ಬೆಂಗಳೂರು: ರಿಪೇರಿ ಮಾಡುತ್ತಿದ್ದ ವೇಳೆ ಕ್ರೇನ್ (Crane) ತುಂಡಾಗಿ ಬಿದ್ದ ಪರಿಣಾಮ ಐವರು ಗಾಯಗೊಂಡಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಮೇಡಹಳ್ಳಿ (Medahalli ) ಬಳಿ ನಡೆದಿದೆ.

ಎಎಸ್ ಕ್ರೇನ್ ಸರ್ವೀಸ್ ವತಿಯಿಂದ ಅವಘಡ ಉಂಟಾಗಿದೆ. ಖಾಸಗಿ, ಜನ ವಸತಿ ಪ್ರದೇಶದಲ್ಲಿ ಕ್ರೇನ್ ರಿಪೇರಿ ಜಾಗವಿದ್ದು, ಕ್ರೇನ್ ರಿಪೇರಿ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೂಲೂ (30), ಕರ್ಬನ್ (19), ಇಲ್ಲಾಜ್ (38), ಸಮೀರ್ (28), ಶಾಮದೇವ್ (52) ಗಾಯಾಳುಗಳು. ಇದನ್ನೂ ಓದಿ: ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ
ಜನವಸತಿ ಪ್ರದೇಶದಲ್ಲಿ ಕ್ರೇನ್ ಸರ್ವಿಸ್ ಕಾರ್ಯ ಆರಂಭಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಬಾರಿ ಪೊಲೀಸ್ ಠಾಣೆಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಈ ಪ್ರತಾಪ್ ಸಿಂಹ ಯಾರ್ರೀ, ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಯತೀಂದ್ರ ಸಿದ್ದರಾಮಯ್ಯ

















ಸದ್ಯ ಈ ಅವಘಡ ಕುರಿತಂತೆ ಬಿಎಂಆರ್‌ಸಿಎಲ್, ಘಟನೆ ಮೆಕ್ಯಾನಿಕಲ್ ಫೇಲ್ಯೂರ್‌ನಿಂದ ಸಂಭವಿಸಿದ್ದು ಮತ್ತು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇದೀಗ ಲಾಂಚಿಂಗ್ ಗರ್ಡರ್ ಅನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
