Tag: ಕ್ಲೀನ್

  • ಹೋಮ್ ಗಾರ್ಡ್ ಮೇಲೆ ಪಿಎಸ್‍ಐ ದಬ್ಬಾಳಿಕೆ – ಕೆಂಬಾವಿ ಠಾಣೆಯಲ್ಲಿ ಗುಲಾಮ ಪದ್ಧತಿ

    ಹೋಮ್ ಗಾರ್ಡ್ ಮೇಲೆ ಪಿಎಸ್‍ಐ ದಬ್ಬಾಳಿಕೆ – ಕೆಂಬಾವಿ ಠಾಣೆಯಲ್ಲಿ ಗುಲಾಮ ಪದ್ಧತಿ

    – ವರ್ಕಿಂಗ್ ಟೈಮ್‍ನಲ್ಲಿ ಹೋಮ್ ಗಾರ್ಡ್‍ನಿಂದ ಕಾರು ಕ್ಲೀನ್

    ಯಾದಗಿರಿ: ಕೆಂಬಾವಿ ಠಾಣೆಯ ವರ್ಕಿಂಗ್ ಟೈಮ್ ನಲ್ಲಿ ಹೋಮ್ ಗಾರ್ಡ್ ಕೈಯಲ್ಲಿ ಖಾಸಗಿ ವಾಹನ ಕ್ಲೀನ್ ಮಾಡಿಸಿ ಪಿಎಸ್‍ಐ ದಬ್ಬಾಳಿಕೆ ಮೆರೆದಿದ್ದಾರೆ. ಠಾಣೆಯ ಪಿಎಸ್‍ಐ ಗಜಾನನ ಹೋಮ್ ಗಾರ್ಡ್ ಕೈಯಲ್ಲಿ ತಮ್ಮ ಖಾಸಗಿ ಕಾರನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ.

    ಬಂದೋಬಸ್ತ್ ಡ್ಯೂಟಿಗೆ ಬಂದ ಹೋಮ್ ಗಾರ್ಡ್ ಸಮವಸ್ತ್ರ ಕಳಚಿ ಠಾಣೆಯ ಮೈದಾನದಲ್ಲಿ ಪಿಎಸ್‍ಐ ಗಜಾನನ ಕಾರನ್ನು ಕ್ಲೀನ್ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕೆಂಬಾವಿ ಪೊಲೀಸ್ ಠಾಣೆ ಇದೆ.

    ಪಿಎಸ್‍ಐ ವರ್ತನೆಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿತ್ತಿದ್ದು, ಕಾನೂನು ಕರ್ತವ್ಯ ನಿರ್ವಹಿಸುವವರು ಎಲ್ಲರೂ ಒಂದೇ. ಆದರೆ ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ಮಾತ್ರ ಹಿರಿಯ ಅಧಿಕಾರಿಗಳು, ಕೆಳ ಹಂತದ ಸಿಬ್ಬಂದಿಯನ್ನು ಗುಲಾಮರಂತೆ ಕಾಣುತ್ತಿರುವುದು ಬ್ರಿಟಿಷ್ ಅಧಿಕಾರಿಗಳ ದರ್ಪವನ್ನು ನೆನಪು ಮಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ

  • ಶಾಲೆಗೆ ತಡವಾಗಿ ಬಂದಿದ್ದಕ್ಕೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್!

    ಶಾಲೆಗೆ ತಡವಾಗಿ ಬಂದಿದ್ದಕ್ಕೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್!

    ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಕಾಳಜಿ ಇದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಸುದ್ದಿ ಓದಲೇ ಬೇಕು. ಸಿಎಂ.ಕುಮಾರಸ್ವಾಮಿ ತವರು ಜಿಲ್ಲೆಯಲ್ಲಿ ಒಂದು ಪೈಶಾಚಿಕ ಕೃತ್ಯ ನಡೆದಿದೆ.

    ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಶಾಲೆಗೆ ತಡವಾಗಿ ಬಂದ ಗಂಡು ಮಕ್ಕಳಿಗೆ, ಹೆಣ್ಣು ಮಕ್ಕಳ ಟಾಯ್ಲೆಟ್ ಕ್ಲೀನ್ ಮಾಡಿಸಿ ಮಕ್ಕಳಿಗೆ ಶಿಕ್ಷಕರು ಶಿಕ್ಷೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಲಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಮೂರನೇ ತರಗತಿ ವಿದ್ಯಾರ್ಥಿಗಳಿಂದ ಸ್ವಚ್ಛತೆ ನಡೆಸಿದ್ದು, ಪುಟಾಣಿ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ್ದು ಎಷ್ಟು ಸರಿ ಎಂದು ಪೋಷಕರು ಶಿಕ್ಷಕರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಇಂತಹ ಎಡವಟ್ಟುಗಳಿಗೆ ಶಿಕ್ಷಕರು ಬ್ರೇಕ್ ಹಾಕಬೇಕಿದೆ.

  • ಟಾಯ್ಲೆಟ್ ಪೈಪ್ ಕ್ಲೀನ್ ಮಾಡುವಾಗ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಕಬ್ಬಿಣದ ರಾಡ್ ತಾಗಿ ಇಬ್ಬರ ಸಾವು

    ಟಾಯ್ಲೆಟ್ ಪೈಪ್ ಕ್ಲೀನ್ ಮಾಡುವಾಗ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಕಬ್ಬಿಣದ ರಾಡ್ ತಾಗಿ ಇಬ್ಬರ ಸಾವು

    ಬೆಂಗಳೂರು: ಬಹು ಮಹಡಿ ಕಟ್ಟಡದಲ್ಲಿ ಶೌಚಾಲಯದ ಪೈಪ್ ಕ್ಲೀನ್ ಮಾಡಲು ಹೋಗಿ ಹೈಟೆಕ್ಷನ್ ತಂತಿ ಮೂಲಕ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೆಕೊಳಲ ಗ್ರಾಮದಲ್ಲಿ ನಡೆದಿದೆ.

    ಮನೆ ಮಾಲಿಕ ವೀರಪ್ಪ(75) ಹಾಗೂ ಕೊಲ್ಕತ್ತಾ ಮೂಲದ ಕೂಲಿ ಕಾರ್ಮಿಕ ಮೋಹನ್ ಮಹಾಂತ್(50) ಸಾವಿಗೀಡಾದ ದುರ್ದೈವಿಗಳಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.

    ಮೂವರು ಮನೆಯ ಶೌಚಾಲಯ ಕ್ಲೀನ್ ಮಾಡುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿ ಹಾದು ಹೋಗಿದ್ದ ಹೈಟೆಕ್ಷನ್ ತಂತಿಗೆ ಕಬ್ಬಿಣದ ರಾಡ್ ತಾಗಿ ವಿದ್ಯುತ್ ಹರಿದು ಈ ಅವಘಡ ಸಂಭವಿಸಿದೆ.

    ವಿಷಯ ತಿಳಿದ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.