Tag: ಕ್ಷಮಾ ಬಿಂದು

  • ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಳೆದ ವರ್ಷ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದ ಕ್ಷಮಾ ಬಿಂದು(Kshama Bindu) ಅವರು ಮೊದಲ ವಿವಾಹ ವಾರ್ಷಿಕೋತ್ಸವದ (Anniversary) ಸಂಭ್ರಮದಲ್ಲಿದ್ದಾರೆ. ತನ್ನನ್ನು ತಾನೇ ಮದುವೆಯಾಗುವ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ಷಮಾ, ಈಗ ಮೊದಲ ವರ್ಷ ವೈವಾಹಿಕ (Wedding) ಜೀವನ ಪೂರ್ಣಗೊಳಿಸಿದ ಸಂಭ್ರಮದಲ್ಲಿದ್ದಾರೆ. ಈ ಕುರಿತ ಪೋಸ್ಟ್ ಎಲ್ಲೆಡೆ ಸದ್ದು ಮಾಡುತ್ತಿದೆ.

    ಸಾಂಪ್ರದಾಯಿಕವಾಗಿ ನಡೆದ ಸಮಾರಂಭದಲ್ಲಿ ತನ್ನನ್ನು ತಾನೇ ಸ್ವಯಂ ವಿವಾಹವಾಗುವ(Sologamy) ಮೂಲಕ ಸುದ್ದಿಯಲ್ಲಿದ್ದ ಗುಜರಾತ್‌ನ ವಡೋದರಾದ 24 ವರ್ಷದ ಮಹಿಳೆ ಕ್ಷಮಾ ಬಿಂದು ಕಳೆದ ವರ್ಷ ಜೂನ್ 8ರಂದು ‘ಸ್ವಯಂ’ ವಿವಾಹವಾಗಿದ್ರು. ಇದರಿಂದ ಸಾಕಷ್ಟು ಟೀಕೆಗೆ ಈಕೆ ಗುರಿಯಾಗಿದ್ರು. ಅನಗತ್ಯ ಪ್ರಚಾರಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಕೆಲವರು, ಇದು ಆಕೆಯ ಜೀವನ ಅವರ ಖುಷಿ ಮುಖ್ಯ ಎಂದು ಬೆಂಬಲಿಸಿದ್ದರು.

    ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಕ್ಷಮಾ ಸೊಲೊಗಮಿ ಪದ್ದತಿಯ ನಿರ್ಧಾರವು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಅಂದು ಆಕೆಯ ಮದುವೆಯಲ್ಲಿ ಸ್ನೇಹಿತರು, ಆಪ್ತರು ಭಾಗಿಯಾಗಿದ್ದರು. ಈ ಮೂಲಕ ಕ್ಷಮಾ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಸದ್ಯ ಒಂದು ವರ್ಷ ಸ್ವಯಂ ವಿವಾಹ ಪೂರೈಸಿರುವ ಬಗ್ಗೆ ಕ್ಷಮಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್

    ಕ್ಷಮಾ ಬಿಂದು ಮೊದಲ ವಿವಾಹ ವರ್ಷದ ವಾರ್ಷಿಕೋತ್ಸವದ ಪೋಸ್ಟ್ ನೋಡಿ, ನೆಟ್ಟಿಗರು ಶುಭಕೋರುತ್ತಿದ್ದಾರೆ. ಇನ್ನೂ ಈಕೆಯ ಡ್ರಾಮಾ ನಿಲ್ಲೋದಿಲ್ಲ ಎಂದು ಹಿಡಿಶಾಪ ಹಾಕ್ತಿದ್ದಾರೆ.

  • ತನ್ನನ್ನು ತಾನೇ ಮದುವೆಯಾಗಿ, ಗೋವಾಗೆ ಹನಿಮೂನಿಗೆ ಹೊರಟ ಹುಡುಗಿಗೆ ಈ ಸಿನಿಮಾ ಸ್ಫೂರ್ತಿ?

    ತನ್ನನ್ನು ತಾನೇ ಮದುವೆಯಾಗಿ, ಗೋವಾಗೆ ಹನಿಮೂನಿಗೆ ಹೊರಟ ಹುಡುಗಿಗೆ ಈ ಸಿನಿಮಾ ಸ್ಫೂರ್ತಿ?

    ಗುಜರಾತಿನ ವಡೋದರಾದ 24 ವರ್ಷದ ಹುಡುಗಿ ಕ್ಷಮಾ ಬಿಂದು, ತನ್ನನ್ನು ತಾನೇ ಮದುವೆಯಾಗಿ, ವಿಚಿತ್ರ ಸುದ್ದಿಯಾಗಿದ್ದಳು. ಮದುವೆಯ ವ್ಯಾಖ್ಯಾನ ಬದಲಾಗಿದ್ದರೂ ಹುಡುಗ, ಹುಡುಗಿಯನ್ನು ಅಥವಾ ಹುಡುಗಿ ಹುಡುಗಿಯನ್ನು ಇಲ್ಲವೆ ಹುಡುಗ ಹುಡುಗನನ್ನು ಮದುವೆ ಆಗಿದ್ದಿದೆ. ಆದರೆ, ತನ್ನನ್ನು ತಾನೇ ಮದುವೆ ಆಗುವುದು ಎಂದರೆ ಏನು? ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ತನಗೆ ತಾನೇ ಮದುವೆ ಆಗಿ ಭಾರೀ ಸುದ್ದಿ ಆಗಿರುವ ಕ್ಷಮಾ ಬಿಂದು, ಈಗಾಗಲೇ ತನ್ನನ್ನೇ ತಾನು ಮದುವೆಯಾಗಿ ಗೋವಾಗೆ ಹನಿಮೂನಿಗೂ ರೆಡಿಯಾಗಿದ್ದಾರೆ. ಈ ವಿಚಿತ್ರ ಮದುವೆಯ ಬಗ್ಗೆ ಓದಿದವರು ತಲೆಕೆಡಿಸಿಕೊಂಡು ಕೂತಿದ್ದರು. ಭಾರತದಲ್ಲಿ ಇಂತಹ ಮದುವೆ ಇದೇ ಮೊದಲಾಗಿದ್ದರಿಂದ, ಆ ಹುಡುಗಿಯ ಮಾನಸಿಕವಾಗಿ ಸರಿಯಿದ್ದಾಳಾ? ಅನ್ನುವ ಪ್ರಶ್ನೆ ಕೂಡ ಹಾಕಿದ್ದರು. ಆದರೆ, ಆ ಹುಡುಗಿಗೆ ಇಂತಹ ಐಡ್ಯಾ ಹೇಗೆ ಬಂತು? ಎನ್ನುವ ಹುಡುಕಾಟದಲ್ಲಿ ಸಿಕ್ಕಿ ಉತ್ತರ ಸಿನಿಮಾಗಳೇ.

    ಭಾರತದಲ್ಲಿ ತನ್ನನ್ನು ತಾನೇ ಮದುವೆ ಆಗುವ ಸಿನಿಮಾಗಳು ಬರದೇ ಹೋದರೂ, ಬಾಲಿವುಡ್ ನಲ್ಲಿ ಕೆಲವು ವೆಬ್ ಸಿರೀಸ್ ಮತ್ತು ಸಿನಿಮಾಗಳು ತೆರೆ ಕಂಡಿವೆ. ರೋಸಾಸ್ ವೆಡ್ಡಿಂಗ್, ಗ್ಲೀ, ದಿ ಎಕ್ಸೆಸ್, ಜೂಲ್ಯಾಂಡರ್ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಮತ್ತು ಟಿವಿ ಸೀರಿಸ್ ಗಳಲ್ಲಿ ಸೊಲೊಗಾಮಿ ಕಥೆಯಿದೆ. ತನ್ನನ್ನು ತಾನು ಮದುವೆ ಆಗುವುದಕ್ಕೆ ಇಂಗ್ಲಿಷಿನಲ್ಲಿ ಬಳಸುವ ಪದ ಸೊಲೊಗಾಮಿ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ಬಹುಶಃ ಇಂತಹ ಸಿನಿಮಾಗಳಿಂದ ಪ್ರೇರೇಪಿತಗೊಂಡ ಕ್ಷಮಾ ಬಿಂದು, ಅಂಥದ್ದೊಂದು ನಿರ್ಧಾರ ತಗೆದುಕೊಂಡಿರಬಹುದು ಎನ್ನಲಾಗುತ್ತಿದೆ. ಇಲ್ಲದಿದ್ದರೆ, ಇಂತಹ ಕಾನ್ಸೆಪ್ಟ್ ಅವಳ ತಲೆಯಲ್ಲಿ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ.