Tag: ಕ್ರೇನ್

  • ಕ್ರೇನ್‍ನಲ್ಲಿ ಚಾರ್ಮಾಡಿ ಘಾಟ್‍ಗೆ ಜೋತು ಬಿದ್ದು ದಾಖಲೆ ಪತ್ರಗಳನ್ನು ತಂದ ಆರೀಫ್

    ಕ್ರೇನ್‍ನಲ್ಲಿ ಚಾರ್ಮಾಡಿ ಘಾಟ್‍ಗೆ ಜೋತು ಬಿದ್ದು ದಾಖಲೆ ಪತ್ರಗಳನ್ನು ತಂದ ಆರೀಫ್

    – ಯುವಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್‍ನಲ್ಲಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಮುಖ ದಾಖಲೆ ಪತ್ರಗಳು ಹಾರಿ ಹೋಗಿದ್ದು, ಇವುಗಳನ್ನು ಸ್ಥಳೀಯ ಸ್ನೇಕ್ ಆರೀಫ್ ಎಂಬವರು ಮಾಲೀಕರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ಅಮೂಲ್ಯ ದಾಖಲೆಗಳು ಹಾರಿ ಹೋಗಿದ್ದವು.

    ಆ ದಾಖಲೆಗಳು ತುಂಬಾ ಮುಖ್ಯವಾಗಿರೋದು ಎಂದು ಕಾರಿನಲ್ಲಿದ್ದವರು ಗೋಗರೆದಾಗ ಚಾರ್ಮಾಡಿಯ ಆಪತ್ಫಾಂದವ ಎಂದೇ ಕರೆಸಿಕೊಳ್ಳುವ ಸ್ಥಳೀಯ ಸ್ನೇಕ್ ಆರೀಫ್, ಜೀವದ ಹಂಗು ತೊರೆದು ಕ್ರೇನ್ ಮೂಲಕ ನೇತಾಡಿಕೊಂಡು ಚಾರ್ಮಾಡಿಯ ಘಾಟಿಯ ಪ್ರಪಾತಕ್ಕೆ ಇಳಿದಿದ್ದಾರೆ. ಅಲ್ಲದೆ ಅಲ್ಲಿದ್ದ ದಾಖಲೆ ಪತ್ರಗಳನ್ನ ತಂದು ಕಾರಿನಲ್ಲಿದ್ದ ವ್ಯಕ್ತಿಗೆ ಹಿಂದಿರುಗಿಸಿ ಸಾಹಸ ಮೆರೆದಿದ್ದಾರೆ.

    ಆರೀಫ್ ಅವರ ಸಾಹಸಿ ಪ್ರವೃತ್ತಿಗೆ ಕಾರಿನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ದಾಖಲೆಗಳನ್ನ ಹುಡುಕಲು ಸ್ನೇಕ್ ಆರೀಫ್ ತೆಗೆದುಕೊಂಡ ರಿಸ್ಕ್ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಇಂತಹ ರಿಸ್ಕ್ ಬೇಕಿತ್ತಾ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಆರೀಫ್ ಜೀವಕ್ಕೆ ಹೆಚ್ಚು-ಕಮ್ಮಿಯಾಗಿದ್ರೆ ಜವಾಬ್ದಾರಿ ಯಾರು ಎಂಬ ಪರವಿರೋಧದ ಮಾತುಗಳು ಕೇಳಿ ಬಂದಿವೆ.

    ಆದರೆ ಕಾರಿನಿಂದ ಬಿದ್ದವರು ಯಾರೋ, ಡಾಕ್ಯುಮೆಂಟ್ ಕಳೆದು ಹೋಗಿದ್ದು ಯಾರದ್ದೋ. ಆದ್ರೆ ಅಪಘಾತವಾಗಿ ಎಲ್ಲರೂ ಗಾಬರಿಯಾಗಿದ್ದಾಗ ಅಮೂಲ್ಯವಾದ ದಾಖಲೆಗಳನ್ನ ಹುಡುಕೋದು ಚಾರ್ಮಾಡಿಯಂತಹ ಪ್ರಪಾತದ ಜಾಗದಲ್ಲಿ ಕಷ್ಟಸಾಧ್ಯವಲ್ಲ. ಕಷ್ಟವೇ ಸರಿ. ಆದರೆ ಜೀವದ ಹಂಗು ತೊರೆದು ದಾಖಲೆ ತಂದು ಕೊಟ್ಟ ಸ್ನೇಕ್ ಆರೀಫ್ ಸಾಹಸಕ್ಕೆ ಮೆಚ್ಚಲೇಬೇಕು.

  • ನೋಡ ನೋಡುತ್ತಿದ್ದಂತೆ ಕುಸಿದ ಬೃಹತ್ ಕ್ರೇನ್ – 11 ಮಂದಿ ದುರ್ಮರಣ

    ನೋಡ ನೋಡುತ್ತಿದ್ದಂತೆ ಕುಸಿದ ಬೃಹತ್ ಕ್ರೇನ್ – 11 ಮಂದಿ ದುರ್ಮರಣ

    ಹೈದರಾಬಾದ್: ಏಕಾಏಕಿ ಕ್ರೇನ್ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ ಇಂದು ಈ ದುರಂತ ಸಂಭವಿಸಿದೆ. ಭಾರೀ ಗ್ರಾತದ ಕ್ರೇನ್ ಕುಸಿದು ಬಿದ್ದು 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರತಿದಿನದಂತೆ ಇಂದು ಕೂಡ ಶಿಪ್ ಯಾರ್ಡ್‌ನಲ್ಲಿ ಲೋಡ್ ಮತ್ತು ಅನ್ ಲೋಡ್ ಕಾರ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕ್ರೇನ್ ಕುಸಿದು ಬಿದ್ದಿದೆ. ಹಳದಿ ಬಣ್ಣದ ಕ್ರೇನ್ ಕುಸಿದು ಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಮೃತರನ್ನು ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಶಿಪ್‍ ಯಾರ್ಡ್ ನೌಕರರು ಮತ್ತು ಉಳಿದವರು ಗುತ್ತಿಗೆ ಸಿಬ್ಬಂದಿ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಮತ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ಕ್ರೇನ್ ಕೆಳಗೆ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯ ಮಾಡುತ್ತಿದ್ದಾರೆ.

    ಕ್ರೇನ್ ದುರಂತದ ಬಗ್ಗೆ ತಿಳಿದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಮುಖ್ಯಸ್ಥರಿಗೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

  • ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು

    ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು

    – ಭಯಾನಕ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ವೇಗವಾಗಿ ಬಂದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಆಟೋ, ಓಮಿನಿ ಹಾಗೂ ಕಾರಿಗೆ ಡಿಕ್ಕಿಯಾಗಿ ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ.

    ಮುನಿಯಪ್ಪ ಸಾವನ್ನಪ್ಪಿದ್ದ ವ್ಯಕ್ತಿ. ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಭಯಾನಕ ಅಪಘಾತದ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬ್ರೇಕ್ ಫೇಲ್  ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್ ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮಿನಿ, ಕಾರಿಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಭಾರೀ ವೇಗವಾಗಿದ್ದರಿಂದ ಮುಂದಿನ ಅಡ್ಡ ರಸ್ತೆಯಲ್ಲಿ ಬರುತ್ತಿದ್ದ ಆಟೋಗೂ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎಲ್ಲ ಮೂರೂ ವಾಹನಗಳು ನಜ್ಜುಗುಜ್ಜಾಗಿವೆ.

    ಆಟೋ ಮತ್ತು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

    ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

    ಶಿವಮೊಗ್ಗ: ವಿಶೇಷ ಯಂತ್ರಗಳನ್ನು ಬಳಸಿ ಮರಗಳನ್ನು ಒಂದೆಡೆಯಿಂದ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನು ನೋಡಿರುತ್ತೀರ. ಆದರೆ ಕ್ರೇನ್, ಜೆಸಿಬಿ ಮೂಲಕ ಕೂಡ ಮರಗಳನ್ನು ಸ್ಥಳಾಂತರ ಮಾಡಬಹುದು ಎಂದು ಶಿವಮೊಗ್ಗದ ಕೃಷಿ ವಿವಿ ತೋರಿಸಿಕೊಟ್ಟಿದೆ.

    ಹೌದು ಜಿಲ್ಲೆಯ ಸಾಗರ ತಾಲೂಕು ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿರುವ ಕೃಷಿ ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಇದೇ ಮಾದರಿಯಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ವಿದೇಶಗಳಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಮರಗಳ ಮಾರಣ ಹೋಮ ಮಾಡದೇ, ದೊಡ್ಡ ದೊಡ್ಡ ಮರಗಳನ್ನೇ ವಿಶೇಷ ಯಂತ್ರಗಳನ್ನು ಬಳಸಿ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನ ಆಗಾಗ ವಿಡಿಯೋಗಳಲ್ಲಿ ನೋಡಿದ್ದೀವಿ. ಇದಕ್ಕಾಗಿಯೇ ವಿಶೇಷ ಯಂತ್ರಗಳನ್ನು ಅಲ್ಲಿ ಅಲ್ಲಿ ಬಳಸಲಾಗುತ್ತದೆ. ಆದರೆ ಮಲೆನಾಡಿನಲ್ಲಿ ಅಂತಹ ಯಂತ್ರಗಳು ಇಲ್ಲದೆಯೂ, ಮರಗಳನ್ನು ಶಿಫ್ಟ್ ಮಾಡಬಹುದು ಎಂದು ತೋರಿಸಿಕೊಡಲಾಗಿದೆ.

    ಅರಣ್ಯ ಇಲಾಖೆ ಅನುಮತಿ ಪಡೆದು ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಇದಕ್ಕೆ ವಿಶೇಷ ಯಂತ್ರವೇನು ಬಳಸಲಾಗಿಲ್ಲ. ಬದಲಾಗಿ ಕ್ರೇನ್ ಮತ್ತು ಜೆಸಿಬಿ ಮೂಲಕ ಇದ್ದ ಮರಗಳನ್ನ ಹಾಗೆಯೇ ಕಿತ್ತು ಬೇರೆಡೆಗೆ ನೆಡಲಾಗಿದೆ.

    ಕೃಷಿ ವಿವಿಗಾಗಿ ಜಾಗದ ಅವಶ್ಯಕತೆ ಈ ಬೀಟೆ ಮರಗಳನ್ನು ಕಟಾವು ಮಾಡಲೇ ಬೇಕಿತ್ತು. ಸುಮಾರು 50 ಮರಗಳ ಕಟಾವು ಮಾಡಬೇಕಾಗಿತ್ತು. ಇವೆಲ್ಲವೂ ಇದೀಗ ಕಟಾವಿನ ಬದಲಾಗಿ ಪರಿಸರ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬೆರೆಡೆಗೆ ಮರಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಈ ಮೂಲಕ ಶಿವಮೊಗ್ಗ ಕೃಷಿ ವಿವಿ ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ಉರುಳಿಸುವ ಬದಲಾಗಿ ಅವುಗಳನ್ನು ಉಳಿಸಿ ಬದಲಾವಣೆ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

  • ಅರ್ಧ ಗಂಟೆಯಲ್ಲಿ ಬೆಂಕಿಯಿಂದ 14 ಜನರ ಪ್ರಾಣ ಉಳಿಸಿದ ಯುವಕ – ವಿಡಿಯೋ ವೈರಲ್

    ಅರ್ಧ ಗಂಟೆಯಲ್ಲಿ ಬೆಂಕಿಯಿಂದ 14 ಜನರ ಪ್ರಾಣ ಉಳಿಸಿದ ಯುವಕ – ವಿಡಿಯೋ ವೈರಲ್

    ಬೀಜಿಂಗ್: 19 ವರ್ಷದ ಯುವಕನೊಬ್ಬ ಕ್ರೇನ್ ಸಹಾಯದಿಂದ ಅರ್ಧ ಗಂಟೆಯಲ್ಲಿ 14 ಮಂದಿ ಜನರ ಪ್ರಾಣವನ್ನು ಕಾಪಾಡಿರುವ ಘಟನೆ ಚೀನಾದ ಫೂಶುನ್ ನಗರದಲ್ಲಿ ನಡೆದಿದೆ.

    ಯುವಕ ಲ್ಯಾನ್ ಜುನ್ಸ್ ಜನರನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಚೀನಾದ ಲಿಯಾನಿಂಗ್ ಪ್ರದೇಶದ ಫುಶನ್ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

    ಲ್ಯಾನ್ ಲಿಯಾನಿಂಗ್‍ನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೆಲಸ ಮಾಡುತ್ತಿದ್ದ ಸಮೀಪದ ಪ್ರದೇಶದಲ್ಲಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಲ್ಯಾನ್ ತಕ್ಷಣವೇ ಕ್ರೇನ್ ಅನ್ನು ಕಟ್ಟಡದ ಬಳಿ ತೆಗೆದುಕೊಂಡು ಹೋಗಿದ್ದಾನೆ. ನಂತರ ಕ್ರೇನ್‍ನ ಬಾಸ್ಕೆಟ್‍ನಲ್ಲಿ ಜನರನ್ನು ಕೂರಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಿಂದ ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾನೆ.

    ಲ್ಯಾನ್ ಸುಮಾರು ಅರ್ಧ ಗಂಟೆಯಲ್ಲಿ 14 ಜನರ ಪ್ರಾಣವನ್ನು ಉಳಿಸಿದ್ದಾನೆ. ಇತ್ತ ಲ್ಯಾನ್ ಸಹಾಯ ಮಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

    ಅಷ್ಟೇ ಅಲ್ಲದೇ ಜನರು ಯುವಕನ ಧೈರ್ಯವನ್ನು ಮೆಚ್ಚಿ ಭೇಷ್ ಎನ್ನತ್ತಿದ್ದಾರೆ. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಲ್ಯಾನ್ “ಬೆಂಕಿ ಕಾಣಿಸಿಕೊಂಡ ತಕ್ಷಣ ನಾನು ಕಟ್ಟಡದ ಬಳಿ ಹೋದೆ. ಆ ಸಂದರ್ಭದಲ್ಲಿ ಕಟ್ಟಡದ ಒಳಗೆ ಸಿಲುಕಿಕೊಂಡವರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಮಾತ್ರ ಯೋಚಿಸುತ್ತಿದ್ದೆ. ತಕ್ಷಣ ಈ ಐಡಿಯಾ ಬಂದಿತ್ತು. ಹೀಗಾಗಿ ಕ್ರೇನ್ ಮೂಲಕ ಅವರನ್ನು ಬಚಾವ್ ಮಾಡಿದೆ” ಎಂದು ಹೇಳಿದ್ದಾನೆ.

  • ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ- ಹೈವೇಯಲ್ಲೇ ಜೋತು ಬಿದ್ದ ವಿದ್ಯುತ್ ತಂತಿ

    ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ- ಹೈವೇಯಲ್ಲೇ ಜೋತು ಬಿದ್ದ ವಿದ್ಯುತ್ ತಂತಿ

    ಬೆಂಗಳೂರು: ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಗೆ ಕಂಬ ಮುರಿದು ಬಿದ್ದಿರುವ ಘಟನೆ ರಾಜಧಾನಿಯ ನೆಲಮಂಗಲ ಸಮೀಪದ ಜಾಸ್ ಟೋಲ್ ಬಳಿ ನಡೆದಿದೆ.

    ಹೆದ್ದಾರಿಯಲ್ಲಿ ಸಾಗುತ್ತಿದ್ದ ಕ್ರೇನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ವಿದ್ಯುತ್ ಕಂಬ ಮುರಿದು ರಸ್ತೆ ಮೇಲೆ ಬಿದ್ದಿದೆ. ಈ ಅಪಘಾತವಾದ ಕಾರಣ ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ಎರಡು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೆ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಬಾರದ ಕಾರಣಕ್ಕೆ ವಿದ್ಯುತ್ ಕಂಬ ರಸ್ತೆಯ ಮೇಲೆ ಇದ್ದು ವಿದ್ಯುತ್ ತಂತಿಗಳು ಹೆದ್ದಾರಿಯಲ್ಲೇ ಕೈಗೆಟಕುವ ರೀತಿ ಜೋತುಬಿದ್ದಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

    ಹೆದ್ದಾರಿಯ ಎರಡೂ ಭಾಗದಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸದ್ಯ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಬೆಸ್ಕಾಂ ಸಿಬ್ಬಂದಿ ಬಾರದ ಕಾರಣ ವಾಹನ ಸವಾರರೇ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ. ಆದ್ರೆ ಸ್ಥಳಕ್ಕೆ ಬಾರದ ಬೆಸ್ಕಾಂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಟಕ್ಕೆ ನುಗ್ಗಿದ ಕಾರನ್ನು ಕ್ರೇನ್‍ನಲ್ಲಿ ತರುತ್ತಿದ್ದಾಗ ಬಸ್ ಡಿಕ್ಕಿ

    ತೋಟಕ್ಕೆ ನುಗ್ಗಿದ ಕಾರನ್ನು ಕ್ರೇನ್‍ನಲ್ಲಿ ತರುತ್ತಿದ್ದಾಗ ಬಸ್ ಡಿಕ್ಕಿ

    ಮಡಿಕೇರಿ: ಚಾಲಕನ ನಿಯಂತ್ರಣ ಕಳೆದುಕೊಂಡು ತೋಟದ ಒಳಗೆ ನುಗ್ಗಿದ್ದ ಕಾರನ್ನು ಕ್ರೇನ್ ಮೂಲಕ ತರುತ್ತಿದ್ದಾಗ ಕೆಎಸ್‍ಆರ್ ಟಿಸಿ ಬಸ್‍ಗೆ ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಗೇರಿ ಸಮೀಪದ ಕೂರ್ಗಳ್ಳಿ ತೋಟದಲ್ಲಿ ನಡೆದಿದೆ.

    ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎ.47 ಎಂ. 6446 ಕಾರ್ ಕಳೆದ ರಾತ್ರಿ 11.30ರ ಸುಮಾರಿಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿರುವ ಶಾಂತಗೇರಿ ಸಮೀಪದ ಕೂರ್ಗಳ್ಳಿ ತೋಟದೊಳಗೆ ನುಗ್ಗಿದೆ. ಪರಿಣಾಮ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

    ಕಾರಿನಲ್ಲಿದ್ದ ಇನ್ನುಳಿದವರು ತರುಚಿದ ಗಾಯಕ್ಕೊಳಗಾಗಿದ್ದಾರೆ. ಬಸ್ ಗೆ ಡಿಕ್ಕಿ ಹೊಡೆದು ತೋಟದೊಳಗೆ ನುಗ್ಗಿದ್ದ ಈ ಕಾರನ್ನು ಇಂದು ಬೆಳಗ್ಗೆ ಕ್ರೇನ್ ಸಹಾಯದಿಂದ ಹೊರಕ್ಕೆ ತಂದು ಹೆದ್ದಾರಿ ಮೂಲಕ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ತರಲಾಗುತ್ತಿತ್ತು. ಆದರೆ ತೋಟದ ಒಳಗೆ ಬಿದ್ದ ಸ್ಥಳದಿಂದ ಅನತಿ ದೂರದಲ್ಲಿ ಕೊಂಡೊಯ್ಯುತ್ತಿದ್ದಾಗ ನೇತಾಡುತ್ತಿದ್ದ ಕಾರಿನ ಮುಂಭಾಗದಲ್ಲಿ ಕಟ್ಟಿದ್ದ ಕ್ರೇನ್ ನ ಹಗ್ಗ ಕಳಚಿಕೊಂಡಿದೆ.

    ಇದರಿಂದ ಕ್ರೇನ್ ನ ಮುಂಭಾಗದಲ್ಲಿದ್ದ ಕಾರು ರಸ್ತೆಯ ಬಲ ಭಾಗಕ್ಕೆ ತಿರುಗಿತ್ತಲ್ಲದೇ ಸುಂಟಿಕೊಪ್ಪದಿಂದ ಮಲ್ಲಪುರಂಗೆ ತೆರಳುತ್ತಿದ್ದ ಕೆಎಸ್‍ಆರ್ ಟಿಸಿ ಬಸ್ (ಕೆ.ಎ. 19ಎಫ್ 3315)ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿದ್ದ 15 ಮಂದಿ ಪ್ರಯಾಣಿಕರು ಯಾವುದೇ ಗಾಯಕ್ಕೊಳಗಾಗದೇ ಸಂಭವಿಸಬಹುದಾಗಿದ್ದ ಅನಾಹುತದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಕ್ರೇನ್- ಕಾಲು ಸಂಪೂರ್ಣ ನಜ್ಜುಗುಜ್ಜು

    ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಕ್ರೇನ್- ಕಾಲು ಸಂಪೂರ್ಣ ನಜ್ಜುಗುಜ್ಜು

    ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಕ್ರೇನ್ ವಾಹನ ಹರಿದ ಪರಿಣಾಮ ಕಾಲು ಸಂಪೂರ್ಣ ನಜ್ಜುಗುಜ್ಜಾದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಬಿಬಿ ರಸ್ತೆಯ ಬಾಲಾಜಿ ಚಿತ್ರಮಂದಿರದ ಬಳಿ ಘಟನೆ ನಡೆದಿದ್ದು, ಹೊನ್ನಗಿರಿಯಪ್ಪನಹಳ್ಳಿಯ 60 ವರ್ಷದ ವೃದ್ಧ ಕಾಲು ಕಳೆದುಕೊಳ್ಳುವಂತಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವೃದ್ಧನನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಅಪಘಾತ ನಂತರ ಕ್ರೇನ್ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಗಿದ್ದು, ರೊಚ್ಚಿಗೆದ್ದ ಜನ ಕ್ರೇನ್ ವಾಹನದ ಗಾಜು ಪುಡಿ ಮಾಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ಕಲಬುರಗಿ: ವೆಲ್ಡಿಂಗ್ ಕೆಲಸದ ವೇಳೆ ಏಕಾಏಕಿ ಬೀಸಿದ ಬಿರುಗಾಳಿಗೆ ಕ್ರೇನ್ ಕುಸಿದು ಬಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಈ ಘಟನೆ ನಡೆದಿದೆ.

    ಬಿಹಾರ್ ಮೂಲದ ತಬಾರಕ್ ಅಲಿ(25) ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಐವರು ಯುವಕರನ್ನು ಬಿಪಿನ್, ಅಜಯ್, ಜುಬೇರ್, ಸುಧಾಕರ್ ಮತ್ತು ಕೋಕಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಓರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಮೃತ ಕಾರ್ಮಿಕರು ಬೃಹತ್ ಕ್ರೇನ್ ಮೇಲೆ ಹತ್ತಿ ವೆಲ್ಡಿಂಗ್ ಮಾಡುತ್ತಿದ್ದು, ಬಿರುಗಾಳಿ ಹಾಗೂ ಮಳೆಗೆ ಏಕಾಏಕಿ ಕ್ರೆನ್ ಕುಸಿದುಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

  • ವಿಡಿಯೋ: ಕಾರ್ ಡಿಕ್ಕಿಯಾಗಿ ನದಿಗೆ ಬಿದ್ದ ಬಸ್- ಹೀರೋ ಥರ ಬಂದು ಪ್ರಯಾಣಿಕರನ್ನ ಪಾರು ಮಾಡಿದ ಕ್ರೇನ್ ಚಾಲಕ

    ವಿಡಿಯೋ: ಕಾರ್ ಡಿಕ್ಕಿಯಾಗಿ ನದಿಗೆ ಬಿದ್ದ ಬಸ್- ಹೀರೋ ಥರ ಬಂದು ಪ್ರಯಾಣಿಕರನ್ನ ಪಾರು ಮಾಡಿದ ಕ್ರೇನ್ ಚಾಲಕ

    ಬೀಜಿಂಗ್: ಅಪಘಾತವಾಗಿ ಬಸ್ಸೊಂದು ನದಿಗೆ ಬಿದ್ದ ನಂತರ ಅದೇ ರಸ್ತೆಯಲ್ಲಿದ್ದ ಕ್ರೇನ್ ಚಾಲಕ ಪ್ರಯಾಣಿಕರನ್ನ ಪಾರು ಮಾಡಿರೋ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಜನವರಿ 3ರಂದು ಜಿಯಾಂಗ್ಸು ಪ್ರಾಂತ್ಯದ ಚಾಂಗ್‍ಝೌನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಾಧ್ಯಮವೊಂದು ಘಟನೆಯ ವಿಡಿಯೋವನ್ನ ಪೋಸ್ಟ್ ಮಾಡಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಹಾನಿಯಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹೋಗಿದೆ. ಅತ್ತ ಬಸ್ ಕಾರ್ ಡಿಕ್ಕಿಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ನದಿಯ ಕಡೆ ಚಲಿಸಿದ್ದು, ನೀರಿನೊಳಗೆ ಬಿದ್ದಿದೆ.

    ಅದೇ ರಸ್ತೆಯ ಮತ್ತೊಂದು ಬದಿಯಲ್ಲಿ ತನ್ನ ಕ್ರೇನ್ ನಿಲ್ಲಿಸಿಕೊಂಡಿದ್ದ ಚಾಲಕ ಇದನ್ನ ಗಮನಿಸಿದ್ದಾರೆ. ಥಟ್ಟಂತ ಕ್ರೇನ್‍ನಿಂದ ಇಳಿದು ಬಸ್ ಬಿದ್ದ ನದಿಯತ್ತ ಓಡಿದ್ದಾರೆ.

    ನಂತರ ವಾಪಸ್ ಬಂದು ಕ್ರೇನ್ ತೆಗೆದುಕೊಂಡು ಹೋಗಿ ಪ್ರಯಾಣಿಕರನ್ನ ಬಸ್‍ನಿಂದ ಮೇಲೆತ್ತಿ ಕಾಪಾಡಿದ್ದಾರೆ.

    ಇಲ್ಲಿನ ಮಾಧ್ಯಮವೊಂದರ ವರದಿಯ ಪ್ರಕಾರ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವ ಹೊತ್ತಿಗೆ ಎಲ್ಲಾ ಪ್ರಯಾಣಿಕರು ಹಾಗೂ ಬಸ್ ಚಾಲಕನನ್ನು ಕ್ರೇನ್ ಚಾಲಕ ಅಪಾಯದಿಂದ ಪಾರು ಮಾಡಿದ್ದರು.

    ಬಸ್‍ಗೆ ಡಿಕ್ಕಿ ಹೊಡೆದ ಕಾರ್ ಕೂಡ ತಲೆಕೆಳಗಾಗಿ ಬಿದ್ದಿದ್ದು, ಕಾರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.