Tag: ಕ್ಲಾಕ್ ಟವರ್

  • ವಿವಾದಿತ ಕ್ಲಾಕ್ ಟವರ್ ಬಳಿ ಅಂಬೇಡ್ಕರ್ ಸ್ತಬ್ಧ ಚಿತ್ರಗಳ ಮೆರವಣಿಗೆ

    ವಿವಾದಿತ ಕ್ಲಾಕ್ ಟವರ್ ಬಳಿ ಅಂಬೇಡ್ಕರ್ ಸ್ತಬ್ಧ ಚಿತ್ರಗಳ ಮೆರವಣಿಗೆ

    ಕೋಲಾರ: ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್ ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಕೋಲಾರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಕ್ಲಾಕ್ ಟವರ್‌ಗೆ ಆಗಮಿಸಿದ ಅಂಬೇಡ್ಕರ್ ಜಯಂತಿ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಹೂ ಚೆಲ್ಲುವ ಮೂಲಕ ಸ್ವಾಗತಿಸಿದರು.

    ಮತ್ತೊಂದೆಡೆ ನಗರದ ಅಂಜುಮನ್ ಇಸ್ಲಾಂ ವತಿಯಿಂದ ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಪುಷ್ಪಾರ್ಚನೆ ಮಾಡುವ ಮೂಲಕ ಭಾತೃತ್ವವನ್ನು ಮೆರೆದು ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೋಲಾರದ ಅಂಜುಮನ್ ಸಂಸ್ಥೆ ಮುಖ್ಯಸ್ಥ ಝಮೀರ್ ಅಹಮದ್ ಕ್ಲಾಕ್ ಟವರ್ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ ಎಂದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಕೋಲಾರದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ-ಭಾವ ಇಲ್ಲದೆ ಜೀವಿಸುತ್ತಿದ್ದೇವೆ. ರಾಜಕಾರಣಿಗಳು ಎಷ್ಟು ಪ್ರಯತ್ನ ಪಟ್ಟರೂ ನಮ್ಮ ಮಧ್ಯೆ ವಿಷ ಬೀಜ ಹಾಕಲು ಸಾಧ್ಯವಿಲ್ಲ. ನಾವು ಒಬ್ಬರನ್ನೊಬ್ಬರು ನಂಬಿಕೆ ಮತ್ತು ಅವಲಂಬಿಕೆಯಿಂದ ಜೀವನ ಸಾಗಿಸುತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ

     

  • ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜ

    ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜ

    ಕೋಲಾರ: ಶ್ರೀನಗರದ ಐತಿಹಾಸಿಕ ಲಾಲ್‍ಚೌಕ್‍ನಲ್ಲಿ ತಿರಂಗಾ ಹಾರಿದ ರೀತಿ ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ತಿರಂಗಾ ಹಾರಿದೆ.

    ಮುಸ್ಲಿಮ್ ಮುಖಂಡರ ಸಹಯೋಗದಲ್ಲಿ ಜಿಲ್ಲಾಡಳಿತ ಹಸಿರುಬಣ್ಣದಲ್ಲಿದ್ದ ಕ್ಲಾಕ್ ಟವರ್‌ಗೆ ತ್ರಿವರ್ಣ ರಂಗು ತುಂಬಿದೆ. ಆದರೆ ಕೆಲ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಲಾಕ್ ಟವರ್‌ನ ನಾಲ್ಕು ದಿಕ್ಕುಗಳಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲಾಯಿತು. ಇದನ್ನೂ ಓದಿ: ಕುಶಾಲನಗರ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ ಇಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ

    ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದಂತೆ ಹಿಂದೂಸ್ತಾನ್ ಜಿಂದಾಬಾದ್ ಎಂದು ಮುಸ್ಲಿಂ ಮುಖಂಡರು ಘೋಷಣೆ ಕೂಗಿದ್ರು. ಕ್ಲಾಕ್ ಟವರ್‌ನಲ್ಲಿ ತಿರಂಗಾ ಹಾರಿಸಲೇಬೇಕು ಎಂದು ಕಳೆದ ಕೆಲ ದಿನಗಳಿಂದ ಸಂಸದ ಮುನಿಸ್ವಾಮಿ ಪಟ್ಟು ಹಿಡಿದು ಹೋರಾಟ ನಡೆಸಿದ್ರು. ಮುಸ್ಲಿಮರೇ ಹೆಚ್ಚಿರುವ ಪ್ರದೇಶದಲ್ಲಿ ಕ್ಲಾಕ್ ಟವರ್ ಇದ್ದು, ಇದನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲಾಗಿತ್ತು. ಇಲ್ಲಿ ಯಾವುದಾದರೂ ಮೆರವಣಿಗೆ ಬಂದಾಗ ಸಣ್ಣ ಪುಟ್ಟ ಘರ್ಷಣೆ ನಡೆಯುತ್ತಿದ್ದವು. ಹೀಗಾಗಿ ಈ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಮೆರವಣಿಗೆಯನ್ನು ನಿಷೇಧಿಸಲಾಗಿತ್ತು. ಮುಸ್ತಾಫಾ ಸಾಬ್ ಎಂಬುವರು ನಿರ್ಮಿಸಿದ್ದ ಕ್ಲಾಕ್ ಟವರ್‌ನ್ನು 1986ರಲ್ಲಿ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಕೊನೆಗೆ ಕ್ಲಾಕ್ ಟವರ್ ನಿರ್ವಹಣೆಯನ್ನು ನಗರಸಭೆ, ಅಂಜುಮಾನ್ ಸಂಸ್ಥೆಗೆ ಬಿಟ್ಟುಕೊಟ್ಟಿತ್ತು. ಇದನ್ನೂ ಓದಿ: ಮಕ್ಕಳ ಕೈಯಲ್ಲಿ ಕೇಸರಿ ಶಾಲು ಕೊಡ್ತೀರ, ಕಾಶ್ಮೀರ್ ಫೈಲ್ ಚಿತ್ರ ನೋಡಿ ಅಂತೀರ, ದಲಿತರ ಹಣವನ್ನು ಯಾಕೆ ನುಂಗ್ತಿದ್ದೀರ?: ಪ್ರಿಯಾಂಕ್ ಖರ್ಗೆ

  • ಮಂಗಳೂರಿನಲ್ಲಿದೆ ದೇಶದ ಅತೀ ದುಬಾರಿ ಕ್ಲಾಕ್ ಟವರ್

    ಮಂಗಳೂರಿನಲ್ಲಿದೆ ದೇಶದ ಅತೀ ದುಬಾರಿ ಕ್ಲಾಕ್ ಟವರ್

    – ಅಗತ್ಯವಿಲ್ಲದಿದ್ದರೂ 1 ಕೋಟಿ ವ್ಯರ್ಥ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸುಂದರ ಭಾರತದ ಕನಸು ಕಾಣುತ್ತಿದ್ದು, ಅದಕ್ಕಾಗಿ ಕೆಲವೊಂದು ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿ ದೇಶದ ಪ್ರಮುಖ ನಗರಗಳನ್ನು ಗುರುತಿಸಿ ಹಣವನ್ನೂ ಬಿಡುಗಡೆ ಮಾಡಿದ್ದಾರೆ.

    ಈ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಕರಾವಳಿಯ ಮಂಗಳೂರು ಸೇರ್ಪಡೆಗೊಂಡಿತ್ತು. ಅದರಂತೆ ಮಂಗಳೂರು ಸ್ಮಾರ್ಟ್ ಸಿಟಿಯೇನೋ ಆಗುತ್ತಿದೆ. ಅದಕ್ಕಾಗಿ ನೂರಾರು ಕೋಟಿ ಬಿಡುಗಡೆಯಾಗಿದ್ದೂ ಆಗಿದೆ. ಆದರೆ ಈ ಸ್ಮಾರ್ಟ್ ಸಿಟಿಯ ಹಣ ಹೇಗೆ ಬಳಕೆಯಾಗುತ್ತಿದೆ, ಜನರು ಕಟ್ಟಿದ ತೆರಿಗೆಯ ಹಣವನ್ನು ಸ್ಮಾರ್ಟ್ ನೆಪದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಗೆ ಜೇಬಿಗೆ ಇಳಿಸುತ್ತಿದ್ದಾರೆ ಅನ್ನೋದಕ್ಕೆ ಮಂಗಳೂರು ನಗರದಲ್ಲಿ ತಲೆ ಎತ್ತಿ ನಿಂತಿರೋ ಕ್ಲಾಕ್ ಟವರ್ ಜೀವಂತ ಉದಾಹರಣೆಯಾಗಿದೆ.

    ಗಡಿಯಾರ ಗೋಪುರ ಎನ್ನುವ ಪರಿಕಲ್ಪನೆಯೇ ಮಾಸಿಹೋಗಿರುವ ಇಂದಿನ ಕಾಲದಲ್ಲಿ ಮಂಗಳೂರು ನಗರದ ಮಧ್ಯೆ ಬೃಹತ್ ಕ್ಲಾಕ್ ಟವರ್ ತಲೆಯೆತ್ತಿದೆ. ಅಷ್ಟೇ ಅಲ್ಲ ದೇಶದ ದುಬಾರಿ ಕ್ಲಾಕ್ ಟವರ್ ಅನ್ನುವ ಹಣೆಪಟ್ಟಿಯನ್ನೂ ಅಂಟಿಸಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಿಸಿರುವುದು. ಮಂಗಳೂರಿನ ಹಂಪನಕಟ್ಟೆಯ ವೃತ್ತದ ಬಳಿ ಹಿಂದೆ 1968 ರಲ್ಲಿ ಜನರಿಗೆ ಸಮಯ ಗೊತ್ತಾಗಲೆಂದು ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಗಂಟೆ ಗಂಟೆಗೆ ಬೆಲ್ ಮಾಡುತ್ತಾ ನಗರ ಭಾಗದ ಜನರನ್ನು ಎಚ್ಚರಿಸುತ್ತಿದ್ದ ಕ್ಲಾಕ್ ಟವರ್ ಜನರ ಕೈಗೆ ವಾಚ್ ಬರುತ್ತಿದ್ದಂತೆ ಅಪ್ರಸ್ತುತ ಎನ್ನುವಂತಾಗಿತ್ತು.

    ಹೀಗಾಗಿ 1994ರಲ್ಲಿ ನಗರದ ಮಧ್ಯೆ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಹಳೆಯ ಕ್ಲಾಕ್ ಟವರನ್ನು ಕೆಡವಲಾಗಿತ್ತು. ಆದರೆ ಇದೀಗ 24 ವರ್ಷಗಳ ಬಳಿಕ ಅದೇ ಜಾಗದಲ್ಲಿ 75 ಅಡಿ ಎತ್ತರದಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಗಿದೆ. ಹೆಚ್ಚೆಂದರೆ 20 ಲಕ್ಷ ಖರ್ಚು ಆಗಬಹುದಾದ ಟವರ್ ನಿರ್ಮಾಣಕ್ಕೆ ಒಂದು ಕೋಟಿ ವ್ಯಯಿಸಿದ್ದಾಗಿ ಹೇಳುತ್ತಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಸ್ಮಾರ್ಟ್ ಹೆಸರಲ್ಲಿ ಜನರ ದುಡ್ಡನ್ನು ಜೇಬಿಗಿಳಿಸುತ್ತಿರುವುದಕ್ಕೆ ಜ್ವಲಂತ ನಿದರ್ಶನ ಎಂದು ಸ್ಥಳೀಯ ಸಾಮಾಜಿಕ ಹೋರಾಟಗಾರರಾದ ದಿನೇಶ್ ಹೊಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿಗೆ ಕ್ಲಾಕ್ ಟವರ್ ಅಗತ್ಯ ಇಲ್ಲದಿದ್ದರೂ, ಎರಡು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್, ಹಲವರ ವಿರೋಧದ ಮಧ್ಯೆಯೇ ಟವರ್ ನಿರ್ಮಾಣಕ್ಕೆ ನಿರ್ಧರಿಸಿದ್ದರು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಸ್ಮಾರ್ಟ್ ಸಿಟಿಯ ಹೆಸರಲ್ಲಿ ನಡೆದ ಮೊದಲ ಯೋಜನೆಯೇ ಅತ್ಯಂತ ದುಬಾರಿ ಎನಿಸಿದೆ. ಹೀಗಾಗಿ ಸ್ಮಾರ್ಟ್ ಸಿಟಿ ನೆಪದಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಟೀಕೆ ಜಾಲತಾಣದಲ್ಲಿ ಜೋರಾಗಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನಾ ನಿರ್ದೇಶಕರು ಮಾತ್ರ ದುಂದು ವೆಚ್ಚ ಆಗಿರುವುದನ್ನು ನಿರಾಕರಿಸಿದ್ದಾರೆ.

    ಸ್ಮಾರ್ಟ್ ಸಿಟಿ ಹೆಸರಲ್ಲಿ ಬಂದ ಹಣವನ್ನು ಮಂಗಳೂರಿನಲ್ಲಿ ಅನಗತ್ಯ ಕೆಲಸಗಳಿಗಾಗಿ ವ್ಯಯಿಸಲಾಗುತ್ತಿದೆ. ಪ್ರತಿ ಸ್ಮಾರ್ಟ್ ಸಿಟಿ ಯೋಜನೆಗೂ ಐಎಎಸ್ ದರ್ಜೆಯ ಅಧಿಕಾರಿ ನೇಮಕ ಆಗಬೇಕಿದ್ದರೂ ಮಂಗಳೂರಿಗೆ ಇನ್ನೂ ಅಧಿಕಾರಿಯ ನೇಮಕ ಆಗಿಲ್ಲ. ಹೀಗಾಗಿ ಆನೆ ನಡೆದಿದ್ದೇ ದಾರಿ ಅನ್ನುವಂತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಜನರ ತೆರಿಗೆಯ ದುಡ್ಡನ್ನು ಪೋಲು ಮಾಡುತ್ತಿದ್ದಾರೆ. ದುಡ್ಡು ಪೋಲು ಮಾಡುತ್ತ ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶಕ್ಕೆ ಮಣ್ಣೆರಚುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.