Tag: ಕ್ಲಬ್

  • ಬಾಕ್ಸ್ ಆಫೀಸ್ ಚಿಂದಿ: 1000 ಕೋಟಿ ಕ್ಲಬ್ ಸೇರಿದ ‘ಪಠಾಣ್’ ಸಿನಿಮಾ

    ಬಾಕ್ಸ್ ಆಫೀಸ್ ಚಿಂದಿ: 1000 ಕೋಟಿ ಕ್ಲಬ್ ಸೇರಿದ ‘ಪಠಾಣ್’ ಸಿನಿಮಾ

    ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿದೆ. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ.

    ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೆಲ್ಲದರ ಪರಿಣಾಮ ಇದೀಗ ಪಠಾಣ್ ಸಾವಿರ ಕೋಟಿ ಬಾಚಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಬೆಂಗಳೂರು: ನ್ಯೂ ಇಯರ್ ವೆಲ್‌ಕಮ್‌ಗೆ (New Year Celebration) ಬೆಂಗಳೂರು ಪೊಲೀಸ್ (Bengaluru Police) ಸರ್ಪಗಾವಲಿನಲ್ಲಿ ಇರಲಿದೆ. ಈಗಾಗಲೇ ತಯಾರಿ ಶುರುವಾಗಿದ್ದು, ಕ್ಲಬ್ -ಪಬ್‌ಗಳೂ (Club, Pub) ಸಹ ತಯಾರಿ ನಡೆಸಿವೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸ್ಪೆಷಲ್ ಪಿಂಕ್‌ಸ್ಕ್ವಾಡ್‌ (Police Pink Squad) ಫೀಲ್ಡಿಗಿಳಿದಿದೆ.

    ಮಹಿಳಾ ಪೊಲೀಸರನ್ನು (Women Police) ವಿವಿಧ ತಂಡಗಳಾಗಿ ಮಾಡಿ ಫೀಲ್ಡ್‌ಗೆ ಇಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆ ಮೂಲಕ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಸಿಸಿಟಿವಿ, 50 ಬಾಡಿ ಕ್ಯಾಮೆರಾ (BodyCamera) ಹಾಕಲು ತೀರ್ಮಾನಿಸಲಾಗಿದೆ. ಕ್ಲಬ್ ಮತ್ತು ಪಬ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಕ್ಲಬ್‌ನವರೇ ಲೇಡಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಲಬ್ ಮತ್ತು ಪಬ್, ಹೋಟೆಲ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಲಬ್ ನವರೇ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಯಾವ ಕ್ಲಬ್ ಮತ್ತು ಪಬ್‌ನಲ್ಲಿ ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಹೋಟೆಲ್ ಮತ್ತು ಪಬ್ ಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ರೆ ಕ್ಲಬ್ ನವರೇ ಹೊಣೆಯಾಗ್ತಾರೆ. ಪಾರ್ಟಿ ವೇಳೆ ಡ್ರಗ್ಸ್ ಬಳಕೆ ಮಾಡಿರೋದು ಗೊತ್ತಾದರೆ ಕಠಿಣ ಕ್ರಮದ ಜೊತೆಗೆ ಲೈಸೆನ್ಸ್ (ಪರವಾನಗಿ) ರದ್ದು ಮಾಡಲಾಗುತ್ತದೆ. ಇನ್ನೂ 2-3 ದಿನಗಳಲ್ಲಿ ಈ ಸಂಬಂಧ ಕಂಪ್ಲೀಟ್ ಡಿಟೇಲ್ಸ್ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ನವದೆಹಲಿ: ದೆಹಲಿಯ (NewDelhi) ಸೌತ್ ಎಕ್ಸ್‍ಟೆನ್ಶನ್ ಪಾರ್ಟ್-1 (South Extension Part-1) ಏರಿಯಾದಲ್ಲಿರುವ ಕ್ಲಬ್‍ಗೆ (Club) ಪ್ರವೇಶ ನೀಡಲು ನಿರಾಕರಿಸಿ ಖ್ಯಾತೆ ತೆಗೆದ ಬೌನ್ಸರ್‌ಗಳು (Bouncers) ನನ್ನ ಬಟ್ಟೆಯನ್ನು ಹರಿದು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 18 ರಂದು ಬೆಳಗಿನ ಜಾವ 2:14ರ ಸುಮಾರಿಗೆ ಡಾ ಕೋಡ್ ಕ್ಲಬ್‍ನಲ್ಲಿ (Da Code club )ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳೆ ಪೊಲೀಸರಿಗೆ (Police) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ, ಮಹಿಳೆಯ ಬಟ್ಟೆ ಕಿತ್ತು ಹೋಗಿರುವುದು ಕಂಡು ಬಂದಿದೆ. ನಂತರ ಈ ಬಗ್ಗೆ ವಿಚಾರಣೆ ನಡೆಸಿದಾಗ, ಇಬ್ಬರು ಬೌನ್ಸರ್‌ಗಳು ಹಾಗೂ ಕ್ಲಬ್ ಮ್ಯಾನೇಜರ್ ಬಟ್ಟೆಯನ್ನು ಹರಿದಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ನಂತರ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲಾರಂಭಿಸಿದ್ದಾರೆ. ಈ ಘಟನೆ ಸಂಬಂಧ ದೂರು ದಾಖಲಿಸಿರುವ ಮಹಿಳೆ, ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಕ್ಲಬ್‍ಗೆ ಬಂದಿದ್ದು, ಈ ವೇಳೆ ಪ್ರವೇಶ್ ನೀಡಲು ನಿರಾಕರಿಸಿ ಬೌನ್ಸರ್‌ಗಳು ಆಕೆಯ ಮೇಲೆ ಹಾಗೂ ಆಕೆಯ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಇದೀಗ ಘಟನೆಗೆ ಸಂಬಂಧಿಸಿದ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕ್ಲಬ್ ಮತ್ತು ಇತರ ಅಕ್ಕಪಕ್ಕದ ಶೋರೂಂಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    Live Tv
    [brid partner=56869869 player=32851 video=960834 autoplay=true]

  • ವಾಶ್ ರೂಂನಲ್ಲಿ ಬ್ರಿಟನ್ ಮಹಿಳೆಗೆ ಕಿರುಕುಳ – ಕಾಮುಕ ಅರೆಸ್ಟ್

    ವಾಶ್ ರೂಂನಲ್ಲಿ ಬ್ರಿಟನ್ ಮಹಿಳೆಗೆ ಕಿರುಕುಳ – ಕಾಮುಕ ಅರೆಸ್ಟ್

    ಮುಂಬೈ: ವಾಶ್ ರೂನಲ್ಲಿ 44 ವರ್ಷದ ಬ್ರಿಟನ್ ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮುಂಬೈ ಉಪನಗರ ಬಾಂದ್ರಾದಲ್ಲಿನ ಕ್ಲಬ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಮಂಗಳವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬ್ರಿಟನ್ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ತನ್ನ ಪತಿ ಮತ್ತು ಸ್ನೇಹಿತರೊಂದಿಗೆ ಕ್ಲಬ್‍ಗೆ ತೆರಳಿದ್ದ ವೇಳೆ ಕಾಮುಕ ವಿಕೃತ ಮೆರೆದಿದ್ದಾನೆ. ಇದನ್ನೂ ಓದಿ: ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

    police (1)

    ಮಹಿಳೆ ವಾಶ್ ರೂಂಗೆ ತೆರಳಿದ್ದಾಗ 35 ವರ್ಷದ ಆರೋಪಿ ಆಕೆಗೆ ಕಿರುಕುಳ ನೀಡಿದ್ದಾನೆ. ನಂತರ ಮಹಿಳೆ ತನ್ನ ಟೇಬಲ್‍ಗೆ ಹಿಂತಿರುಗಿ ಘಟನೆಯನ್ನು ತನ್ನ ಪತಿ ಮತ್ತು ಸ್ನೇಹಿತರಿಗೆ ವಿವರಿಸಿದ್ದಾರೆ. ನಂತರ ಅವರು ಓಡಿ ಹೋಗಿ ಆರೋಪಿಯನ್ನು ಹಿಡಿದಿದ್ದಾರೆ. ನಂತರ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ವಿದೇಶಾಂಗ ಸಚಿವನ ವಿವಾದಿತ ಹೇಳಿಕೆ – ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ

    ಆರೋಪಿಯನ್ನು ಘನಶ್ಯಾಮ್ ಲಾಲ್‍ಚಂದ್ ಯಾದವ್ ಎಂದು ಗುರುತಿಸಲಾಗಿದ್ದು, ಈತ ಎಂಬಿಎ ಪದವೀಧರರಾಗಿದ್ದು, ಉನ್ನತ ಕೆಲಸದಲ್ಲಿದ್ದಾನೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಮಹಿಳೆಯ ನಮ್ರತೆಯನ್ನು ಮೀರಿಸುವುದು), 354ಎ(ಲೈಂಗಿಕ ಕಿರುಕುಳ) ಮತ್ತು 509 ಹೀಗೆ ಹಲವಾರು ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕ್ಲಬ್‍ನಲ್ಲಿ ಬಾಲಿವುಡ್ ಗಾಯಕ ಹನಿ ಸಿಂಗ್ ಮೇಲೆ ಹಲ್ಲೆಗೆ ಯತ್ನ

    ಕ್ಲಬ್‍ನಲ್ಲಿ ಬಾಲಿವುಡ್ ಗಾಯಕ ಹನಿ ಸಿಂಗ್ ಮೇಲೆ ಹಲ್ಲೆಗೆ ಯತ್ನ

    ಗರದ ಕ್ಲಬ್‍ವೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಹಿರ್ದೇಶ್ ಸಿಂಗ್ ನನ್ನ ಜೊತೆ ಅಮಾನುಷವಾಗಿ ವರ್ತಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಿವುಡ್ ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ದೂರು ದಾಖಲಿಸಿದ್ದಾರೆ.

    ಮಾರ್ಚ್ 27 ರಂದು ದಕ್ಷಿಣ ದೆಹಲಿಯ ಹೌಜ್ ಖಾಸ್ ಪ್ರದೇಶದ ಕ್ಲಬ್‍ವೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಬಾಲಿವುಡ್ ಗಾಯಕ ಹಿರ್ದೇಶ್ ಸಿಂಗ್, ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡರು ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

    ಅಂದು ರಾತ್ರಿ ಹೊಸ ದೆಹಲಿಯ ಸೌತ್ ಎಕ್ಸ್-11 ನಲ್ಲಿರುವ ಕ್ಲಬ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದಾಗ ಏಕಾಏಕಿ ಐದರಿಂದ ಆರು ಮಂದಿ ಅಪರಿಚಿತರು ಬಲವಂತವಾಗಿ ವೇದಿಕೆ ಮೇಲೆ ಬಂದು ಅಸಭ್ಯವಾಗಿ ವರ್ತಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು ಎಂದು ಹನಿ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಕೆಲ ವ್ಯಕ್ತಿಗಳು ಬಿಯರ್ ಬಾಟಲಿಗಳನ್ನು ಹಿಡಿದುಕೊಂಡು ಕಲಾವಿದರನ್ನು ವೇದಿಕೆಯಿಂದ ತಳ್ಳಿದ್ದಾರೆ. ಅವರಲ್ಲಿ ಒಬ್ಬರು ನನ್ನ ಕೈ ಹಿಡಿದು ವೇದಿಕೆಯ ಮುಂಭಾಗಕ್ಕೆ ಎಳೆದು ತರಲು ಮುಂದಾದರು ಎಂದು ಆರೋಪಿಸಿದ್ದಾರೆ.

    ಈ ವೇಳೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹನಿ ಸಿಂಗ್ ದೂರಿದ್ದಾರೆ. ಗಾಯಕನಿಂದ ದೂರನ್ನು ಸ್ವೀಕರಿಸಿದ ನಂತರ ವಿವಿಧ ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈಗಾಗಲೇ ಕ್ಲಬ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಐವರು ಆರೋಪಿಗಳನ್ನು ಗುರುತಿಸಲಾಗಿದೆ. ಇನ್ನಷ್ಟು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • 144 ವರ್ಷ ಹಳೆಯ ಕ್ಲಬ್ ಸುಟ್ಟು ಭಸ್ಮ

    144 ವರ್ಷ ಹಳೆಯ ಕ್ಲಬ್ ಸುಟ್ಟು ಭಸ್ಮ

    ಹೈದರಾಬಾದ್: 1878 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಅತ್ಯಂತ ಹಳೆಯ ಕ್ಲಬ್‍ಗಳಲ್ಲಿ ಒಂದಾದ ತೆಲಂಗಾಣದ ಸಿಕಂದರಾಬಾದ್ ಕ್ಲಬ್‍ನಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 144 ವರ್ಷಗಳಷ್ಟು ಹಳೆಯದಾದ ಕಟ್ಟಡ ಸುಟ್ಟು ಭಸ್ಮವಾಗಿದೆ.

    ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಶನಿವಾರ ಕ್ಲಬ್ ಮುಚ್ಚಲಾಗಿತ್ತು. ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಅವಘಡ ಸಂಭವಿಸಿರಬಹುದು. ಬೆಳಗ್ಗೆ 3 ಗಂಟೆ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾವು ತಕ್ಷಣವೇ 10 ಅಗ್ನಿಶಾಮಕ ವಾಹನಗಳೊಂದಿಗೆ ನಾವು ಕಟ್ಟಡಕ್ಕೆ ಧಾವಿಸಿದ್ದೇವೆ. ಬೆಂಕಿಯನ್ನು ಹತೋಟಿಗೆ ತರಲು ಸುಮಾರು ಮೂರ್ನಾಲ್ಕು ಗಂಟೆ ಬೇಕಾಯಿತು. ಇಡೀ ಕ್ಲಬ್ ಬೂದಿಯಾಯಿತು ಎಂದು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:  ವಾರಪೂರ್ತಿ ಜನಜಾತ್ರೆ, ವಾರಾಂತ್ಯದಲ್ಲಿ ಕರ್ಫ್ಯೂ – ಆತಂಕದಲ್ಲಿ ಕಾಫಿನಾಡು ಜನತೆ

    ಗ್ಯಾಸ್ ಸಿಲಿಂಡರ್‍ಗಳು ಸ್ಫೋಟಗೊಂಡಿವೆ. 1878 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಕ್ಲಬ್ ಭಾರತದ ಅತ್ಯಂತ ಹಳೆಯ ಕ್ಲಬ್‍ಗಳಲ್ಲಿ ಒಂದಾಗಿದೆ ಎಂದು ಪ್ರಸಿದ್ಧ ಪರಂಪರೆ ಸಂರಕ್ಷಣಾವಾದಿ ಅನುರಾಧಾ ರೆಡ್ಡಿ ಮತ್ತು ಸಿಕಂದರಾಬಾದ್ ಕ್ಲಬ್‍ನ ಸದಸ್ಯೆ ಹೇಳಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ

  • 9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    ಲಂಡನ್: ಬ್ರಿಟಿಷ್ ವ್ಯಕ್ತಿಯೋರ್ವ 9 ಗಂಟೆಯಲ್ಲಿ 51 ಪಬ್ ಸುತ್ತಾಡುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಹೌದು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನವೆಲ್ಲ ಪ್ರಯತ್ನಿಸಿದರೂ 7-8 ಪಬ್‍ಗಳಿಗೆ ಹೋಗಿ ಬರಬಹುದು. ಆದರೆ ಕೇಂಬ್ರಿಡ್ಜ್ ಶೈರ್‍ನ ಸೇಂಟ್ ನಿಯೋಟ್ಸ್‌ನ ಮ್ಯಾಟಿ ಎಲ್ಲಿಸ್, 8 ಗಂಟೆ, 52 ನಿಮಿಷ ಮತ್ತು 37 ಸೆಕೆಂಡುಗಳಲ್ಲಿ ಒಟ್ಟು 51 ಪಬ್‍ಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆಯಲು ಪ್ರತಿ ಪಬ್‍ನಲ್ಲಿಯೂ ಕನಿಷ್ಠ 125 ಮಿಲಿ ಕುಡಿದಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಕಿತ್ತಳೆ ರಸ ಮತ್ತು ಡಯಟ್ ಕೋಕ್ ಅನ್ನು ಅವರ ಆರೋಗ್ಯಕ್ಕೆ ಉತ್ತಮ ಎಂದು ನಾಲ್ಕು ಪಿಂಟ್ ಬಿಯರ್ ಜೊತೆಗೆ ಸೇವಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

     

    View this post on Instagram

     

    A post shared by Matt Ellis (@smilinggrape)

    ಈ ಕುರಿತಂತೆ ಮಾತನಾಡಿದ ಅವರು, ನನ್ನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಾಗಿ ಕುಡಿಯುವುಲ್ಲ. ಬಹುಶಃ ಹಲವು ವರ್ಷಗಳ ಹಿಂದೆ ನಾನು ಆಲ್ಕೋಹಾಲ್ ಯುಕ್ತಪಾನೀಯಗಳನ್ನು ಸೇವಿಸುತ್ತಿದ್ದೆ. ಆದರೆ ಈಗ ಅಲ್ಲ “ಎಂದು ಹೇಳಿದ್ದಾರೆ. ಅಲ್ಲದೇ 24 ಗಂಟೆಯೊಳಗೆ ಅತೀ ಹೆಚ್ಚು ಪಬ್ ಮತ್ತು ನೈಟ್ ಕ್ಲಬ್‍ಗಳಿಗೆ ಭೇಟಿ ನೀಡಲು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

  • ದೆಹಲಿ ಸರ್ಕಾರದಿಂದ ಹೊಸ ಅಬಕಾರಿ ನೀತಿ – ಬೆಳಗಿನ ಜಾವ 3ರವರೆಗೆ ಬಾರ್ ಓಪನ್

    ದೆಹಲಿ ಸರ್ಕಾರದಿಂದ ಹೊಸ ಅಬಕಾರಿ ನೀತಿ – ಬೆಳಗಿನ ಜಾವ 3ರವರೆಗೆ ಬಾರ್ ಓಪನ್

    ನವದೆಹಲಿ: ನಗರದಲ್ಲಿ ಆದಾಯ ಹೆಚ್ಚಿಸಲು ಹಾಗೂ ಮದ್ಯ ಮಾಫಿಯಾವನ್ನು ತಡೆಗಟ್ಟುವ ಉದ್ದೇಶದಿಂದಾಗಿ ದೆಹಲಿ ಸರ್ಕಾರ 2021-20221ರ ಹೊಸ ಅಬಕಾರಿ ನೀತಿಯನ್ನು ಪ್ರಕಟಿಸಿದೆ.

    ರಾಷ್ಟ್ರ ರಾಜಧಾನಿಯಲ್ಲಿ ಮದ್ಯದಂಗಡಿ ಪರವಾನಗಿ ಪಡೆದ ಪರವಾನಗಿದಾರರು ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್, ಬಾರ್‌ಗಳಲ್ಲಿ ಬೆಳಗಿನ ಜಾವ 3ಗಂಟೆವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.

    ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ)ಪರವಾನಗಿಗಳಿಗೆ ಟೆಂಡರ್ ನೀಡಿದೆ. ಜೊತೆಗೆ ಮದ್ಯವನ್ನು ಡೋರ್ ಡೆಲಿವರಿ ಕೂಡ ಒದಗಿಸಲಾಗುತ್ತಿದ್ದು, ಈ ಕುರಿತ ಮಾಹಿತಿ ವೆಬ್‍ಸೈಟ್‍ಗಳಲ್ಲಿ ಸಿಗಲಿದೆ.

    ಅಬಕಾರಿಯ ಈ ಹೊಸ ನೀತಿಯನ್ನು ಜನರಿಗಾಗಿ ಜಾರಿಗೊಳಿಸಲಾಗಿದ್ದು, ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ಯಾವುದೇ ಮಾರುಕಟ್ಟೆ, ಮಾಲ್, ಕಮರ್ಷಿಯಲ್ ರೋಡ್ ಮತ್ತು ಏರಿಯಾ, ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಇನ್ನಿತರ ರಸ್ತೆಗಳಲ್ಲಿ ತೆರೆಯಬಹುದಾಗಿದೆ. ಇದನ್ನೂ ಓದಿ: ಐಸಿಯುನಲ್ಲಿ ಐಸ್‍ಕ್ರೀಂ ತಿಂದ ಮಹಿಳೆ ಸಾವು

  • ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಸಿಡ್ನಿ: ಭಾರತದ ತಂಡದ ಮಾಜಿ ಅಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಸ್ಟ್ರೇಲಿಯಾದ ಕ್ರಿಕೆಟ್ ಕ್ಲಬ್ ಪರ ಒಂದೇ ತಂಡದಲ್ಲಿ ಆಡುವ ಕುರಿತು ವರದಿಯಾಗಿದೆ.

    ಸ್ಟಾರ್ ಕ್ರಿಕೆಟರ್‍ ಗಳಾಗಿ ಮಿಂಚಿರುವ ಈ ಮೂರು ಆಟಗಾರರಲ್ಲಿ ಯುವರಾಜ್ ಸಿಂಗ್ ಮತ್ತು ಎಬಿಡಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ್ದಾರೆ. ಗೇಲ್ ಮಾತ್ರ ಸದ್ಯ ವೆಸ್ಟ್ ಇಂಡೀಸ್ ತಂಡದ ಪರ ಆಡುತ್ತಿದ್ದಾರೆ. ಇದೀಗ ಈ ಮೂರು ಆಟಗಾರರು ಕೂಡ ಆಸ್ಟ್ರೇಲಿಯಾದ ಮೆಲ್ಬರ್ನ್‍ನ ಕ್ರಿಕೆಟ್ ಕ್ಲಬ್ ಪರ ಜೊತೆಯಾಗಿ ಆಡುವ ಸಾಧ್ಯತೆಗಳಿವೆ ಎಂದು ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಮಿಲನ್ ಪುಲ್ಲನಾಯೆಗಮ್ ಹೇಳಿಕೆ ನೀಡಿದ್ದಾರೆ. ದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಸನತ್ ಜಯಸೂರ್ಯ ಕ್ಲಬ್ ತಂಡದಲ್ಲಿ ಕಾರ್ಯನಿರ್ವಹಿಸುವುದು ಈಗಾಗಲೇ ಖಚಿತವಾಗಿದ್ದು, ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ಉಪುಲ್ ತರಂಗಾ ಸೇರಿದಂತೆ ನಾವು ಇತರ ಕೆಲವು ಪ್ರಮುಖ ಆಟಗಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕ್ಲಬ್ ಪರ ಆಡಲು ಕೆಲ ಆಟಗಾರರನ್ನು ಕರೆತರಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಪುಲ್ಲೆನಾಯಗಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಈಗಾಗಲೇ ಶ್ರೀಲಂಕಾದ ದಿಲ್ಶನ್ ಮತ್ತು ತರಂಗಾ ಅವರನ್ನು ಕ್ಲಬ್ ಪರ ಆಡಲು ಸಂಪರ್ಕಿಸಿದೆ. ಮುಂದಿನ ಬೇಸಿಗೆಯಲ್ಲಿ ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಕ್ಲಬ್ ತಂಡ ರೂಪುಗೊಳ್ಳಲಿದೆ. ಜಯಸೂರ್ಯ ಈ ಕ್ಲಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಬ್ರಿಯಾನ್ ಲಾರಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ.

  • ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಶೀಘ್ರದಲ್ಲಿ ಬಾರ್, ಕ್ಲಬ್, ಪಬ್ ಓಪನ್ ಸಾಧ್ಯತೆ: ಎಚ್.ನಾಗೇಶ್

    ಬೆಂಗಳೂರು: ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಾತನಾಡಿದ ಎಚ್.ನಾಗೇಶ್, ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸಿಎಂ ಜೊತೆಗೆ ನಾನು ಚರ್ಚೆ ನಡೆಸುವೆ. ಬಾರ್ ಮತ್ತು ಪಬ್ ಕಾರ್ಮಿಕರಿಗೆ ತೊಂದರೆಯಾಗಿದೆ. ಕ್ಲಬ್‍ಗಳಲ್ಲಿ ಸ್ಪೋರ್ಟ್ಸ್ ಚಟುವಟಿಕೆಯನ್ನು ಇಂದಿನಿಂದ ಆರಂಭವಾಗಿದೆ. ಅಲ್ಲಿ ಪಾರ್ಸಲ್‍ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

    ಅಬಕಾರಿ ಇಲಾಖೆಗೆ ಲಾಕ್‍ಡೌನ್‍ನಿಂದ 3,000 ಕೋಟಿ ನಷ್ಟವಾಗಿತ್ತು. ಈಗ ಅದು 2,000 ಕೋಟಿಗೆ ಬಂದು ನಿಂತಿದೆ. ಮುಂದಿನ 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಾರ್, ಕ್ಲಬ್ ಓಪನ್ ಆದರೆ ವ್ಯಾಪಾರ ಆಗಬಹುದು. ಆಗ ಲಾಕ್‍ಡೌನ್‍ನಲ್ಲಿ ಉಂಟಾದ ನಷ್ಟವನ್ನು ಭರಿಸಬಹುದು. ಹೀಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೇವೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

    ಮನೆ ಮನೆಗೆ ಮಧ್ಯ ಸರಬರಾಜು ವಿಚಾರವಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಅನಿಸಿಕೆ, ಅಭಿಪ್ರಾಯ ಪಡೆದು ಮುಂದಿನ ಕ್ರಮದ ಚಿಂತನೆ ಮಾಡುತ್ತೀವೆ ಎಂದರು.

    ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವವವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು