Tag: ಕ್ಷಮೆ

  • ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ

    ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ

    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾ ಎರಡು ಕಾರಣಗಳಿಂದಾಗಿ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ಕರಗ (Karaga) ಮತ್ತು ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಲವರು ದೂರು ಕೂಡ ದಾಖಲಿಸಿದ್ದಾರೆ. ಹೀಗಾಗಿ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಿನಿಮಾ ಬೈಕಾಟ್ ಮಾಡಬೇಕು, ದೃಶ್ಯಗಳನ್ನು ಕತ್ತರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು.

    ಎರಡೂ ವಿವಾದಗಳ (Controversy) ಕುರಿತು ಪ್ರತಿಕ್ರಿಯೆ ನೀಡಿದ್ದ ಧನಂಜಯ್ (Dhananjay), ತಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ಅವಮಾನ ಕೂಡ ಮಾಡಿಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದು ಕೇಳಿಕೊಂಡಿದ್ದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಫಿಲ್ಮ್ ಚೇಂಬರ್ ಗೂ ದೂರು ದಾಖಲಿಸಿದ್ದರು. ಹಾಗಾಗಿ ಇಂದು ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ ಮಾಡಿದ ಧನಂಜಯ್, ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನಿ, ಭಕ್ತಿ ಇದೆ. ಆದರೂ, ನಿಮಗೆ ನೋವು ಆಗಿದ್ದರೆ ಕ್ಷಮಿಸಿ ಎಂದು ನಿರ್ದೇಶಕ ಶೂನ್ಯ ಅವರು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದರೂ, ಕರಗ ಸಮಿತಿಯ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್

    ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್

    ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಡಾಕ್ಯುಮೆಂಟರಿ ಪ್ರಿ ರಿಲೀಸ್ ಇವೆಂಟ್ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಿದ್ದರು. ಆದರೆ, ರಿಷಬ್ ಶೆಟ್ಟಿ (Rishabh Shetty) ಗೈರು ಹಾಜರಿದ್ದರು. ಹಾಗಂತ ಅವರು ಬೇಕು ಅಂತ ಈ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿಲ್ಲ. ಈ ದೇಶದಲ್ಲೂ ಅವರಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ.

    ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕೆ ಯಾಕೆ ಹಾಜರಾಗುತ್ತಿಲ್ಲ ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ರಿಷಬ್ ‘ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬರ್ಹೇನ್ ನಲ್ಲಿರುವ ಕಾರಣ ಇಂದಿನ ಪುನೀತ ಪರ್ವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮದ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆ ಇರಲಿ. ಮೊದಲ ದಿನವೇ ಗಂಧದ ಗುಡಿಯಲ್ಲಿ ಭೇಟಿಯಾಗೋಣ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಚಿತ್ರವನ್ನು ಡೈರೆಕ್ಟ್ ಆಗಿ ಆಸ್ಕರ್ ಗೆ ಕಳುಹಿಸಿ: ಕಂಗನಾ ರಣಾವತ್

    ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ (Puneeth Rajkumar) ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.

    ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಟೀಮ್ ಇಂಡಿಯಾ ಆಟಗಾರ (Cricket) ರಿಷಭ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ (Urvashi Rautela) ನಡುವಿನ ಕೋಳಿ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸೋಷಿಯಲ್ ಮೀಡಿಯಾ ಮೂಲಕವೇ ಇಬ್ಬರೂ ತಿಕ್ಕಾಟ ಶುರು ಮಾಡಿದ್ದಾರೆ. ಅವರೊಂದು ಬರೆದರೆ, ಇವರೊಂದು ಕೌಂಟರ್ ಕೊಡುತ್ತಾ ಅಭಿಮಾನಿಗಳಿಗಿಂತೂ ಸಖತ್ ಮಜಾ ನೀಡುತ್ತಿದ್ದಾರೆ.

    ಮೊದ ಮೊದಲು ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್ (Rishabh Pant) ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆಯೂ ಗಾಸಿಪ್ ಇದ್ದವು. ಆಗಾಗ್ಗೆ ಇಬ್ಬರೂ ಪಾರ್ಟಿ ಮಾಡುತ್ತಾರೆ ಎಂದು ಹೇಳಲಾಗಿತ್ತು. ಸಡನ್ನಾಗಿ ಸಂದರ್ಶನವೊಂದರಲ್ಲಿ ಊರ್ವಶಿ ಸತ್ಯವೊಂದನ್ನು ಹೇಳಿದ್ದರು. ಅದು ರಿಷಭ್ ಕೋಪಕ್ಕೆ ಕಾರಣವಾಗಿತ್ತು. ಇದನ್ನೂ ಓದಿ:ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

    ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ರಿಷಭ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಊರ್ವಶಿ ಹೇಳಿಕೊಂಡಿದ್ದರು. ನನಗಾಗಿ ಸ್ಟಾರ್ ಕ್ರಿಕೆಟಿಗ ಒಬ್ಬ ಅಷ್ಟೊಂದು ಹೊತ್ತು ಕಾದಿದ್ದ ಎಂದು ಹೇಳಿದ್ದರು.  ಅದಕ್ಕೆ ರಿಷಭ್ ಸಖತ್ ತಿರುಗೇಟು ಕೊಟ್ಟಿದ್ದರು. ಅಲ್ಲಿಂದ ಇಬ್ಬರ ಮಧ್ಯ ಕೋಲ್ಡ್ ವಾರ್ ಶುರುವಾಗಿತ್ತು. ಮೊನ್ನೆಯಷ್ಟೇ ತನ್ನ ಹೇಳಿಕೆಗಾಗಿ ಪಂತ್ ಅವರಲ್ಲಿ ಕ್ಷಮೆ (Kshame) ಕೇಳುತ್ತೇನೆ ಎನ್ನುವ ಸುದ್ದಿ ಕೂಡ ಆಗಿತ್ತು.

    ಆದರೆ, ಈ ಸುದ್ದಿಯನ್ನು ಊರ್ವಶಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳಿಲ್ಲ. ಕೇಳಿರುವ ಕ್ಷಮೆ ರಿಷಭ್ ಪಂತ್ ಗೆ ಅಲ್ಲ. ನನ್ನ ಫ್ಯಾನ್ಸ್ ಗೆ (Fans) ಮತ್ತು ನನ್ನ ಆಪ್ತರಿಗೆ ಎಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಊರ್ವಶಿ. ಅಲ್ಲಿಗೆ ಈ ಜಗಳ ಮತ್ತೆ ಮುಂದುವರೆದಿದೆ. ಯಾವ ಹಂತ ಪಡೆದುಕೊಳ್ಳತ್ತೋ ಅವರಿಬ್ಬರಿಗೆ ಗೊತ್ತು.

    Live Tv
    [brid partner=56869869 player=32851 video=960834 autoplay=true]

  • ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ

    ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಇತ್ತೀಚೆಗೆ ದುಷ್ಕರ್ಮಿಗಳ ವಿರುದ್ಧ ತೆಗೆದುಕೊಳ್ಳುವ ನಿರ್ಧಾರಗಳು ಅವರ ನಿದ್ದೆಯನ್ನೇ ಕೆಡಿಸಿ ಬಿಟ್ಟಿದೆ. ಎಲ್ಲಿ ತಪ್ಪು ಮಾಡಿ ಸಿಕ್ಕಿ ಬಿದ್ದ ಮೇಲೆ ತಮ್ಮ ಆಸ್ತಿಗಳ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೋ ಎಂಬ ಭಯ ಶುರುವಾಗಿದೆ. ಅಂತೆಯೇ ಅದೆಷ್ಟೋ ಜನರು ತಪ್ಪು ಮಾಡಿ, ಬಳಿಕ ಯೋಗಿ ಸರ್ಕಾರದ ಭಯಕ್ಕೆ ಪೊಲೀಸ್ ಠಾಣೆಗೆ ಹೋಗಿ ತಾವೇ ಶರಣಾಗಿದ್ದು ಇದೆ.

    ಇದೇ ರೀತಿ ಮತ್ತೊಂದು ಘಟನೆ ನಡೆದಿದೆ. ಆರೋಪಿಯೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ನನ್ನಿಂದ ತಪ್ಪಾಯಿತು, ದಯವಿಟ್ಟು ಈ ಬಾರಿ ಕ್ಷಮಿಸಿ ಯೋಗಿಜೀ ಎಂದು ಕೈ ಮುಗಿದು ಬೇಡಿಕೊಂಡಿದ್ದಾನೆ. ಈ ವೀಡಿಯೋವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

    ವರದಿಗಳ ಪ್ರಕಾರ ಶುಕ್ರವಾರ ತಡರಾತ್ರಿ ಘಾಜಿಯಾಬಾದ್‌ನಲ್ಲಿ ಪೊಲೀಸರು ದುಷ್ಕರ್ಮಿಯೊಬ್ಬನ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದರು. ಆತ ಬಂಧನಕ್ಕೊಳಗಾಗುವ ಸಂದರ್ಭ, ಯೋಗಿಜೀ ನನ್ನನ್ನು ಕ್ಷಮಿಸಿ, ಇನ್ನು ಮುಂದೆ ನಾನು ಇಂತಹ ತಪ್ಪುಗಳನ್ನು ಮಾಡುವುದಿಲ್ಲ, ಯಾರನ್ನೂ ತಪ್ಪು ದೃಷ್ಟಿಯಿಂದ ನೋಡುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದಾನೆ. ಇದನ್ನೂ ಓದಿ: ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಗ್ಯಾಸ್ ಗೋಡೌನ್‌ನಲ್ಲಿ ದರೋಡೆ ನಡೆಸಿದ ಆರೋಪದ ಮೇಲೆ ಪೊಲೀಸರು ಈ ದುಷ್ಕರ್ಮಿಯ ಹುಡುಕಾಟದಲ್ಲಿದ್ದರು. ಬಳಿಕ ಆತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನಿದ್ದ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

    ಜಯಶ್ರೀ ಮೇಲೆ ಸುದೀಪ್ ದೂರುಗಳ ಸುರಿಮಳೆ – ಕಣ್ಣೀರಾಕುತ್ತಾ ನಟಿ ಕ್ಷಮೆ

    ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಯಶ್ರೀ ನಡವಳಿಕೆ ಸ್ವಲ್ಪ ಕಿರಿಕಿರಿ ಉಂಟುಮಾಡಿದೆ. ಮನೆಯವರ ಜೊತೆ ತುಂಬಾನೇ ಒರಟಾಗಿ ನಡೆದುಕೊಳ್ಳುತ್ತಿದ್ದ ಅವರು ಏನಾದರೂ ಹೇಳಿದರೆ ಅದನ್ನು ಕೂಲಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಜಶ್ವಂತ್ ಕ್ಯಾಪ್ಟನ್ಸಿಯಲ್ಲಿಯೂ ಮನಸ್ತಾಪಗಳನ್ನು ಮಾಡಿಕೊಂಡಿದ್ದರು. ನನ್ನನ್ನು ಯಾಕೆ ಆಟಕ್ಕೆ ತೆಗೆದುಕೊಳ್ಳಲ್ಲ ಎಂದು ಗದರಿದ್ದು, ಕೆಲವೊಂದು ರಿವೇಂಜ್‌ಗಳನ್ನು ತೀರಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ್ದ ಸುದೀಪ್ ಇದೀಗ ಜಯಶ್ರೀಗೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಒಂದು ಆಟ ಅಂತ ಬಂದಾಗ ಯಾವ ಪ್ಯಾರಾ ಮೀಟರ್ಸ್ ಇಟ್ಟುಕೊಂಡು ಕಂಟೆಸ್ಟೆಂಟ್‌ನ ಆಯ್ಕೆ ಮಾಡಬೇಕು ಎಂದು ಜಯಶ್ರೀಯನ್ನೇ ಸುದೀಪ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ಆ ಟಾಸ್ಕ್ ಏನಿರುತ್ತೆ, ಅದಕ್ಕೆ ಸೂಕ್ತವಾದ ವ್ಯಕ್ತಿಯನ್ನು ನೋಡಿ ಸೆಲೆಕ್ಟ್ ಮಾಡುತ್ತಾರೆ ಎದು ಜಯಶ್ರೀಯೇ ಉತ್ತರ ನೀಡಿದ್ದಾರೆ. ಜೊತೆಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇದ್ದ ಆಟದಲ್ಲಿ ನಾನು ಆಡಬಲ್ಲೆ ಎಂದು ಹೇಳಿದರೂ ತೆಗೆದುಕೊಳ್ಳಲಿಲ್ಲ. ಹೊರಗಡೆ ಬಂದಾಗ ನಾನು ಕೇಳಿದಾಗಲೂ ಸರಿಯಾದ ಕಾರಣ ಕೊಡಲೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ತಕ್ಷಣ ಸುದೀಪ್ ಅವರು ಜಶ್ವಂತ್ ಬಳಿ ಕ್ಲಾರಿಟಿ ತೆಗೆದುಕೊಂಡಿದ್ದಾರೆ.

    ಕ್ಯಾಪ್ಟನ್ ಅಂತ ಬಂದಾಗ ಅವರವರ ಅಭಿಪ್ರಾಯವನ್ನಿಟ್ಟುಕೊಂಡು ಹೋಗುತ್ತಾರೆ. ಮುಂದೆ ನೀವೂ ಕ್ಯಾಪ್ಟನ್ ಆದಾಗ ಇದೇ ರೀತಿ ನಡೆದುಕೊಳ್ಳಬಹುದು. ಸಾಕಷ್ಟು ಜನ ಇದ್ದಾಗ ಕ್ಯಾಪ್ಟನ್ ಒಂದೆರಡು ಜನರನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವೂ ಏನೇನೋ ತಲೆಯಲ್ಲಿ ಇಟ್ಟುಕೊಂಡು ಯೋಚನೆ ಮಾಡುತ್ತೀರಾ. ಮಾತಾಡುವಾಗ ಸೆಲೆಕ್ಟ್ ಆಗಿಲ್ಲ ಎಂಬ ಕಾರಣಕ್ಕೆ ನೀವಾಡುವ ಮಾತುಗಳಿಗೆ ಅವರು ರಿಯಾಕ್ಟ್ ಕೂಡ ಮಾಡುವುದಕ್ಕೆ ಆಗಲ್ಲ. ಏಕೆಂದರೆ ಅವರು ಕ್ಯಾಪ್ಟನ್. ಇಲ್ಲಿ ಬರೀ ನೀವು ಮಾತ್ರವಲ್ಲ. ಹೊರಗಡೆಯವರು ಕೂಡ ನಿಮ್ಮನ್ನು ನೋಡುತ್ತಿರುತ್ತಾರೆ ಎಂದು ಒಂದಷ್ಟು ಬುದ್ದಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

    ಬಳಿಕ ಒಂದಷ್ಟು ಮಾತು ಕತೆಗಳು ಮುಗಿದು, ಮತ್ತೆ ಜಯಶ್ರೀ ವಿಚಾರಕ್ಕೆ ಬಂದಿರುವ ಸುದೀಪ್, ಮನೆ ಮಂದಿ ಕ್ಷಮೆ ಕೇಳುವುದರಲ್ಲಿ ಪ್ರಾಮಾಣಿಕತೆ ಇತ್ತಾ ಎಂದು ಪ್ರಶ್ನೆ ಮಾಡಿದರು. ಸಾನ್ಯಾ ಹಾಗೂ ನಂದಿನಿ ಇಬ್ಬರು ಕೂಡ ಜಯಶ್ರೀ ವಿಚಾರವಾಗಿಯೇ ಮಾತನಾಡಿದರು. ಖಂಡಿತ ಇಲ್ಲ ಸರ್, ಕ್ಷಮೆ ಕೇಳಿದರೆ ಆ ಮೂಮೆಂಟ್‌ಗೆ ಜಗಳ ಎಂಡ್ ಆಗುತ್ತೆ ಎಂಬಂತೆ ಕ್ಷಮೆ ಕೇಳಿದ್ದುಂಟು. ಆ ಕ್ಷಣಕ್ಕೆ ಅದು ಮುಗಿದು ಹೋಗಲಿ. ಮೀನ್ ಮಾಡಿಲ್ಲ ಎಂದಿದ್ದಾರೆ. ಈ ಕ್ಷಮೆ ಬಗ್ಗೆ ಜಯಶ್ರೀ ಬಳಿಯೂ ಸುದೀಪ್ ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಉದಾಹರಣೆ ಕೊಟ್ಟು ಬುದ್ದಿ ಮಾತು ಹೇಳಿದ್ದಾರೆ. ಯಾರಾದರೂ ಬುದ್ದಿ ಹೇಳಿದರೆ ಅದಕ್ಕೆ ತಿರುಗಿ ಉತ್ತರ ನೀಡುತ್ತೀರಿ. ಚೈತ್ರಾ ಅವರಿಗೆ ಕೇಳುತ್ತೀರಿ ನೀವೂ ಲಿಪ್ ಸ್ಟಿಕ್ ತಂದಿಲ್ವಾ ಅಂತ ಹೇಳಿ ಓಲೆ ತರುತ್ತೀರಿ. ನೀವೂ ನಿಮ್ಮ ತಪ್ಪನ್ನು ಹೇಳಿದಾಗ ಅವರು ಮಾಡಿದಾರೆ ನಾನು ಮಾಡಿದ್ದೀನಿ ಎಂದು ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದಿದ್ದಾರೆ.

    ಅದಕ್ಕೆ ಉತ್ತರ ನೀಡಿದ ಜಯಶ್ರೀ, ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ. ಬಿಗ್ ಬಾಸ್‌ನಿಂದ ಆದೇಶ ಬಂದ ಮೇಲೆ ರಿಗ್ರೇಟ್ ಮಾಡಿಕೊಂಡಿದ್ದೀನಿ. ಆ ಒಂದು ನಡವಳಿಕೆಯನ್ನು ನಾನು ಬದಲಾಯಿಸಿಕೊಳ್ಳಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ. ಮುಂದುವರೆದು ದೂರುಗಳ ಸುರಿಮಳೆಯನ್ನೇ ಸುರಿಸಿದ ಸುದೀಪ್, ಟಿಶ್ಯು ಪೇಪರ್ ಹೊರ ತರುವಾಗ ಉದಯ್ ಬೇಡ ಅಂತ ಹೇಳುತ್ತಾರೆ. ಕಂಟೆಸ್ಟೆಂಟ್ ಮೇಲೆ ನೀರು ಹಾಕುವಾಗ ಮೈಕ್ ಹಾಳಾಗುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೂ ಗಮನಿಸಲಿಲ್ಲ. ಆ ಸಮಯದಲ್ಲಿ ನಿಮ್ಮ ಬಾಯಿಂದ ಬಂದ ಮಾತು ಏನಿತ್ತು ಗೊತ್ತಾ? ನನ್ನ ಮೈಕ್ ಚೇಂಜ್ ಮಾಡಿದ್ದಾರೆ ನಿಮ್ಮ ಮೈಕ್ ಚೇಂಜ್ ಮಾಡುತ್ತಾರೆ ಬಿಡಿ. ಬೇರೆ ಏನು ಕೆಲಸ ಇರುತ್ತೆ ಬಿಗ್ ಬಾಸ್‌ಗೆ ಎಂಬ ಅರ್ಥದಲ್ಲಿ ಹೇಳಿದ್ದೀರಿ ಎಂದಾಗ ಜಯಶ್ರೀ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಕಣ್ಣಿಗೆ ಸ್ಪ್ರೇ ಮಾಡುವಾಗ ಅದು ಡೇಂಜರ್ ಎಂದು ರಾಕೇಶ್ ಹೇಳಿದಾಗಲೂ ನಂದಿನಿ ಕಣ್ಣಿಗೆ ಸ್ಪ್ರೇ ಮಾಡಿದ್ದಾರೆ. ಈ ನಡವಳಿಕೆ ಬಗ್ಗೆಯೂ ಸುದೀಪ್ ಮನವರಿಕೆ ಮಾಡಿದ್ದು, ಜಯಶ್ರೀ ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    Live Tv
    [brid partner=56869869 player=32851 video=960834 autoplay=true]

  • Bigg Boss-ಕಿಚ್ಚ ಸುದೀಪ್ ಅವರನ್ನು ಕ್ಷಮೆ ಕೇಳಿದ ಸೋನು ಶ್ರೀನಿವಾಸ್ ಗೌಡ

    Bigg Boss-ಕಿಚ್ಚ ಸುದೀಪ್ ಅವರನ್ನು ಕ್ಷಮೆ ಕೇಳಿದ ಸೋನು ಶ್ರೀನಿವಾಸ್ ಗೌಡ

    ನಿವಾರ ಮತ್ತು ಭಾನುವಾರದ ಕಿಚ್ಚನ ವಾರದ ಪಂಚಾಯತಿ ಬಿಗ್ ಬಾಸ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಸಾಕ್ಷಿ ಆಯಿತು. ವಾರದಿಂದ ದೊಡ್ಮನೆಯಲ್ಲಿ ಏನೆಲ್ಲ ನಡೆಯಿತು ಎನ್ನುವ ಸಂಕ್ಷಿಪ್ತ ವಿವರಣೆ ಜೊತೆಗೆ ತಮ್ಮದೇ ಆದ ಕೆಲ ಅನುಭವಗಳನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಇದ್ದವರ ಜೊತೆ ಹಂಚಿಕೊಂಡರು. ಅದರಲ್ಲೂ ಶನಿವಾರ ಒಬ್ಬರನ್ನು ಮನೆಯಿಂದ ಆಚೆ ಕಳುಹಿಸಿದ ಸುದೀಪ್, ಭಾನುವಾರ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಸ್ಪರ್ಧಿಗಳನ್ನು ಕಿಚಾಯಿಸಿದರು.

    ಬಿಗ್ ಬಾಸ್ ಮನೆಯ ಭಾಗವೇ ಆಗಿರುವ ಎಸ್ ಆರ್ ನೋ ಆಟವನ್ನು ಸ್ಪರ್ಧಿಗಳೊಂದಿಗೆ ಆಡಿದ ಸುದೀಪ್, ಮೊದ ಮೊದಲು ತಮಾಷೆಯಾಗಿಯೇ ಎಲ್ಲವನ್ನೂ ತಗೆದುಕೊಂಡರು. ಒಳಗಿದ್ದವರಿಗೆ ಪ್ರಶ್ನೆಗಳನ್ನು ಕೇಳಿದರು. ಕಾಲೆಳೆಯುತ್ತಾ ಸಲಹೆಗಳನ್ನೂ ನೀಡಿದರು. ಅದರಲ್ಲೂ ಮಾತಾಡುತ್ತಾ ವಿಷಯದ ಹಾದಿ ತಪ್ಪಿಸುವವರು ಯಾರು? ಎಂಬ ಪ್ರಶ್ನೆ ಬಂದಾಗ ಬಹುತೇಕರು ಆರ್ಯವರ್ಧನ್ ಗುರೂಜಿಯತ್ತ ಬೆಟ್ಟು ಮಾಡು, ಕಾಲೆಳೆದರು. ನಂತರದಲ್ಲಿ ಸೋನು ಶ್ರೀನಿವಾಸ್ ಗೌಡ ವಿಷಯಕ್ಕೆ ಬಂದಾಗ, ವಿಷಯ ಗಂಭೀರವಾಯಿತು. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ

    ಸೋನು ಶ್ರೀನಿವಾಸ್ ಗೌಡ ಅವರನ್ನು ಆರ್ಯವರ್ಧನ್ ಅವರ ಅಸಿಸ್ಟೆಂಟ್ ಆಗಿ ಮಾಡಿಬಿಡಿ ಎಂದು ಸಾನ್ಯ ಐಯರ್ ತಮಾಷೆಯಾಗಿಯೇ ಹೇಳಿದರು. ಅದರಿಂದ ಸೋನು ಗರಂ ಆದರು. ನನಗೆ ಹಾಗೆಲ್ಲ ಹೇಳಿದರೆ ಇಷ್ಟ ಆಗಲ್ಲ ಅಂದರು. ನಂತರ ರೂಪೇಶ್, ಜಸ್ವಂತ್ ಸೇರಿದಂತೆ ಹಲವರು ಸೋನು ಅವರ ಕುರಿತು ಮಾತನಾಡಿದಾಗ ಮತ್ತಷ್ಟು ಗರಂ ಆದರು ಸೋನು. ಆಗ ಸುದೀಪ್ ಮಧ್ಯೆ ಪ್ರವೇಶಿಸಿ, ಸೋನು ಅವರನ್ನು ತರಾಟೆಗೆ ತಗೆದುಕೊಂಡರು.

    ಬೇರೆಯವರಿಗೆ ನೀವು ತಮಾಷೆ ಮಾಡಬಹುದು. ನಿಮಗೆ ತಮಾಷೆ ಮಾಡಿದರೆ ಕೋಪ ಯಾಕೆ? ಎಂದೇ ಮಾತು ಶುರು ಮಾಡಿದ ಕಿಚ್ಚ, ನೀವು ಹೀಗೆ ಸಿಟ್ಟು ಮಾಡಿಕೊಳ್ಳುತ್ತೇನೆ ಅನ್ನುವುದಾದರೆ, ಇಲ್ಲಿಗೆ ಈ ಶೋ ಮುಗಿಸಿ ಬಿಡುತ್ತೇನೆ ಎಂದು ಆಟವನ್ನು ನಿಲ್ಲಿಸಿಯೇ ಬಿಟ್ಟರು. ಸೋನು ತಮ್ಮಿಂದಾದ ತಪ್ಪಿಗೆ ಕಿಚ್ಚನಲ್ಲಿ ಕ್ಷಮೆ ಕೇಳಿದರು. ಆದರೂ, ಆಟ ಮುಂದುವರೆಯಲಿಲ್ಲ.

    Live Tv

     

  • ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಅಂದುಕೊಂಡಂತೆ ಆಗಿದ್ದರೆ, ಇಂದಿನಿಂದ ಕಿಚ್ಚ ಸುದೀಪ್ ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ವಿಕ್ರಾಂತ್ ರೋಣ ಸಿನಿಮಾಗಾಗಿ ಹಮ್ಮಿಕೊಂಡಿದ್ದ ಈ ಮಾಧ್ಯಮ ಗೋಷ್ಠಿಯಲ್ಲಿ ಕಿಚ್ಚನ ಎದುರುಗೊಳ್ಳಲು ಮಾಧ್ಯಮ ಪ್ರತಿನಿಧಿಗಳು ಸಿದ್ಧರಾಗಿದ್ದಾರೆ. ಆದರೆ, ನಿನ್ನೆ ಸುದೀಪ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಹಾಗಾಗಿ ಪತ್ರಿಕಾ ಗೋಷ್ಠಿಗಳನ್ನು ರದ್ದು ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.

    ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದ್ದಕ್ಕೆ ಕೊಚ್ಚಿ, ಚೆನ್ನೈ ಮತ್ತು ಹೈದರಾಬಾದ್ ಮಾಧ್ಯಮದ ಗೆಳೆಯರಿಗೆ ಕ್ಷಮೆ ಕೇಳುತ್ತೇನೆ. ಹುಷಾರಿಲ್ಲದ ಕಾರಣದಿಂದಾಗಿ ನನಗೆ ಪ್ರಯಾಣ ಮಾಡುವುದು  ಕಷ್ಟಸಾಧ್ಯ. ಹಾಗಾಗಿ ಬರಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ದಿನಾಂಕ ನಿಗದಿಪಡಿಸಿ, ನಿಮ್ಮೊಂದಿಗೆ ಮಾತನಾಡಲು ಉತ್ಸುಕನಾಗಿದ್ದೇನೆ. ಆದಷ್ಟು ಬೇಗ ಸಿಗೋಣ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ನಿನ್ನೆ ಸುದೀಪ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಸುದ್ದಿ ಆಗಿತ್ತು. ತಕ್ಷಣವೇ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್ ಮಂಜು, ಈ ಕುರಿತು ಸ್ಪಷ್ಟನೆ ನೀಡಿ, ಅವರಿಗೆ ಜ್ವರ ಬಂದಿದೆ ಅಷ್ಟೇ ಕೋವಿಡ್ ಸೋಂಕು ತಗುಲಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದರು. ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಇದೀಗ ಕಿಚ್ಚನ ಆರೋಗ್ಯ ಸುಧಾರಿಸುತ್ತಿದ್ದು, ಮತ್ತೆ ಅತೀ ಶೀಘ್ರದಲ್ಲೇ ಸಿನಿಮಾ ಪ್ರಚಾರದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಪೇಂದ್ರ ಮತ್ತು ಉಪ್ಪಿ ಅಣ್ಣನ ಮಗನಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಉಪೇಂದ್ರ ಮತ್ತು ಉಪ್ಪಿ ಅಣ್ಣನ ಮಗನಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ಸಿನಿಮಾ ರಂಗಕ್ಕೆ ಬರಲು ಹಲವರ ಪ್ರೋತ್ಸಾಹವಿದೆ. ಅದರಲ್ಲೂ ಉಪೇಂದ್ರ ಅವರು ಸುದೀಪ್ ಅವರಿಗೆ ಸಾಕಷ್ಟು ರೀತಿಯಲ್ಲಿ ಉತ್ತೇಜಿಸಿದ್ದಾರೆ. ಸುದೀಪ್ ಅವರು ಮೊದಲು ಫೋಟೋ ಶೂಟ್ ಮಾಡಿಸಲು ಕಾರಣವೂ ಉಪ್ಪಿ ಆಗಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ಈ ಕಾರಣಕ್ಕಾಗಿಯೇ ಉಪೇಂದ್ರ ಅವರು ತಮ್ಮ ಸಹೋದರನ ಮಗ ನಿರಂಜನ್ ಅವರ ಚೊಚ್ಚಲು ಸಿನಿಮಾ ನಮ್ಮ ಹುಡುಗರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ, ಅಂದು ಕಿಚ್ಚ ಗೈರಾಗಿದ್ದರು.

    ಸಿನಿಮಾ ರಿಲೀಸ್ ಗೂ ಮುನ್ನ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಬರಬೇಕಿತ್ತು. ಸ್ವತಃ ಉಪೇಂದ್ರ ಅವರೇ ಕಾಲ್ ಮಾಡಿ ಸುದೀಪ್ ಅವರನ್ನು ಆಹ್ವಾನಿಸಿದ್ದರಂತೆ. ಆದರೆ, ಕಿಚ್ಚನಿಗೆ ಆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅವರ ಕಾಲು ನೋವು. ಈ ಕುರಿತು ವಿಡಿಯೋ ಮಾಡಿ ಕಳುಹಿಸಿದ್ದ ಸುದೀಪ್, ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. ಹಾಗಾಗಿ ಉಪ್ಪಿ ಸರ್ ಮತ್ತು ನಿರಂಜನ್ ಕ್ಷಮಿಸಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಸುದೀಪ್ ಮಂಡಿಗೆ ನೋವು ಮಾಡಿಕೊಂಡಿದ್ದಾರಂತೆ. ಹಾಗಾಗಿ ಓಡಾಡಲು ಆಗುತ್ತಿಲ್ಲವಂತೆ. ಹಾಗಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಇದೇ ತಿಂಗಳು ಕೊನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಪ್ರಚಾರದಲ್ಲೂ ಸುದೀಪ್ ತೊಡಗಿದ್ದು, ಮನೆಯಲ್ಲೇ ಕುಳಿತುಕೊಂಡು ಆ ಕೆಲಸವನ್ನು ಮಾಡುತ್ತಿದ್ದಾರಂತೆ. ವೈದ್ಯರು ವಿಶ್ರಾಂತಿ ಹೇಳಿದ್ದರಿಂದ ಮತ್ತು ಹೆಚ್ಚು ನಡೆಯದಿರಲು ಸಲಹೆ ಮಾಡಿದ್ದರಂತೆ, ಸುದೀಪ್ ಎಲ್ಲಿಯೂ ಓಡಾಡುತ್ತಿಲ್ಲವಂತೆ.

    Live Tv
    [brid partner=56869869 player=32851 video=960834 autoplay=true]

  • ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಮುಂಬೈ: ಐಪಿಎಲ್ 2008ರ ಆವೃತ್ತಿಯ ಪಂದ್ಯವೊಂದರಲ್ಲಿ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ಬೌಲರ್ ಶ್ರೀಶಾಂತ್‍ಗೆ 14 ವರ್ಷಗಳ ನಂತರ ಕ್ಷಮೆಯಾಚಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಲೈವ್ ವೀಡಿಯೋ ಚಾಟ್‍ನಲ್ಲಿ ಶ್ರೀಶಾಂತ್ ಜೊತೆ ಮಾತನಾಡಿ, 2008ರಲ್ಲಿ ನಡೆದ ಘಟನೆಯ ಬಗ್ಗೆ ಅವರು ಅನುಭವಿಸಿದ ಮುಜುಗರವನ್ನು ಬಹಿರಂಗಪಡಿಸಿದರು. ಅಂದು ನಡೆದದ್ದು ತಪ್ಪು. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಲೆಂದು ಮೈದಾನದಲ್ಲಿ ಶ್ರೀಶಾಂತ್ ಜೊತೆಗೆ ನಾನು ನಡೆದುಕೊಂಡ ರೀತಿ ಇದೆಯಲ್ಲ ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗಲೆಲ್ಲ ಅದು ಆಗಬಾರದಿತ್ತು ಅಂತಾ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರು, ಪಂಜಾಬ್ ತಂಡದ ಬೌಲರ್ ಶ್ರೀಶಾಂತ್ ಅವರ ಆಕ್ರಮಣಕಾರಿ ನಡುವಳಿಕೆಯಿಂದ ಆಕ್ರೋಶಗೊಂಡಿದ್ದರು. ಪಂದ್ಯದ ಫಲಿತಾಂಶದ ನಂತರ, ತಮ್ಮ ಬಳಿಗೆ ಬಂದ ಶ್ರೀಶಾಂತ್ ಅವರ ಕೆನ್ನೆಗೆ ಹರ್ಭಜನ್ ಹೊಡೆದಿದ್ದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 66 ರನ್‍ಗಳ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಘಟನೆ ನಂತರ ಕಣ್ಣೀರು ಹಾಕಿದ್ದ ಶ್ರೀಶಾಂತ್ ಅವರನ್ನು ನೋಡಿ ಹಲವರು ಮರುಗಿದ್ದರು. ಹರ್ಭಜನ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಆಗ ಪ್ರಶ್ನೆಗಳು ಎದ್ದಿದ್ದವು. ಆ ಬಳಿಕ ಇವರಿಬ್ಬರ ನಡುವೆ ಮತ್ತೆ ಸ್ನೇಹ ಬೆಳೆದಿತ್ತು. ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದರು.

  • ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

    ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

    ಕ್ಷಿಣದ ಬಹುತೇಕ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಆರ್.ಆರ್.ಆರ್, ಪುಷ್ಪಾ, ಕೆಜಿಎಫ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಬೇರೆ ಬೇರೆ ಭಾಷೆಗೆ ಡಬ್ ಆಗಿ, ಸಖತ್ ಕಮಾಯಿ ಮಾಡುತ್ತಿವೆ. ಈ ನಡುವೆ ತೆಲುಗಿನ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ನಾನಿ ನಟನೆಯ ಸಿನಿಮಾವೊಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಕುರಿತು ಮೊನ್ನೆಯಷ್ಟೇ ಪ್ರೆಸ್ ಮೀಟ್ ಕೂಡ ಆಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಸದ್ಯ ನಾನಿ ನಟನೆಯ ‘ಅಂತೆ ಸುಂದರಾನಿಕಿ’ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಎಲ್ಲ ಭಾಷೆಗೂ ನಿಮ್ಮ ಸಿನಿಮಾ ಡಬ್ ಆಗಿದೆ. ಕನ್ನಡಕ್ಕೆ ಯಾಕೆ ಡಬ್ ಆಗಿಲ್ಲ’ ಎಂಬ ಪ್ರಶ್ನೆಯೊಂದು ಎದುರಾಯಿತು. ಈ ಪ್ರಶ್ನೆಗೆ ಧೈರ್ಯದಿಂದಲೇ ಉತ್ತರಿಸಿದ ನಾನಿ, ‘ಕನ್ನಡಿಗರಿಗೆ ತೆಲುಗು ತುಂಬಾ ಚೆನ್ನಾಗಿ ಬರುತ್ತದೆ. ಅವರು ಅದೇ ಭಾಷೆಯಲ್ಲೇ ಸಿನಿಮಾ ನೋಡುತ್ತಾರೆ. ಕನ್ನಡಕ್ಕೆ ಈ ಸಿನಿಮಾವನ್ನು ಡಬ್ ಮಾಡುವುದರ ಅವಶ್ಯಕತೆ ಇಲ್ಲ’ ಎಂದು ಉತ್ತರ ಕೊಟ್ಟಿದ್ದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ನಾನಿ ಈ ಉತ್ತರಕ್ಕೆ ಕನ್ನಡಿಗರ ಗರಂ ಆಗಿದ್ದರು. ‘ಬೈಕಾಟ್ ಅಂತೆ ಸುಂದರಾನಿಕಿ’ ಎನ್ನುವ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಕೆಲವು ಕನ್ನಡಿಗರು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ನಾನಿ, ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ನನಗೆ ಕನ್ನಡದ ಬಗ್ಗೆ ಅಪಾರ ಗೌರವವಿದೆ. ಭಾಷೆಗೆ ನಾನು ಅವಹೇಳನ ಮಾಡಿಲ್ಲ. ಕನ್ನಡಿಗರಿಗೆ ತೆಲುಗು ಚೆನ್ನಾಗಿ ಗೊತ್ತಿದೆ ಎಂದು ಹೆಮ್ಮೆಯಿಂದ ಹೇಳಿದ್ದೆ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಅಪಾಲಜಿ ಕೇಳಿದ ವಿಷಯವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಕನ್ನಡಿಗರ ಬಗ್ಗೆ ತಮಗೆ ಅಪಾರ ಗೌರವ ಇರುವುದಾಗಿಯೂ ನಾನಿ ಹೇಳಿದ್ದಾರೆ. ಕನ್ನಡಿಗರ ಎಲ್ಲ ಭಾಷೆಯನ್ನೂ ಪ್ರೀತಿಸುತ್ತಾರೆ. ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ನಾನಿ.