Tag: ಕ್ವಾಲಿಫೈಯರ್

  • ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ನಡುವಿನ ಟಾಟಾ ಐಪಿಎಲ್ 2024ರ ನಾಕೌಟ್‌ ಪಂದ್ಯವು ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 50 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಮೈದಾನದ ಹೊರಗೂ ದಾಖಲೆ ಬರೆದಿದೆ.

    ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯವು ರಣರೋಚಕವಾಗಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆರ್‌ಸಿಬಿ 218 ರನ್‌ ಗಳಿಸಿ ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ಗೆ (IPL Playoffs) ಲಗ್ಗೆಯಿಡಲು ಅಗತ್ಯವಿದ್ದ ಗುರಿ 201 ರನ್‌ ಮಾತ್ರವಾಗಿತ್ತು. ಕೊನೇ ಕ್ಷಣದವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ಗಳಿಂದ ಸೋತರೆ, 10 ರನ್‌ಗಳ ಅಂತರದಲ್ಲಿ ಪ್ಲೇ ಆಫ್‌ ತಲುಪುವ ಅವಕಾಶವನ್ನು ಕೈಚೆಲ್ಲಿತು. ಆದ್ರೆ ಉಭಯ ತಂಡಗಳ ಈ ರಣರೋಚಕ ಕದನ ಗ್ರೌಂಡ್‌ ಹೊರಗೂ ದಾಖಲೆ ಬರೆದಿರುವುದೇ ವಿಶೇಷ.

    ವೀಕ್ಷಣೆಯಲ್ಲೂ ದಾಖಲೆ:
    ಪ್ರಸಕ್ತ ವರ್ಷದ ಎಲ್ಲ ಪಂದ್ಯಗಳಲ್ಲೂ ದಾಖಲೆ ವೀಕ್ಷಕರನ್ನು ಕಂಡಿರುವ ಆರ್‌ಸಿಬಿ‌, ಶನಿವಾರ ನಡೆದ ನಾಕೌಟ್‌ ಕದನದಲ್ಲಿ ಬರೋಬ್ಬರಿ 50 ಕೋಟಿ ನೋಡುಗರನ್ನ (JioCinema Viewers) ಕಂಡಿದ್ದು, ದಾಖಲೆ ವೀಕ್ಷಕರನ್ನು ಕಂಡ ಪಂದ್ಯ ಎನಿಸಿಕೊಂಡಿದೆ.

    ಯಾರ ವಿರುದ್ಧ – ಯಾವ ಪಂದ್ಯದಲ್ಲಿ ಎಷ್ಟು ಮಂದಿ ವೀಕ್ಷಣೆ?
    ಆರ್‌ಸಿಬಿ vs ಸಿಎಸ್‌ಕೆ – 50 ಕೋಟಿ
    ಆರ್‌ಸಿಬಿ vs ಸಿಎಸ್‌ಕೆ – 38 ಕೋಟಿ
    ಎಸ್‌ಆರ್‌ಹೆಚ್‌ vs ಎಂಐ – 28 ಕೋಟಿ
    ಸಿಎಸ್‌ಕೆ vs ಎಂಐ – 26 ಕೋಟಿ
    ಆರ್‌ಸಿಬಿ vs ಕೆಕೆಆರ್‌ – 25 ಕೋಟಿ
    ಸಿಎಸ್‌ಕೆ vs ಜಿಟಿ – 25 ಕೋಟಿ
    ಆರ್‌ಸಿಬಿ vs ಪಿಬಿಕೆಎಸ್‌ – 24 ಕೋಟಿ
    ಸಿಎಸ್‌ಕೆ vs ಡಿಸಿ – 24 ಕೋಟಿ
    ಆರ್‌ಸಿಬಿ vs ಎಸ್‌ಆರ್‌ಹೆಚ್‌ – 24 ಕೋಟಿ
    ಆರ್‌ಸಿಬಿ vs ಎಂಐ – 23 ಕೋಟಿ
    ಆರ್‌ಸಿಬಿ vs ಆರ್‌ಆರ್‌ – 23 ಕೋಟಿ

    ಆರ್‌ಸಿಬಿಗೆ ಮುಂದಿದೆ ಕಠಿಣ ಸವಾಲು?
    ಸತತ 6 ಪಂದ್ಯಗಳನ್ನು ಗೆದ್ದು ಬೀಗಿರುವ ಆರ್‌ಸಿಬಿ ಮುಂದೆ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್‌ರೈಡರ್ಸ್‌ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ತೀವ್ರ ಪೈಪೋಟಿ ನಡೆಯುತ್ತಿದೆ. ಮೊದಲ ಕ್ವಾಲಿಫೈಯರ್ (Qualifier) ಪಂದ್ಯದಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಕಾದಾಟ ನಡೆಸಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, ಸೋತ ತಂಡ ಎಲಿಮಿನೇಟರ್‌ -2 (Eliminator) ಹಂತದಲ್ಲಿ ಕಣಕ್ಕಿಳಿಯಲಿದೆ. ಆದ್ರೆ ಆರ್‌ಸಿಬಿ 4ನೇ ಸ್ಥಾನದಲ್ಲಿರುವುದರಿಂದ 3ನೇ ಸ್ಥಾನ ಪಡೆದ ತಂಡದೊಂದಿಗೆ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಎಲಿಮಿನೇಟರ್‌ 2ರಲ್ಲಿ, ಕ್ವಾಲಿಫೈಯರ್-1ರಲ್ಲಿ ಸೋತ ತಂಡದೊಂದಿಗೆ ಕಾದಾಟ ನಡೆಸಬೇಕಾಗುತ್ತದೆ. ಈ ಎರಡರಲ್ಲಿ ಯಾವುದೇ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಗಂಟುಮೂಟೆ ಕಟ್ಟಬೇಕಾಗುತ್ತದೆ. ಇಲ್ಲವಾದ್ರೆ ಈ ಎರಡು ಹಂತಗಳನ್ನು ದಾಟಿದ ನಂತರ ಫೈನಲ್‌ ಪ್ರವೇಶಿಸುವ ಅವಕಾಶ ಪಡೆಯಲಿದೆ.

    ಪ್ಲೇ ಆಫ್‌ ಪಂದ್ಯಗಳು ನಡೆಯುವುದು ಎಲ್ಲಿ?
    ಮೇ 21 ನಡೆಯುವ ಮೊದಲ ಕ್ವಾಲಿಫೈಯರ್ ಮತ್ತು ಮೇ 22ರಂದು ನಡೆಯುವ ಮೊದಲ ಎಲಿಮಿನೇಟರ್‌ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 24ರಂದು ನಡೆಯುವ ಕ್ವಾಲಿಫೈಯರ್-2 ಹಾಗೂ ಮೇ 26ರಂದು ನಡೆಯುವ ಫೈನಲ್‌ ಪಂದ್ಯಗಳು ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

    ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

    ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ನಡುವಿನ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಬ್ಯಾಟ್‍ನಿಂದ ಶತಕದ ನಿರೀಕ್ಷೆಯಲ್ಲಿದ್ದಾರೆ.


    ವೈಟ್ ಬಾಲ್ ಕ್ರಿಕೆಟ್‍ನಲ್ಲಿ ಪಂಟರ್ ಆಗಿದ್ದ ಕಿಂಗ್ ಕೊಹ್ಲಿ ಬ್ಯಾಟ್ ಯಾಕೋ ಸೈಲೆಂಟ್ ಆಗಿರುವಂತೆ ಕಂಡು ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಹ್ಲಿ ಬ್ಯಾಟ್‍ನಿಂದ ಶತಕ ಸಿಡಿಯದೇ 2 ವರ್ಷಗಳಾಗಿದೆ. ಕೊಹ್ಲಿ 2019ರಲ್ಲಿ ಬಾಂಗ್ಲದೇಶ ವಿರುದ್ಧ ಸಿಡಿಸಿದ ಶತಕದ ಬಳಿಕ ಈವರೆಗೆ ಕೊಹ್ಲಿ ಶತಕ ಬಾರಿಸಿಲ್ಲ. ಹಾಗಾಗಿ ಇಂದು ನಡೆಯಲಿರುವ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ‘KGF’ ಜೊತೆ ರಜತ್ ಭಯ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    15ನೇ ಆವೃತ್ತಿ ಐಪಿಎಲ್‍ನಲ್ಲಿ ಕೊಹ್ಲಿ ಒಟ್ಟು 15 ಪಂದ್ಯಗಳಿಂದ 2 ಅರ್ಧಶತಕ ಸಹಿತ 334 ರನ್ ಸಿಡಿಸಿದ್ದಾರೆ. ಈ ಬಾರಿ ಬ್ಯಾಟಿಂಗ್‍ನಲ್ಲಿ ಅಬ್ಬರಿಸಲು ವಿಫಲವಾಗಿರುವ ಕೊಹ್ಲಿ ಮೂರು ಬಾರಿ ಗೋಲ್ಡನ್ ಡಕ್‍ಔಟ್ ಕೂಡ ಆಗಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲಿ ಕೊಹ್ಲಿ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಇದನ್ನೂ ಓದಿ: ಆರ್‌ಸಿಬಿ ಬೌಲರ್‌ಗಳಿಗೆ ಭೇಷ್ ಅಂದ ಕೆ.ಎಲ್ ರಾಹುಲ್

    2018ರಿಂದ ಈ ವರೆಗೆ ಐಪಿಎಲ್‍ನಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ತಂಡ 26 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ 11 ಬಾರಿ ಗೆದ್ದರೆ, ಆರ್‌ಸಿಬಿ 13 ಬಾರಿ ಗೆದ್ದಿದೆ. ಇಂದು ಅಹಮದಾಬಾದ್‍ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಮೂಲಕ 27ನೇ ಬಾರಿ ಮತ್ತೆ ಈ ಎರಡು ತಂಡಗಳು ಸೆಣಸಾಡಲಿದ್ದು ಗೆದ್ದ ತಂಡ ಗುಜರಾತ್ ಟೈಟಾನ್ಸ್ ತಂಡದೊಂದಿಗೆ ಫೈನಲ್ ಪಂದ್ಯವಾಡಲಿದೆ. ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಲಿದೆ. ಇದನ್ನೂ ಓದಿ: ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?

    https://twitter.com/sumittkar/status/1530094065907138560

    ಅಹಮದಾಬಾದ್‍ದ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

  • ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

    ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಆರ್‌ಸಿಬಿ ತಂಡದ ರಜತ್ ಪಾಟಿದಾರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    IPL 2022 RCB (3)

    ಹೌದು ಆರ್‌ಸಿಬಿ ತಂಡದಲ್ಲಿ ಪಾಟಿದಾರ್ ಎಂಬ ಆಟಗಾರ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ. ಆದರೆ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಲಕ್ಷಾಂತರ ಕ್ರೀಡಾಭಿಮಾನಿಗಳ ಮನದಲ್ಲಿ ಉಳಿಯುವಂತೆ ಮಾಡಿದೆ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಪಾಟಿದಾರ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಆರ್‌ಸಿಬಿ ರಾಜಾಸ್ಥಾನ್ ರಾಯಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟಿದೆ. ಲುವ್ನಿತ್ ಸಿಸೋಡಿಯಾ ಅವರು ಗಾಯಗೊಂಡಿದ್ದರಿಂದಾಗಿ ಅವರ ಬದಲಾಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ರಜತ್ ಆರ್‌ಸಿಬಿಗಾಗಿ ಆಡಲು ತನ್ನ ಮದುವೆಯನ್ನೇ ಮುಂದೂಡಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    IPL 2022 RCB (3)

    ಇದೇ ತಿಂಗಳ ಮೇ 9ರಂದು ಪಾಟಿದಾರ್ ಮದುವೆ ನಿಗದಿಯಾಗಿತ್ತು. ಸಣ್ಣ ಸಮಾರಂಭದಲ್ಲಿ ಮದುವೆ ಮಾಡಿಕೊಳ್ಳುವುದಕ್ಕಾಗಿ ಇಂಧೋರ್‌ನಲ್ಲಿ ಹೋಟೆಲ್ ಸಹ ಕಾಯ್ದಿರಿಸಲಾಗಿತ್ತು. ಈಗ ಆರ್‌ಸಿಬಿಗಾಗಿ ಆಡಲು ಮುಂದಾಗಿರುವ ರಜತ್ ಮುಂದಿನ ಜೂನ್ ತಿಂಗಳಲ್ಲಿ ರಜತ್ ಮದುವೆಯಾಗಲಿದ್ದಾರೆ ಎಂದು ರಜತ್ ತಂದೆ ಮನೋಹತ್ ಪಾಟಿದಾರ್ ಹೇಳಿದ್ದಾರೆ.