Tag: ಕ್ರೇಜಿಸ್ಟಾರ್

  • ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ಜಿ9  ಕಮ್ಯೂನಿಕೇಷನ್ ಮೀಡಿಯ ಅಂಡ್  ಎಂಟರ್ ಟೈನ್ಮೆಂಟ್  ಮುಂದಿನ ಚಿತ್ರದ ಕುರಿತು ಮಾಹಿತಿ ನೀಡಿದ್ದು, ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ (Crazystar) ರವಿಚಂದ್ರನ್ (Ravichandran) ಅವರು ನಾಯಕರಾಗಿ ನಟಿಸುತ್ತಿದಾರೆ. ಈಗಾಗಲೇ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ್ ಅಪಾರ್ಟ್ ಮೆಂಟ್ಸ್ ಅಂತಹ ಅಪಾರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿರುವ ಸಂಸ್ಥೆಯು ಲೀಗಲ್-ಥ್ರಿಲ್ಲರ್ ಶೈಲಿಯ ಗುರುರಾಜ ಕುಲಕರ್ಣಿ (Gururaj) (ನಾಡಗೌಡ) ಅವರ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಲು ಸಜ್ಜಾಗಿದೆ.

    ತಮ್ಮ ಚೊಚ್ಚಲ ನಿರ್ದೇಶನದ, ಕೌಟುಂಬಿಕ-ಥ್ರಿಲ್ಲರ್ ಶೈಲಿಯ ‘ಅಮೃತ್ ಅಪಾರ್ಟ್ ಮೆಂಟ್ಸ್’ ಚಿತ್ರಕ್ಕೆ ಸ್ವತಃ ತಾವೇ ಕಥೆ-ಚಿತ್ರಕಥೆಯನ್ನು ಬರೆದು ಪ್ರಶಂಸೆ ಗಳಿಸಿದ ಗುರುರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ. ಅವರು ನೀಡಿದ ಕಥಾಹಂದರವನ್ನು ರವಿಚಂದ್ರನ್ ಮೆಚ್ಚಿ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿಯೇ ಈ ಚಿತ್ರದ ತಯಾರಿಕೆ ನಡೆದಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ತಮಗಿರುವ ಕೌಟುಂಬಿಕ ಪ್ರೇಕ್ಷಕ ವರ್ಗದ ಜೊತೆಗೆ, ಜಾಗತಿಕ ಮಟ್ಟದಲ್ಲಿನ ಹಲವಾರು ಭಾಷೆಗಳ, ವಿವಿಧ ಬಗೆಯ ಕಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಇಂದಿನ ಯುವ ಪೀಳಿಗೆಯೊಂದಿಗೂ, ಈ ಚಿತ್ರದ ಮೂಲಕ ತಾವು ಹತ್ತಿರವಾಗುವ ಅವಕಾಶವಿದೆ ಎಂಬುದು ರವಿಚಂದ್ರನ್ ಅಭಿಪ್ರಾಯ. ರವಿಚಂದ್ರನ್ ಈ ಚಿತ್ರದ ಪ್ರಮುಖ ಪಾತ್ರವನ್ನು ವಿಶಿಷ್ಟವಾಗಿ, ಒಂದು ಹೊಸ ಆಯಾಮದಲ್ಲಿ ನಟಿಸುವ ಸದಾವಕಾಶವನ್ನು ತಾವು  ಗುರುತಿಸಿರುವುದಾಗಿ ಭರವಸೆ ನೀಡಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ಎಲ್ಲೆಡೆ ಬೇಡಿಕೆ ಹಾಗೂ ಆಸಕ್ತಿ ಇರುವ ಈ ಸಮಯದಲ್ಲಿ, ತಮ್ಮ ಈ ಹೊಸ ಚಿತ್ರವು ನಮ್ಮ ಚಿತ್ರರಂಗಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ ಎಂಬ ವಿಶ್ವಾಸವನ್ನು ಕನ್ನಡದ ಶೋ ಮ್ಯಾನ್ ಎಂದೇ ಖ್ಯಾತಿ ಪಡೆದ ಕ್ರೇಜಿ ಸ್ಟಾರ್ ವ್ಯಕ್ತಪಡಿಸಿದ್ದಾರೆ.

    ಸ್ವತಃ ಗುರುರಾಜ್ ಅವರದೇ ಕಥೆ ಈ ಚಿತ್ರಕ್ಕೂ ಇದ್ದು, ಚಿತ್ರದ ತಾರಾಗಣ ಹಾಗೂ ದೊಡ್ಡ ಕ್ಯಾನ್ವಾಸನ್ನು ನಿಭಾಯಿಸಲು ಒಗ್ಗೂಡಿಸಿದ ಸಶಕ್ತ ತಾಂತ್ರಿಕ ತಂಡದಲ್ಲಿ ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಛಾಯಾಗ್ರಾಹಕರಾಗಿ ಶಿವ ಬಿಕೆ ಕುಮಾರ್, ಸಂಕಲನಕಾರರಾಗಿ ಬಿ.ಎಸ್.ಕೆಂಪರಾಜು, ಭಾಷಣೆಕಾರರಾಗಿ ಎಂ.ಎಸ್.ರಮೇಶ್ ಸೇರ್ಪಡೆಗೊಂಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಶೀರ್ಷಿಕೆ  ಮತ್ತಿತರ ವಿವರಗಳು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರ ಸಂಸ್ಥೆಯು ತಿಳಿಸಿದೆ.

  • ಮಕ್ಕಳ ಜೊತೆ ಬ್ಯಾಡ್ ಬಾಯ್ಸ್ ಆಗ್ತಾರಂತೆ ಕ್ರೇಜಿಸ್ಟಾರ್ ರವಿಚಂದ್ರನ್

    ಮಕ್ಕಳ ಜೊತೆ ಬ್ಯಾಡ್ ಬಾಯ್ಸ್ ಆಗ್ತಾರಂತೆ ಕ್ರೇಜಿಸ್ಟಾರ್ ರವಿಚಂದ್ರನ್

    ನಿನ್ನೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸದೇ ಇದ್ದರೂ, ಹಲವು ಯೋಜನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ರವಿಚಂದ್ರನ್ ಅವರ ತಾಯಿಯು ಅಗಲಿದ್ದರಿಂದ, ಆ ನೋವಿನಲ್ಲೂ ಅಭಿಮಾನಿಗಳ ಜೊತೆ ಅವರು ಬೆರೆತಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈ ಹುಟ್ಟು ಹಬ್ಬಕ್ಕೆ ರವಿ ಬೋಪಣ್ಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದ ರವಿಚಂದ್ರನ್, ಈ ಸಿನಿಮಾ ನಂತರ ಮತ್ತೊಂದು ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಈ ಸಿನಿಮಾದ ವಿಶೇಷ ಅಂದರೆ, ಮಕ್ಕಳ ಜೊತೆಗೆ ರವಿಚಂದ್ರನ್ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ಅವರು ವಿಶೇಷ ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ರವಿಚಂದ್ರನ್ ಅವರ ಜೊತೆ ಮಕ್ಕಳು ಈಗಾಗಲೇ ಪುಟ್ಟ ಪುಟ್ಟ ಪಾತ್ರಗಳಲ್ಲಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮನುರಂಜನ್ ಮತ್ತು ವಿಕ್ರಮ್ ಜೊತೆ ರವಿಚಂದ್ರನ್ ತೆರೆ ಹಂಚಿಕೊಳ್ಳುತ್ತಿದ್ದು, ಈ ಸಿನಿಮಾಗೆ ‘ಬ್ಯಾಡ್ ಬಾಯ್ಸ್’ ಎಂದು ಹೆಸರಿಟ್ಟಿದ್ದಾರೆ. ಇಂಥದ್ದೊಂದು ಹೆಸರನ್ನು ಅವರು ಇಟ್ಟಿರುವುದಕ್ಕೂ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ಸಾಮಾನ್ಯವಾಗಿ ನನ್ನ ಸಿನಿಮಾಗಳ ಶೀರ್ಷಿಕೆಗಳು ಪಾಸಿಟಿವ್ ಆಗಿರುತ್ತವೆ. ಆದರೆ, ಈ ಸಿನಿಮಾ ಹಾಗಿಲ್ಲ. ಗುಡ್ ಬಾಯ್ಸ್ ಅಂತ  ಟೈಟಲ್ ಇಡಬಹುದಿತ್ತು. ಹಾಗೆ ಇಟ್ಟರೆ ಯಾರೂ ಸಿನಿಮಾ ನೋಡಲು ಬರುವುದಿಲ್ಲ.  ಬ್ಯಾಡ್ ಬಾಯ್ಸ್ ಎಂದು ಹೆಸರಿಟ್ಟರೆ ಏನಿರಬಹುದು ಎಂದು ಕುತೂಹಲಕ್ಕಾದರೂ ಥಿಯೇಟರ್ ಗೆ ಜನ ಬರುತ್ತಾರೆ ಎನ್ನುತ್ತಾರೆ ಕ್ರೇಜಿಸ್ಟಾರ್.

  • ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಸಿದ್ಧತೆ ನಡೆಸಿದ್ದು, ಈ ಕುರಿತ ಮಾಹಿತಿಯನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

    ‘ಆ ದೃಶ್ಯಂ’ ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರವಿಚಂದ್ರನ್ ಅವರು, ತಮ್ಮ 35 ವರ್ಷದ ಕನಸನ್ನು ಸಾಕಾರಗೊಳಿಸಲು ಸಜ್ಜಾಗಿದ್ದು, ಪ್ರೇಮಲೋಕ-2 ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ರಣಧೀರನಾಗಿ ಗ್ರ್ಯಾಂಡ್ ಕೊಡಲಿದ್ದಾರೆ ಎಂದರು.

    ವಿಶೇಷ ಎಂದರೆ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್‍ಗೂ ಒಂದು ಚಾನ್ಸ್ ಕೊಡುವ ನಿರ್ಧಾರವನ್ನು ಪ್ರಕಟಿಸಿದ ಅವರು, ಈ ಕುರಿತು ಸಿದ್ಧತೆಗಳು ಫೈನಲ್ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೂವರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಬಹುದು ಎಂದು ರವಿಚಂದ್ರನ್ ಹೇಳಿದರು.

    ‘ಆ ದೃಶ್ಯ’ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ನನ್ನನ್ನು ಪ್ರೇಕ್ಷಕರು ಹೀರೋ ಆಗಿಯೇ ನೋಡಲು ಬಯಸುತ್ತಾರೆ. ಅಂತಹವರಿಗೆ ಈ ಸಿನಿಮಾ ಇಷ್ಟವಾಗಿದ್ದು, ನಾನು ಹೀರೋ ಪಾತ್ರ ಹಾಗೂ ವಿಶೇಷ ಪಾತ್ರ ಎರಡರಲ್ಲೂ ಮಾಡಲು ಸಿದ್ಧನಿದ್ದೇನೆ. ಕಳೆದ ಹಲವು ವರ್ಷಗಳಿಂದ ಪ್ರೇಮಲೋಕ-2 ಸಿನಿಮಾ ಮಾಡುವ ತಯಾರಿ ನಡೆಯುತ್ತಿತ್ತು. ಆದರೆ ಇದುವರೆಗೂ ಆದು ಆಗಿರಲಿಲ್ಲ. ಆದರೆ ಮಗಳ ಹುಟ್ಟುಹಬ್ಬದ ಸಂಭ್ರಮ ವೇಳೆ ಕಥೆಗೆ ಸ್ಪಷ್ಟನೆ ಸಿಕ್ತು. ಶೀಘ್ರವೇ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡುತ್ತೇನೆ ಎಂದರು.

  • ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಲಾವಿದರ ದಂಡು

    ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಲಾವಿದರ ದಂಡು

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಬೆಂಗಳೂರಿನ ಶರ್ಟಾನ್ ಹೋಟೇಲ್ ನಲ್ಲಿ ನಡಿಯಿತು.

    ರವಿಚಂದ್ರನ್ ಅವರ ಕ್ರಿಯೇಟಿವ್ ಆಲೋಚನೆಗಳಿಗೆ ತಕ್ಕಂತೆ ಮಗಳ ನಿಶ್ಚಿತಾರ್ಥದ ವೇದಿಕೆ ನಿರ್ಮಿಸಲಾಗಿತ್ತು. ಏಳು ಬಿಳಿ ಅಶ್ವದ ಕಾಸ್ಸೆಫ್ಟ್ ನಲ್ಲಿ ವೇದಿಕೆಯನ್ನು ಅಲಂಕರಿಸಲಾಗಿತ್ತು. ತಿಳಿ ಹಸಿರು ಮಿಶ್ರಿತ ಬಣ್ಣದ ಸೀರೆಯಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ಮಿಂಚಿದ್ರೆ, ಕಡು ನೀಲಿ ಬಣ್ಣದ ಸೂಟ್ ನಲ್ಲಿ ರವಿ ಭಾವಿ ಅಳಿಯ, ಉದ್ಯಮಿ ಅಜಯ್ ಕಂಗೊಳಿಸುತ್ತಿದ್ದರು.

    ಖ್ಯಾತ ನಟನ ಮಗಳ ನಿಶ್ಚಿತಾರ್ಥಕ್ಕೆ ನಟಿ ಖುಷ್ಬು, ಹಂಸಲೇಖ, ಪುನೀತ್ ರಾಜ್‍ಕುಮಾರ್, ಜಗ್ಗೇಶ್, ದೊಡ್ಡಣ್ಣ , ಶ್ರೀಮುರುಳಿ, ಅಕುಲ್ ಬಾಲಾಜಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv