Tag: ಕ್ರೀಸ್ ಮೋರಿಸ್

  • ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಮೋರಿಸ್ ವಿದಾಯ

    ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಮೋರಿಸ್ ವಿದಾಯ

    ಜೋಹಾನ್ಸ್ ಬರ್ಗ್: ಆರ್​ಸಿಬಿ ತಂಡದ ಮಾಜಿ ಆಟಗಾರ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್‍ರೌಂಡರ್ ಕ್ರೀಸ್ ಮೋರಿಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    34 ವರ್ಷ ಪ್ರಾಯದ ಮೋರಿಸ್, 12 ವರ್ಷಗಳ ತಮ್ಮ ಕ್ರಿಕೆಟ್ ಕೆರಿಯರ್‌ಗೆ ಇಂದು ಗುಡ್‍ಬೈ ಹೇಳಿದ್ದಾರೆ. 2009ರ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸದ್ದು ಮಾಡಲು ಆರಂಭಿಸಿದ ಮೋರಿಸ್, 2012ರಲ್ಲಿ ರಾಷ್ಟ್ರೀಯ ತಂಡ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದು ಈವರೆಗೇ 4 ಟೆಸ್ಟ್, 42 ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳನ್ನಾಡಿರುವ ಮೋರಿಸ್ ಕ್ರಮವಾಗಿ 12, 48 ಮತ್ತು 34 ವಿಕೆಟ್ ಮತ್ತು 3 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್

    ಮೋರಿಸ್ ರಾಷ್ಟ್ರೀಯ ತಂಡಕ್ಕಿಂತಲು ಹೆಚ್ಚಾಗಿ ವಿಶ್ವದ ಹಲವು ಭಾಗಗಳಲ್ಲಿ ನಡೆಯುವ ಟಿ20 ಲೀಗ್‍ಗಳಲ್ಲಿ ಮಿಂಚುಹರಿಸಿ ಬೇಡಿಕೆಯ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಐಪಿಎಲ್‍ನಲ್ಲೂ ಕೂಡ ಸದ್ದು ಮಾಡಿದ್ದ ಮೋರಿಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅಲ್ಲದೆ 2021ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಬಿಡ್ ಆಗಿದ್ದರು. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀದಿಸಿತ್ತು. ಇದನ್ನೂ ಓದಿ: 16.25 ಕೋಟಿಗೆ ಸಿಕ್ತು ಫಲ – ಕೊನೆಯಲ್ಲಿ ಮೋರಿಸ್ ಸಿಕ್ಸರ್ ಆಟ, ರಾಜಸ್ಥಾನಕ್ಕೆ ಜಯ

     

    View this post on Instagram

     

    A post shared by Chris Morris (@tipo_morris)

    ಮೋರಿಸ್ ತಮ್ಮ ನಿವೃತ್ತಿ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಘೊಷಿಸಿದ್ದು, ನಾನು ಇಂದು ಎಲ್ಲಾ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಕ್ರಿಕೆಟ್ ಜರ್ನಿಯಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

  • 16.25 ಕೋಟಿಗೆ ಸಿಕ್ತು ಫಲ – ಕೊನೆಯಲ್ಲಿ ಮೋರಿಸ್ ಸಿಕ್ಸರ್ ಆಟ, ರಾಜಸ್ಥಾನಕ್ಕೆ ಜಯ

    16.25 ಕೋಟಿಗೆ ಸಿಕ್ತು ಫಲ – ಕೊನೆಯಲ್ಲಿ ಮೋರಿಸ್ ಸಿಕ್ಸರ್ ಆಟ, ರಾಜಸ್ಥಾನಕ್ಕೆ ಜಯ

    – ಒಂದು ಸಿಕ್ಸರ್ ಸಿಡಿಸದ ಡೆಲ್ಲಿ ಕ್ಯಾಪಿಟಲ್ಸ್
    – 4 ಸಿಕ್ಸರ್ ಸಿಡಿಸಿದ ಮೋರಿಸ್

    ಮುಂಬೈ: ಕ್ರೀಸ್ ಮೋರಿಸ್ ಕೊನೆಯಲ್ಲಿ ಸಿಕ್ಸರ್ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 3 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿದೆ.

    ಗೆಲ್ಲಲು 148 ರನ್‍ಗಳ ಸವಾಲು ಪಡೆದ ರಾಜಸ್ಥಾನ ಸೋಲುವ ಭೀತಿಯಲ್ಲಿ ಸಿಲುಕಿತ್ತು. ಆದರೆ ದಕ್ಷಿಣ ಆಫ್ರಿಕಾದ ಆಟಗಾರರಾದ ಡೆವಿಡ್ ಮಿಲ್ಲರ್ ಮತ್ತು ಕ್ರೀಸ್ ಮೋರಿಸ್ ಅವರ ಸ್ಫೋಟಕ ಆಟದಿಂದಾಗಿ 19.4  ಓವರಿನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಹೊಡೆಯುವ ಮೂಲಕ  ರಾಜಸ್ಥಾನ ತನ್ನ ಗೆಲುವಿನ ಖಾತೆ ತೆರೆದಿದೆ.

    ಗೆದ್ದಿದ್ದು ಹೇಗೆ?
    42 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ರಾಹುಲ್ ತೆವಾಟಿಯಾ 19 ರನ್ ಹೊಡೆದರೆ ಡೇವಿಡ್ ಮಿಲ್ಲರ್ 62 ರನ್(43 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದು ಪಂದ್ಯವನ್ನು ರೋಚಕ ಘಟ್ಟದತ್ತ ತಿರುಗಿಸಿದರು. ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 27 ರನ್‍ಗಳ ಅಗತ್ಯವಿತ್ತು. ರಬಾಡ ಎಸೆದ 19ನೇ ಓವರಿನಲ್ಲಿ ಕ್ರೀಸ್ ಮೋರಿಸ್ 2 ಸಿಕ್ಸ್ ಸಿಡಿಸಿದರು. ಈ ಓವರಿನಲ್ಲಿ 15 ರನ್ ಬಂತು. ಕೊನೆಯ ಓವರಿನಲ್ಲಿ 12 ರನ್ ಬೇಕಿತ್ತು. ಟಾಮ್ ಕರ್ರನ್ ಎಸೆದ ಮೊದಲ ಎಸೆತದಲ್ಲಿ ಮೋರಿಸ್ ಎರಡು ರನ್ ಓಡಿದರೆ ಎರಡನೇ ಎಸೆತವನ್ನು ಸಿಕ್ಸರ್ ಗೆ  ಅಟ್ಟಿದರು. 3ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 4ನೇ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. 37 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.

    ವಿಕೆಟ್ ಉರುಳುತ್ತಿದ್ದರೂ ನಾಯಕ ರಿಷಭ್ ಪಂತ್ 51 ರನ್(32 ಎಸೆತ, 9 ಬೌಂಡರಿ) ಹೊಡೆದರೆ ಲಲಿತ್ ಯಾದವ್ 20 ರನ್, ಟಾಪ್ ಕರ್ರನ್ 21 ರನ್, ಕ್ರೀಸ್ ವೋಕ್ಸ್ 15 ರನ್ ಹೊಡೆದ ಕಾರಣ ತಂಡ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಪಂದ್ಯದಲ್ಲಿ ಡೆಲ್ಲಿ ಪರ ಯಾವೊಬ್ಬ ಆಟಗಾರ ಸಿಕ್ಸರ್ ಸಿಡಿಸದೇ ಇರುವುದು ವಿಶೇಷವಾಗಿತ್ತು. ಇದನ್ನೂ ಓದಿ: 5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    ಕ್ರೀಸ್ ಮೋರಿಸ್ ಅವರು 2021ರಲ್ಲಿ ನಡೆದ ಹರಾಜಿನಲ್ಲಿ ದುಬಾರಿ ಬೆಲೆಗೆ ಬಿಡ್ ಆಗಿದ್ದರು. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀದಿಸಿತ್ತು. ಮೋರಿಸ್ ಬೌಲರ್ ಮಾತ್ರ ಅಲ್ಲ. ಆಲ್‍ರೌಂಡರ್ ಆಟಗಾರ. ಇಂದಿನ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು.

  • 5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    – ಸ್ಯಾಮ್ಸನ್ ನಿರ್ಧಾರ ಸರಿಯೇ?
    – 16.25 ಕೋಟಿ ನೀಡಿ ಮೋರಿಸ್ ಅವರನ್ನು ಖರೀದಿಸಿದ್ದು ಯಾಕೆ?

    ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ 20ನೇ ಓವರಿನ 5ನೇ ಎಸೆತಕ್ಕೆ ನಾಯಕ ಸಂಜು ಸ್ಯಾಮ್ಸನ್ ರನ್ ಓಡಿದ್ದರೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವು ಸಿಗುತ್ತಿತ್ತಾ ಈ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಕೊನೆಯ ಓವರಿನಲ್ಲಿ ರಾಜಸ್ಥಾನ ತಂಡದ ಗೆಲುವಿಗೆ 13 ರನ್‍ಗಳ ಅಗತ್ಯವಿತ್ತು. ಅರ್ಷ್‍ದೀಪ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಎರಡನೇ ಎಸೆತದಲ್ಲಿ ಸ್ಯಾಮ್ಸನ್ ಒಂದು ರನ್ ಓಡಿದರೆ ಮೂರನೇ ಎಸೆತದಲ್ಲಿ ಕ್ರೀಸ್ ಮೊರಿಸ್ ಒಂದು ರನ್ ಓಡಿದರು. 4ನೇ ಎಸೆತದಲ್ಲಿ ಸ್ಯಾಮ್ಸನ್ ಸಿಕ್ಸರ್ ಸಿಡಿಸಿದರು. ಕೊನೆಯ ಎರಡು ಎಸೆತದಲ್ಲಿ 5 ರನ್ ಬೇಕಿತ್ತು. 5ನೇ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ 6ನೇ ಎಸೆತದಲ್ಲಿ 6 ರನ್ ಅಗತ್ಯವಾಗಿತ್ತು. ಸ್ಯಾಮ್ಸನ್ ಬಲವಾಗಿ ಹೊಡೆದರೂ ಬಾಲ್ ದೀಪಕ್ ಹೂಡಾ ಕೈ ಸೇರಿತು. ಪಂಜಾಬ್ ಕಿಂಗ್ಸ್ 4 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    5ನೇ ಎಸೆತದಲ್ಲಿ ಏನಾಯ್ತು?
    ಸ್ಯಾಮ್ಸನ್ ಬಲವಾಗಿ ಹೊಡೆದ ಬಾಲ್ ವೈಡ್ ಲಾಂಗ್ ಆಫ್ ಕಡೆ ಹೋಗಿತ್ತು. ಬಾಲ್ ಹೋಗುತ್ತಿರುವುದನ್ನು ನೋಡಿದ ಕ್ರೀಸ್ ಮೊರಿಸ್ ಸ್ಟ್ರೈಕ್‍ನತ್ತ ಓಡಿದರು. ಆದರೆ ಸ್ಯಾಮ್ಸನ್ ರನ್ ಗಳಿಸುವ ಯಾವುದೇ ಉತ್ಸಾಹ ತೋರಿಸಲಿಲ್ಲ. ಹೀಗಾಗಿ ಅರ್ಧ ದೂರ ಸಾಗಿದ್ದ ಕ್ರೀಸ್ ಮೋರಿಸ್ ಮತ್ತೆ ನಾನ್ ಸ್ಟ್ರೈಕ್‍ನತ್ತ ಬಂದರು.

    ಚರ್ಚೆ ಏನು?
    ಒಂದು ವೇಳೆ ಸಿಂಗಲ್ ರನ್ ಓಡಿದ್ದರೂ ಒತ್ತಡ ಕಡಿಮೆ ಆಗುತ್ತಿತ್ತು. ಸಿಕ್ಸ್ ಹೊಡೆಯುವ ಅಗತ್ಯ ಇರಲಿಲ್ಲ. ಒಂದು ಬೌಂಡರಿ ಹೊಡೆದರೂ ರಾಜಸ್ಥಾನ ವಿನ್ ಆಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಕ್ರೀಸ್ ಮೋರಿಸ್ ಅವರು 2021ರಲ್ಲಿ ನಡೆದ ಹರಾಜಿನಲ್ಲಿ ದುಬಾರಿ ಆಟಗಾರ. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀಸಿದಿದೆ. ಮೋರಿಸ್ ಬೌಲರ್ ಮಾತ್ರ ಅಲ್ಲ. ಆಲ್‍ರೌಂಡರ್ ಆಟಗಾರ. ಹೀಗಿರುವಾಗ ಒಂದು ರನ್ ಓಡಿದ್ದರೂ ಗೆಲ್ಲುವ ಅವಕಾಶ ಹೆಚ್ಚಿತ್ತು. ಸ್ಯಾಮ್ಸನ್ ಅವರಿಗಿದ್ದ ಅತಿಯಾದ ವಿಶ್ವಾಸ ಅವರಿಗೆ ಮುಳುವಾಯಿತು ಎಂದು ಟೀಕಿಸುತ್ತಿದ್ದಾರೆ.

    ಕೊನೆಯ ಎಸೆತವನ್ನು ಎದುರಿಸಲು ಕ್ರೀಸ್ ಮೋರಿಸ್ ಅವರಿಗೆ ಸ್ಯಾಮ್ಸನ್ ಅವಕಾಶ ನೀಡಬೇಕಿತ್ತು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಸ್ಯಾಮ್ಸನ್ ಅವರ ನಿರ್ಧಾರ ಸರಿಯಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

    ಶತಕ ಸಿಡಿಸಿದ್ದ ಸ್ಯಾಮ್ಸನ್ ಅವರು 4ನೇ ಎಸೆತದಲ್ಲಿ ಸಿಕ್ಸ್ ಹೊಡೆದಿದ್ದರು. ಹೀಗಾಗಿ ಈ ಪಂದ್ಯವನ್ನು ಗೆಲ್ಲಿಸಲೇಬೇಕೆಂದು ಹಠ ಹಿಡಿದಿದ್ದರು. ಆದರೆ ಕೊನೆ ಎಸೆತವನ್ನು ಸರಿಯಾಗಿ ಜಡ್ಜ್ ಮಾಡದ ಕಾರಣ ಔಟಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಕ್ರೀಸ್ ಮೋರಿಸ್ ಅವರಿಗೆ ಅವಕಾಶ ನೀಡಿದ ವಿಚಾರ ಟ್ರೆಂಡಿಂಗ್ ಟಾಪಿಕ್ ಆಗಿದೆ. ಸ್ಯಾಮ್ಸನ್ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ.