Tag: ಕ್ರೇನ್

  • ಚಲಿಸುತ್ತಿದ್ದ ಆಡಿ ಕಾರ್ ಮೇಲೆ ಬಿದ್ದ ಕ್ರೇನ್- ಚಾಲಕನಿಗೇನಾಯ್ತು ಅಂತ ನೋಡಿದ್ರೆ ಅಚ್ಚರಿ ಪಡ್ತೀರ

    ಚಲಿಸುತ್ತಿದ್ದ ಆಡಿ ಕಾರ್ ಮೇಲೆ ಬಿದ್ದ ಕ್ರೇನ್- ಚಾಲಕನಿಗೇನಾಯ್ತು ಅಂತ ನೋಡಿದ್ರೆ ಅಚ್ಚರಿ ಪಡ್ತೀರ

    ಬೀಜಿಂಗ್: ಸಾವಿನ ಕದ ತಟ್ಟಿ ವಾಪಸ್ ಬಂದ ಅನ್ನೋ ಮಾತಿಗೆ ಈ ಘಟನೆ ಸೂಕ್ತ ಉದಾಹರಣೆ ಎನ್ನಬಹುದು. ಚೀನಾದಲ್ಲಿ ವ್ಯಕ್ತಿಯೊಬ್ಬರು ಭಾರೀ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ ಮೇಲೆ ಕ್ರೇನ್ ಬಿದ್ದರೂ ಸಾವಿನ ದವಡೆಯಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ.

    ಇಲ್ಲಿನ ಝೂಝೈ ಪ್ರಾಂತ್ಯದಲ್ಲಿ ಮಂಗಳವಾರದಂದು 29 ವರ್ಷದ ವ್ಯಕ್ತಿಯೊಬ್ಬರು ಆಡಿ ಕಾರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಕಟ್ಟಡ ನಿರ್ಮಾಣದ ಕ್ರೇನ್ ಕಾರಿನ ಮೇಲೆ ಬಿದ್ದು ಅಪ್ಪಚ್ಚಿಯಾಗಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ಎಲ್ಲಾ ದೃಶ್ಯ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಗಳನ್ನ ನೋಡಿದ್ರೆ ಕಾರ್ ಚಾಲಕನಿಗೆ ಏನಾಗಿರಬಹುದು ಎಂದು ಊಹಿಸಿಕೊಂಡು ಎದೆ ಜಲ್ಲೆನಿಸುತ್ತದೆ.

    ಆದ್ರೆ ಎಲ್ಲೇ ಇದ್ದಿದ್ದು ಟ್ವಿಸ್ಟ್. ಅಪ್ಪಚ್ಚಿಯಾಗಿದ್ದ ಕಾರಿನಿಂದ ಚಾಲಕ ಜೀವಂತವಾಗಿ ಮೇಲೆದ್ದು ಬಂದಿದ್ದಾರೆ. ಕಾರಿನ ಛಾವಣಿಯಿಂದ ಅವರು ಮೇಲೆದ್ದು ಬಂದಿದ್ದು, ಸ್ಥಳದಲ್ಲಿದ್ದವರನ್ನು ಆಶ್ಚರ್ಯಗೊಳಿಸಿದ್ದಾರೆ.

    ಆದ್ರೂ ಚಾಲಕನ ಪಾದಕ್ಕೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಕ್ರೇನ್ ರಸ್ತೆ ಮೇಲೆ ಬೀಳಲು ಕಾರಣವೇನೆಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.

    https://www.youtube.com/watch?time_continue=19&v=R8eZBb1r-i4

     

  • ವಿಡಿಯೋ: ದ್ವಿಚಕ್ರ ವಾಹನದಿಂದ ಸ್ಲಿಪ್ ಆಗಿ ಕೆಳಗೆ ಬಿದ್ದ ಮಹಿಳೆ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವು

    ವಿಡಿಯೋ: ದ್ವಿಚಕ್ರ ವಾಹನದಿಂದ ಸ್ಲಿಪ್ ಆಗಿ ಕೆಳಗೆ ಬಿದ್ದ ಮಹಿಳೆ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವು

    ಮುಂಬೈ: 34 ವರ್ಷದ ಮಹಿಳೆಯೊಬ್ಬರ ಮೇಲೆ ಕ್ರೇನ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನ ಖಾರ್‍ಗರ್‍ನ ಉತ್ಸವ್ ಚೌಕ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಮೈ ಜುಮ್ಮೆನಿಸುವಂತಿದೆ.

    ಶನಿವಾರ ರಾತ್ರಿ 8 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಮಹಿಳೆಯನ್ನು ಸುಜಾತಾ ಪುರಿ ರಂದು ಗುರುತಿಸಲಾಗಿದೆ. ಇವರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುವ ವೇಳೆ ಈ ಘಟನೆ ನಡೆದಿದೆ.

    ಉತ್ಸವ್ ಚೌಕ್ ಬಳಿ ಸ್ಪೀಡ್ ಬ್ರೇಕರ್ ದಾಟಿದ ನಂತರ ಸ್ಕಿಡ್ ಆಗಿ ದ್ವಿಚಕ್ರ ವಾಹನದಿಂದ ಕೆಳಗಿ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕ್ರೇನ್ ಸುಜಾತಾ ಅವರ ತಲೆಯೇ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಕ್ರೇನ್ ಚಾಲಕ ವಾಹನ ನಿಲ್ಲಿಸಿ ಮಹಿಳೆಗೆ ಏನಾಯಿತು ಎಂದು ನೋಡದೇ ಹೋಗಿದ್ದಾನೆ. ಈ ಎಲ್ಲಾ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಕ್ರೇನ್ ಚಾಲಕನನ್ನು ಬಂಧಿಸಲಾಗಿದೆ. ಮಹಿಳೆ ಸ್ಕಿಡ್ ಆಗಲು ಕಾರಣವಾದ ರಸ್ತೆಯ ಪರಿಸ್ಥಿತಿ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ರಾಜೇಂದ್ರ ಮಾನೆ ಹೇಳಿದ್ದಾರೆ.