Tag: ಕ್ರೀಡೆ

  • ಸೆಕ್ಸ್ ಟೇಪ್ ಲೈವ್ ಮಾಡ್ಕೊಂಡು ಖ್ಯಾತ ಫುಟ್ಬಾಲ್ ಆಟಗಾರ ಎಡವಟ್ಟು

    ಸೆಕ್ಸ್ ಟೇಪ್ ಲೈವ್ ಮಾಡ್ಕೊಂಡು ಖ್ಯಾತ ಫುಟ್ಬಾಲ್ ಆಟಗಾರ ಎಡವಟ್ಟು

    ಮಾಸ್ಕೋ: ಕ್ಯಾಮರೂನ್ ತಂಡದ 25 ವರ್ಷದ ಫುಟ್‍ ಬಾಲ್ ಆಟಗಾರ ಕ್ಲಿಂಟನ್ ಎನ್ ಜೀಕೆ ತನ್ನ ಸೆಕ್ಸ್ ಟೇಪ್ ಲೈವ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಕ್ಲಿಂಟನ್ ಅವರು ರಷ್ಯಾದ ಡೈನಮೋ ಮಾಸ್ಕೋ ತಂಡದ ಪರ 5 ವರ್ಷ ಆಡಲು ಕಳೆದ ಗುರುವಾರ ಸಹಿ ಹಾಕಿದ್ದರು. ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಕ್ಲಿಂಟನ್ ತನ್ನ ಎಡವಟ್ಟಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಲಿಂಟನ್, ರಷ್ಯಾ ತಂಡದ ಜೊತೆಗಿನ 5 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಹೋಟೆಲಿನಲ್ಲಿ ಪರಿಚಯವಿಲ್ಲದ ಮಹಿಳೆಯ ಜೊತೆ ಸಂಭ್ರಮಿಸುತ್ತಿದ್ದೆ. ಈ ವೇಳೆ ನನ್ನ ಸುದ್ದಿಯನ್ನು ಗೂಗಲ್ ನಲ್ಲಿ ನೋಡಲು ಮುಂದಾಗುತ್ತಿದ್ದಾಗ ತಪ್ಪಿ ಸ್ನಾಪ್ ಚಾಟ್ ಲೈವ್ ಸ್ಟ್ರೀಮ್ ಬಟನ್ ಒತ್ತಿದ್ದೆ. ಇದರಿಂದಾಗಿ ಲೈವ್ ಪ್ರಸಾರವಾಗಿದೆ. ಹೆಚ್ಚು ಮದ್ಯ ಸೇವಿಸಿದ ಪರಿಣಾಮ ಲೈವ್ ಆಗಿರುವುದು ಗೊತ್ತಾಗಿರಲಿಲ್ಲ. ನನ್ನನ್ನು ಕ್ಷಮಿಸಿಬಿಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

    ಮದ್ಯದ ಅಮಲು ಇಳಿದ ಬಳಿಕ ಕ್ಲಿಂಟನ್‍ಗೆ ವಿಚಾರ ಗೊತ್ತಾಗಿದ್ದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಮಾರ್ಸಿಲ್ಲೆ ತಂಡದ ಆಡುತ್ತಿದ್ದ ಕ್ಲಿಂಟನ್ ಈಗ ಡೈನಮೋ ಪರ ಆಡಲು 5.5 ದಶಲಕ್ಷ ಪೌಂಡ್(ಅಂದಾಜು 46 ಕೋಟಿ ರೂ.) ಸಹಿ ಹಾಕಿದ್ದಾರೆ.

  • ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ: ಭಜ್ಜಿಯಿಂದ ಪಾಕ್ ಟ್ರೋಲ್

    ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ: ಭಜ್ಜಿಯಿಂದ ಪಾಕ್ ಟ್ರೋಲ್

    ಮುಂಬೈ: ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಹಾಗೂ ಇತರ ದೇಶವನ್ನು ಟ್ರೋಲ್ ಮಾಡಿದ್ದಾರೆ.

    ಹರ್ಭಜನ್ ಸಿಂಗ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಪಾಕಿಸ್ತಾನ ಸೇರಿದಂತೆ ಕೆಲವು ದೇಶದ ಧ್ವಜದ ಮೇಲೆ ಚಂದ್ರನ ಚಿತ್ರ ಇದೆ ಎಂದು ಬರೆದು ಟರ್ಕಿ, ಲುಬಿಯಾ, ಟುನೀಶಿಯಾ, ಅಜೆರ್ಬೈಜಾನ್, ಅಲ್ಜೀರಿಯಾ, ಮಲೇಷ್ಯಾ, ಮಾಲ್ಡೀವ್ಸ್ ಧ್ವಜದ ಎಮೋಜಿ ಹಾಕಿದ್ದಾರೆ. ಬಳಿಕ ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತ, ಅಮೆರಿಕ, ಚೀನಾ ಹಾಗೂ ರಷ್ಯಾ ಧ್ವಜವನ್ನು ಹಾಕಿ ಟ್ವೀಟ್ ಮಾಡಿದ್ದಾರೆ. 1.50 ಲಕ್ಷ ಮಂದಿ ಈ ಟ್ವೀಟ್ ಅನ್ನು ಲೈಕ್ ಮಾಡಿದ್ದರೆ 30 ಸಾವಿರಕ್ಕೂ ಅಧಿಕ ಮಂದಿ ರೀ-ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವವೇ ಆಯ್ಕೆ ಏಕೆ? ಯಾವ ಸಾಧನದ ಕೆಲಸ ಏನು?- ಇಲ್ಲಿದೆ ಚಂದ್ರಯಾನ 2 ಪೂರ್ಣ ಮಾಹಿತಿ

    ಚಂದ್ರಯಾನ- 2 ಲಾಂಚ್ ಆದ ನಂತರ ದೇಶದ ಜನತೆ ಇಸ್ರೋಗೆ ಅಭಿನಂದನೆ ಸಲ್ಲಿಸಿದೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಪ್ರಧಾನಿ ಮೋದಿ ಶುಭಾಶಯ ಕೋರಿದಲ್ಲದೆ, ಹಲವು ಕ್ರಿಕೆಟ್ ಆಟಗಾರರು ಹಾಗೂ ಸಿನಿಮಾ ಕಲಾವಿದರು ಕೂಡ ಟ್ವೀಟ್ ಮಾಡುವ ಮೂಲಕ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಚಂದಿರನ ಅಂಗಳಕ್ಕೆ ಜಿಗಿದ ‘ಬಾಹುಬಲಿ’ – ಜಿಎಸ್‍ಎಲ್‍ವಿ ಮಾರ್ಕ್-3 ಉಡಾವಣೆ ಯಶಸ್ವಿ

    ಭಾರತದ ಹೆಮ್ಮೆಯ ಚಂದ್ರಯಾನ- 2 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಸೋಮವಾರ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಮೂಲಕ ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲಿದೆ. ಪ್ರತಿಯೊಂದು ಹಂತಗಳು ಯಶಸ್ವಿಯಾಗುತ್ತಿದ್ದಂತೆ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.

    ಚಂದ್ರಯಾನ – 2 ಯೋಜನೆಗೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚವಾಗಿದ್ದರೆ, ರಾಕೆಟ್‍ಗೆ 375 ಕೋಟಿ ರೂ. ಖರ್ಚಾಗಿದೆ. ಚಂದ್ರಯಾನ -2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದ್ದು 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. 54 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 13 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ.

  • ಕ್ಯಾಪ್ಟನ್ ಕೂಲ್ ಧೋನಿ ನಡೆಗೆ ಪಾಕಿಸ್ತಾನದ ನಟಿ ಫಿದಾ

    ಕ್ಯಾಪ್ಟನ್ ಕೂಲ್ ಧೋನಿ ನಡೆಗೆ ಪಾಕಿಸ್ತಾನದ ನಟಿ ಫಿದಾ

    ಇಸ್ಲಾಮಾಬಾದ್: ಭಾರತ ಕ್ರಿಕೆಟ್ ತಂಡದ ಆಟಗಾರ ಎಂ.ಎಸ್ ಧೋನಿ ಅವರು ನಡೆಗೆ ಪಾಕಿಸ್ತಾನದ ನಟಿ ಫಿದಾ ಆಗಿದ್ದಾರೆ. ಅಲ್ಲದೆ 1998ರಲ್ಲಿ ನಡೆದ ಒಂದು ಘಟನೆಯೊಂದು ಹಂಚಿಕೊಂಡಿದ್ದಾರೆ.

    ಪಾಕಿಸ್ತಾನದ ನಟಿ ಮತಿರಾ ಖಾನ್ ಅವರು ಏಷ್ಯಾ ಕಪ್ ಸಂದರ್ಭದಲ್ಲಿ ಧೋನಿ ತಮ್ಮ ಜೊತೆ ಹೇಗೆ ನಡೆದುಕೊಂಡರು ಎಂಬುದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡ ತಂಗಿದ್ದ ಹೋಟಿಲಿನಲ್ಲಿ ಮತಿರಾ ಖಾನ್ ತಂಗಿದ್ದರು. ಈ ವೇಳೆ ಮತಿರಾ ತಮ್ಮ ನೆಚ್ಚಿನ ಪಾಕಿಸ್ತಾನದ ಆಟಗಾರನ ಆಟೋಗ್ರಾಫ್ ಪಡೆಯಲು ಹೋಗಿದ್ದರು.

    ನಾನು ಪಾಕಿಸ್ತಾನ ಕ್ರಿಕೆಟಿಗರ ಬಳಿ ಆಟೋಗ್ರಾಫ್ ಕೇಳಲು ಹೋಗಿದೆ. ಈ ವೇಳೆ ಕೆಲವು ಆಟಗಾರರು ನನಗೆ ಆಟೋಗ್ರಾಫ್ ನೀಡಿದ್ದರು. ಆದರೆ ಕೆಲವರು ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದು ನನ್ನ ಮೇಲೆ ರೇಗಿದ್ದರು. ಅವರು ನನ್ನ ಮೇಲೆ ರೇಗಾಡಿದ್ದರಿಂದ ನನ್ಮ ಮನಸ್ಸಿಗೆ ನೋವಾಗಿ ಅತ್ತುಬಿಟ್ಟಿದ್ದೆ. ಬಳಿಕ ನಾನು ನನ್ನ ಟೇಬಲ್ ಬಳಿ ಹೋಗುತ್ತಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ನಾವು ಕೂಡ ಕ್ರಿಕೆಟ್ ಆಟಗಾರರು. ನಮ್ಮ ಆಟೋಗ್ರಾಫ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.

    ನಾನು ಅವರ ಧ್ವನಿ ಕೇಳಿ ಹಿಂದೆ ತಿರುಗಿ ನೋಡಿದ್ದಾಗ ಅಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದರು. ಧೋನಿ ನನಗೆ ಆಟೋಗ್ರಾಫ್ ಮಾತ್ರವಲ್ಲದೆ ಅವರ ಪಕ್ಕದಲ್ಲಿ ಇದ್ದ ಸೀಟ್‍ನಲ್ಲಿ ಕುಳಿತುಕೊಳ್ಳಲು ಹೇಳಿ ನನ್ನ ಜೊತೆ ಮಾತುಕತೆ ನಡೆಸಿದ್ದರು ಎಂದು ಮತಿರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

  • ಬ್ಯಾಟಿಂಗ್ ಮಾಡುವಾಗ ಚೆಂಡು ಬಡಿದು ಯುವ ಆಟಗಾರ ಸಾವು

    ಬ್ಯಾಟಿಂಗ್ ಮಾಡುವಾಗ ಚೆಂಡು ಬಡಿದು ಯುವ ಆಟಗಾರ ಸಾವು

    ಶ್ರೀನಗರ: ಬ್ಯಾಟಿಂಗ್ ಮಾಡುವಾಗ ಕುತ್ತಿಗೆಗೆ ಚೆಂಡು ಬಡಿದು ಯುವ ಕ್ರಿಕೆಟ್ ಆಟಗಾರ ಮೃತಪಟ್ಟ ಘಟನೆ ಗುರುವಾರ ದಕ್ಷಿಣ ಕಾಶ್ಮೀರದ ಅನಂತ್ ನಾಗ್‍ನಲ್ಲಿ ನಡೆದಿದೆ.

    ಜಹಂಗೀರ್ ಅಹ್ಮದ್ ವಾರ್ (18) ಮೃತಪಟ್ಟ ಆಟಗಾರ. ಜಹಂಗೀರ್ ಅಹ್ಮದ್ ಉತ್ತರ ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ನಿವಾಸಿಯಾಗಿದ್ದು, ಅನಂತ್‍ನಾಗ್‍ನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಆಟವಾಡುತ್ತಿದ್ದರು.

    ಹೆಲ್ಮೆಟ್ ಧರಿಸಿ ಆಟವಾಡುತ್ತಿದ್ದರೂ ಚೆಂಡು ಅಹ್ಮದ್ ಕುತ್ತಿಗೆಗೆ ಬಡಿದಿದೆ. ಇದರಿಂದ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಅಹ್ಮದ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿ ಅಹ್ಮದ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಜಮ್ಮು- ಕಾಶ್ಮೀರ ರಾಜ್ಯಪಾಲ ಎಸ್.ಪಿ ಮಲ್ಲಿಕ್ ಅವರು ಜಹಂಗೀರ್ ಅಹ್ಮದ್ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಹಂಗೀರ್ ಅಹ್ಮದ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ನೀಡಿದ್ದರು. ಎಸ್.ಪಿ ಮಲ್ಲಿಕ್ ಮೃತ ಆಟಗಾರ ಅಹ್ಮದ್ ಮಲ್ಲಿಕ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

  • ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಆಟ – ಫೈನಲ್ ಆಡಿ ಹೆಮ್ಮೆ ತರ್ತೀನಿ ಎಂದಿದ್ದ ಆಟಗಾರ್ತಿ

    ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಆಟ – ಫೈನಲ್ ಆಡಿ ಹೆಮ್ಮೆ ತರ್ತೀನಿ ಎಂದಿದ್ದ ಆಟಗಾರ್ತಿ

    ಮಿಜೋರಾಂ: ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ಲಾಲ್ರೆಮ್ಸಿಯಾಮಿ ತನ್ನ ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಹಾಕಿ ಆಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಸೋಮವಾರ ಹೀರೋಶಿಮಾದಲ್ಲಿ ನಡೆದ ಎಫ್‍ಐಎಚ್ ಸೀರಿಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಹಾಕಿ ಸ್ಟ್ರೈಕರ್ ಆಗಿರುವ ಲಾಲ್ರೆಮ್ಸಿಯಾಮಿ ಪಂದ್ಯ ಗೆದ್ದ ಬಳಿಕ ಮಂಗಳವಾರ ತಮ್ಮ ಊರಿಗೆ ಮರಳಿದ್ದಾರೆ. ಈ ವೇಳೆ ಅಲ್ಲಿನ ಜನರು ಲಾಲ್ರೆಮ್ಸಿಯಾಮಿಗೆ ಸ್ವಾಗತ ಕೋರಿ ಅಭಿನಂದನೆ ತಿಳಿಸಿದರು. ತಂದೆ ನಿಧನದ ಬಳಿಕ ಊರಿಗೆ ಬಂದ ಲಾಲ್ರೆಮ್ಸಿಯಾಮಿರನ್ನು ನೋಡಿ ಮನೆಯವರು ಕಣ್ಣೀರು ಹಾಕಿದ್ದಾರೆ.

    ಸೆಮಿಫೈನಲ್ ಹಿಂದಿನ ದಿನ ಅಂದರೆ ಶುಕ್ರವಾರ ಲಾಲ್ರೆಮ್ಸಿಯಾಮಿ ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆ ಸಾವಿನ ವಿಷಯ ತಿಳಿದ ಲಾಲ್ರೆಮ್ಸಿಯಾಮಿ ಊರಿಗೆ ಮರಳದೇ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ತನ್ನ ತಂದೆಗೆ ಹೆಮ್ಮೆ ತರುತ್ತೇನೆ ಎಂದು ತಂಡದ ಕೋಚ್ ಆದ ಸ್ಜೊರ್ಡ್ ಮಾರಿಜ್ನೆ ಅವರ ಬಳಿ ಹೇಳಿಕೊಂಡಿದ್ದರು.

    ಫೈನಲ್ ನಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ಮಹಿಳಾ ಹಾಕಿ ತಂಡ ಮಂಗಳವಾರ ಹೀರೋಶಿಮಾದಿಂದ ದೆಹಲಿಗೆ ತಲುಪಿತು. ಕ್ರೀಡಾ ಸಚಿವರಾದ ಕಿರಣ್ ರಿಜಿಜು ಅವರು ತಂದೆಯ ನಿಧನದ ನಡುವೆಯೂ ತಂಡಕ್ಕಾಗಿ ಆಡಿದ ಲಾಲ್ರೆಮ್ಸಿಯಾಮಿ ಅವರನ್ನು ಶ್ಲಾಘಿಸಿದರು. ಅಲ್ಲದೆ ಕಿರಣ್ ಅವರು ಭಾರತ ಹಾಕಿ ತಂಡದ ಸದಸ್ಯರನ್ನು ಭೇಟಿಯಾಗಿ ಶುಭಾಶಯ ಕೂಡ ತಿಳಿಸಿದರು.

    ಕಿರಣ್ ರಿಜಿಜು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಹಿಳಾ ಹಾಕಿ ತಂಡಕ್ಕೆ ಶುಭಾಶಯ ತಿಳಿಸಿದರು. ಹಾಕಿ ತಂಡದ ನಾಯಕಿ ರಾಣಿ ರಾಮ್‍ಪಾಲ್ ಟೂರ್ನ್‍ಮೆಂಟ್‍ನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ಲಂಡನ್ ಬೀದಿಗಳಲ್ಲಿ ಅನುಷ್ಕಾ ಜೊತೆ ವಿರಾಟ್ ಸುತ್ತಾಟ

    ಲಂಡನ್ ಬೀದಿಗಳಲ್ಲಿ ಅನುಷ್ಕಾ ಜೊತೆ ವಿರಾಟ್ ಸುತ್ತಾಟ

    ಲಂಡನ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಂಡನ್‍ನ ಬೀದಿಯಲ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜೊತೆ ಸುತ್ತಾಡುತ್ತಿದ್ದಾರೆ. ಈ ಫೋಟೋವನ್ನು ಅವರ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್‍ನ ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಮೆರೂನ್ ಹಾಗೂ ಬಿಳಿ ಬಣ್ಣದ ಉಡುಪು ಧರಿಸಿದ್ದು, ವಿರಾಟ್ ಜ್ಯಾಕೇಟ್ ಧರಿಸಿದ್ದರು. ಈ ವೇಳೆ ಅನುಷ್ಕಾ ಹೊಸ ಹೈರ್ ಸ್ಟೈಲ್‍ನಲ್ಲಿ ಮಿಂಚಿದ್ದರು. ವಿರುಷ್ಕಾ ಅಭಿಮಾನಿಗಳು ಈ ಫೋಟೋ ಹಾಕಿ ಅದಕ್ಕೆ, ‘ಲಂಡನ್‍ನ ಓಲ್ಡ್ ಬಾಂಡ್ ಸ್ಟ್ರೀಟ್, ಅನುಷ್ಕಾ, ವಿರಾಟ್’ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

     

    View this post on Instagram

     

    @virat.kohli and @anushkasharma on the old bond street in London today ! ????❤️ I love Anushka’s new haircut ????

    A post shared by BleedKohlism2.0???? (@bleedingkohlism) on

    ಅನುಷ್ಕಾ ಶರ್ಮಾ ಕೊನೆಯದಾಗಿ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ನಟಿಸಿದ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರು ಬೇರೆ ಯಾವ ಚಿತ್ರ ಕೂಡ ಒಪ್ಪಿಕೊಂಡಿಲ್ಲ. ಸದ್ಯ ಅನುಷ್ಕಾ ಡಿಜಿಟಲ್ ವೇದಿಕೆಯಲ್ಲಿ ಯಾವುದಾದರೂ ಶೋ ಮಾಡಬೇಕು ಎಂದುಕೊಂಡಿದ್ದಾರೆ.

    ಭಾರತ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿತು. ಇದುವರೆಗೂ ನಡೆದ 4 ಪಂದ್ಯದಲ್ಲಿ ಭಾರತ ಮೂರರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದು ಆಗಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಇಂದು ಇಂಡೋ-ಪಾಕ್ ಮಧ್ಯೆ ಹೈವೋಲ್ಟೇಜ್ ಫೈಟ್ – ಮ್ಯಾಂಚೆಸ್ಟರ್‌ನಲ್ಲಾಗುತ್ತಾ ಸರ್ಜಿಕಲ್ ಸ್ಟ್ರೈಕ್

    ಇಂದು ಇಂಡೋ-ಪಾಕ್ ಮಧ್ಯೆ ಹೈವೋಲ್ಟೇಜ್ ಫೈಟ್ – ಮ್ಯಾಂಚೆಸ್ಟರ್‌ನಲ್ಲಾಗುತ್ತಾ ಸರ್ಜಿಕಲ್ ಸ್ಟ್ರೈಕ್

    ಮ್ಯಾಂಚೆಸ್ಟರ್‌: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್‍ನ ಮ್ಯಾಂಚೆಸ್ಟರ್‌ನ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಸರ್ಜಿಕಲ್ ಸ್ಟ್ರೈಕ್ ನೋಡಲು ಸಿಲಿಕಾನ್ ಸಿಟಿಯ ಮಂದಿ ಕೂಡ ಕಾತುರದಿಂದ ಕಾದು ಕುಳಿತಿದ್ದಾರೆ.

    ಭಾರತ -ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಸಮರಕ್ಕೆ ಮ್ಯಾಂಚೆಸ್ಟರ್‌ನ ಮೈದಾನ ಸಿದ್ಧವಾಗಿದೆ. ಇಂಗ್ಲೆಂಡ್‍ನಲ್ಲಿ ನಡೆಯುವ ಪಂದ್ಯವನ್ನು ಲೈವ್ ನೋಡಲು ಸಿಲಿಕಾನ್ ಸಿಟಿ ಮಂದಿ ಕೂಡ ಕಾತರರಾಗಿದ್ದಾರೆ. ಭಾನುವಾರ ರಜೆ ಬೇರೆ, ಶಾಪಿಂಗ್, ಮಾಲ್ ರೌಂಡ್ಸ್ ಎಲ್ಲದಕ್ಕೂ ಬ್ರೇಕ್ ಹಾಕಿ ಮ್ಯಾಚ್ ನೋಡುವ ತಯಾರಿಯಲ್ಲಿದ್ದಾರೆ. ನಗರದ ಗಲ್ಲಿಗಲ್ಲಿಗಳಲ್ಲಿ ಸಿಗುವ ಟೀ ಶಾಪ್‍ಗಳಲ್ಲಿ ಇಂಡೋ-ಪಾಕ್ ಮ್ಯಾಚ್ ನೋಡಲು ಸಹ ಜನ ಕಾದಿದ್ದಾರೆ.

    ಕ್ಲಬ್, ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳು ಕೂಡ ಇಂದು ಹೌಸ್‍ಫುಲ್ ಆಗಿರುತ್ತವೆ. ದೊಡ್ಡ ದೊಡ್ಡ ಸ್ಕ್ರೀನ್‍ಗಳಲ್ಲಿ ಟೀಂ ಇಂಡಿಯಾ, ಪಾಕ್ ಮೇಲೆ ಸವಾರಿ ಮಾಡುವುದನ್ನು ನೋಡಲು ಅತಿ ಉತ್ಸಾಹದಿಂದ ಕಾದಿದ್ದಾರೆ. ಭಾರತ ಕಪ್ ಗೆಲ್ಲುತ್ತೋ ಬಿಡುತ್ತೋ ಅದು ನಮಗೆ ಬೇಕಾಗಿಲ್ಲ. ಆದರೆ ಪಾಕಿಸ್ತಾನದ ವಿರುದ್ಧ ಗೆಲ್ಲಬೇಕು ಅಷ್ಟೇ ಎಂದು ಭಾರತೀಯರು ಹೇಳುತ್ತಿದ್ದಾರೆ.

  • ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ನವದೆಹಲಿ: ವಿಶ್ವಕಪ್ ಪಂದ್ಯದ ಮೊದಲು ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮುಂದಿಟ್ಟು ಭಾರತದ ಕಾಲೆಳೆದಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರೊಚ್ಚಿಗೆದ್ದಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ ಜಾಹೀರಾತನ್ನು ನೋಡಿದ ಸಾನಿಯಾ ಮಿರ್ಜಾ ತಮ್ಮ ಟ್ವಿಟ್ಟರಿನಲ್ಲಿ ರೊಚ್ಚಿ ಗೆದ್ದಿದ್ದಾರೆ. ಸಾನಿಯಾ ತಮ್ಮ ಟ್ವಿಟ್ಟರಿನಲ್ಲಿ, “ಎರಡು ಕಡೆ ಅವಮಾನಕರ ವಿಷಯದೊಂದಿಗೆ ಜಾಹೀರಾತು ತಯಾರಾಗಿದೆ. ಸ್ವಲ್ಪ ಗಂಭೀರವಾಗಿ ನಡೆದುಕೊಳ್ಳಿ. ಈ ಪಂದ್ಯಕ್ಕೆ ಪ್ರಚಾರ ನೀಡುವ ಯಾವುದೇ ಅವಶ್ಯಕತೆ ಇಲ್ಲ. ಈಗಾಗಲೇ ಈ ಪಂದ್ಯಕ್ಕೆ ಪ್ರಚಾರ ಸಿಕ್ಕಿದೆ. ಇದು ಕೇವಲ ಕ್ರಿಕೆಟ್ ಪಂದ್ಯ” ಎಂದು ಟ್ವೀಟ್ ಮಾಡಿದ್ದಾರೆ.

    ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನು ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿತ್ತು.

    ಸ್ಟಾರ್ ಸ್ಪೋಟ್ಸ್ ವಾಹಿನಿ ಕೂಡ ಜಾಹೀರಾತನ್ನು ಮಾಡಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಈ ವಿಡಿಯೋದಲ್ಲಿ ಭಾರತದ ಅಭಿಮಾನಿ ತಮ್ಮನ್ನು ತಾವೇ ಪಾಕಿಸ್ತಾನದ ತಂದೆ ಎಂದು ಪಾಕ್ ಅಭಿಮಾನಿಗೆ ಹೇಳುತ್ತಾರೆ. ಈ ವಿಡಿಯೋವನ್ನು ಸ್ಟಾರ್ ಸ್ಪೋಟ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, ಈ ತಂದೆಯ ದಿನಾಚರಣೆಯಂದು ವಿಶ್ವಕಪ್ ಪಂದ್ಯ ವೀಕ್ಷಿಸಿ ಬಾಪ್ ರೇ ಬಾಪ್ ಎಂದು ಹೇಳುತ್ತೀರಾ ಎಂದು ಟ್ವೀಟ್ ಮಾಡಿದೆ.

    ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ವಿಶ್ವಕಪ್‍ನಲ್ಲಿ ಇಂದು ಭಾರತಕ್ಕೆ ಮೊದಲ ಪಂದ್ಯ

    ವಿಶ್ವಕಪ್‍ನಲ್ಲಿ ಇಂದು ಭಾರತಕ್ಕೆ ಮೊದಲ ಪಂದ್ಯ

    ಲಂಡನ್: ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಕ್ರಿಕೆಟ್ ಹಬ್ಬ ಶುರು. ಮಹಾಯುದ್ಧದಲ್ಲಿ ಶುಭಾರಂಭ ಮಾಡಲು ಕೊಹ್ಲಿ ಹುಡುಗರು ಸಜ್ಜಾಗಿದ್ರೆ, ಮತ್ತೊಂದೆಡೆ ಸೋತು ಸುಣ್ಣವಾಗಿರುವ ಹರಿಣಗಳು ಕಮ್ ಬ್ಯಾಕ್ ಮಾಡಲು ರಣತಂತ್ರ ಹೆಣೆದಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಇಂದು ಭಾರತ ತನ್ನ ಮೊದಲ ಲೀಗ್ ಪಂದ್ಯವಾಡಲಿದೆ. ಈಗಾಗಲೇ ಎರಡು ಲೀಗ್ ಮ್ಯಾಚ್ ಆಡಿ ಸೋತಿರುವ ದಕ್ಷಿಣ ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಸೌತಾಂಪ್ಟನ್‍ನ ದಿ ವೇಜಸ್ ಬೌಲ್ ಸ್ಟೇಡಿಯಂನಲ್ಲಿ ಬಲಿಷ್ಠ ತಂಡಗಳ ಕಾಳಗಕ್ಕೆ ಅಖಾಡ ಸಿದ್ಧವಾಗಿದೆ.

    ವಿಶ್ವಕಪ್‍ನಲ್ಲಿ ಫೇವರೆಟ್ ಟೀಂ ಆಗಿರುವ ಕೊಹ್ಲಿ ಪಡೆ, ಗೆದ್ದು ಶುಭಾರಂಭ ಮಾಡಲು ತಂತ್ರ ರೂಪಿಸಿದೆ. ಕೇದರ್ ಜಾಧವ್ ಗಾಯದ ಸಮಸ್ಯೆಯಿಂದ ಬಳಲುತ್ತಿರೋದು ಟೀಂ ಇಂಡಿಯಾಗೆ ಮೈನಸ್ ಪಾಯಿಂಟ್. ಶಿಖರ್, ರೋಹಿತ್ ಓಪನರ್ಸ್ ಆಗಿ ಕಣಕ್ಕಿಳಿದ್ರೆ, ಮೀಡಲ್ ಆರ್ಡರ್ ನಲ್ಲಿ ಕೊಹ್ಲಿ, ಕೆಎಲ್ ರಾಹುಲ್, ಧೋನಿ ಪ್ರಾಬಲ್ಯ ಮೆರೆದ್ರೆ ಸ್ಲಾಗ್ ಓವರ್ಸ್‍ನಲ್ಲಿ ಪಾಂಡ್ಯ ಮತ್ತು ಜಡೇಜಾ ಮಿಂಚಲಿದ್ದಾರೆ. ಬೌಲಿಂಗ್‍ನಲ್ಲಿ ಬೂಮ್ರಾ ಮತ್ತು ಭುವನೇಶ್ವರ್ ಎದುರಾಳಿಗಳನ್ನು ಕಟ್ಟಿಹಾಕಲು ತಯಾರಾಗಿದ್ರೆ, ಸ್ಪೀನ್ ಮೋಡಿಗೆ ಕುಲ್‍ದೀಪ್ ಆ್ಯಂಡ್ ಚಹಾಲ್ ರೆಡಿ ಇದ್ದಾರೆ.

    ಬ್ಯಾಕ್ ಟು ಬ್ಯಾಕ್ ಸೋಲುಂಡಿರುವ ಸೌತ್ ಆಫ್ರಿಕಾಗೆ ಗಾಯದ ಸಮಸ್ಯೆ ಬಿಟ್ಟುಬಿಡದಂತೆ ಕಾಡ್ತಿದೆ, ಡೇಲ್ ಸ್ಟೈನ್ ಬೆನ್ನಲ್ಲೇ ಲೂಂಗಿ ಎನ್‍ಗಿಡಿ ಗಾಯಗೊಂಡಿರುವುದು ಡುಪ್ಲಿಸಿಸ್ ಪಡೆಗೆ ನುಂಗಲಾರದ ತುತ್ತಾಗಿದೆ. ಇನ್ನುಳಿದಂತೆ ಜೆಪಿ ಡುಮಿನಿ, ಮಿಲ್ಲರ್, ಕ್ವಿಂಟನ್ ಡಿಕಾಕ್, ಆಮ್ಲಾ, ಮರ್ಕರಮ್, ಇಮ್ರಾನ್ ತಾಹೀರ್, ಕ್ರಿಸ್ ಮೊರಿಸ್, ರಬಾಡ ಅಖಾಡಕ್ಕಿಳಿಯಲಿದ್ದಾರೆ.

    ಬ್ಯಾಟಿಂಗ್ ಸ್ವರ್ಗವಾಗಿರುವ ಪಿಚ್‍ನಲ್ಲಿ ರನ್ ಹೊಳೆ ಹರಿಯೋದರಲ್ಲಿ ಅನುಮಾನವೇ ಇಲ್ಲ. ಉಭಯ ತಂಡಗಳಲ್ಲೂ ಹೊಡಿಬಡಿ ಆಟಗಾರ ಇರುವುದರಿಂದ ಬಿಗ್ ಸ್ಕೋರ್ ಮ್ಯಾಚ್ ನಡೆಯಲಿದೆ.

  • ಅಂತರರಾಷ್ಟ್ರೀಯ ಮಟ್ಟದಲ್ಲಿ ಅರುಣ್ ಸಾಗರ್ ಪುತ್ರನ ಸಾಧನೆ

    ಅಂತರರಾಷ್ಟ್ರೀಯ ಮಟ್ಟದಲ್ಲಿ ಅರುಣ್ ಸಾಗರ್ ಪುತ್ರನ ಸಾಧನೆ

    ಬೆಂಗಳೂರು: ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

    ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್‍ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್‍ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್ ಪುತ್ರ ಸೂರ್ಯ ಭಾರತದಿಂದ ಸ್ಪರ್ಧೆ ಮಾಡಿದ್ದರು.

    ಸ್ಪರ್ಧೆಯಲ್ಲಿ ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದರು. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಮಾಕ್ಸ್ ಮೌಥಾಯ್ ಸ್ಪರ್ಧೆಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ.

    ಸೂರ್ಯ ಮೌಥಾಯ್ ನಲ್ಲಿ ಮೂರು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈಗ ಥಾಯ್ಲಂಡ್ ನಲ್ಲಿ ನಡೆದ ಸ್ಪರ್ಧೆ ಗೆದ್ದಿರುವ ಸೂರ್ಯನಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದೆಯಂತೆ. ಹೀಗಾಗಿ ಸೂರ್ಯ ಈಗಿನಿಂದಲೇ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ತಂದೆ ಅರುಣ್ ಅವರು ಮಾತನಾಡಿ, “ಮಕ್ಕಳು ಯಾವುದರಲ್ಲಿ ಆಶಕ್ತಿ ಹೊಂದಿರುತ್ತಾರೋ ಅದಕ್ಕೆ ನಾವು ಸಪೋರ್ಟ್ ಮಾಡಬೇಕು. ಅದೇ ರೀತಿ ನನ್ನ ಮಗ ಸೂರ್ಯ ಮೌಥಾಯ್ ನಲ್ಲಿ ತರಬೇತಿ ಪಡೆಯುತ್ತೇನೆ ಎಂದಾಗ ತುಂಬಾ ಖುಷಿಯಾಗಿತ್ತು. ಇದೀಗ ಈಗ ಅವನು ಭಾರತವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ್ದಾನೆ” ಎಂದು ಪುತ್ರನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ನಟ ಅರುಣ್ ಸಾಗರ್ ಅವರ ಮಗನ ಸಾಧನೆಗೆ ಸ್ಟಾರ್ ನಟರೂ ಕೂಡ ವಿಶ್ ಮಾಡಿದ್ದಾರೆ. ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಸೂರ್ಯಗೆ ಶುಭಾ ಕೋರಿದ್ದಾರೆ.