Tag: ಕ್ಲಬ್ ಕ್ರಿಕೆಟ್

  • ಇಂಗ್ಲೆಂಡ್ ಕ್ಲಬ್ ಕ್ರಿಕೆಟ್ – 11 ಎಸೆತಗಳಲ್ಲಿ 1 ರನ್ ಗೆ 7 ವಿಕೆಟ್ ಪತನ

    ಇಂಗ್ಲೆಂಡ್ ಕ್ಲಬ್ ಕ್ರಿಕೆಟ್ – 11 ಎಸೆತಗಳಲ್ಲಿ 1 ರನ್ ಗೆ 7 ವಿಕೆಟ್ ಪತನ

    ಲಂಡನ್ : ಕಳೆದ ಒಂದು ವಾರದ ಹಿಂದೆ 481 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೆನ್ನಲ್ಲೇ ಇಂಗ್ಲೆಂಡ್ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಮತ್ತೊಂದು ಐತಿಹಾಸಿಕ ಇನ್ನಿಂಗ್ಸ್ ದಾಖಲಾಗಿದೆ.

    ಇಂಗ್ಲೆಂಡ್ ನ ಇಸಿಬಿ ನ್ಯಾಷನಲ್ ಕ್ಲಬ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಸ್ಥಳೀಯ ತಂಡಗಳಾದ ಪೀಟರ್ ಬರೋಗ್ ಹಾಗೂ ಹೈ ವೈಕೊಂಬ್ ಸಿಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಖಲೆ ನಿರ್ಮಾಣವಾಗಿದೆ. 12 ಎಸೆತಗಳಲ್ಲಿ ಕೇವಲ 3 ರನ್ ಗಳಿಸುವ ಗುರಿಯಯನ್ನು ಹೊಂದಿದ್ದ ಹೈ ವೈಕೊಂಬ್ ಸಿಟಿ ತಂಡಗಳ ಕೇವಲ 1 ರನ್ ಗೆ 7 ರನ್ ಗೆ ಏಳು ವಿಕೆಟ್ ಕಳೆದುಕೊಂಡು ಸೋಲುಂಡಿದೆ.

    ಮೊದಲು ಬ್ಯಾಟಿಂಗ್ ನಡೆಸಿದ ಪೀಟರ್ ಬರೋಗ್ ತಂಡ ಎದುರಾಳಿ ತಂಡಕ್ಕೆ 189 ರನ್ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಹೈ ವೈಕೂಂಬ್ ತಂಡ 186 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಈ ವೇಳೆ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪೀಟರ್ ಬರೋಗ್ ತಂಡದ ಬೌಲರ್ ಕೀರಾನ್ ಜೋನ್ಸ್ 38 ಓವರ್ ನ ಮೊದಲ ಎಸೆತದಲ್ಲಿ 1 ರನ್ ನೀಡಿ, ಬಳಿಕ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ತಂಡದಲ್ಲಿ ಮಿಂಚಿದ್ದರು. ಬಳಿಕ 39 ಓವರ್ ಬೌಲ್ ಮಾಡಿದ ಸ್ಪೀನ್ ಬೌಲರ್ 16 ವರ್ಷದ ದನ್ಯಾಯಾಲ್ ಮಲಿಕ್ 1 ರನ್ ಮಾತ್ರ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಗೆಲುವು ಪಡೆದ ಪೀಟರ್ ಬರೋಗ್ ತಂಡ ಇಸಿಬಿ ಕ್ಲಬ್ ಚಾಂಪಿಯನ್ ಪಟ್ಟವನ್ನು ಪಡೆದಿದೆ. ಪಂದ್ಯದ ಕೊನೆಯ ಓವರ್ ಬೌಲ್ ಮಾಡಿದ್ದ ಇಸಿಬಿ ಕ್ಲಬ್ ಚಾಂಪಿಯನ್ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು.

  • ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಶಾಟ್ – ಕೀಪರ್ ನಿಲ್ಲೋ ಜಾಗದಲ್ಲಿ ಬ್ಯಾಟ್ಸ್ ಮನ್ : ವಿಡಿಯೋ

    ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಶಾಟ್ – ಕೀಪರ್ ನಿಲ್ಲೋ ಜಾಗದಲ್ಲಿ ಬ್ಯಾಟ್ಸ್ ಮನ್ : ವಿಡಿಯೋ

    ಕೊಲಂಬೋ: ಶ್ರೀಲಂಕಾದ ಬ್ಯಾಟ್ಸ್ ಮನ್ ಚಾಮರ ಸಿಲ್ವಾ ವಿಚಿತ್ರ ಶಾಟ್ ಹೊಡೆಯಲು ಹೋಗಿ ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೋಲ್ ಆಗುತ್ತಿದ್ದಾರೆ.

    ಕೊಲಂಬೋದಲ್ಲಿ ಎಂಎಎಸ್ ಉನಿಚೆಲ ಮತ್ತು ತೀಜೆ ಲಂಕಾ ವಿರುದ್ಧದ ಕ್ಲಬ್ ಪಂದ್ಯದಲ್ಲಿ ಚಾಮರ ಸಿಲ್ವಾ ವಿಕೆಟ್ ಹಿಂದುಗಡೆಯಿಂದ ಬ್ಯಾಟ್ ಮಾಡಲು ಹೋಗಿದ್ದಾರೆ. ಬೌಲರ್ ಬಾಲ್ ಎಸೆಯುವ ಸಂದರ್ಭದಲ್ಲಿ ಕೀಪರ್ ನಿಲ್ಲುವ ಜಾಗಕ್ಕೆ ಬ್ಯಾಟ್ ಮಾಡಲು ಹೋಗಿದ್ದಾರೆ. ಚಾಮರ ಸಿಲ್ವಾ ಹಿಂದಕ್ಕೆ ಹೋಗಿದ್ದನ್ನು ನೋಡಿ ಬೌಲರ್ ವಿಕೆಟ್ ಗೆ ಬಾಲ್ ಹಾಕಿ ಬೌಲ್ಡ್ ಮಾಡಿದ್ದಾರೆ.

    ಈಗ ಚಾಮರ ಸಿಲ್ವಾ ಅವರ ಈ ವಿಚಿತ್ರ ಶಾಟ್ ಬಗ್ಗೆ ಜನ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ಈ ಶಾಟ್ ಹೊಡೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.

    ಸ್ಪಾಟ್ ಫಿಕ್ಸಿಂಗ್ ಆರೋಪ:
    ಜನವರಿಯಲ್ಲಿ ಲಂಕಾ ದೇಶಿ ಕ್ರಿಕೆಟ್‍ನಲ್ಲಿ ಪಾಂಡೂರಾ ಕ್ರಿಕೆಟ್ ಕ್ಲಬ್-ಕಲುಟರಾ ಫಿಸಿಕಲ್ ಕಲ್ಚರ್ ಕ್ಲಬ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದ ವೇಳೆ ಲಂಕಾ ಅಂತಾರಾಷ್ಟ್ರೀಯ ತಂಡದ ಮಾಜಿ ಆಟಗಾರ ಹಾಲಿ ಪಾಂಡೂರಾ ತಂಡದ ನಾಯಕ ಚಾಮರ ಸಿಲ್ವ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ಸಾಬೀತಾಗಿತ್ತು. ಹೀಗಾಗಿ ಅವರಿಗೆ 2 ವರ್ಷದ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಸಿಲ್ವ ಮೇಲ್ಮನವಿ ಸಲ್ಲಿಸಿದ್ದರು. ನಂತರ ಆ ಪಂದ್ಯಗಳೇ ಅಸಿಂಧು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಘೋಷಿಸಿತ್ತು. ಹೀಗಾಗಿ ಚಾಮರ ಸಿಲ್ವ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗಿದ್ದ ಪರಿಣಾಮ ದೇಶಿ ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ಸಿಕ್ಕಿತ್ತು.

    ಶ್ರೀಲಂಕಾ ಆಟಗಾರರು ಕ್ರಿಕೆಟ್ ಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಮಾಜಿ ಆಟಗಾರ ತಿಲಕರತ್ನೆ ದಿಲ್ಶಾನ್ ವಿಕೆಟ್ ಕೀಪರ್ ಕೈಗೆ ಬಾಲ್ ಸಿಗದಂತೆ ಬೌಂಡರಿ ಕಳುಹಿಸುವ ಶಾಟ್ ಹೊಡೆಯುತ್ತಿದ್ದರು. ಈ ಶಾಟ್ ‘ದಿಲ್ ಸ್ಕೂಪ್’ ಎಂದೇ ಹೆಸರುವಾಸಿಯಾಗಿದೆ.

    https://youtu.be/F6i1AlJi36M

    https://twitter.com/dinkerv/status/933017776964247552