶಾದ ವೀಲರ್ ದ್ವೀಪದಲ್ಲಿ (Wheeler Island ) ಜನವರಿಯಿಂದ ಮಾರ್ಚ್‌ವರೆಗೆ ಕ್ಷಿಪಣಿ ಪರೀಕ್ಷೆ ನಡೆಸದಿರಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನಿರ್ಧರಿಸಿದೆ.

    ಈ ಅವಧಿಯಲ್ಲಿ ಕಡಲಾಮೆಗಳು ಸಮುದ್ರ ಸಮೀಪದ ಭೂಪ್ರದೇಶಕ್ಕೆ ಬಂದು ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಕ್ಷಿಪಣಿ ಪರೀಕ್ಷೆಯಿಂದ ಉಂಟಾಗುವ ಭಾರಿ ಶಬ್ದ ಮತ್ತು ಬೆಳಕು ಈ ಆಮೆಗಳಿಗೆ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ಆಹಾರಕ್ಕಾಗಿ ಈ ಆಮೆಗಳನ್ನು ಬೇಟೆಯಾಡುವವರು ಮತ್ತು ಮೊಟ್ಟೆಗಳನ್ನು ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ತಳಿಯ ಆಮೆಗಳು ಅಳಿವಿನಂಚಿಗೆ ತಲುಪಿದೆ.

    ಯಾಂತ್ರೀಕೃತ ದೋಣಿಗಳು, ಕ್ಷಿಪಣಿ ಪರೀಕ್ಷೆ ಮತ್ತು ಜನರ ಚಲನೆಯು ಸಮುದ್ರ ಆಮೆಗಳ ಸಾಮೂಹಿಕ ಗೂಡುಕಟ್ಟುವ ಮತ್ತು ದ್ವೀಪದ ಸಂತಾನೋತ್ಪತ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.   ಇದನ್ನೂ ಓದಿ: ನಾನು 40 ವರ್ಷಗಳ ಕಾಲ ವಾರಕ್ಕೆ 85-90 ಗಂಟೆ ಕೆಲಸ ಮಾಡಿದ್ದೆ, ನನ್ನ ಶ್ರಮ ವ್ಯರ್ಥವಾಗಲಿಲ್ಲ: ನಾರಾಯಣ ಮೂರ್ತಿ

    ಮೀನುಗಾರಿಕಾ ದೋಣಿಗಳು ಆಮೆಗಳು ಮೊಟ್ಟೆಗಳನ್ನು ಇಟ್ಟಿರುವ ಜಾಗಗಳು ಇರುವ ಮರಳಿನ ಪಟ್ಟಿಗಳ ಹತ್ತಿರ ಹೋಗದಂತೆ ಸೇನೆ ಮತ್ತು ಕೋಸ್ಟ್ ಗಾರ್ಡ್‌ ಗಸ್ತು ಕಾಯುತ್ತಿವೆ.

    ಸುಮಾರು 6.6 ಲಕ್ಷ ಸಮುದ್ರ ಆಮೆಗಳು ಗಂಜಾಂ ಜಿಲ್ಲೆಯಲ್ಲಿರುವ ರುಶಿಕುಲ್ಯ ರೂಕೆರಿಯಲ್ಲಿ ಗೂಡುಕಟ್ಟಿವೆ. ಒಡಿಶಾ ಸರ್ಕಾರ (Odisha Government ) ಈಗಾಗಲೇ ನವೆಂಬರ್ 1 ರಿಂದ ಮೇ 31 ರವರೆಗೆ ಈ ಕರಾವಳಿ ಭಾಗದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿದೆ.

     

  • ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ

    ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ

    ಪ್ಯೊಂಗ್ಯಾಂಗ್: ಅಮೆರಿಕ (America) ಹಾಗೂ ದಕ್ಷಿಣ ಕೊರಿಯಾಗೆ (South Korea) ಎಚ್ಚರಿಕೆ ನೀಡುವ ಸಲುವಾಗಿ ಉತ್ತರ ಕೊರಿಯಾ (North Korea) ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (Missile Test) ನಡೆಸಿರುವುದಾಗಿ ತಿಳಿಸಿದೆ. ಕ್ಷಿಪಣಿ ಜಪಾನ್ (Japan) ಬಳಿಯಲ್ಲಿ ಪತನಗೊಂಡಿದ್ದು, ತೀವ್ರ ಆತಂಕ ಸೃಷ್ಟಿಸಿದೆ.

    ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಶನಿವಾರ ಹಠಾತ್ತನೆ ಕ್ಷಿಪಣಿ ಪರೀಕ್ಷೆ ನಡೆಸಲು ಆದೇಶಿಸಿರುವುದಾಗಿ ವರದಿಯಾಗಿದೆ. ಉತ್ತರ ಕೊರಿಯಾ ಮೊದಲ ಬಾರಿಗೆ ಪರೀಕ್ಷಿಸಿರುವ ಹ್ವಾಸಾಂಗ್-15 ಕ್ಷಿಪಣಿ ಪ್ಯೊಂಗ್ಯಾಂಗ್ ವಿಮಾನ ನಿಲ್ದಾಣದಿಂದ ಹಾರಿಸಲಾಗಿದೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    ಶನಿವಾರ ಈ ಕ್ಷಿಪಣಿ ಜಪಾನಿನ ಬಳಿ ಪತನವಾಗಿದೆ. ಕ್ಷಿಪಣಿ ಗುರಿಯನ್ನು ಹೊಡೆಯುವುದಕ್ಕೂ ಮೊದಲು 66 ನಿಮಿಷ ವಾಯುಪ್ರದೇಶದಲ್ಲಿ ಸಂಚರಿಸಿದೆ. ಇದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಅನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.

    ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿಯಾಗಿ ಯುದ್ಧಭ್ಯಾಸಗಳನ್ನು ನಡೆಸಲು ಮುಂದಾಗಿರುವುದರಿಂದ ಉತ್ತರ ಕೊರಿಯಾ ಇದನ್ನು ವಿರೋಧಿಸಲು ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ ಎನ್ನಲಾಗಿದೆ. ಕಳೆದ ವಾರ ಉತ್ತರ ಕೊರಿಯಾ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾದ ನಾಯಕತ್ವ ಶ್ಲಾಘಿಸಿಕೊಂಡಿದೆ. ಇದು ಮಾರಣಾಂತಿಕ ಪರಮಾಣು ಪ್ರತಿದಾಳಿಯ ಸಾಮರ್ಥ್ಯಕ್ಕೆ ನಿಜವಾದ ಪುರಾವೆಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k