Tag: ಕ್ಲಾರೆನ್ಸ್ ಶಾಲೆ

  • ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಅಡ್ಮಿಷನ್

    ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಅಡ್ಮಿಷನ್

    ಬೆಂಗಳೂರು: ನಗರದ ರಿಚರ್ಡ್ ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬೇರೆ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಆಡಳಿತ ಮಂಡಳಿ ಆದೇಶವನ್ನು ಹೊರಡಿಸಿದೆ.

    ಇತ್ತೀಚೆಗಷ್ಟೇ ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಲಾಗಿತ್ತು. ಇದೀಗ ಬೈಬಲ್ ವಾರ್ ಮುಂದುವರಿದಿದ್ದು, ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಪ್ರವೇಶ ನೀಡಿ, ಹಿಂದೂ ಮಕ್ಕಳಿಗೆ ಪ್ರವೇಶ ಮಾಡಿಕೊಳ್ಳದಂತೆ ಶಾಲಾ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

    ಈ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿ, ಬೈಬಲ್ ಬಗ್ಗೆ ಕ್ರಿಶ್ಚಿಯನ್ ಮಕ್ಕಳಿಗಷ್ಟೆ ನೈತಿಕ ಬೋಧನೆ ಮಾಡಲಾಗ್ತಿತ್ತು. ನಮ್ಮ ಶಾಲೆಯಲ್ಲಿ ಬೈಬಲ್ ನೈತಿಕ ಬೋಧನೆ ಮಾಡುತ್ತಿದ್ದೆವು. ಧರ್ಮ ಬೋಧನೆ ಮಾಡುತ್ತಿರಲಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿಕೊಂಡು ಬೃಹತ್ ವಾಹನ ಎಳೆದು ಹರಕೆ ತೀರಿಸಿದ ಭಕ್ತರು

    ಸರ್ಕಾರ ಭಗವದ್ಗೀತೆ ಕಡ್ಡಾಯಗೊಳಿಸಿದರೆ ಸ್ವಾಗತಿಸುತ್ತೇವೆ. ಬೈಬಲ್‍ನಲ್ಲಿ ಪಾಸಿಂಗ್ ಮಾರ್ಕ್ಸ್‌ ತಗೆದುಕೊಳ್ಳಬೇಕು ಎಂದು ಕಡ್ಡಾಯವಿರಲಿಲ್ಲ, ಮಕ್ಕಳು ಪ್ರಶಸ್ತಿ ಪಡೆಯಲಷ್ಟೇ ಮಾಡಿದ್ದಾಗಿತ್ತು. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೆ ಶಾಲಾ ಅಡ್ಮಿಷನ್‍ಗೆ ಅನುಮತಿ ನೀಡಲಾಗಿದೆ ಎಂದು ಕ್ಲಾರೆನ್ಸ್ ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹನುಮಾನ್‌ ಚಾಲೀಸಾ ಪಠಿಸಿದವರನ್ನು ಬಂಧಿಸಿದ್ದಕ್ಕೆ ಬಾಳಾ ಠಾಕ್ರೆ ನೊಂದಿದ್ದಾರೆ: ಕೇಂದ್ರ ಸಚಿವ

  • ಕ್ರೈಸ್ತ ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ – ಪ್ರಮೋದ್ ಮುತಾಲಿಕ್ ಕಿಡಿ

    ಕ್ರೈಸ್ತ ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ – ಪ್ರಮೋದ್ ಮುತಾಲಿಕ್ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ದಿನಕ್ಕೊಂದು ಧರ್ಮ ದಂಗಲ್ ವಿವಾದ ಶುರುವಾಗುತ್ತಿದೆ. ಇದಿಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಕ್ರೈಸ್ತ ಧರ್ಮದ ಹೇರಿಕೆ ಆರೋಪ ಕೇಳಿಬಂದಿದ್ದು, ಬೈಬಲ್‍ನಲ್ಲಿ ಕ್ರೌರ್ಯ ಇದೆ. ಶಿಕ್ಷಣ ಹೆಸರಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ರಿಚರ್ಡ್ ಟೌನ್‍ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್ ಮಕ್ಕಳಿಗೆ ಬೈಬಲ್ ಕಡ್ಡಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕೆರಳಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಶಿಕ್ಷಣದ ಹೆಸರಲ್ಲಿ ಮತಂತಾರ ಮಾಡುವ ಹುನ್ನಾರವಿದು. ಬೈಬಲ್‍ನಲ್ಲಿ ಕ್ರೌರ್ಯವಿದೆ. ಕೂಡಲೇ ಕ್ಲಾರೆನ್ಸ್ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ 4ನೇ ಅಲೆ: ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

    ಮಕ್ಕಳ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2005ರ ಉಲ್ಲಂಘನೆ ಹಾಗೂ ಸರ್ವೋಚ್ಚ ನ್ಯಾಯಾಲಯ ಆದೇಶ ಉಲ್ಲಂಘನೆ ಮಾಡಲಾಗಿದೆ. ಶಾಲೆಯಲ್ಲಿ ಬೈಬಲ್ ಪುಸ್ತಕ ಕಡ್ಡಾಯ ಎಂದು ಆದೇಶ ಹೊರಡಿಸಿದ ಶಾಲಾ ಆಡಳಿತ ಮಂಡಳಿಯ ವಿರುದ್ಧ, ಪೋಷಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳು ಉತ್ತಮ ನಾಗರಿಕನಾಗಲು ಬೈಬಲ್ ಕಲಿಕೆ ಮುಖ್ಯ ಎಂದ ಆಡಳಿತ ಮಂಡಳಿ, ಬೈಬಲ್ ಕಲಿಕೆ ವಿರೋಧಿಸುವವರಿಗೆ ಶಾಲೆಯಲ್ಲಿ ಅಡ್ಮಿಷನ್ ಮಾಡಿಕೊಳ್ಳುವುದಿಲ್ಲ. ದಿನನಿತ್ಯ ಬೈಬಲ್ ಓದುವುದು ಕಡ್ಡಾಯ ಅಂತ ಆಡಳಿತ ಮಂಡಳಿ ತಿಳಿಸಿದೆ ಎನ್ನಲಾಗುತ್ತಿದೆ.

    ಸದ್ಯ ಈ ವಿರುದ್ಧ ಪ್ರಮೋದ್ ಮುತಾಲಿಕ್ ಬೈಬಲ್ ಓದುವುದರಿಂದ ಮತಾಂತರ ವಾದಿಗಳಾಗಿದ್ದಾರೆ. ಕ್ರಿಶ್ಚಿಯನ್ ಪ್ರಚಾರಕರಾಗಿದ್ದಾರೆ. ಗೋವಾದಲ್ಲಿ ನಿಮ್ಮ ಕ್ರೌರ್ಯ ಗೊತ್ತಾಗಿದೆ ಎಂದು ಗುಡುಗಿದ್ದಾರೆ. ಇಲ್ಲಿಯವರೆಗೂ ಹಿಂದೂ ಸಂಘಟನೆಗಳ ವಿರೋಧಕ್ಕೆ ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯಿಸಿಲ್ಲ. ಒತ್ತಾಯ ಬೈಬಲ್ ಬೋಧನೆ ನಿಲ್ಲಿಸದಿದ್ದರೆ, ಶಾಲೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಗೆ ನೀಡಿದೆ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್