Tag: ಕ್ಲೀನ್ ಬೆಂಗಳೂರು

  • ಮತ್ತೆ ಸ್ಮಾರ್ಟ್ ಮೀಟರ್ ಹಗರಣ ಕೆದಕಿದ ಬಿಜೆಪಿ – ಸಚಿವ ಜಾರ್ಜ್ ವಿರುದ್ಧ ಖಾಸಗಿ ದೂರು

    ಮತ್ತೆ ಸ್ಮಾರ್ಟ್ ಮೀಟರ್ ಹಗರಣ ಕೆದಕಿದ ಬಿಜೆಪಿ – ಸಚಿವ ಜಾರ್ಜ್ ವಿರುದ್ಧ ಖಾಸಗಿ ದೂರು

    – ವಿಚಾರಣೆ ಮುಂದೂಡಿದ ಕೋರ್ಟ್

    ಬೆಂಗಳೂರು: ಇಂಧನ ಇಲಾಖೆಯಲ್ಲಿ ಕೇಳಿಬಂದಿರೋ ಸ್ಮಾರ್ಟ್ ಮೀಟರ್ ಹಗರಣ (Smart Meter Scam) ಈಗ ಹೊಸ ರೂಪ ಪಡೆದುಕೊಂಡಿದೆ. ಈ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಯಾವುದೇ ತನಿಖಾ ಪ್ರಗತಿ ಕಾಣದೇ ಇರೋದ್ರಿಂದ ಮೂವರು ಬಿಜೆಪಿ ಶಾಸಕರು (BJP MLA) ಕೋರ್ಟ್ ಮೊರೆ ಹೋಗಿದ್ದಾರೆ.

    ಸಚಿವ ಕೆ.ಜೆ ಜಾರ್ಜ್ (KJ George) ಹಾಗೂ ಬೆಸ್ಕಾಂನ (BESCOM) ಹಿರಿಯ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಬಿಜೆಪಿ ಶಾಸಕ ಅಶ್ವಥ್‌ನಾರಾಯಣ, ಎಸ್.ಆರ್ ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಈ ದೂರು ದಾಖಲಿಸಿದ್ದು, ಅರ್ಜಿದಾರರ ಪರವಾಗಿ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಮಾಡೆಲ್ ಜಾತಿ ಜನಗಣತಿಗೆ ಕಾಂಗ್ರೆಸ್ ಮಣೆ- ಸಿದ್ದರಾಮಯ್ಯ ವರದಿ ಕಸದ ಬುಟ್ಟಿಗೆ: ಶಾಸಕ ಸುನಿಲ್ ಕುಮಾರ್ ವ್ಯಂಗ್ಯ

    ಬ್ಲ್ಯಾಕ್‌ ಲಿಸ್ಟ್‌ನಲ್ಲಿರೋ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡು ದುಬಾರಿ ದರ ವಿಧಿಸಲಾಗಿದೆ ಅಂತ ವಾದಿಸಿದ್ರು. ವಾದ ಪ್ರತಿವಾದಗಳನ್ನು ಆಲಿಸಿ ಕೋರ್ಟ್‌ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಇನ್ನೂ ಖಾಸಗಿ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಜೆ. ಜಾರ್ಜ್, ದೂರುದಾರರು ಕೋರ್ಟ್ ಮೊರೆ ಹೋಗಿದ್ದಾರೆ. ನಾವು ಕೂಡ ವಿವರಣೆ ನೀಡುತ್ತೇವೆ. ಅಂತಿಮವಾಗಿ ಕೋರ್ಟ್ ನಿರ್ಧಾರ ಮಾಡಲಿದೆ ಅಂದ್ರು. ಇದನ್ನೂ ಓದಿ: RE ಸಂಶೋಧನೆ, ನಾವೀನ್ಯತೆ; 1.27 ಲಕ್ಷ ಕೋಟಿ ಯೋಜನೆಗೆ ಕೇಂದ್ರ ಅಸ್ತು: ಪ್ರಹ್ಲಾದ್ ಜೋಶಿ

    ಬಿಜೆಪಿ ಆರೋಪ ಏನು?
    ಸ್ಮಾರ್ಟ್‌ ಮೀಟರ್‌ ಟೆಂಡರ್‌ನಲ್ಲಿ ಕೇವಲ ಮೂರು ಕಂಪನಿ ಮಾತ್ರ ಟೆಂಡರ್‌ನಲ್ಲಿದ್ದವು. ಇತರೆ ಕಂಪನಿಗಳು ಟೆಂಡರ್‌ಗೆ ಬರದಂತೆ ಷರತ್ತು ವಿಧಿಸಲಾಗಿತ್ತು. ಬಿಡ್‌ನಲ್ಲಿ ಇದ್ದ ಎರಡು ಕಂಪನಿಗಳು ಡಮ್ಮಿ ಕಂಪನಿಗಳು. ಹೀಗಾಗಿ ರಾಜಶ್ರೀಗೆ ಟೆಂಡರ್ ನೀಡಿರುವುದೇ ಅಕ್ರಮವಾಗಿ. ಬೆಸ್ಕಾಂ ನಲ್ಲಿ ದೊಡ್ಡ ಮಟ್ಟದ ಅಕ್ರಮಗಳು ನಡೆಯುತ್ತಿವೆ. ಒಂದು ಸ್ಮಾರ್ಟ್ ಮೀಟರ್‌ಗೆ 5,000 ರೂಪಾಯಿ ತ್ರೀಫೇಸ್ ಮೀಟರ್‌ಗಾಗಿ 9,000 ರೂ. ನಿಗದಿ ಮಾಡಿದೆ. ಇದೇ ಮೀಟರ್‌ಗಳು ಬೇರೆ ರಾಜ್ಯಗಳಲ್ಲಿ 900 ಮಾತ್ರ ಇದೆ. ರಾಜ್ಯಪಾಲರ ಬಳಿ ಈಗಾಗಲೇ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿದೆ. 3 ಎಂಎಲ್‌ಎಗಳು ರಾಜ್ಯಪಾಲರನ್ನು ಕೇಳಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಜೊತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

  • ಅತ್ತೆಯ ಕೊಲೆಗೆ ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆ ಕೊನೆಗೂ ಪತ್ತೆ

    ಅತ್ತೆಯ ಕೊಲೆಗೆ ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆ ಕೊನೆಗೂ ಪತ್ತೆ

    ಬೆಂಗಳೂರು: ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆಯನ್ನು ಇದೀಗ ಸಂಜಯ್ ನಗರದ (Sanjay Nagar) ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಮಹಿಳೆಯನ್ನು ಕೊಳ್ಳೇಗಾಲದ ಮೂಲದವರು ಎಂದು ತಿಳಿಯಲಾಗಿದ್ದು, ತನ್ನ ಗಂಡನ ಜೊತೆ ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿ ವಾಸವಾಗಿದ್ದರು. ಜೊತೆಗೆ ಒಂದೂವರೆ ವರ್ಷದ ಮಗುವಿದೆ.ಇದನ್ನೂ ಓದಿ: Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್‌ ಪಡೆಗೆ ಗೆಲುವಿನ ತವಕ

    ಗಂಡ ಕ್ಯಾಬ್ ಚಾಲಕನಾಗಿದ್ದು, ವೈದ್ಯರಿಗೆ ಮಾತ್ರೆ ಕೇಳಿದ್ದ ಮಾಹಿತಿ ತಿಳಿದು, ಆಕೆಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅತ್ತೆ ಹಾಗೂ ಮಹಿಳೆ ನಡುವೆ ಯಾವುದೇ ಗಲಾಟೆ ಇರಲಿಲ್ಲ. ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸ್ವತಃ ತಾನೇ ಸಾಯಲು ಮಾತ್ರೆ ಕೇಳಿರುವುದಾಗಿ ತನಿಖೆ ವೇಳೆ ಹೊರಬಂದಿದೆ. ಜೊತೆಗೆ ಗೂಗಲ್‌ನಲ್ಲಿ ಸರ್ಚ್ ಮಾಡಿ ಮಹಿಳೆ ಡಾಕ್ಟರ್ ನಂಬರ್ ಪಡೆದಿದ್ದರು ಎಂದು ತಿಳಿದು ಬಂದಿದೆ.

    ಖುದ್ದು ಡಾಕ್ಟರ್ ಮುಂದೆಯೇ ಸಂಜಯ್ ನಗರ ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡಿದ್ದು, ಮಹಿಳೆಗೆ ಸದ್ಯ ಕೌನ್ಸಲಿಂಗ್ ನೀಡಲು ನಿರ್ಧರಿಸಲಾಗಿದೆ.

    ಏನಿದು ಪ್ರಕರಣ?
    ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿತ್ತು. ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ, ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದರು.

    ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದರು. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದರು. ಇದಕ್ಕಿಂತ ಮುಂಚೆಯೇ ಸ್ಕ್ರೀನ್‌ಶಾಟ್‌ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದರು.ಇದನ್ನೂ ಓದಿ: ಅವರು ಯಾರನ್ನಾದರೂ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು: ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪದ ಬಗ್ಗೆ ಟ್ರಂಪ್‌ ಸುಳಿವು

  • ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬೆಂಗಳೂರು ನಗರ ಸೇರಿದಂತೆ ಕೆಲವೊಂದು ಸಿಟಿಗಳಲ್ಲಿ ಸ್ವಚ್ಚತೆ ಅನ್ನೋದು ಮರಿಚಿಕೆಯಾಗಿದೆ. ಅದರಲ್ಲೂ ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸ್ವಚ್ಛತೆ ಕಾಪಾಡಿ ಅಂತ ದೊಡ್ಡದಾಗಿ ಬರೆದ್ರೂ ಓದಿದವರಿಗೂ ಅದು ಕಾಣಿಸಲ್ಲ. ಕಾಪಾಡಬೇಕಾದವರೇ ಗಲೀಜು ಮಾಡಿ, ವಾತಾವರಣವನ್ನು ಕಲುಷಿತಗೊಳಿಸಿಬಿಡ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸೋದು ತುಂಬಾ ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಶರತ್.

    ಎಸ್, ಕಥೆ ಚಿತ್ರಕಥೆ ಬರೆದು ತಾವೇ ನಿರ್ದೇಶನ ಮಾಡಿ ನಟನೆಯಲ್ಲೂ ಮೊದಲ ಪ್ರಯೋಗದಲ್ಲೇ ಸೈ ಎನಿಸಿಕೊಂಡಿದ್ದಾರೆ ಶರತ್. G-Studios Media ಯೂಟ್ಯೂಬ್ ಚಾನೆಲ್ ನಲ್ಲಿ ‘ವೇಷ’ ಕಿರುಚಿತ್ರ ಇಂದು ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಸಖತ್ ವ್ಯೂವ್ ಪಡೆದಿದೆ.

    ಈ ಕಿರುಚಿತ್ರದಲ್ಲಿರುವ ವಿಷಯ ತುಂಬಾ ಸಿಂಪಲ್. ನಮ್ಮ ಸುತ್ತಮುತ್ತಲಿನಲ್ಲಿರುವ ಸಮಸ್ಯೆಯನ್ನೇ ಕಥೆಯನ್ನಾಗಿ ಎಣೆದಿದ್ದಾರೆ. ನೋಡಿದವರಿಗೆ ವಾವ್ ಈ ಸಮಸ್ಯೆಯನ್ನ ಈ ರೀತಿಯೂ ಸಾಲ್ವ್ ಮಾಡಬಹುದಾ ಎಂಬ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಭಿಕ್ಷೆಗೆ ಮತ್ತೊಂದಕ್ಕೆ ಮಾತ್ರ ಸೀಮಿತರಾಗಿರುವ, ಸಮಾಜದಲ್ಲಿ ಎಲ್ಲರಿಂದ ದೂರ ನಿಂತಿರುವ ಮಂಗಳ ಮುಖಿಯರಿಂದ ಇಂಥ ಕೆಲಸವೂ ಸಾಧ್ಯ ಎಂಬುದನ್ನು ಈ ಕಿರು ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಹಾಕುವ ಒಂದೇ ಶಾಪಕ್ಕೆ ಹೆದರಿ ಹಣ ಕೊಡುವವರು ಅವರ ಮಾತಿಗೆ ಹೇಗೆ ಸ್ವಚ್ಛತೆಗೆ ಇಳಿಯುತ್ತಾರೆ ಎಂಬುದನ್ನು ಶರತ್ ಪ್ರೂವ್ ಮಾಡಿದ್ದಾರೆ. ಆ ಅದ್ಭುತ ನಿರೂಪಣೆಯನ್ನ ಕಿರುಚಿತ್ರದಲ್ಲೇ ನೋಡಿದರೆ ಖುಷಿ ಕೊಡುತ್ತೆ.

    ನಟನಾಗಿ ಅನುಭವ ಇರುವ ಶರತ್, ಕಿರುಚಿತ್ರದ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ್ದಾರೆ. ಮೊದಲ ಕಿರುಚಿತ್ರದಲ್ಲೇ ಒಬ್ಬ ಒಳ್ಳೆ ಡೈರೆಕ್ಟರ್ ಸಾಮಾಥ್ರ್ಯವಿರುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲ್ಲ. ಸಮಾಜದಲ್ಲಿ ಇರುವ ಕೆಲವೊಂದು ಸಮಸ್ಯೆಗಳನ್ನು ಇಟ್ಟುಕೊಂಡು ಜನರಿಗೆ ಇಷ್ಟವಾಗುವ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. 10 ನಿಮಿಷ 40 ಸೆಕೆಂಡ್ ಈ ಕಿರುಚಿತ್ರ ಇದೆ. ಶರತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗೋಪಿ ಸ್ನೇಹಿತ ಪಾತ್ರದಲ್ಲಿ ಅಭಿನಯಿಸಿದ್ದು, ಸರಳ ಸೇರಿದಂತೆ ಅನೇಕ ಮಂಗಳಮುಖಿಯರು ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿರುವಂತೆ ಕ್ವಾಲಿಟಿ ಇದ್ದು ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ ಅಂತಾರೆ ನಿರ್ದೇಶಕ ಕಂ ನಟ ಶರತ್.

    ಒಟ್ಟಾರೆ ಸಮಸಾಜಕ್ಕೆ ಬೇಕಾದ ಒಂದೊಳ್ಳೆ ಮೆಸೇಜ್ ಈ ಕಿರುಚಿತ್ರದಲ್ಲಿದ್ದು, ಆ ಸಣ್ಣ ತಪ್ಪನ್ನ ಮಾಡುವಾಗ ಮನದ ಮೂಲೆಯಲ್ಲಿ ಅರಿವು ಮೂಡಿಸುವಂತ ಕೆಲಸ ಮಾಡುತ್ತೆ ‘ವೇಷ’ ಸಿನಿಮಾ. ಜೊತೆಗೆ ಕೊನೆಯಲ್ಲಿ ಬರುವ ದೇಶಕ್ಕಾಗಿ ಯಾವ ‘ವೇಷ’ ಬೇಕಾದ್ರೂ ಹಾಕ್ತಿನೋ ಅನ್ನೋ ಮಾತು ಎಲ್ಲರನ್ನು ಎಚ್ಚರಗೊಳಿಸುವಂತೆ ಮಾಡಿದೆ.