Tag: ಕ್ಲೀನ್ ಸ್ಲೇಟ್ ಫಿಲ್ಮ್

  • ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ

    ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ

    ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾಕ್ಕಿಂತ ಹೆಚ್ಚು ವೈಯಕ್ತಿಕ ಜೀವನಕ್ಕೆ ಗಮನಕೊಡುತ್ತಿದ್ದಾರೆ. ಇದರ ಜೊತೆಗೆ ಅವರು ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದರು. ಈ ಸಂಸ್ಥೆ ಮೂಲಕವೇ ಹಲವು ಸೂಪರ್‌ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದಕ್ಕೆಲ್ಲ ಈ ನಟಿಯೇ ಬಂಡವಾಳ ಹೂಡಿದ್ದು, ಈಗ ಸಂಸ್ಥೆಯಿಂದ ಹೊರ ನಡೆದಿದ್ದಾರೆ.

    2013ರಲ್ಲಿ ಅನುಷ್ಕಾ ತಮ್ಮ ಸಹೋದರ ಕರ್ಣೇಶ್ ಶರ್ಮಾ ಜೊತೆ ಕ್ಲೀನ್ ಸ್ಲೇಟ್ ಫಿಲ್ಮ್ ಪ್ರಾರಂಭಿಸಿದ್ದರು. ಈ ಬ್ಯಾನರ್‌ನಲ್ಲಿ ಎನ್‍ಹೆಚ್10, ಫಿಲೌರಿ ಪರಿ, ಪಾತಾಳ್ ಲೋಕ್ ಮತ್ತು ಬುಲ್ ಬುಲ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿಯೂ ಇವರ ‘ಪಾತಾಳ್ ಲೋಕ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಮೂಲಕ ನಿರ್ಮಾಣ ಸಂಸ್ಥೆಗೆ ದೊಡ್ಡಮಟ್ಟದ ಹೆಸರು ಸಹ ಆಗಿತ್ತು. ಆದರೆ ಹಠಾತ್ತನೆ ಅನುಷ್ಕಾ ಏಕೆ ತಮ್ಮದೇ ಸಂಸ್ಥೆಯಿಂದ ಹೊರಬಂದಿದ್ದಾರೆ ಎಂಬುದರ ಬಗ್ಗೆ ಅವರೇ ಖುದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಮೀಟೂ’ ಬಳಿಕ ಸಿನಿಲೋಕಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಸಂಗೀತಾ ಭಟ್

    ಅನುಷ್ಕಾ ಟ್ವಟ್ಟರ್‌ನಲ್ಲಿ, ನಾನು ನನ್ನ ಸಹೋದರ ಕರ್ಣೇಶ್ ಶರ್ಮಾ ಜೊತೆ ಕ್ಲೀನ್ ಸ್ಲೇಟ್ ಫಿಲ್ಮ್ ಪ್ರಾರಂಭಿಸಿದಾಗ ಇಡೀ ತಂಡದಲ್ಲಿ ಹೊಸಬರಿದ್ದರು. ಆದರೆ ಈಗ ನಾನು ನಮ್ಮ ಸಂಸ್ಥೆ ಬೆಳೆದುಬಂದಿರುವ ಹಾದಿಯನ್ನು ನೋಡಿದರೆ ತುಂಬ ಹೆಮ್ಮೆ ಎನಿಸುತ್ತೆ. ಈ ಸಂಸ್ಥೆ ಬೆಳೆಯಲು ಕರ್ಣೇಶ್ ಕೊಡುಗೆ ದೊಡ್ಡದಿದೆ ಎಂದು ತಿಳಿಸಿದ್ದಾರೆ.

    ನಟನೆಗೆ ಹೆಚ್ಚು ಒತ್ತುಕೊಡಬೇಕು
    ತಾಯಿಯಾದ ನಂತರ ನಾನು ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹಿಂದಿಗಿಂತಲೂ ಸಂಪೂರ್ಣವಾಗಿ ನಾನು ನನ್ನ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಳ್ಳಬೇಕಾಗಿದೆ. ಅದಕ್ಕೆ ಈಗ ನನ್ನ ಕೈಯಲ್ಲಿ ಎಷ್ಟು ಸಮಯ ಸಿಗುತ್ತೊ ಆ ಸಮಯವನ್ನು ನನ್ನ ಮೊದಲ ಪ್ರೀತಿಯಾಗಿರುವ ನಟನೆಗೆ ಮೀಸಲಿಡುತ್ತೇನೆ ಎಂದು ಬರೆದು ನಟನೆಗೆ ಸಮಯ ಕೊಡಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದತ್ತು ಪುತ್ರಿ ನಿರ್ಲಕ್ಷ್ಯ – ಟ್ರೋಲಿಗರ ಕಣ್ಣಿಗೆ ಗುರಿಯಾದ ಸನ್ನಿ ಉತ್ತರವೇನು?

    ಹಿಂದೆ ನಿಂತು ಬೆಂಬಲಿಸುತ್ತೇನೆ!
    ನಾನು ಇನ್ಮುಂದೆ ಕರ್ಣೇಶ್ ಮತ್ತು ಸಂಸ್ಥೆಗೆ ಹಿಂದೆ ನಿಂತು ಬೆಂಬಲಕೊಡುತ್ತೇನೆ. ಈ ಸಂಸ್ಥೆ ಮೂಲಕ ಮತ್ತಷ್ಟು ಉತ್ತಮ ಸಿನಿಮಾಗಳು ಬರಲಿವೆ ಎಂದು ನಂಬಿದ್ದೇನೆ. ಈ ಸಂಸ್ಥೆ ನಾನು ಇಲ್ಲದೇ ಸಹ ಎತ್ತರಕ್ಕೆ ಬೆಳೆಯುತ್ತೆ ಎಂಬ ನಂಬಿಕೆ ನನಗೆ ಇದೆ. ಅದನ್ನು ನೋಡಲು ಕಾತರಳಾಗಿದ್ದೇನೆ. ಸಂಸ್ಥೆಯ ಇಡೀ ಕುಟುಂಬಕ್ಕೆ ನನ್ನ ಶುಭಾಶಯಗಳು ಎಂದಿದ್ದಾರೆ.