Tag: ಕ್ರೇಜಿಸ್ಟಾರ್ ರವಿಚಂದ್ರನ್

  • ಹುಟ್ಟು ಹಬ್ಬಕ್ಕೆ ಮುಧೋಳ್ ಚಿತ್ರದ ಅಪ್ಡೇಟ್‌ ಕೊಟ್ಟ ವಿಕ್ರಂ ರವಿಚಂದ್ರನ್

    ಹುಟ್ಟು ಹಬ್ಬಕ್ಕೆ ಮುಧೋಳ್ ಚಿತ್ರದ ಅಪ್ಡೇಟ್‌ ಕೊಟ್ಟ ವಿಕ್ರಂ ರವಿಚಂದ್ರನ್

    ಸ್ಯಾಂಡಲ್ ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಸುಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ತಮ್ಮ ಹುಟ್ಟು ಹಬ್ಬದಂದು ವಿಶೇಷವಾದ ಮಾಹಿತಿಯನ್ನ ನೀಡಲು ಮುಂದಾಗಿದ್ರು, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟದ ಸಂಚಲನ ಮಾಡಲು ಚಿತ್ರ ನಿರ್ಮಾಣದ ಜೊತೆಗೆ ಚಿತ್ರ ನಿರ್ಮಾಪಕರಿಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ಬಂದಿರುವಂತಹ ಖ್ಯಾತ ಉದ್ಯಮಿ ವಿಜಯ್ ಟಾಟಾ ತಮ್ಮ ಅಮೃತ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.

    ಚಿತ್ರ ನಿರ್ಮಿಸುವುದರ ಜೊತೆಗೆ ವಿತರಣೆ, ಮಾರ್ಕೆಟಿಂಗ್, ಸೇರಿದಂತೆ ಬೇರೆ ಚಿತ್ರಗಳ ಜೊತೆ ಕೊಲಾಬ್ರೇಷನ್‌ಗೂ ಮುಂದಾಗಿರುವುದು ಮತ್ತೊಂದು ಸಂತೋಷದ ಸಂಗತಿ. ಇನ್ನು ವಿಶೇಷವಾಗಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಯುವ ನಟ ವಿಕ್ರಂ ರವಿಚಂದ್ರನ್, ಮುಧೋಳ್ ಚಿತ್ರದ (Mudhol Movie) ನಿರ್ಮಾಪಕಿ ರಕ್ಷಾ ಹಾಗೂ ಖ್ಯಾತ ಉದ್ಯಮಿ ನಿರ್ಮಾಪಕ ವಿಜಯ್ ಟಾಟಾ ಹಾಜರಿದ್ದರು. ಇದನ್ನೂ ಓದಿ: ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

    ಇನ್ನು ಪ್ರಮುಖವಾಗಿ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್ ಮಾತನಾಡುತ್ತಾ, ಮೊದಲಿಗೆ ನೀವೆಲ್ಲರೂ ಇಲ್ಲಿವರೆಗೂ ಬಂದಿರುವುದಕ್ಕೆ ಧನ್ಯವಾದಗಳು, ಮೊದಲಿಗೆ ವಿಶೇಷವಾಗಿ ವಿಜಯ ಸರ್ ಗೆ ಥ್ಯಾಂಕ್ಸ್ ತಿಳಿಸುತ್ತೇನೆ. ಯಾಕೆಂದರೆ ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬವನ್ನು ನಾನು ಆಚರಿಸಿಕೊಳ್ಳುವುದಿಲ್ಲ. ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಇವತ್ತು ನನ್ನ ಬರ್ತ್‌ಡೇ ದಿನವೇ ಒಂದೆರಡು ದೊಡ್ಡ ಅನೌನ್ಸ್ಮೆಂಟ್ ಮಾಡಬೇಕು ಎಂದು ನಮ್ಮ ವಿಜಯ್ ಸರ್ ಹೇಳಿದ್ರಿಂದ ನಿಮ್ಮ ಮುಂದೆ ಹೇಳಬೇಕೆಂದು ನಿರ್ಧರಿಸಿದ್ದೇವೆ. ನಾನು ಏನೇ ಹೇಳಿದರೂ ರವಿಚಂದ್ರನ್ ಸರ್ ಮಗ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ನಾನು ಎರಡನೇ ಸಿನಿಮಾ ಮಾಡ್ದಾಗ, ನಮ್ಮ ಅಣ್ಣ ಅಭಿನಯದ ಮುಗಿಲು ಪೇಟೆ ನಿರ್ಮಾಣಕ್ಕೆ ಸಾಥ್ ಕೊಟ್ಟಂತ ನಿರ್ಮಾಪಕಿ ರಕ್ಷಾ ಮೇಡಮ್ಮ ನನಗೂ ಬೆಂಬಲವಾಗಿ ನಿಂತರು ಎಂದರು ವಿಕ್ರಮ್. ಇದನ್ನೂ ಓದಿ: `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    ಮುಂದುವರೆದು ಮಾತನಾಡಿ, ನನ್ನ ಡ್ರೀಮ್ ಪ್ರಾಜೆಕ್ಟ್ ಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನನ್ನ ಹೊಸ ಪ್ರಾಜೆಕ್ಟ್‌ಗೆ ಟೀಮ್ ಹುಡುಕುತ್ತಿದ್ದಾಗ ಒಬ್ಬ ಟ್ಯಾಲೆಂಟೆಡ್ ವ್ಯಕ್ತಿ ಸಿಕ್ಕಿದ್ರು ಅವರೇ ನಿರ್ದೇಶಕ ಕಾರ್ತಿಕ್ ರಾಜು, ನಂತರ ನಾನು, ಡೈರೆಕ್ಟರ್, ಪ್ರೊಡ್ಯೂಸರ್ ಕೂತು ಡಿಸ್ಕಶನ್ ಮಾಡಿದಾಗ ಹುಟ್ಟಿಕೊಂಡಂತ ಚಿತ್ರವೇ ʻಮುಧೋಳʼ. ಎಲ್ಲಾ ಅಂದುಕೊಂಡಂತೆ ಚೆನ್ನಾಗಿ ನಡೆದಿತ್ತು, ನಮ್ಮ ಅನಲೈಸ್ ಪ್ರಕಾರ ನಮ್ಮ ನಿರ್ಮಾಪಕಿ ಮೇಡಂ ಅಂದ್ರೆ ನನ್ನ ಸಿಸ್ಟರ್ ನೀವು ಮಾಡಿ ನಾನು ಬ್ಯಾಕಪ್ ಇರ್ತೀನಿ ಅಂದರು. ಇದನ್ನೂ ಓದಿ: ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ಈ ಚಿತ್ರ ತುಂಬಾ ಜನರಿಗೆ ಲೈಫ್ ಆಗಬೇಕು, ನನ್ನು ಸೇರಿದಂತೆ ಚಿತ್ರದ ಡೈರೆಕ್ಟರ್, ಮ್ಯೂಸಿಕ್, ಎಡಿಟರ್, ಬಹಳಷ್ಟು ಜನ ಹೊಸಬರು ಇದ್ದೇವೆ. ಈ ಚಿತ್ರ ರೈಟ್ ಟೈಮ್, ಪ್ಲೇಸ್ ನಲ್ಲಿ ದೊಡ್ಡ ಕೊಲಾಬ್ರೇಶನ್ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಅನ್ನೋ ಹುಡುಕಾಟದಲ್ಲಿದ್ದಾಗ, ನನ್ನ ಬೆಸ್ಟ್ ಫ್ರೆಂಡ್ ದಿಲ್‌ ಸೆ ದಿಲೀಪ್ ಬಂದು ಒಂದು ಕಥೆ ಇದೆ ಕೇಳಿ ಡೈರೆಕ್ಟರ್ ಋಷಿ ಎನ್ನುವವರು ಮಾಡಿದ್ದಾರೆ, ನಿರ್ಮಾಪಕರು ಸ್ಟ್ರಾಂಗ್ ಇದ್ದಾರೆ ಎಂದರು. ಕಥೆ ಕೇಳಿದೆ ಇಷ್ಟ ಆಯಿತು, ಹಾಗೆ ನಿರ್ಮಾಪಕರು ಯಾರು ಅಂದಾಗ ಗೊತ್ತಾಗಿದೆ ವಿಜಯ್ ಟಾಟಾ ಸರ್. ಓಕೆ ಸಿನಿಮಾ ಮಾಡೋಣ ಎಂದು ನಿರ್ಧಾರ ಮಾಡಿ, ಅದೇ ರೀತಿ ಅಮೃತ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ಕೂಡ ಅನೌನ್ಸ್ ಆಯಿತು. ಆಮೇಲೆ ಒಮ್ಮೆ ಭೇಟಿ ಮಾಡಿದೆ. ನಂತರ ಮುಧೋಳ್ ಬಗ್ಗೆ ಕೂಡ ವಿಜಯ ಸರ್ ಕೇಳಿದರು. ಅಲ್ಲಿವರೆಗೂ ಮುಧೋಳ್ ಬಗೆ ಯಾವುದೇ ಮಾತುಕತೆ ಆಗಿರಲಿಲ್ಲ, ಆ ಚಿತ್ರದ ಕಂಟೆಂಟ್ ಕೂಡ ತೋರಿಸಿದೆ ಅವರಿಗೆ ಬಹಳ ಇಷ್ಟವಾಯಿತು, ಅಲ್ಲಿಂದ ಸ್ವಲ್ಪ ಚೇಂಜ್ ಆಯ್ತು , ನಮ್ಮ ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಸರ್ ಇಬ್ಬರು ಡಿಸ್ಕಶನ್ ಮಾಡಿದ ನಂತರ ಇಲ್ಲಿಂದ ನನ್ನ ಹಾಗೂ ನಮ್ಮ ತಂಡದ ಜೊತೆ ಅಮೃತ ಸಿನಿ ಕ್ರಾಫ್ಟ್ ವಿಜಯ್ ಸರ್ ಸಾಥ್ ನೀಡಿದ್ದು, ನಮ್ಮ ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರ ತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದೇವೆ. ಈಗೊಂದು ಸ್ಟ್ರಾಂಗ್ ಟೀಮ್ ಸೇರಿಕೊಂಡು ಮುಂದೆ ಬರುತ್ತಿದ್ದೇವೆ ಎಂದಿದ್ದಾರೆ.

  • ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಕ್ರೇಜಿಸ್ಟಾರ್ ರವಿಚಂದ್ರನ್ ಕಲಾವಿದನಾಗಿ ಸಾಕಷ್ಟು ವರ್ಷಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಹಲವಾರು ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟ ರವಿಚಂದ್ರನ್ ಅವರ ಸಾಧನೆಯನ್ನು ಗುರುತಿಸಿ ಇಂದು ಬೆಂಗಳೂರು ವಿಶ್ವವಿದ್ಯಾನಿಲಯದ ಚೊಚ್ಚಲ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

    ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಟ ರವಿಚಂದ್ರನ್ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಇನ್ನು 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟ ರವಿಚಂದ್ರನ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಇದನ್ನು ಓದಿ:ಕೆಜಿಎಫ್-2 ರಿಲೀಸ್ ಫಿವರ್: ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ ಯಶ್ ಮಹಿಳಾ ಫ್ಯಾನ್ಸ್

    ಇನ್ನು ಕಾರ್ಯಕ್ರಮದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿ. ರವಿಚಂದ್ರನ್, ಸಮಾಜ ಸೇವೆಗಾಗಿ ಎಂ. ಆರ್ ಜೈ ಶಂಕರ್, ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಇನ್ನು ಈ ವೇಳೆ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಪತ್ನಿ ಸುಮತಿ, ಮಕ್ಕಳಾದ ವಿಕ್ರಮ್, ಮನೋರಂಜನ್, ಗೀತಾಂಜಲಿ, ಅಳಿಯ ಅಜಯ್ ಭಾಗಿಯಾಗಿದ್ದರು. ಈ ಸುದ್ದಿ ಕೇಳಿ ಕ್ರೇಜಿಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

    ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೆಲ್ಲ ಕುರುಕ್ಷೇತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗಾಗಿ ಬಹು ದಿನಗಳಿಂದ ಕಾದು ಕೂತಿದ್ದರು. ಈ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋದಾಗೆಲ್ಲ ಆವರಿಸಿಕೊಳ್ಳುತ್ತಿದ್ದ ನಿರಾಸೆಯೂ, ದಿನ ಕಳೆಯುತ್ತಲೇ ನಿರೀಕ್ಷೆಯಾಗಿ ಪುಟಿದೇಳುತ್ತಿದ್ದದ್ದು ಕುರುಕ್ಷೇತ್ರದತ್ತ ಎಂಥಾ ಕ್ರೇಜ್ ಇದೆ ಎಂಬುದರ ಸ್ಪಷ್ಟ ಸೂಚನೆ ಎಂದರೂ ತಪ್ಪೇನಿಲ್ಲ. ಆದರೀಗ ಅಂಥಾ ನಿರೀಕ್ಷೆಗಳೆಲ್ಲ ತಣಿದಿವೆ. ಆಡಿಯೋ ಜೊತೆಗೆ ಕುರುಕ್ಷೇತ್ರದ ಕನ್ನಡಿಯಂತಿರೋ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ.

    ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದಿರೋ ಮಹತ್ವಾಕಾಂಕ್ಷೆಯ ಚಿತ್ರ ಮುನಿರತ್ನ ಕುರುಕ್ಷೇತ್ರ. ಇದೀಗ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದ ಮೂಲಕ ಪ್ರೇಕ್ಷಕರಿಗೆ ಬೋನಸ್ ಎಂಬಂತೆ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ. ಕುರುಕ್ಷೇತ್ರದ ಬಗ್ಗೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಎಂಬುದಕ್ಕೆ ಈ ಟ್ರೈಲರ್ ಬಿಡುಗಡೆಯಾಗಿ ಕ್ಷಣಾರ್ಧದಲ್ಲಿಯೇ ಯೂಟ್ಯೂಬ್‍ನಲ್ಲಿ ಸಿಕ್ಕ ವೀಕ್ಷಣೆಯೇ ಸಾಕ್ಷಿ. 24 ಗಂಟೆ ಕಳೆಯುವ ಮುನ್ನವೇ ಈ ಟ್ರೈಲರ್ ವೀಕ್ಷಣೆ 10 ಲಕ್ಷದ ಗಡಿಯತ್ತ ದಾಪುಗಾಲಿಟ್ಟಿದ್ದು, ಆ ಸಂಖ್ಯೆ ವೇಗವಾಗಿ ಏರಿಕೊಳ್ಳುತ್ತಲೇ ಇದೆ.

    ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿಯೂ ತಯಾರಾಗಿರೋ ಕುರುಕ್ಷೇತ್ರದ ಬಿಡುಗಡೆಗೀಗ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಟ್ರೈಲರ್ ದರ್ಶನ್ ದುಯೋರ್ಧನನಾಗಿ ಗದೆ ಹಿಡಿದು ಅಬ್ಬರಿಸೋದೂ ಸೇರಿದಂತೆ ಒಂದಷ್ಟು ಪಾತ್ರಗಳ ಖದರಿನ ಝಲಕ್‍ಗಳನ್ನು ಅನಾವರಣಗೊಳಿಸಿದೆ. ಇದನ್ನು ಕಂಡು ಪ್ರೇಕ್ಷಕರೂ ಕೂಡಾ ಖುಷಿಗೊಂಡಿದ್ದಾರೆ. ಈ ಮೂಲಕ ಆಡಿಯೋ ಬಿಡುಗಡೆಯ ಘಳಿಗೆಯಲ್ಲಿಯೇ ಟ್ರೈಲರ್ ಮೂಲಕವೂ ಕುರುಕ್ಷೇತ್ರ ಭಾರೀ ಸದ್ದು ಶುರುವಿಟ್ಟಿದೆ.

    ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳೂ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಗಮನವನ್ನೂ ತನ್ನತ್ತ ಸೆಳೆದುಕೊಂಡಿರೋ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ತೆಗೆದುಕೊಂಡಿರೋ ದೊಡ್ಡ ಮಟ್ಟದ ಚಾಲೆಂಜ್. ಅದನ್ನವರು ಅಷ್ಟೇ ಶ್ರದ್ಧೆಯಿಂದಲೂ ರೂಪಿಸಿದ್ದಾರೆ. ಅಷ್ಟೇ ದೊಡ್ಡ ತಾರಾಗಣವನ್ನೂ ಕುರುಕ್ಷೇತ್ರ ಹೊಂದಿದೆ. ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿ ಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್, ಭಾರತಿ ವಿಷ್ಣುವರ್ಧನ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್, ನಿಖಿಲ್ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

    https://youtu.be/i1F0OpKaXOg