Tag: ಕ್ರೀಡೆ

  • Korea Open 2023: ಕೊರಿಯಾ ಓಪನ್ಸ್‌ ಗೆದ್ದ ಭಾರತದ ಸಾತ್ವಿಕ್‌-ಚಿರಾಗ್‌ ಜೋಡಿ – ಒಂದೇ ವರ್ಷದಲ್ಲಿ 3 ಬಾರಿ ಚಾಂಪಿಯನ್ಸ್‌

    Korea Open 2023: ಕೊರಿಯಾ ಓಪನ್ಸ್‌ ಗೆದ್ದ ಭಾರತದ ಸಾತ್ವಿಕ್‌-ಚಿರಾಗ್‌ ಜೋಡಿ – ಒಂದೇ ವರ್ಷದಲ್ಲಿ 3 ಬಾರಿ ಚಾಂಪಿಯನ್ಸ್‌

    ಜಕಾರ್ತ: ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಪ್ಲೇಯರ್ಸ್‌ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್‌ ಶೆಟ್ಟಿ (Chirag Shetty) ಜೋಡಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

    ಕಳೆದ ತಿಂಗಳಷ್ಟೇ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಸೂಪರ್‌-1000 (Indonesia Open 2023) ಈವೆಂಟ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಈ ಜೋಡಿ ಇದೇ ಮೊದಲಬಾರಿಗೆ ಪ್ರತಿಷ್ಠಿತ ಕೊರಿಯ ಓಪನ್-500 (Korea Open 2023) ಪ್ರಶಸ್ತಿ ಗೆದ್ದುಕೊಂಡು, ಸಾಧನೆ ಮಾಡಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲೇ ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ (BWF) ವಿಶ್ವಟೂರ್‌ ಗೆದ್ದ ವಿಶೇಷ ಸಾಧನೆಯನ್ನೂ ಈ ಜೋಡಿ ಮಾಡಿದೆ. ಇದನ್ನೂ ಓದಿ: Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

    ಭಾನುವಾರ (ಜು.23) ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾ ಜೋಡಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊಗೆ ಜೋಡಿಯನ್ನು ಬಗ್ಗು ಬಡಿದು ಸಾತ್ವಿಕ್‌-ಚಿರಾಗ್‌ ಜೋಡಿ ಪ್ರಶಸ್ತಿಗೆ ಮುತ್ತಿಟ್ಟಿದೆ. ಭರ್ಜರಿ ಪ್ರದರ್ಶನ ನೀಡಿದ್ದ ಸಾತ್ವಿಕ್‌-ಚಿರಾಗ್‌ ಎದುರಾಳಿಗಳನ್ನ 17-21, 21-13, 21-14 ಅಂತರದಲ್ಲಿ ಸೋಲಿಸಿದ್ದಾರೆ. ಆರಂಭದಲ್ಲಿ ಆರಂಭಿಕ ಗೇಮ್ಸ್‌ನಲ್ಲಿ 17-21 ಅಂತರದಲ್ಲಿ ಸೋತರೂ, ಮುಂದಿನ ಹಂತಗಳಲ್ಲಿ ಉತ್ತಮ ಕಂಬ್ಯಾಕ್‌ ಮಾಡುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

    ಮೊದಲ ಹಂತದಲ್ಲಿ 17-21 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತದ ಜೋಡಿ ಸೋಲುವುದು ಪಕ್ಕಾ ಎಂದು ಹೇಳಲಾಗಿತ್ತು. ಆದ್ರೆ 2-3ನೇ ರೌಂಡ್ಸ್‌ನಲ್ಲಿ ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

    ಸಾತ್ವಿಕ್‌ ಮತ್ತು ಚಿರಾಗ್ ಶೆಟ್ಟಿ ಜೋಡಿ, ಇದೇ ವರ್ಷ ಇಂಡೋನೇಷ್ಯಾ ಸೂಪರ್‌ 1000 ಹಾಗೂ ಸ್ವಿಸ್‌ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೀಗ ತಮ್ಮ ಅನುಭವದ ಆಟಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡಿ ಕೊರಿಯಾ ಓಪನ್​ ಟೂರ್ನಿಯನ್ನು ಗೆದ್ದು ವರ್ಷದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಇದರೊಂದಿಗೆ 2024ಕ್ಕೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

    Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

    ಕೋಲಾರ: ಸೌದಿ ಅರೇಬಿಯಾದಲ್ಲಿ (Saudi Arabia) ನಡೆದ ಸ್ನೂಕರ್‌ ವಿಶ್ವಚಾಂಪಿಯನ್‌ಶಿಪ್‌ (Snooker Championship 2023) ಟೂರ್ನಿಯಲ್ಲಿ ಕೋಲಾರದ ಕೆಜಿಎಫ್‌ ಯುವತಿ ಕೀರ್ತನಾ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್‌ ಟೂರ್ನಿಯಲ್ಲಿ ಕಂಚು, ಬೆಳ್ಳಿ ಗೆದ್ದು ಸಾಧನೆ ಮಾಡಿದ್ದ ಕೀರ್ತನಾ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

    ಹೌದು. ಕೋಲಾರದ (Kolar) ಜಿಲ್ಲೆಯ ಯುವಸಮೂಹಕ್ಕೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಛಲವಿದೆ ಬಿಡದೇ ಸಾಧಿಸುವ ಮನಸ್ಸಿದೆ ಅನ್ನೋದಕ್ಕೆ ಕೀರ್ತನಾ ಉದಾಹರಣೆಯಾಗಿದ್ದಾರೆ. ಅಂಡರ್ 16 ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21 ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ನಿವಾಸಿ ಪಾಂಡಿಯನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಕೀರ್ತನಾ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕೆಜಿಎಫ್‌ನ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಕೀರ್ತಿನಾ ಸದ್ದಿಲ್ಲದೇ ಸ್ನೂಕರ್‌ ಕ್ರೀಡೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸಾಗಿದ್ದಾಳೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    ಈಕೆಯ ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ಕ್ಲಬ್‌ನಲ್ಲಿ ನಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತನ್ನ ತಂದೆಯಿಂದಲೇ ಪ್ರೇರಣೆ ಪಡೆದ ಕೀರ್ತನಾ ಸ್ನೂಕರ್‌ನ ಕ್ಯೂ ಕೈಗೆತ್ತಿಕೊಂಡಿದ್ದಳು. ಬಿಡುವಿನ ವೇಳೆಯಲ್ಲಿ ಕೆಜಿಎಫ್ ನಗರದ ಬಿಇಎಂಎಲ್ ಕ್ಲಬ್ ನಲ್ಲಿರುವ ಬಿಲಿಯರ್ಡ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. 13ನೇ ವಯಸ್ಸಿಗೆ ಬಾಲ್‌ ಹೊಡೆಯಲಾರಂಭಿಸಿದ ಹುಡುಗಿ ಈಗ ಚಿನ್ನಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪದಕಗಳನ್ನ ಬಾಚಿಕೊಂಡಿದ್ದಾರೆ.

    2017ರಲ್ಲಿ ಚೀನಾದಲ್ಲಿ ನಡೆದ ಅಂಡರ್‌ 19 ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2018ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ ಹಾಗೂ ಚಿನ್ನದ ಪದಕ, 2022 ರಲ್ಲಿ ರೋಮಾನಿಯಾದಲ್ಲಿ ಕಂಚು ಗೆದ್ದು, ಇದೀಗ ಅಂಡರ್‌ 21 ನಲ್ಲಿ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಪ್ರೊಫೆಷನಲ್ಸ್ ಕ್ಲಬ್‌ಗಳಲ್ಲಿ ಭಾಗವಹಿಸಬೇಕು, ಇನ್ನಷ್ಟು ಪದಕಗಳನ್ನು ಗೆಲ್ಲಬೇಕು ಎಂಬುದು ಈಕೆಯ ಗುರಿಯಾಗಿದೆ. ಇದನ್ನೂ ಓದಿ: ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಾಕ್‌ ಆಟಗಾರ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

    Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

    ಜಕಾರ್ತ: ಜೂನ್‌ 18ರ ಸೂಪರ್‌ ಸಂಡೇನಲ್ಲಿ ನಡೆದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ (Indonesia Open Badminton) ವಿಶ್ವಟೂರ್‌ ಸೂಪರ್‌-1000 ಈವೆಂಟ್‌ನ (Super 1000 Event) ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಸೂಪರ್-1000 ಈವೆಂಟ್‌ನ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಚಿನ್ನದ ಪದಕ ಮತ್ತು 2022ರ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿಶ್ವದ ನಂ.6 ಜೋಡಿ, ಜಕಾರ್ತದಲ್ಲಿ ನಡೆದ ಟೂರ್ನಿಯಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಜೋಡಿಯನ್ನು 21-17, 21-18 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿ: ಮಹಿಳೆಯರ ಜೂನಿಯರ್ ಏಷ್ಯಾ ಕಪ್ – ಚೊಚ್ಚಲ ಟ್ರೋಫಿ ಗೆದ್ದ ಭಾರತ

    ಇದಕ್ಕೂ ಮುನ್ನ ಶನಿವಾರ ಈ ಜೋಡಿ ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್-ಸಿಯೊ ಸೆಯುಂಗ್ ಜೇ ಜೋಡಿಯನ್ನು 17-21, 21-19, 21-18 ಸೆಟ್‌ಗಳಿಂದ ಸೋಲಿಸಿ ಫೈನಲ್‌ ತಲುಪಿತ್ತು. ಏಷ್ಯನ್‌ ಚಾಂಪಿಯನ್‌ಶಿಪ್‌ ವಿಜೇತರೂ ಆಗಿರುವ ಭಾರತೀಯ ಜೋಡಿ 43 ನಿಮಿಷಗಳಲ್ಲಿ ಹಾಲಿ ವಿಶ್ವ ಚಾಂಪಿಯನ್ನರಿಗೆ ಮಣ್ಣುಮುಕ್ಕಿಸಿ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ವಿಶ್ವ ಟೂರ್‌ ಅನ್ನು ವರ್ಲ್ಡ್ ಟೂರ್ ಫೈನಲ್ಸ್, ಫೋರ್‌ ಸೂಪರ್ 1000, ಸಿಕ್ಸ್‌ ಸೂಪರ್ 750, ಸೆವೆನ್‌ ಸೂಪರ್ 500, ಮತ್ತು ಲೆವೆನ್‌ ಸೂಪರ್ 300 ಹಾಗೂ BWF ಟೂರ್ ಸೂಪರ್-100 6 ಹಂತಗಳಾಗಿ ವಿಭಾಗಿಸಿದೆ. ಈ ಹಂತಗಳಲ್ಲಿ ಶ್ರೇಯಾಂಕಗಳನ್ನ ನೀಡಲಾಗುತ್ತದೆ. ಪ್ರತಿ ಟೂರ್ನಿಯಲ್ಲಿ ವಿಭಿನ್ನ ರೀತಿಯ ರ‍್ಯಾಂಕಿಂಗ್‌ ಪಾಯಿಂಟ್ಸ್‌ ಹಾಗೂ ಬಹುಮಾನ ಮೊತ್ತ ನೀಡಲಾಗುತ್ತದೆ. ಅದೇ ರೀತಿ ಸೂಪರ್‌ 1000 ಹಂತದಲ್ಲಿ ಅಧಿಕ ರ‍್ಯಾಂಕಿಂಗ್‌ ಪಾಯಿಂಟ್ಸ್‌ ಹಾಗೂ ಬಹುಮಾನದ ಮೊತ್ತ ಸಿಗಲಿದೆ.

  • ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    `RRR’ ಸಿನಿಮಾ ರಿಲೀಸ್ ಆದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಚಿತ್ರದ ʻನಾಟು ನಾಟುʼ ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ (Ram Charan) ಭಾರತಕ್ಕೆ ಮರಳಿದ್ದಾರೆ.

    ಶುಕ್ರವಾರ ತವರಿಗೆ ಮರಳಿದ ಬಳಿಕ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಪಾತ್ರದ ಬಗ್ಗೆ ಕೇಳಿದಾಗ ವಿರಾಟ್‌ ಕೊಹ್ಲಿ (Virat Kohli) ಬಯೋಪಿಕ್‌ನಲ್ಲಿ ನಟಿಸುವಾಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    ಮೊದಲಿಗೆ ನಿಮ್ಮ ನೆಚ್ಚಿನ ಪಾತ್ರ ಯಾವುದು ಎಂದು ಕೇಳಿದಾಗ ಚರಣ್‌, ಕ್ರೀಡೆ ಆಧಾರಿತ ಸಿನಿಮಾದಲ್ಲಿ ಅಭಿನಯಿಸಲು ಇಷ್ಟಪಡುತ್ತೇನೆ. ಅದರಲ್ಲೂ ಕ್ರಿಕೆಟಿಗನಾಗಿ ನಟಿಸಲು ಬಯಸುತ್ತೇನೆ ಎಂದಿದ್ದಾರೆ. ಈ ನಡುವೆ ಟೀಂ ಇಂಡಿಯಾ (Team India) ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಬಯೋಪಿಕ್‌ನಲ್ಲಿ ಏಕೆ ನಟಿಸಬಾರದು? ಎಂದು ಪ್ರಶ್ನಿಸಿದ್ದಕ್ಕೆ, ನಿಜಕ್ಕೂ ಅವರು ಸ್ಫೂರ್ತಿದಾಯಕ. ಒಂದೇ ಒಂದು ಅವಕಾಶ ನೀಡಿದ್ರೂ ಅದ್ಭುತವಾಗಿರುತ್ತೆ. ನಾನೂ ಅದೇ ರೀತಿ ಕಾಣಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್‌ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್‌ ಬುಕ್‌ ಮಾಡೋದು ಹೇಗೆ..?

    ಶುಕ್ರವಾರ  ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಆರಂಭದ ವೇಳೆ ವಿರಾಟ್‌ ಕೊಹ್ಲಿ ಮೈದಾನದಲ್ಲೇ ನಾಟು-ನಾಟು ಹಾಡಿಗೆ ಸ್ಟೆಪ್‌ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು.

  • ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

    ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

    ಲಕ್ನೋ: ನನ್ನ ಕ್ರೀಡಾ ಜೀವನದ ಆರಂಭ ದಿನಗಳು ಅಷ್ಟೊಂದು ಸುಖಕರವಾಗಿರಲಿಲ್ಲ ಎಂದು ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ (Strandja Memorial Boxing Tournament) ಚಾಂಪಿಯನ್‍ಶಿಪ್ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಗೋವಿಂದ್ ಕುಮಾರ್ ಸಹಾನಿ ತಮ್ಮ ಕ್ರೀಡಾ ಜೀವನದ ಆರಂಭವನ್ನು ಮೆಲಕು ಹಾಕಿದ್ದಾರೆ.

    ಗೋರಖ್‍ಪುರದ (Gorakhpur) ರೈತನ (Farmer) ಮಗನಾಗಿ ಜನಿಸಿದ ನಾನು ನನ್ನ ತಂದೆ ತಾಯಿಗೆ ನಾಲ್ಕನೆ ಮಗ. ನಾನು ಕರಾಟೆ ಮತ್ತು ಬಾಕ್ಸಿಂಗ್‍ನಲ್ಲಿ ತೊಡಗಿಸಿಕೊಂಡೆ. ಕುಟುಂಬವನ್ನು ನಿರ್ವಹಿಸಿಕೊಂಡು ನನ್ನ ಕ್ರೀಡೆಗೆ ಹಣ ವ್ಯಯಿಸುವುದು ಕುಟುಂಬಕ್ಕೆ ಕಷ್ಟವಾಗುತ್ತಿತ್ತು. ನನ್ನ ಕುಟುಂಬ ಸಂಪಾದನೆಗಾಗಿ ಕಷ್ಟಪಡುತ್ತಿತ್ತು. ನನ್ನ ಕ್ರೀಡೆಯ ಕನಸಿಗೆ ತಾಯಿ ಆಗೆಲ್ಲ ಗದರಿಸುತ್ತಿದ್ದರು ಎಂದರು. ಇದನ್ನೂ ಓದಿ:  ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ 50 ಪರ್ಸೆಂಟ್‌ ಆಫರ್‌ – ದಂಡ ಕಟ್ಟಲು ಮತ್ತೆ 15 ದಿನ ಅವಧಿ ವಿಸ್ತರಣೆ

    ನಾನು ತರಬೇತಿ ಆರಂಭಿಸಿದಾಗ ನನ್ನ ತಾಯಿ ಸಮಯ ಮತ್ತು ಹಣ (Money) ಎರಡನ್ನು ಹಾಳು ಮಾಡುತ್ತಿದ್ದಿಯಾ ಎನ್ನುತ್ತಿದ್ದರು. ಮಧ್ಯಮ ವರ್ಗದ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಅದನ್ನೆಲ್ಲ ನಗುತ್ತಾ ಸಹಿಸಿಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.

    ಭಾರತದ ಬಾಕ್ಸರ್‍ಗಳು ಮೂರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳೊಂದಿಗೆ ಹಿಂತಿರುಗಿದ್ದಾರೆ. ಉಜ್ಬೆಕಿಸ್ಥಾನದ (Uzbekistan) ಶೋಡಿಯೋರ್ಜಾನ್  ಮೆಲಿಕುಝಿವ್  (Shodiyorjon Melikuziev) ಚಿನ್ನವನ್ನು ಕಳೆದುಕೊಂಡರು.

    ನನ್ನ ತಾಯಿಯ ನಿರಂತರ ನಿಂದನೆಯಿಂದ ತಪ್ಪಿಸಿಕೊಳ್ಳಲು ನಾನು 2011ರಲ್ಲಿ ಮನೆ ತೊರೆದು ಹಾಸ್ಟೆಲ್ ಸೇರಿದೆ. ಹಣ ಕೇಳಲು ಮನೆಗೆ ಹೋಗುತ್ತಿರಲಿಲ್ಲ. ಕೆಲವು ವರ್ಷಗಳು ಕಳೆದ ನಂತರ ನನ್ನ ಸುದ್ದಿ ಹರದಾಡಲು ಆರಂಭಿಸಿತು. ಆಗ ನನ್ನ ಕುಟುಂಬಕ್ಕೆ ಹಣ ವ್ಯರ್ಥ ಮಾಡುತ್ತಿಲ್ಲ ಎಂಬುದು ಮನವರಿಕೆಯಾಯಿತು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ

  • Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ

    Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ ಬಜೆಟ್‍ನಲ್ಲಿ (Union Budget 2023) ಕ್ರೀಡಾ ಕ್ಷೇತ್ರಕ್ಕೆ (Sports) ದಾಖಲೆಯ 3,397.32 ಕೋಟಿ ರೂ. ಮೀಸಲಿಡಲಾಗಿದೆ.

    ಈವರೆಗಿನ ಬಜೆಟ್‍ನಲ್ಲಿ ಇಷ್ಟು ದೊಡ್ಡ ಮೊತ್ತದ ಅನುದಾನ ಕ್ರೀಡಾಗೆ ನೀಡಿರಲಿಲ್ಲ. ಈ ಬಾರಿ ದಾಖಲೆಯ ಮೊತ್ತದ ಅನುದಾನ ನೀಡಲಾಗಿದೆ. 2023ರ ಏಷ್ಯನ್ ಗೇಮ್ಸ್ (Asian Games), ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಸಿದ್ಧತೆಗಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಖೇಲೋ ಇಂಡಿಯಾಗಾಗಿ (Khelo India) 1,045 ಕೋಟಿ ರೂ. ಅನುದಾನ ನೀಡಲಾಗಿದೆ. ಇದನ್ನೂ ಓದಿ: Union Budget 2023: ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ – ಯಾವುದು ಇಳಿಕೆ? ಯಾವುದು ಏರಿಕೆ?

    ಈ ಬಾರಿಯ ಬಜೆಟ್‍ನಲ್ಲಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್‍ಗೆ 325 ಕೋಟಿ ರೂ. ನೆರವು ನೀಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಈ ಬಾರಿ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗಾಗಿ 785.52 ಕೋಟಿ ರೂ. ಅನುದಾನ ನೀಡಲಾಗಿದೆ. 2022-2023ನೇ ಸಾಲಿನ ಬಜೆಟ್‍ನಲ್ಲಿ ಕ್ರೀಡೆಗೆ ನೀಡಿದ್ದ ಅನುದಾನ ಈ ಬಾರಿ 358.5 ಕೋಟಿ ರೂ.ಗೆ ಏರಿಕೆ ಕಂಡಿದ್ದು, 2022-2023ನೇ ಸಾಲಿನಲ್ಲಿ 2,757 ಕೋಟಿ ರೂ. ಅನುದಾನ ನೀಡಲಾಗಿತ್ತು. ಇದನ್ನೂ ಓದಿ: Union Budget 2023: 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

    2023-24 ಕ್ರೀಡಾ ಬಜೆಟ್ ಹಂಚಿಕೆ:
    ಖೇಲೋ ಇಂಡಿಯಾ: 1,045 ಕೋಟಿ ರೂ.
    ಸಾಯಿ: 785.52 ಕೋಟಿ ರೂ.
    ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು: 325 ಕೋಟಿ ರೂ.
    ರಾಷ್ಟ್ರೀಯ ಸೇವಾ ಯೋಜನೆ: 325 ಕೋಟಿ ರೂ.
    ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ: 15 ಕೋಟಿ ರೂ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ರೀಡಾಪಟುಗಳ ಫ್ಯಾಕ್ಟರಿ ಖೇಲೋ ಇಂಡಿಯಾ

    ಕ್ರೀಡಾಪಟುಗಳ ಫ್ಯಾಕ್ಟರಿ ಖೇಲೋ ಇಂಡಿಯಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿ20ಯಿಂದ ಟಿ10ನತ್ತ ಕ್ರಿಕೆಟ್

    ಟಿ20ಯಿಂದ ಟಿ10ನತ್ತ ಕ್ರಿಕೆಟ್

    ಆಂಗ್ಲರ ನಾಡಲ್ಲಿ ಜನಕವಾದ ಕ್ರಿಕೆಟ್ (Cricket) ಇದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಫುಟ್‍ಬಾಲ್ (Football) ಬಿಟ್ಟರೆ ಜನ ಕ್ರಿಕೆಟ್‍ಗೆ ಹೆಚ್ಚು ಮರುಳಾಗಿದ್ದಾರೆ. ಅದರಲ್ಲೂ ಮೂರು ಮಾದರಿ ಕ್ರಿಕೆಟ್‍ನಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ಗಿಂತ ಟಿ20 ಮಾದರಿ (T20) ಕ್ರಿಕೆಟ್‍ಗೆ ಜನ ಹೆಚ್ಚು ಮನಸೋತಿದ್ದಾರೆ.

    ಕ್ರಿಕೆಟ್ ಆರಂಭಿಕ ಘಟ್ಟದಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಇದ್ದಂತಹ ಮಹತ್ವ 50 ಓವರ್‌ಗಳ ಪಂದ್ಯ (ಏಕದಿನ ಕ್ರಿಕೆಟ್) ಆರಂಭವಾದ ಬಳಿಕ ಕುಗ್ಗಿತು. ಟೆಸ್ಟ್ ಎಂದರೆ 5 ದಿನಗಳ ಕಾಲ ನಡೆಯುವ ಸುದೀರ್ಘ ಕ್ರಿಕೆಟ್ ಪಂದ್ಯಾಟ. ಕ್ರಮೇಣ ಜನ ಟೆಸ್ಟ್ ಕ್ರಿಕೆಟ್‍ಗೆ ಬದಲಾವಣೆ ಬೇಕು ಎಂದು ಬಯಸತೊಡಗಿದರು. ಆಗ ಪರ್ಯಾಯವಾಗಿ 50 ಓವರ್‌ಗಳ ಪಂದ್ಯ ನಡೆಸಲು ತೀರ್ಮಾನಿಸಿ ಒಂದೇ ದಿನದಲ್ಲಿ ಮುಗಿಸುವ ರೀತಿ ಆಡಲು ಪ್ರಾರಂಭಿಸಲಾಯಿತು. ಏಕದಿನ ಕ್ರಿಕೆಟ್ 9 ರಿಂದ 10 ಗಂಟೆಗಳ ಕಾಲ ಆಡಿ ಫಲಿತಾಂಶ ಹೊರಬರುವಂತಾಯಿತು. ಇದು ಕೂಡ ಕೆಲ ಸಮಯಗಳ ಬಳಿಕ ಅಭಿಮಾನಿಗಳಿಗೆ ಬೋರ್ ಹೊಡೆಸಿತು. ಬಳಿಕ 20 ಓವರ್‌ಗಳಿಗೆ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ಈ ಮೂಲಕ ಟಿ20 ಮಾದರಿ ಕ್ರಿಕೆಟ್‍ನಲ್ಲಿ ಹೊಸ ಹುರುಪು ತರಿಸಿತು. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಟಿ20 ಮಾದರಿ ಕ್ರಿಕೆಟ್ ಇದೀಗ ವಿಶ್ವ ಕ್ರಿಕೆಟ್‍ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಕ್ರಿಕೆಟ್ ಮಾತ್ರವಲ್ಲ, ಓಟದ ಸ್ಪರ್ಧೆಗಳಲ್ಲಿ ನೀವು ನೋಡಿರಬಹುದು. 100 ಮೀ, 200 ಮೀ ಓಟಕ್ಕಿರುವ ಪ್ರಾಶಸ್ತ್ಯ 1,500 ಮೀ, 5,000 ಮೀ ಓಟದ ಸ್ಪರ್ಧೆಗಿಲ್ಲ. ವಿಶ್ವದಾದ್ಯಂತ ಹುಸೇನ್ ಬೋಲ್ಟ್ ಎಲ್ಲರಿಗೂ ಗೊತ್ತು. ಆದರೆ ಮೋ ಫರಾಹ್ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಒಲಿಪಿಂಕ್ಸ್‌ನಲ್ಲಿ 100, 200 ಮೀ.ನಲ್ಲಿ ಬೋಲ್ಟ್ ಚಿನ್ನದ ಪದಕ ಪಡೆದ ವೇಗದ ಓಟಗಾರ. ಆದರೆ ಮೋ ಫರಾಹ್ ಅದೇ ಒಲಿಂಪಿಕ್ಸ್‌ನಲ್ಲಿ 5,000 ಮೀ. ಓಟದಲ್ಲಿ ಚಿನ್ನ ಗೆದ್ದ ಓಟಗಾರ. ಆದರೆ ಆತನನ್ನು ಯಾರು ಹೆಚ್ಚಾಗಿ ಗಮನಿಸಲಿಲ್ಲ. ಯಾಕೆಂದರೆ ಲಾಂಗ್ ರನ್ನಿಂಗ್ ಮತ್ತು ಶಾರ್ಟ್ ರನ್ನಿಂಗ್ ನಡುವಿನ ವ್ಯಾತ್ಯಾಸ. ಇಬ್ಬರೂ ಕೂಡ ಚಿನ್ನದ ಸಾಧನೆಗೈದವರೆ. ಆದರೆ ವೇಗದ ನಡುವೆ ನಿಧಾನ ನಿಲ್ಲಲಿಲ್ಲ. ಹಾಗೆ ಕ್ರಿಕೆಟ್‍ನಲ್ಲೂ ಸುದೀರ್ಘ ಕ್ರಿಕೆಟ್ ಅಭಿರುಚಿ ಕಡಿಮೆಯಾಗುತ್ತಿದ್ದಂತೆ, ಜನ ಶಾರ್ಟ್ ಫಾರ್ಮೆಟ್ ಬೇಕೆಂಬ ಯೋಚನೆಗೆ ಮುಂದಾದರು.

    ಟಿ20 ಮಾದರಿ
    ಟಿ20, 20 ಓವರ್‌ಗಳ ಪಂದ್ಯ ಕೇವಲ 4 ಗಂಟೆಯಲ್ಲಿ ಪಂದ್ಯವನ್ನು ಮುಗಿಸುವ ಫಾರ್ಮೆಟ್ ಇದು. ಟಿ20 ಮಾದರಿ ಜಾರಿಗೆ ಬಂದ ಬಳಿಕ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಮಾದರಿ ಕ್ರಿಕೆಟ್‍ಗಿಂತ ಹೆಚ್ಚು ಜನಪ್ರಿಯವಾಯಿತು. ಏಕೆಂದರೆ ಇಲ್ಲಿ ಬ್ಯಾಟ್ಸ್‌ಮ್ಯಾನ್‌ಗಳ ಮನಮೋಹಕ ಹೊಡೆತ ನೋಡುವುದೇ ಒಂದು ಹಬ್ಬ. ಟಿ20 ಫಾರ್ಮೆಟ್‍ನಲ್ಲಿ ಇದೀಗ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದು 360 ಡಿಗ್ರಿ ಬ್ಯಾಟಿಂಗ್. ಈ ಹಿಂದೆಯೇ ಟಿ20 ಕ್ರಿಕೆಟ್ ಎಂದರೆ ಅದು ಬ್ಯಾಟ್ಸ್‌ಮ್ಯಾನ್‌ಗಳ ಸ್ವರ್ಗ ಎಂಬ ಮಾತಿದೆ. ಇಲ್ಲಿ ಬೌಲರ್‌ಗಳ ಪಾಡು ಬಹಳ ಅನಾಯಸ. ಬ್ಯಾಟಿಂಗ್‍ನಲ್ಲಿ ಬೌಂಡರಿ, ಸಿಕ್ಸ್ ಚಚ್ಚುವ ಪರಿಗೆ ಬೌಲರ್ ಬೆಂಡಾಗುವುದೇ ಟಿ20 ಕ್ರಿಕೆಟ್. ಇಲ್ಲಿ ಹೊಡಿಬಡಿ ಆಟಗಾರ ಎಂದರೇ ಕ್ರಿಕೆಟ್ ಪ್ರಿಯರಿಗೆ ಅಚ್ಚುಮೆಚ್ಚು. ಅದರಲ್ಲೂ ಇದೀಗ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ಗಳಿಗೆ ಹೆಚ್ಚಿನ ಬೇಡಿಕೆ. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

    360 ಡಿಗ್ರಿ ಬ್ಯಾಟಿಂಗ್
    ಟಿ20 ಮಾದರಿಯಲ್ಲೂ ಇದೀಗ ಹೆಚ್ಚು ಬೇಡಿಕೆ ಇರುವುದು, ಮೈದಾನದ ಮೂಲೆ ಮೂಲೆಗೂ ಹೊಡೆದು ಭರ್ಜರಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಆಟಗಾರನಿಗೆ. 360 ಡಿಗ್ರಿ ಬ್ಯಾಟ್ಸ್‌ಮ್ಯಾನ್ ಎಂದರೆ ಆತ ಯಾವುದೇ ಎಸೆತವನ್ನು ಮೈದಾನದ ಯಾವುದೇ ಮೂಲೆಗೂ ಹೊಡೆದಾಡುವ ಶಕ್ತಿ ಇರುವ ದಾಂಡಿಗ. ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಬಿ‌ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ ಎಂದೇ ಖ್ಯಾತರಾಗಿದ್ದವರು. ಅವರನ್ನು ಹೊರತುಪಡಿಸಿದರೆ ಇದೀಗ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ ಆಗಿ ಭಾರತದ ಆಟಗಾರ ಸೂರ್ಯ ಕುಮಾರ್ ಯಾದವ್ ಗುರುತಿಸಿಕೊಂಡಿದ್ದಾರೆ. ಇವರ ಆಟ ನೋಡಲು ಅಭಿಮಾನಿಗಳು ಹೆಚ್ಚು ಇಷ್ಟ ಪಡುತ್ತಾರೆ. ಹಾಗಾಗಿ ಈ ಹೊಡಿಬಡಿ ಆಟ ಇನ್ನಷ್ಟು ರೋಚಕತೆ ಮೂಡಿಸಿದೆ. ಈ ನಡುವೆ ಟಿ20 ಮಾದರಿಯಿಂದ ಜನ ಬದಲಾವಣೆ ಬಯಸುತ್ತಿದ್ದಾರೆ.

    ಟಿ10ನತ್ತ ಚಿತ್ತ
    ಇದೀಗ ಕ್ರಿಕೆಟ್ ಪ್ರಿಯರ ದೃಷ್ಟಿ ಟಿ20 ಯಿಂದ ಟಿ10ನತ್ತ (T10) ನೆಟ್ಟಿದೆ. 20 ಓವರ್‌ಗಳ ಪಂದ್ಯಕ್ಕಿಂತಲೂ 10 ಓವರ್‌ಗಳ ಪಂದ್ಯದೆಡೆಗೆ ಸಾಗುತ್ತಿದೆ. ಈಗಾಗಲೇ ದುಬೈ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾಗಳಲ್ಲಿ ಟಿ10 ಮಾದರಿ ಲೀಗ್ ಯಶಸ್ಸು ಕಂಡಿದೆ. ಇದು ಟಿ20 ಗಿಂತ ಕಡಿಮೆ ಅವಧಿಯಲ್ಲಿ ಮುಗಿಯುತ್ತಿದ್ದು, ಕೇವಲ 2 ಗಂಟೆಯಲ್ಲಿ ಹೆಚ್ಚು ಅಬ್ಬರ ಕಾಣಸಿಗುವಂತಾಗಿಸಿದೆ. ಜನ ನಿಧಾನವಾಗಿ ಟಿ10 ಕ್ರಿಕೆಟ್‍ನತ್ತ ಮುಖ ಮಾಡುತ್ತಿದ್ದಾರೆ.

    ಮುಂದಿನ ದಿನಗಳಲ್ಲಿ ಇದು ಕೂಡ ಬದಲಾಗಬಹುದು. ಜನ ಸಮಯದ ಅಭಾವದಿಂದಾಗಿ 10 ರಿಂದ 5 ಓವರ್‌ಗಳ ಪಂದ್ಯದ ಕಡೆಗೂ ಸಾಗಬಹುದು. ಈ ರೀತಿಯ ಟೂರ್ನಿ ಲೋಕಲ್ ಆಟದಲ್ಲಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಕಾಣಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ. ಇದನ್ನೂ ಓದಿ: ತನ್ನ ವಿಕೆಟ್ ಪಡೆದ ಬಾಂಗ್ಲಾ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

    Live Tv
    [brid partner=56869869 player=32851 video=960834 autoplay=true]

  • ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಬಾಲಕಿಯರ ಕಬಡ್ಡಿ ಪಂದ್ಯಾಟಕ್ಕೆ ಟಾಯ್ಲೆಟ್‌ನಲ್ಲಿ ಊಟ ತಯಾರಿ!

    ಲಕ್ನೋ: ಉತ್ತರಪ್ರದೇಶದ (Uttar Pradesh) ಸಹರಾನ್ ಪುರದಲ್ಲಿ ನಡೆದ ಬಾಲಕಿಯರ (Girls) ಕಬಡ್ಡಿ ಟೂರ್ನಿ (Kabaddi Tournament) ವೇಳೆ ಶೌಚಾಲಯದಲ್ಲಿ (Toilet) ಬೇಯಿಸಿದ ಆಹಾರವನ್ನೇ ಕ್ರೀಡಾಪಟುಗಳಿಗೆ ಬಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಶೌಚಾಲಯ ನೆಲದ ಮೇಲೆ ಬೇಯಿಸಿದ ಅನ್ನದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ವಿವಾದ ಬುಗಿಲೆದ್ದಿದೆ. ಇದನ್ನೂ ಓದಿ: ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಶುಕ್ರವಾರ (ಸೆಪ್ಟೆಂಬರ್ 16) ದಿಂದ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಅಂಡರ್-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ (Kabaddi Tournament) ಭಾಗವಹಿಸಿದ್ದ ಸುಮಾರು 200 ಕ್ರೀಡಾಪಟುಗಳಿಗೆ ಶೌಚಾಲಯದ ನೆಲದಲ್ಲಿ ಬೇಯಿಸಿದ ಆಹಾರವನ್ನೇ (Food) ನೀಡಲಾಗಿದೆ. ಜೊತೆಗೆ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿತ್ತು. ಅದನ್ನೇ ಆಟಗಾರರಿಗೆ ಬಡಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.

    ಈ ಆರೋಪ ತಳ್ಳಿಹಾಕಿರುವ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಅವರು, ಇದು ಆಧಾರ ರಹಿತ ಆರೋಪ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡೋ ಬದ್ಲು, ಸಚಿವ ಸ್ಥಾನ ನೀಡಿ: ಬಿಜೆಪಿ MLC

    ಇಲ್ಲಿ ಆಟಗಾರರಿಗೆ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆ. ಅಕ್ಕಿ, ದಾಲ್, ಸಬ್ಜಿ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ಈಜುಕೊಳದ (Swimming Pool) ಬಳಿಯೇ ಸಾಂಪ್ರದಾಯಿಕ ಇಟ್ಟಿಗೆ ಒಲೆಯಲ್ಲಿ ದೊಡ್ಡ ಪಾತ್ರೆಗಳಲ್ಲಿ ಸಿದ್ಧಪಡಿಸಿ ಕೊಡಲಾಗಿದೆ. ಸ್ಥಳದ ಕೊರತೆಯಿದ್ದರಿಂದಾಗಿ ಕ್ರೀಡಾಂಗಣದ ಪೂಲ್ ಬಳಿಯೇ ಅಡುಗೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೆಲ ಆಟಗಾರರು ಕ್ರೀಡಾಂಗಣದ ಅಧಿಕಾರಿಗಳ ಮುಂದೆ ವಿಷಯ ಪ್ರಸ್ತಾಪಿಸಿದ ಬಳಿಕ ಅನಿಮೇಶ್ ಸಕ್ಸೇನಾ ಅಡುಗೆಯವರಿಗೆ ಛೀಮಾರಿ ಹಾಕಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

    ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

    ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್‌ ರೈನಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸೇರಿದಂತೆ ಎಲ್ಲಾ ಮಾದರಿಯ ದೇಶಿ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿದ ಅವರು, ನನ್ನ ದೇಶ ಮತ್ತು ರಾಜ್ಯ ಉತ್ತರ ಪ್ರದೇಶವನ್ನು ಪ್ರತಿನಿಧಿಸುವುದು ಒಂದು ಗೌರವ. ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಕೆಲ ದಿನಗಳಿಂದ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ರೈನಾ 2023ರ ಐಪಿಎಲ್‌ನಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿತ್ತು.  ಸೋಮವಾರ ಟ್ವಿಟ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೋ ಅಪ್ಲೋಡ್‌ ಮಾಡಿದ್ದರು. ಆದರೆ ಈಗ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

    2020ರಲ್ಲಿ ಎಂ.ಎಸ್‌ ಧೋನಿ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಿನವೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದನ್ನೂ ಓದಿ: ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ಐಪಿಎಲ್‌ 2022 ಟೂರ್ನಿ ಸಲುವಾಗಿ ನಡೆದ ಮೆಗಾ ಆಕ್ಷನ್‌ಗೂ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸುರೇಶ್‌ ರೈನಾ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಯ ಹೊಂದಿದ್ದ ರೈನಾ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಕೋವಿಡ್‌ ಕಾರಣದಿಂದ ಐಪಿಎಲ್‌ 2021ರಲ್ಲಿ ಆಡಿರಲಿಲ್ಲ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಇನ್ನು 2-3 ವರ್ಷ ಕ್ರಿಕೆಟ್‌ ಆಡುವ ಬಯಕೆಯನ್ನು ಹೊಂದಿದ್ದೇನೆ. ಇಂದು ಉತ್ತರ ಪ್ರದೇಶದ ತಂಡ ಪ್ರತಿಭಾನ್ವಿತ ಆಟಗಾರನ್ನು ಹೊಂದಿದೆ. ಹೀಗಾಗಿ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಡಲು ಉತ್ತರ ಪ್ರದೇಶ ಕ್ರಿಕೆಟ್‌ ಬೋರ್ಡ್‌ನಿಂದಲೂ ಎನ್‌ಒಸಿ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

    ವಿಶ್ವದ ವಿವಿಧ ಲೀಗ್‌ಗಳಲ್ಲಿ ಆಡುವ ಉದ್ದೇಶ ಹೊಂದಿದ್ದೇನೆ. ದಕ್ಷಿಣ ಆಫ್ರಿಕಾ, ಯುಎಇ ಮತ್ತು ಶ್ರೀಲಂಕಾದ ಫ್ರಾಂಚೈಸಿಗಳು ಈಗಾಗಲೇ ನನ್ನನ್ನು ಸಂಪರ್ಕಿಸಿವೆ. ನನ್ನ ವೃತ್ತಿಬದುಕಿಗೆ ನೆರವಾದ ಬಿಸಿಸಿಐ ಮತ್ತು ಯುಪಿಸಿಎಗೆ ಧನ್ಯವಾದ. ನನ್ನ ನಿರ್ಧಾರದ ಬಗ್ಗೆ ಬಿಸಿಸಿಐಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ಐಪಿಎಲ್‌ನಲ್ಲಿ 5,000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ಸುರೇಶ್‌ ರೈನಾ ಹೊಂದಿದ್ದಾರೆ. ಈವರೆಗೆ ಆಡಿದ 205 ಪಂದ್ಯಗಳಿಂದ 5,528 ರನ್‌ ಹೊಡೆದಿದ್ದಾರೆ.

    ಸುಮಾರು 13 ವರ್ಷಗಳ ಕಾಲ ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಸುರೇಶ್ ರೈನಾ, 18 ಟೆಸ್ಟ್, 226 ಏಕದಿನ ಪಂದ್ಯಗಳು ಹಾಗೂ 78 ಟಿ20 ಪಂದ್ಯಗಳನ್ನ ಆಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಸರಿಸುಮಾರು 8,000 ರನ್‍ಗಳನ್ನ ಪೂರೈಸಿದ್ದಾರೆ. ಅಲ್ಲದೇ 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿಗೆ ಸುರೇಶ್ ರೈನಾ ಅವರ ಪಾತ್ರವೂ ಅಪಾರವಾಗಿದೆ. ಕೆಲ ಪಂದ್ಯಗಳಲ್ಲಿ ನಾಯಕನಾಗಿಯೂ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]