Tag: ಕ್ಷಿಪಣಿ ದಾಳಿ

  • ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

    ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

    – ಇರಾನ್‌ ಅಣ್ವಸ್ತ್ರ ಘಟಕ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ
    – ಇಸ್ರೇಲ್‌ ಮಿಸೈಲ್‌ ದಾಳಿಗೆ ಹಿಜ್ಬುಲ್ಲಾ ಕಮಾಂಡರ್‌ ಖಲ್ಲಾಸ್‌

    ಟೆಲ್‌ ಅವಿವ್‌/ಟೆಹ್ರಾನ್‌: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ (Israel-Iran Conflict) 7ನೇ ದಿನಕ್ಕೆ ಕಾಲಿಟ್ಟಿದ್ದು, ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಮಿಸೈಲ್‌ ದಾಳಿ (Missile Strike) ಮುಂದುವರಿದಿದೆ. ಇರಾನ್‌ ಟೆಲ್‌ ಅವಿವ್‌ ಮೇಲೆ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಇಸ್ರೇಲ್‌ ಇರಾನಿನ ಅಣ್ವಸ್ತ್ರ ಘಟಕ (Khondab Nuclear Facility) ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ರೆ, ಇರಾನ್‌, ಇಸ್ರೇಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನಡುವೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕ್ರೊಯೇಷಿಯಾಗೆ ಮೋದಿ ಭೇಟಿ – ಪ್ರಧಾನಿ ಪ್ಲೆಂಕೋವಿಕ್ ಜೊತೆ ಹಲವು ಒಪ್ಪಂದಗಳಿಗೆ ಸಹಿ

    ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಅಟ್ಯಾಕ್‌
    7ನೇ ದಿನ ಇರಾನ್‌ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗೆ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ʻಬೀರ್‌ಶೆಬಾದಲ್ಲಿರುವ ಸೊರೊಕಾʼ (Soroka Hospital) ಧ್ವಂಸವಾಗಿದೆ. ಇದರಲ್ಲಿ ಸಾವುನೋವಿನ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಅಣ್ವಸ್ತ್ರ ಘಟಕ ಪ್ರದೇಶಗಳ ಮೇಲೆ ಟಾರ್ಗೆಟ್‌
    ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್‌, ಇರಾನ್‌ನ ಖೊಂಡಾಬ್ ಪರಮಾಣು ಘಟಕದ ಬಳಿಯಿರುವ ಭಾರೀ ನೀರಿನ ಸಂಪನ್ಮೂಲ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನ್ಯೂಕ್ಲಿಯರ್‌ ಘಟಕವೇ ಇಸ್ರೇಲ್‌ನ ಮುಂದಿನ ಟಾರ್ಗೆಟ್‌ ಆಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

    ಹಿಜ್ಬುಲ್ಲಾ ಕಮಾಂಡರ್‌ ಖಲ್ಲಾಸ್‌
    ಇನ್ನೂ ಇಸ್ರೇಲ್‌ ಬುಧವಾರ ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್‌ ಯಾಸಿನ್ ಇಜ್ ಎ-ದಿನ್ ಅವರನ್ನ ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಬ್ಯಾರಿಶ್‌ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಹತ್ಯೆಗೈಯಲಾಗಿದೆ ಎಂದಿದೆ. ಯಾಸಿನ್‌ ಲಿಟಾನಿ ನದಿ ವಲಯದಲ್ಲಿರುವ ಹೆಜ್ಬೊಲ್ಲಾದ ರಾಕೆಟ್ ಫಿರಂಗಿ ಘಟಕದ ಕಮಾಂಡರ್ ಆಗಿದ್ದರು. ಇದನ್ನೂ ಓದಿ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮತ್ತೆ ವಿಳಂಬ – ಜ್ವೆಜ್ಡಾ ಸೇವಾ ಮಾಡ್ಯೂಲ್‌ ದುರಸ್ತಿ ಬಳಿಕ ಮಿಷನ್ ಶುರು

  • ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ರಷ್ಯಾ ಮೇಲೆ ಉಕ್ರೇನ್‌ ದಾಳಿ

    ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ರಷ್ಯಾ ಮೇಲೆ ಉಕ್ರೇನ್‌ ದಾಳಿ

    ಮಾಸ್ಕೋ/ಕೈವ್‌: ರಷ್ಯಾದ (Russia) ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಒಪ್ಪಿಗೆ ನೀಡಿದ ಬೆನ್ನಲ್ಲೇ ಉಕ್ರೇನ್‌ (Ukraine) ಅಮೆರಿಕ ನಿರ್ಮಿತ ಕ್ಷಿಪಣಿಗಳಿಂದ (American Missiles) ದಾಳಿ ನಡೆಸಿದೆ. ಒಟ್ಟು 6 ಬ್ಲಾಲಿಸ್ಟಿಕ್‌ ಕ್ಷಿಪಣಿಗಳನ್ನು ತನ್ನ ಮೇಲೆ ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ‌ ಹೇಳಿಕೊಂಡಿದೆ.

    ಉಕ್ರೇನ್‌ ಗಡಿಯಿಂದ ಸುಮಾರು 130 ಕಿಮೀ ದೂರದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದ ಕರಾಚೆವ್ ನಗರದಲ್ಲಿರುವ ರಷ್ಯಾದ ಮಿಲಿಟರಿ ಸೌಲಭ್ಯ ಗುರಿಯಾಗಿಸಿ ಈ ದಾಳಿ ನಡೆದಿದೆ. ರಷ್ಯಾ ಸೇನೆಯನ್ನ ಗುರಿಯಾಗಿಸಿ ಉಕ್ರೇನ್‌ ಇದೇ ಮೊದಲ ಬಾರಿಗೆ ಈ ATACMS ಬ್ಯಾಲಿಸ್ಟಿಕ್‌ ಕ್ಷಿಪಣಿ ಪ್ರಯೋಗ ಮಾಡಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಉಕ್ರೇನ್‌ ಹೇಳಿಕೊಂಡಿರುವುದಾಗಿ ವರದಿಗಳು ತಿಳಿಸಿವೆ.

    ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿತ್ತು. ಇದರಿಂದ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

    1,000 ದಿನಗಳಲ್ಲಿ 10 ಲಕ್ಷ ಮಂದಿ ಸಾವು:
    2022ರ ಫೆಬ್ರವರಿ 24ರಂದು ಶುರುವಾದ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಬರೋಬ್ಬರಿ ಒಂದು ಸಾವಿರ ದಿನಗಳನ್ನು ಪೂರೈಸಿದೆ. ಈ ಘನಘೋರ ಯುದ್ಧದಲ್ಲಿ ಈವರೆಗೂ ಅಂದಾಜು 10 ಲಕ್ಷ ಮಂದಿ ಬಲಿ ಆಗಿದ್ದಾರೆ. ಲಕ್ಷಾಂತರ ಮಂದಿ ಗಾಯಗೊಂಡಿದ್ದಾರೆ. ಉಕ್ರೇನ್ ಜನಸಂಖ್ಯೆ ಶೇ.25ರಷ್ಟು ಮಂದಿ ಇಲ್ಲವಾಗಿದ್ದಾರೆ. ರಷ್ಯಾ ಜನಸಂಖ್ಯೆಯೂ ಇಳಿಮುಖವಾಗಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    ಉಕ್ರೇನ್‌ನ 40 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. 60 ಲಕ್ಷ ಮಂದಿ ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಷ್ಟೆಲ್ಲಾ ಆದ್ರೂ ಈ ಭೀಕರ ಯುದ್ಧ ನಿಲ್ಲುವಂತೆ ಕಾಣ್ತಿಲ್ಲ. ಇದು ಯುರೋಪ್ ಇತರೆಡೆಗಳಿಗೂ ಹಬ್ಬುವ ಆತಂಕವಿದೆ. ರಷ್ಯಾ ದಾಳಿ ನಡೆಸಬಹುದು.. ಔಷಧಿ, ಬೇಬಿ ಫುಡ್ ಸ್ಟಾಕ್ ಮಾಡಿಕೊಳ್ಳಿ ಎಂದು ನ್ಯಾಟೋ ಕೂಟ ಅಲರ್ಟ್ ಮಾಡಿದೆ.

    ಈ ಹೊತ್ತಲ್ಲೇ ಅಣ್ವಸ್ತ್ರಗಳ ಬಳಕೆಗೆ ಅನುಮತಿಸುವ ನಿಯಮಗಳನ್ನು ಸರಳೀಕರಿಸುವ ಕಡತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಹಾಕಿದ್ದಾರೆ. ಅಂದ ಹಾಗೇ, ಜನವರಿ ಆರಂಭದಲ್ಲಿ ಪುಟಿನ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ..ಆದ್ರೆ, ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಕ್ರೆಮ್ಲಿನ್ ತಿಳಿಸಿದೆ. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ

  • ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ನವದೆಹಲಿ: ಇಸ್ರೇಲ್ (Israel) ಮೇಲೆ ಇರಾನ್ ಕ್ಷಿಪಣಿ ದಾಳಿ (Iran Missile Attack) ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿದಿದ್ದು,ಇರಾನ್‌ಗೆ ಪ್ರಯಾಣಿಸದಂತೆ ಸರ್ಕಾರವು ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ.

    ಅಧಿಕಾರಿಗಳು ಇರಾನ್‌ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ (Embassy) ಸಂಪರ್ಕದಲ್ಲಿರಲು ಸೂಚಿಸಿದ್ದಾರೆ. ನಾವು ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಇತ್ತೀಚಿನ ಉಲ್ಬಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವವರು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    ದಯವಿಟ್ಟು ಜಾಗರೂಕರಾಗಿರಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಕ್ಕೆ ಹತ್ತಿರದಲ್ಲಿರಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಮ್ಮ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ಪರಿಹಾರ ಬಿಡುಗಡೆ

  • ಇಸ್ರೇಲ್‌ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಬಲಿ- ಇಬ್ಬರು ಗ್ರೇಟ್‌ ಎಸ್ಕೇಪ್‌

    ಇಸ್ರೇಲ್‌ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಬಲಿ- ಇಬ್ಬರು ಗ್ರೇಟ್‌ ಎಸ್ಕೇಪ್‌

    – ಮೃತನ ಪತ್ನಿ 7 ತಿಂಗಳ ಗರ್ಭಿಣಿ

    ಟೆಲ್‌ ಅವೀವ್: ಲೆಬನಾನ್‌ನಿಂದ ಉಡಾವಣೆಯಾದ ಕ್ಷಿಪಣಿ ದಾಳಿಗೆ (Missile Attack) ಭಾರತೀಯ ಮೂಲದ ಒಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಮೃತನನ್ನು ಕೇರಳದ (Kerala) ಕೊಲ್ಲಂ ಮೂಲದ ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ (31) ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಎಂದು ಗುರುತಿಸಲಾಗಿದ್ದು, ಇವರು ಕೂಡ ಕೇರಳ ಮೂಲದವರು ಎನ್ನಲಾಗಿದೆ.

    ಮ್ಯಾಕ್ಸ್‌ವೆಲ್ ಅವರು ಎರಡು ತಿಂಗಳ ಹಿಂದೆಯಷ್ಟೇ ಇಸ್ರೇಲ್‌ಗೆ (Israel) ಆಗಮಿಸಿದ್ದರು. ಆದರೆ ದುರಾದೃಷ್ಟವಶಾತ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್‌ ಅವರು ಪತ್ನಿ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಜೊತೆಗೆ ಇವರ ಪತ್ನಿ 7 ತಿಂಗಳ ಗರ್ಭಿಣಿ.

    ಗಾಯಾಳುಗಳ ಚೇತರಿಕೆ: ಕ್ಷಿಪಣಿ ದಾಳಿಯಿಂದಾಗಿ ಜಾರ್ಜ್ ಅವರ ಮುಖ ಮತ್ತು ದೇಹದ ಮೇಲೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಪೆಟಾಹ್ ಟಿಕ್ವಾದಲ್ಲಿರುವ ಬೈಲಿನ್ಸನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.‌ ಇತ್ತ ಸಣ್ಣ ಪುಟ್ಟ ಗಾಯಗೊಂಡಿರುವ ಇನ್ನೋರ್ವ ಯುವಕ ಮೆಲ್ವಿನ್‌ ಅವರನ್ನು ಉತ್ತರ ಇಸ್ರೇಲಿ ನಗರದ ಸಫೆಡ್‌ನಲ್ಲಿರುವ ಝಿವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರಾಗಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ – 104 ಮಂದಿ ಸಾವು

    ಘಟನೆ ಸಂಬಂಧ ಮೃತನ ತಂದೆ ಪಾಥ್ರೋಸ್ ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿ, ಸಂಜೆ 4.30 ರ ಸುಮಾರು ಸೊಸೆಯಿಂದ ಕರೆ ಬಂದಿದ್ದು, ತನ್ನ ಮಗ ಅಪಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿಸಿದ್ದಾಳೆ. ನಂತರ 12.30ರ ಸುಮಾರಿಗೆ ಮಗನ ಸಾವಿನ ಸುದ್ದಿ ತಿಳಿಯಿತು. ನನಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಇಸ್ರೇಲ್‌ನಲ್ಲಿದ್ದರೆ, ಓರ್ವ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು.

    ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗೆಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ದ ಮಾರ್ಗಲಿಯೊಟ್‌ನ ತೋಟಕ್ಕೆ ಕ್ಷಿಪಣಿ ದಾಳಿಯಾಗಿದೆ ಎಂದು ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (MDA) ಝಕಿ ಹೆಲ್ಲರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ದಾಳಿಯನ್ನು ಲೆಬನಾನ್‌ನ ಶಿಯಾ ಹೆಜ್ಬೊಲ್ಲಾ ಬಣ ನಡೆಸಿದೆ ಎನ್ನಲಾಗಿದೆ. ಇದು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಹಮಾಸ್‌ಗೆ ಬೆಂಬಲವಾಗಿ ಅಕ್ಟೋಬರ್ 8 ರಿಂದ ಉತ್ತರ ಇಸ್ರೇಲ್‌ನಲ್ಲಿ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದೆ.‌

  • ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ- 7 ಸಾವು, 90 ಮಂದಿಗೆ ಗಾಯ

    ಕೈವ್: ಉತ್ತರ ಉಕ್ರೇನ್‍ನ (Ukraine) ಐತಿಹಾಸಿಕ ನಗರವಾದ ಚೆರ್ನಿವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ (Russian Missile Strike) ನಡೆಸಿದೆ. ಘಟನೆಯಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿ, 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‍ನ ಆಂತರಿಕ ಸಚಿವಾಲಯ ತಿಳಿಸಿದೆ.

    ಧಾರ್ಮಿಕ ಆಚರಣೆಯ ಸಲುವಾಗಿ ಜನ ಚರ್ಚ್‍ಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಗಾಯಗೊಂಡವರಲ್ಲಿ 12 ಮಂದಿ ಮಕ್ಕಳು ಹಾಗೂ 10 ಮಂದಿ ಪೊಲಿಸ್ ಅಧಿಕಾರಿಗಳು ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ.

    ಈ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Zelenskiy) ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೆರ್ನಿವ್ (Chernihiv) ನಗರದ ಕೇಂದ್ರ ಭಾಗಕ್ಕೆ ರಷ್ಯಾ ಕ್ಷಿಪಣಿ ಅಪ್ಪಳಿಸಿದೆ. ಈ ಮೂಲಕ ರಷ್ಯಾ ಸೇನೆಯು ಎಂದಿನಂತೆ ಸಾಮಾನ್ಯವಾಗಿದ್ದ ದಿನವನ್ನು ದುಃಖ ಮತ್ತು ನಷ್ಟ ಆವರಿಸುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ. ಪೋಸ್ಟ್ ಜೊತೆಗೆ ವೀಡಿಯೋ ತುಣುಕು ಕೂಡ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ಚದುರಿದ ಅವಶೇಷಗಳು, ಹಾನಿಗೊಳಗಾದ ಕಾರಿಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಮೆರಿಕಾದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ, ಮಗು ದುರ್ಮರಣ

    ಚೆರ್ನಿವ್ ರಾಜಧಾನಿ ಕೈವ್‍ನ ಉತ್ತರಕ್ಕೆ ಶತಮಾನಗಳಷ್ಟು ಹಳೆಯದಾದ ಚರ್ಚ್‍ಗಳು ಇವೆ. ರಷ್ಯಾವು ಕಳೆದ ವರ್ಷ ಫೆಬ್ರವರಿಯಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ಕೀವ್: ರಷ್ಯಾ ವಾಯುಪಡೆಯು ಮಂಗಳವಾರ ಉಕ್ರೇನಿನ (Ukraine) ಕೀವ್ ಮೇಲೆ ನಡೆಸಿದ ದಾಳಿಯನ್ನ ತಡೆಯುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಗಿದ್ದು, ರಷ್ಯಾದ 18 ಕ್ಷಿಪಣಿಗಳನ್ನ (Cruise Missiles) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ತಡರಾತ್ರಿ ರಷ್ಯಾದ ಕ್ಷಿಪಣಿಗಳು ವಾಯು, ಸಮುದ್ರ ಹಾಗೂ ಭೂಸೇನೆ ಸೇರಿದಂತೆ ಮೂರು ವಿಭಾಗಳಿಂದ ಉಕ್ರೇನಿನ ರಾಜಧಾನಿ ಕೀವ್ ಮೇಲೆ ದಾಳಿ (Russian Air Attack) ನಡೆಸಿತ್ತು. ಆದ್ರೆ ಪಾಶ್ಚಿಮಾತ್ರ ರಾಷ್ಟ್ರಗಳು ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್ ರಷ್ಯಾ ದಾಳಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಯಾವುದೇ ಸಾವು ನೋವುಗಳಾಗಿಲ್ಲ ಎಂದು ತಿಳಿದುಬಂದಿದೆ.

    ರಷ್ಯಾ ಕಳೆದ ರಾತ್ರಿ ಉಕ್ರೇನ್ ರಾಜಧಾನಿಯನ್ನ ಗುರಿಯಾಗಿಸಿ MiG-31K ಯುದ್ಧವಿಮಾನದಿಂದ 6 Kinzhal ಏರೋ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಕಪ್ಪು ಸಮುದ್ರದ ಹಡಗುಗಳಿಂದ 9 ಕ್ರೂಸ್ ಕ್ಷಿಪಣಿ ಹಾಗೂ ಮೂರು ಭೂ ಆಧಾರಿತ S-400 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಲ್ಲದೇ ಇರಾನ್ ಡ್ರೋನ್‌ಗಳಿಂದಲೂ ದಾಳಿ ನಡೆಸಿತ್ತು ಎಂದು ಉಕ್ರೇನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೆ ಪ್ರತಿದಾಳಿ ನಡೆಸಿದ ಉಕ್ರೇನ್ ಅಮೆರಿಕ ನಿರ್ಮಿತ ಪೇಟ್ರಿಯಾಟಿಕ್ ಕ್ಷಿಪಣಿಗಳನ್ನು ಒಳಗೊಂಡಂತೆ ಉಕ್ರೇನಿನ ಮಿತ್ರರಾಷ್ಟ್ರಗಳು ಒದಗಿಸಿದ್ದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

    ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಸತತವಾಗಿ ಮುಂದುವರಿಸಿದೆ. ಈ ತಿಂಗಳಲ್ಲಿ ರಷ್ಯಾ 8ನೇ ಬಾರಿಗೆ ರಾಜಧಾನಿಯನ್ನು ಗುರಿಯಾಗಿಸಿ ವಾಯುಸೇನೆಯ ಮೇಲೆ ದಾಳಿ ನಡೆಸಿದೆ. ನಡುವೆ ಒಂದು ವಾರ ಬಿಡುವು ನೀಡಲಾಗಿತ್ತು. ಬಳಿಕ ಮತ್ತೆ ರಷ್ಯಾ ತನ್ನ ಆಕ್ರಮಣ ಮುಂದುವರಿಸಿದೆ. ಇದಕ್ಕೆ ವಿವಿಧ ದೇಶಗಳಿಂದ ಸಹಾಯ ಪಡೆಯುತ್ತಿರುವ ಉಕ್ರೇನ್ ಪ್ರತಿದಾಳಿಯನ್ನ ಸಮರ್ಥವಾಗಿ ಎದುರಿಸುತ್ತಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್

  • Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    ಮಾಸ್ಕೋ/ಕೀವ್‌: ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ (Russia-Ukraine Wa) ನಡೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ದಾಳಿ-ಪ್ರತಿದಾಳಿ ನಡೆಸುತ್ತಲೇ ಇವೆ. ಈ ರಾಷ್ಟ್ರಗಳ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ.

    ಉಕ್ರೇನ್‌ ಸಹ ರಷ್ಯಾಗೆ ತಿರುಗೇಟು ನೀಡಲು ಹಲವು ಬಾರಿ ಪ್ರಯತ್ನಿಸಿದೆ. ಈ ಬಾರಿ ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಯತ್ನಿಸಿದ್ದು, ಪುಟಿನ್‌ ನಿವಾಸದ ಮೇಲೆ ಎರಡು ಡ್ರೋನ್‌ ದಾಳಿ ಮೂಲಕ ಹತ್ಯೆಗೆ ಯತ್ನಿಸಿದೆ. ಆದ್ರೆ ಭದ್ರತಾಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಪುಟಿನ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾಪಡೆಗಳು ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದ್ದು, ಈ ದಾಳಿ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ದೂರಿದೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ

    ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್ ನಿವಾಸದ ಮೇಲೆ ಎರಡು ಶಸ್ತ್ರಾಸ್ತ್ರ ತುಂಬಿದ ಡ್ರೋನ್‌ಗಳಿಂದ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಪುಟಿನ್‌ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ. ಉಕ್ರೇನ್‌ನಿಂದ ಈ ದಾಳಿ ನಡೆದಿದೆ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಮೇ 9 ರಂದು ರಷ್ಯಾ ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ್‌ ಹಾಕಲು ಈ ದಾಳಿ ನಡೆದಿದೆ. ಖಂಡಿತವಾಗಿಯೂ ಇದಕ್ಕೆ ಪ್ರತಿದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 5 ಮಕ್ಕಳು ಸೇರಿ 26 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿಯಾಗಿ ಉಕ್ರೇನ್‌ ಸಾಳಿ ನಡೆಸಿದೆ ಎಂಬ ಆರೋಪಗಳೂ ಕೇಳಿಬಂದಿವೆ.

  • ಭೂಕಂಪದಿಂದ ತತ್ತರಿಸಿರುವ ಸಿರಿಯಾಗೆ ಮತ್ತೊಂದು ಆಘಾತ – ಇಸ್ರೇಲ್‌ ಕ್ಷಿಪಣಿ ದಾಳಿಗೆ 15 ಬಲಿ

    ಭೂಕಂಪದಿಂದ ತತ್ತರಿಸಿರುವ ಸಿರಿಯಾಗೆ ಮತ್ತೊಂದು ಆಘಾತ – ಇಸ್ರೇಲ್‌ ಕ್ಷಿಪಣಿ ದಾಳಿಗೆ 15 ಬಲಿ

    ಡಮಾಸ್ಕಸ್: ಈಚೆಗೆ ಸಂಭವಿಸಿದ ಭಾರೀ ಭೂಕಂಪದಿಂದಾಗಿ ತತ್ತರಿಸಿರುವ ಸಿರಿಯಾ ಮತ್ತೊಂದು ಆಘಾತ ಅನುಭವಿಸಿದೆ. ಭಾನುವಾರ ಮುಂಜಾನೆ ಇಸ್ರೇಲ್‌ ಕ್ಷಿಪಣಿ ದಾಳಿ (Israeli Missile Strike) ನಡೆಸಿದ್ದು, ಸಿರಿಯಾದ (Syria) 15 ಜನರನ್ನು ಮೃತಪಟ್ಟಿದ್ದಾರೆ. ಸಿರಿಯಾದ ಹೆಚ್ಚಿನ ಭದ್ರತಾ ಉಪಕರಣಗಳಿರುವ ಕಟ್ಟಡವನ್ನು ನಾಶಪಡಿಸಿದೆ.

    ಇರಾನ್‌ ಸಾಂಸ್ಕೃತಿಕ ಕೇಂದ್ರದ ಸಮೀಪ ಈ ದಾಳಿ ನಡೆದಿದ್ದು, ನಾಗರಿಕರು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಸರಿಯನ್‌ ವೀಕ್ಷಣಾಲಯವು ತಿಳಿಸಿದೆ. 2011 ರಲ್ಲಿ ಸಿರಿಯಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ, ಇಸ್ರೇಲ್ (Israeli) ತನ್ನ ನೆರೆಹೊರೆಯವರ ವಿರುದ್ಧ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ. ಇದನ್ನೂ ಓದಿ: ಟರ್ಕಿ, ಸಿರಿಯಾ ಭೂಕಂಪ- ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ

    “ಬೆಳಗ್ಗೆ ಇಸ್ರೇಲ್‌ನವರು ಡಮಾಸ್ಕಸ್ ಮತ್ತು ಅದರ ಸುತ್ತಮುತ್ತಲಿನ ಹಲವಾರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆಕ್ರಮಿತ ಗೋಲನ್ ಹೈಟ್ಸ್‌ನ ದಿಕ್ಕಿನಿಂದ ವೈಮಾನಿಕ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಸಾವು-ನೋವು ಸಂಭವಿಸಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

    ದಾಳಿಯಲ್ಲಿ 10 ಅಂತಸ್ತಿನ ಕಟ್ಟಡ ಹಾನಿಗೊಳಗಾಗಿದ್ದು, ಅದರ ಕೆಳ ಮಹಡಿಗಳ ರಚನೆ ನಾಶವಾಗಿದೆ. ಇಸ್ರೇಲ್‌ನ ಸೇನೆಯು ಸಿರಿಯಾ ವಿರುದ್ಧದ ತನ್ನ ದಾಳಿಗಳ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇರಾನ್ ತನ್ನ ಪ್ರಭಾವವನ್ನು ಇಸ್ರೇಲ್‌ನ ಗಡಿಗಳಿಗೆ ವಿಸ್ತರಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಟರ್ಕಿ ಭೀಕರ ಭೂಕಂಪದಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ಕಂಪನಿಯ ಟೆಕ್ಕಿ ಸಾವು – ಅವಶೇಷಗಳಡಿ ಮೃತದೇಹ ಪತ್ತೆ

    ಕೆಲ ದಿನಗಳ ಹಿಂದೆಯಷ್ಟೇ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿ, 46,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಹೊಡೆತದಿಂದ ಚೀತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಕೀವ್: ಉಕ್ರೇನ್‌ ನಗರವನ್ನು ಕೈವಶ ಮಾಡಲೇಬೇಕೆಂದು ಹಠಕ್ಕೆ ಬಿದ್ದಿರುವ ರಷ್ಯಾ ಈಗ ಖರ್ಸನ್‌ ನಗರವನ್ನು ವಶಕ್ಕೆ ಪಡೆದಿದೆ. ನಗರವನ್ನು ವಶ ಪಡಿಸಿಕೊಳ್ಳಲು ಈಗ ಸರ್ಕಾರಿ ಕಟ್ಟಡದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಹೆರಿಗೆ ಆಸ್ಪತ್ರೆ, ಕೀವ್ ಸೇನಾ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್ ಸೇರಿ ಉಕ್ರೇನ್‍ನ ಮೇಲೆ ರಷ್ಯಾ ಏಕಕಾಲದಲ್ಲಿ ಮೂರು ಕಡೆ ದಾಳಿ ಮಾಡಿದೆ. ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಪ್ರಮುಖ ರಾಜ್ಯಗಳಾದ ಕೀವ್ ಮತ್ತು ಖಾರ್ಕಿವ್ ನಲುಗಿ ಹೋಗಿವೆ. ಇಂದು ರಷ್ಯಾ ಏಕಕಾಲದಲ್ಲಿ 3 ಕಡೆ ವೈಮಾನಿಕ ದಾಳಿ ನಡೆಸಿದೆ. ಕೀವ್, ಖಾರ್ಕಿವ್, ಖೇರ್ಸನ್‍ನಲ್ಲಿ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸಿದೆ. ಏರ್‌ಪೋರ್ಟ್, ಝಿಟೋಮಿರ್ ಹೆರಿಗೆ ಆಸ್ಪತ್ರೆ, ಮಿಲಿಟರಿ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್‍ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ 21ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 112 ಜನರು ಗಾಯಗೊಂಡಿದ್ದಾರೆ. ಝಿಟೋಮಿರ್ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರಿಗೆ ಗಂಭೀರ ಗಾಯಗಳಾಗಿವೆ.

    ಖೇರ್ಸನ್ ಏರ್‌ಪೋರ್ಟ್‍ನಲ್ಲಿ ಕ್ಷಿಪಣಿ ದಾಳಿ ಹಾಗೂ ಕೀವ್ ಸೆಂಟ್ರಲ್ ರೇಲ್ವೆ ಸ್ಟೇಶನ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಅಷ್ಟೇ ಅಲ್ಲದೇ ಜಲ ಮಾರ್ಗದಲ್ಲೂ ದಾಳಿ ತೀವ್ರಗೊಳಿಸಿದ್ದು, ಕಪ್ಪು ಸಮುದ್ರದಲ್ಲಿ ಸೇನೆಯನ್ನು ಹೆಚ್ಚಳ ಮಾಡಿದೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್‍ನ ಖೆರ್ಸನ್ ನಗರ ವಶಪಡಿಸಿಕೊಂಡಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಂದರು ವಶಕ್ಕೆ ಪಡೆದಿದೆ. ಇಡೀ ನಗರದ ಮೇಲೆ ಅಸ್ತಿತ್ವ ಸಾಧಿಸುತ್ತಿದ್ದಾರೆ. ಕೀವ್, ಚೆರ್ನಿಹಿವ್, ಒಬ್ಲಾಸ್ಟ್‍ನ ಪೈರಿಯಾಟಿನ್ ಮತ್ತು ಮೈರೋರೋಡ್ ನಗರಗಳಿಗೆ ರಷ್ಯಾ ಪಡೆಗಳು ಬಂಕರ್‌ಗೆ ತೆರಳುವಂತೆ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

  • ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್‍ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್‍ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಇರಾಕ್ ಮೇಲೆ 2 ಕ್ಷಿಪಣಿ ದಾಳಿ ನಡೆದಿದೆ.

    ಇರಾಕ್ ರಾಜಧಾನಿ ಬಾಗ್ದಾದ್‍ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ 2 ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇರಾನ್ ಕ್ಷಿಪಣಿ ದಾಳಿ ನಡೆದ ಕೇವಲ 24 ಗಂಟೆಗಳ ಒಳಗೆ ಮತ್ತೆರಡು ಕ್ಷಿಪಣಿಗಳ ದಾಳಿಯಿಂದ ಇರಾಕ್‍ನಲ್ಲಿ ಭಯಯ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಇರಾನ್ ಮೇಲೆ‌ ಯುದ್ಧವಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಲ್ಲ: ಟ್ರಂಪ್

    ಬಾಗ್ದಾದ್‍ನ ಹಸಿರು ವಲಯವನ್ನು ಇರಾಕ್‍ನ ಸುರಕ್ಷಿತ ಸ್ಥಳವಾಗಿದ್ದು, ಇಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ. ಹೀಗಾಗಿ ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‍ಗೆ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಎಚ್ಚರಿಕೆ!

    ಇರಾನ್ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಬುಧವಾರ ಟ್ರಂಪ್ ಪ್ರತಿಕ್ರಿಯೆ ನೀಡಿದ್ದರು. ಕಳೆದ ರಾತ್ರಿ ಇರಾಕ್ ನಲ್ಲಿರುವ ನಮ್ಮ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸೈನಿಕ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಯಾವುದೇ ಸಾವು, ನೋವುಗಳನ್ನು ಸಂಭವಿಸಿಲ್ಲ. ನಮ್ಮ ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳಲ್ಲಿ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದ್ದರು.

    ಮೊದಲಿಗಿಂತಲೂ ಅಮೆರಿಕ ಸೈನ್ಯವೂ ಎಲ್ಲದಕ್ಕೂ ಸಿದ್ಧವಾಗಿದೆ. ಸುಧಾರಿತ ಕ್ಷಿಪಣಿಗಳನ್ನು ಹೊಂದಿದ್ದೇವೆ. ಆದರೆ ಅವುಗಳನ್ನು ನಾವು ಬಳಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುತ್ತೇವೆ. ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಇಚ್ಛಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ 

    ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅಮೆರಿಕದ ಭದ್ರತೆಗೆ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಆತನನ್ನು ಹತ್ಯೆಗೈಯುವುದು ಅನಿವಾರ್ಯವಾಗಿತ್ತು ಎಂದು ಖಾಸಿಂ ಸೊಲೈಮನಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು.

    ಇಂಧನ ಹಾಗೂ ಅನಿಲ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಾವು ನಂಬರ್ 1. ಸ್ಥಾನದಲ್ಲಿದ್ದೇವೆ. ಹೀಗಾಗಿ ತೈಲ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿಸಿಲ್ಲ ಎಂದಿದ್ದರು. ಇರಾನ್ ಉಗ್ರರ ತವರೂರು ಆಗಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಅವಧಿಯಲ್ಲಿ ಆಲ್ ಖೈದಾ ಉಗ್ರ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಆರ್ಥಿಕವಾಗಿ ನಾವು ಪ್ರಬಲವಾಗಿದ್ದೇವೆ. ಸೇನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದರು.