Tag: ಕ್ಲಾಸ್ ರೂಮ್

  • ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

    ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

    ಬೆಂಗಳೂರು: ಕ್ಲಾಸ್‍ರೂಮಿನಲ್ಲಿ ವಿದ್ಯಾರ್ಥಿಯನ್ನ ಶಿಕ್ಷನೋರ್ವ ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ.

    ವಿದ್ಯಾರ್ಥಿಯೊರ್ವ ಕೋಲು ಮುರಿದು ಹಾಕಿದ್ದಾನೆ ಎಂದು ಕಾರಣಕ್ಕೆ ಶಿಕ್ಷಕ ಹರೀಶ್ ಕ್ಲಾಸ್ ರೂಮ್‍ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ್ದಾನೆ. ವಿದ್ಯಾರ್ಥಿಯ ಮೇಲೆ ಬ್ಯಾಗ್ ಎಸೆದು ಕೈಗಳಿಂದ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾನೆ.

    ಶಿಕ್ಷಕ ಹರೀಶ್ ವಿದ್ಯಾರ್ಥಿಗಳ ಮುಂದೆಯೇ ಹಲ್ಲೆ ಮಾಡಿದ ಕಾರಣ ಕ್ಲಾಸ್ ರೂಮ್‍ನಲ್ಲಿದ್ದ ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವಾಗಿ ಹರೀಶ್ ಮೇಲೆ ಶಾಲಾ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದ್ದು, ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿರುವ ಶಿಕ್ಷಕ ಕ್ಷಮೆಯಾಚಿಸಿದ್ದಾನೆ.

  • ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ಹೈದರಾಬಾದ್: ಶಾಲೆಯ ಫೀಸ್ ಕಟ್ಟಲು ಪೋಷಕರು ಲೇಟ್ ಮಾಡಿದ ಕಾರಣ ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗಡೆ ಕೂರಿಸಿರುವ ಅಮಾನವೀಯ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸಿರಿಲಿಂಗಮ್‍ಪಲ್ಲಿಯ ಎಂಎನ್‍ಆರ್ ಎಂಬ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಶಿಕ್ಷಕರು ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿಯನ್ನು ಶಾಲೆಯ ಕಾರಿಡಾರ್ ನಲ್ಲಿ ಯೇ ಕೂರಿಸಿದ್ದಾರೆ. ಮಕ್ಕಳು 7 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬರೋಬ್ಬರಿ ಮೂರು ಗಂಟೆಗಳ ಕಾಲ ಹೊರಗಡೆ ಕುಳಿತಿದ್ದಾರೆ. ಈ ಮಕ್ಕಳು ಶಾಲೆಯ ಫೀಸ್ ತಡವಾಗಿ ಕಟ್ಟಿದ್ದು, ಇದಕ್ಕೆ ಫೈನ್ ಹಾಕಲಾಗಿತ್ತು. ಆದ್ರೆ ಫೈನ್ ಹಣ ಕಟ್ಟಿಲ್ಲವೆಂದು ಈ ರೀತಿ ಶೀಕ್ಷೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಮಕ್ಕಳನ್ನ ಈ ರೀತಿ ತರಗತಿಯಿಂದ ಹೊರಗೆ ಕೂರಿಸಿದ್ದು ಮಾನಸಿಕ ಅವಮಾನ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಮಕ್ಕಳ ಹಕ್ಕುಗಳ ಸಂಘದವರಾದ ಅಚ್ಯುತ್ ರಾವ್ ತಿಳಿಸಿದ್ದಾರೆ.

    ಈ ಕುರಿತು ರಂಗಾರೆಡ್ಡಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಎಂಎನ್‍ಆರ್ ಶಾಲೆ ಮಕ್ಕಳ ಹಕ್ಕುಗಳನ್ನ ಉಲ್ಲಂಘನೆ ಮಾಡಿದೆ. ಈ ಕುರಿತು ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಅಚ್ಯುತ್ ರಾವ್ ಹೇಳಿದ್ದಾರೆ.