Tag: ಕ್ಷಮಿಸಿ

  • ಪ್ರೇಯಸಿಗಾಗಿ 300 Sorry ಬ್ಯಾನರ್ ಗಳನ್ನು ರಸ್ತೆ ತುಂಬೆಲ್ಲಾ ಹಾಕ್ದ!

    ಪ್ರೇಯಸಿಗಾಗಿ 300 Sorry ಬ್ಯಾನರ್ ಗಳನ್ನು ರಸ್ತೆ ತುಂಬೆಲ್ಲಾ ಹಾಕ್ದ!

    ಪುಣೆ: ಪ್ರೇಯಸಿ ಮುನಿಸಿಕೊಂಡರೆ ಪ್ರಿಯತಮ ಏನೇನೋ ಉಪಾಯ ಮಾಡಿ ಆಕೆಯನ್ನು ಒಲಿಸಿಕೊಳ್ಳುತ್ತಾನೆ. ಆದರೆ ಇಲ್ಲೊಬ್ಬ ಪ್ರೇಮಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಬರೋಬ್ಬರಿ 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿದ್ದಾನೆ.

    ನಿಲೇಶ್ ಖೇಡೇಕರ್ ರಸ್ತೆಯಲ್ಲಿ ಬ್ಯಾನರ್ ಹಾಕಿದ ಪ್ರೇಮಿ. ನಿಲೇಶ್ ಓರ್ವ ಉದ್ಯಮಿ ಆಗಿದ್ದು, ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಲ್ಲಿ ಪ್ರದೇಶದಲ್ಲಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಸಾರಿ ಬ್ಯಾನರ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಶುಕ್ರವಾರ ಪಿಂಪ್ರಿ ಚಿಂಚ್ವಾಡ್ ಜನರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಆಗ ರಸ್ತೆಯಲ್ಲಿ ಬಿತ್ತಿ ಪತ್ರ ಹಾಗೂ ಬ್ಯಾನರ್ ಕಣ್ಣಿಗೆ ಬಿದ್ದಿವೆ. ಬ್ಯಾನರ್ ಮೇಲೆ ಐ ಯಮ್ ಸಾರಿ (ನನ್ನನು ಕ್ಷಮಿಸು) ಎಂದು ಬರೆದಿದೆ. ಜೊತೆಗೆ ಅದರ ಪಕ್ಕ ಕೆಂಪು ಬಣ್ಣದ ಹೃದಯವನ್ನು ಸಹ ಬಿಡಿಸಲಾಗಿದೆ.

    ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದಕ್ಕೆ ಉದ್ಯಮಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ನಿಲೇಶ್ ಪರಾರಿಯಾಗಿದ್ದು, ಬ್ಯಾನರ್ ಹಾಕಲು ಸಹಾಯ ಮಾಡಿದ್ದ ಗೆಳೆಯ ವಿಲಾಸ್ ಸಿಂಧೆ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ನಿಲೇಸ್ ಮತ್ತು ಆತನ ಪ್ರೇಮಿ ಮಧ್ಯ ಯಾವುದೋ ವಿಚಾರಕ್ಕೆ ಜಗಳವಾಗಿತ್ತು. ಪ್ರೇಯಸಿಯನ್ನ ಒಲಿಸಿಕೊಳ್ಳಲು ಖೇಡಕರ್ ಬ್ಯಾರನ್ ಉಪಾಯವನ್ನು ಮಾಡಿ, ಗೆಳೆತಿ ಸಂಚರಿಸುವ ಮಾರ್ಗದ ಬದಿಯಲ್ಲಿ ಬ್ಯಾನರ್ ಹಾಕುವ ಮೂಲಕ ಕ್ಷಮೆ ಕೇಳಿದ್ದಾರೆ. ಬ್ಯಾನರ್ ಗಳಿಗಾಗಿ ನಿಲೇಶ್ 72 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಪ್ರತಿ ಬ್ಯಾನರ್ ನಲ್ಲಿ `I Am Sorry ‘ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ನಿಲೇಶ್ ಖೇಡೇಕರ್ ವಿರುದ್ಧ ಅಕ್ರಮ ಹೋರ್ಡಿಂಗ್ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಆರೋಪದ ಮೇಲೆ ದೂರು ದಾಖಲಿಸಿದ್ದು, ಈ ಬಗ್ಗೆ ನಗರಾಡಳಿಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv