Tag: ಕ್ರೀಡೆ

  • ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್

    ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂಗ್ಲೆಂಡ್‍ನಲ್ಲಿ ಪಂದ್ಯ ಮುಗಿಸಿ ಪತ್ನಿ, ಮಗಳ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಧೋನಿ ಪುತ್ರಿ ಜೀವಾ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಾಜಿ ಕೇಂದ್ರ ಮಂತ್ರಿ ಹಾಗೂ ಎನ್‍ಸಿಪಿಯ ಕದ್ವಾರ್ ಮಂತ್ರಿ ಪ್ರಫುಲ್ ಪಟೇಲ್ ಮಗಳು ಪೂರ್ಣ ಪಟೇಲ್ ಜೊತೆ ನಮಿತ್ ಸೋನಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಧೋನಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.

    ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮದ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಧೋನಿ ಪುತ್ರಿ ಜೀವಾ ಡ್ಯಾನ್ಸ್ ವಿಡಿಯೋ ಸಹ ವೈರಲ್ ಅಗಿದೆ. ಇಂಗ್ಲಿಷ್ ಹಾಡಿಗೆ ಜೀವಾ ತನಗೆ ತೋಚಿದಂತೆ ನೃತ್ಯ ಮಾಡುತ್ತಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಮದುವೆಯಲ್ಲಿ ಧೋನಿ ಕುಟುಂಬ ಹೊರತುಪಡಿಸಿ ಜಹೀರ್ ಖಾನ್ ಮತ್ತು ಪತ್ನಿ ಸಾಗರಿಕಾ, ಯುವರಾಜ್ ಸಿಂಗ್ ಕೂಡ ಭಾಗಿಯಾಗಿದ್ದರು.

  • ಅಭಿಮಾನಿಗಳ ದೇಶಭಕ್ತಿ ಕಂಡು ಎಮೋಶನಲ್ ಆದ್ರು ವಿರಾಟ್: ವಿಡಿಯೋ ವೈರಲ್

    ಅಭಿಮಾನಿಗಳ ದೇಶಭಕ್ತಿ ಕಂಡು ಎಮೋಶನಲ್ ಆದ್ರು ವಿರಾಟ್: ವಿಡಿಯೋ ವೈರಲ್

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲಂಡ್‍ನಲ್ಲಿರುವ ಅಭಿಮಾನಿಗಳ ದೇಶಭಕ್ತಿಯನ್ನು ಕಂಡು ಎಮೋಶನಲ್ ಆಗಿದ್ದಾರೆ.

    ಇಂದು ಭಾರತ ತಂಡ ಮೂರನೇ ಏಕದಿನ ಪಂದ್ಯವಾಡುತ್ತಿದೆ. ಪಂದ್ಯವಾಡುವ ಮೊದಲು ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಶೇರ್ ಮಾಡಿ ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕ್ರಿಕೆಟ್ ಮೈದಾನದಲ್ಲಿ ರಾಷ್ಟ್ರಗೀತೆ ಮೊಳಗುವಾಗ ಅಭಿಮಾನಿಗಳು ಸ್ಟೇಡಿಯಂನಲ್ಲಿ ನಿಂತಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಅಭಿಮಾನಿಗಳು ಒಂದೇ ರಾಗದಲ್ಲಿ ತುಂಬು ಹೃದಯದಿಂದ ರಾಷ್ಟ್ರಗೀತೆ ಹಾಡಿದ್ದಾರೆ. ಇಡೀ ಸ್ಟೇಡಿಯಂನಲ್ಲಿ ‘ಜನ ಗಣ ಮನ’ ಹಾಡು ಕೇಳಿಬರುತ್ತಿತ್ತು.

    ಈ ವಿಡಿಯೋವನ್ನು ನೋಡಿದ ವಿರಾಟ್ ಅಭಿಮಾನಿಗಳ ಅಭಿಮಾನಿ ಆಗಿದ್ದಾರೆ. “ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಯಿತ್ತು. ನಿರಂತರವಾಗಿ ಯಾವುದೇ ಷರತ್ತಿಲ್ಲದೇ ನಮ್ಮನ್ನು ಬೆಂಬಲಿಸುತ್ತಿರುವುದ್ದಕ್ಕೆ ಧನ್ಯವಾದಗಳು. ನಿಮ್ಮ ಈ ಪ್ರೀತಿ ನಮಗೆ ಇನ್ನಷ್ಟು ಪರಿಶ್ರಮ ಪಡಲು ಪ್ರೇರೆಪಿಸುತ್ತದೆ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಟೀಂ ಇಂಡಿಯಾ ಏಕದಿನ ಪಂದ್ಯದಲ್ಲಿ ಒಂದು ಪಂದ್ಯವನ್ನು ಗೆದ್ದು, ಮತ್ತೊಂದು ಪಂದ್ಯದಲ್ಲಿ ಸೋತಿದ್ದು, ಇಂದು ಕೊನೆಯ ಪಂದ್ಯವನ್ನು ಆಡುತ್ತಿದೆ.

  • ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

    ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

    ಉಡುಪಿ: ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಕುಂದಾಪುರದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

    25 ಲಕ್ಷ ರೂ. ಪ್ರೋತ್ಸಾಹ ಧನವನ್ನೂ ನೀಡಿಲ್ಲ, ಉದ್ಯೋಗವನ್ನೂ ಕೊಡಿಸಿಲ್ಲ. ದೇಶಕ್ಕಾಗಿ ಪದಕ ಗೆದ್ದು ಕೊಟ್ಟು ಮೂರು ತಿಂಗಳು ಕಳೆದರೂ ಈ ಬಡ ಕ್ರೀಡಾಪಟುವಿಗೆ ಸರ್ಕಾರದ ಆರ್ಥಿಕ ನೆರವು ತಲುಪಿಲ್ಲ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದ ಈ ವೇಟ್ ಲಿಫ್ಟಿಂಗ್, ಫೈಲುಗಳನ್ನು ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಎದುರಿಸಬೇಕಾಗಿದೆ.

    ಬಡತನದಲ್ಲೇ ಕಷ್ಟಪಟ್ಟು ಸಾಧನೆ ಮಾಡಿರುವ ಗುರುರಾಜ್ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆಯನ್ನು ಗುರುರಾಜ್ ಆರಂಭಿಸಿದ್ದರು. 56 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಈ ಮೂಲಕ ದಿನ ಬೆಳಗಾಗೋದ್ರೊಳಗೆ ಕರ್ನಾಟಕದ ಈ ಕ್ರೀಡಾಪಟು, ಭಾರತದಾದ್ಯಂತ ಮನೆ ಮಾತಾದ್ರು. ಅಷ್ಟೇ ಯಾಕೆ ನಮ್ಮ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಬಹುಮಾನವಾಗಿ 25 ಲಕ್ಷ ರೂ. ಘೋಷಿಸಿತ್ತು. ಅಲ್ಲದೇ ಗುರುರಾಜ್ ಗೆ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿತ್ತು. ಈ ಭರವಸೆ ನೀಡಿ ಸುಮಾರು ಮೂರು ತಿಂಗ್ಳಾದ್ರೂ ಇದೂವರೆಗೂ ಬಹುಮಾನವೂ ಇಲ್ಲ, ಉದ್ಯೋಗವೂ ಸಿಕ್ಕಿಲ್ಲ.

    ಗುರುರಾಜ್ ತಂದೆ ಮಹಾಬಲ ಪೂಜಾರಿ ಇಂದಿಗೂ ಆಟೋ ಓಡಿಸುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಬೆಳ್ಳಿ ಗೆದ್ದ ಕ್ರೀಡಾಪಟುಗಳಿಗೆ 1 ಕೋಟಿ ರೂ. ವರೆಗೆ ಬಹುಮಾನ ನೀಡಿದ್ದಾರೆ. ಅಲ್ಲಿ ಬಹುಮಾನ ಅವರ ಕೈ ಸೇರಿದ್ದೂ ಆಗಿದೆ. ಆದರೆ ಇಲ್ಲಿ ಸರ್ಕಾರದ ಮುಂದೆ ಇಂದು ಈ ಸಾಧಕ ಕೈಚಾಚಿ ನಿಲ್ಲುವ ಸ್ಥಿತಿ ಬಂದಿದೆ.

    ಒಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸಿ 2020ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಈ ಕ್ರೀಡಾಪಟುವಿನದ್ದು. ಆದರೆ ಸರ್ಕಾರದ ಪ್ರೋತ್ಸಾಹ ನೋಡಿದ್ರೆ ನಮ್ಮ ಸರ್ಕಾರಕ್ಕಿರುವ ಹಂಬಲವೇನೆಂದು ತಿಳಿದು ಬರುತ್ತಿದೆ.

  • ಒಂದೇ ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸಿದ ಧೋನಿ!

    ಲಂಡನ್: ಭಾನುವಾರ ನಡೆದ ಇಂಗ್ಲೆಂಡ್ ತಂಡದ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು 4 ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ 6 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಟಿ-20ಯ ಒಂದೇ ಪಂದ್ಯದಲ್ಲಿಯೇ 6 ಮಂದಿಯನ್ನು ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ 5 ಕ್ಯಾಚ್ ಹಿಡಿದ ಮೊದಲ ಕೀಪರ್ ಎನ್ನುವ ದಾಖಲೆಯನ್ನು ಧೋನಿ ನಿರ್ಮಿಸಿದರು.

    ಇದಲ್ಲದೇ ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 50 ಕ್ಯಾಚ್ ಹಿಡಿದ ಮೊದಲ ಕೀಪರ್ ಹಾಗೂ ಟಿ-20ಯಲ್ಲಿ 150 ಕ್ಯಾಚ್ ಪೂರೈಸಿದ ವಿಶ್ವದ ಮೊದಲನೇ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಒಂದೇ ಟಿ-20 ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸುವ ಮೂಲಕ ಧೋನಿ ಇತಿಹಾಸ ನಿರ್ಮಿಸಿದ್ದಾರೆ.

  • ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ಜಿಮ್ನಾಸ್ಟಿಕ್ ವರ್ಲ್ಡ್  ಚಾಲೆಂಜ್ ಕಪ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.  ಬಹಳ ಕಷ್ಟದ ವಾಲ್ಟ್ ವಿಭಾಗದಲ್ಲಿ  14.150 ಅಂಕಗಳಿಸುವ ಮೂಲಕ 24 ವರ್ಷದ ದೀಪಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ರಿಯೋ ಒಲಿಂಪಿಕ್ಸ್ ನಲ್ಲಿ ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿರಲಿಲ್ಲ. ಆದರೆ ಈಗ ಎರಡೂವರೆ ವರ್ಷದ ಬಳಿಕ ಟೂರ್ನಿಯಲ್ಲಿ ಭಾಗವಹಿಸಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಜಿಮ್ನಾಸ್ಟಿಕ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ರಿಯೋ ಒಲಿಂಪಿಕ್ ಪದಕ ವಿಜೇತರಾಗಿದ್ದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಜಿಮ್ನಾಸ್ಟಿಕ್ಸ್ ಇತಿಹಾಸದಲ್ಲಿ ಭಾರತದ ಪರ ವಿಶೇಷ ಸಾಧನೆ ಮಾಡಿದ್ದ ದೀಪಾ ಕರ್ಮಕರ್ ಅವರಿಗೆ 2016ರ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರ ಗೌರವಿಸಿತ್ತು.

    ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೀಪಾ ಕರ್ಮಾಕರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/TheBridge_IN/status/1015946961206239232

  • ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

    ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

    ಹರಾರೆ: ಜಿಂಬಾಬ್ವೆ ತಂಡ ನೇಪಾಳ ತಂಡವನ್ನು ಸೋಲಿಸಿ 2019ರ ವಿಶ್ವಕಪ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡವನ್ನು 116ರನ್ ಗಳಿಂದ ಜಿಂಬಾಬ್ವೆ ಸೋಲಿಸಿದೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಜಿಂಬಾಬ್ವೆಯ ಸಿಕಂದರ್ ರಾಜಾ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಂಬಾಬ್ವೆ ಆಟಗಾರ ಸಿಕಂದರ್ 66 ಎಸೆತಗಳಲ್ಲಿ 123ರನ್ ಬಾರಿಸಿದ್ದು, ಅವರ ಈ ಶತಕದ ನೆರವಿನಿಂದ ಜಿಂಬಾಬ್ವೆ 380 ರನ್ ಗಳನ್ನ ಬಾರಿಸಿ ನೇಪಾಳ ತಂಡಕ್ಕೆ ಟಾರ್ಗೆಟ್ ನೀಡಿತ್ತು.  ಆದರೆ ನೇಪಾಳ ತಂಡ 50 ಓವರ್ ಗಳಲ್ಲಿ 264 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಸೋಲನ್ನು ಅನುಭವಿಸಿತು.

    ನೇಪಾಳ ತಂಡದ ವಿರುದ್ಧ ಸಿಕಂದರ್ ಸೆಂಚುರಿ ಬಾರಿಸಿದಲ್ಲದೇ 3 ವಿಕೆಟ್‍ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆ ತಂಡ 200 ರನ್ ಬಾರಿಸಿ 4 ವಿಕೆಟ್ ಕಳೆದುಕೊಂಡಾಗ ಸಿಕಂದರ್ ಮೈದಾನಕ್ಕೆ ಎಂಟ್ರಿ ನೀಡುವಾಗ ಅಲ್ಲಿದ್ದ ಜನರು ಅವರನ್ನು ಹುರಿದುಂಬಿಸಿ ಸ್ವಾಗತಿಸಿದರು. ಸಿಕಂದರ್ ಜೊತೆ ಜಿಂಬಾಬ್ವೆಯ ಅನುಭವಿ ಆಟಗಾರ ಬ್ರೆಂಡನ್ ಟೇಲರ್ ಕೂಡ 91 ಎಸೆತಗಳಲ್ಲಿ 100 ರನ್ ಬಾರಿಸಿದರು.

    ಐದನೇ ವಿಕೆಟ್ ಪಾಟ್ನರ್ ಶಿಪ್ ನಲ್ಲಿ ಟೇಲರ್ ಹಾಗೂ ಸಿಕಂದರ್ ಇಬ್ಬರೂ ಸೇರಿ 173 ರನ್ ಗಳನ್ನು ಬಾರಿಸಿದರು. ಸಿಕಂದರ್ ಒಂದೇ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 9 ಸಿಕ್ಸ್ ಗಳನ್ನು ಬಾರಿಸಿದ್ದಾರೆ. ಅದರಲ್ಲಿ ಒಂದು ಸಿಕ್ಸ್ ಮಾತ್ರ ಎಲ್ಲರ ಗಮನ ಸೆಳೆಯಿತು. ಸಿಕಂದರ್ ಹೊಡೆದ ಸಿಕ್ಸರ್ ಮೈದಾನದಿಂದ ಹೊರಹೋಗಿದಲ್ಲದೇ ಅಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಜಖಂಗೊಳಿಸಿತ್ತು.

    ಸಿಕಂದರ್ ಸಿಕ್ಸರ್ ಬಾರಿಸಿದ ವಿಡಿಯೋವನ್ನು ಐಸಿಸಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಿನ್ನೆ ನಡೆದ ಪಂದ್ಯದಲ್ಲಿ ಸಿಕಂದರ್ ತಮ್ಮ ಮೊದಲ ಸೆಂಚುರಿ ಹೊಡೆದಿದ್ದಲ್ಲದೇ ತಮ್ಮ ಸಿಕ್ಸರ್ ಮೂಲಕ ಮೈದಾನ ಹೊರಗಿದ್ದ ಕಾರಿನ ಕಿಟಕಿಯ ಗಾಜನ್ನು ಸಹ ಪುಡಿಪುಡಿ ಮಾಡಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಬಜೆಟ್ ನಲ್ಲಿ ಕ್ರೀಡೆಗೆ ಏನು ಸಿಕ್ಕಿದೆ? ಹೊಸ ಯೋಜನೆಗಳು ಏನು?

    ಬಜೆಟ್ ನಲ್ಲಿ ಕ್ರೀಡೆಗೆ ಏನು ಸಿಕ್ಕಿದೆ? ಹೊಸ ಯೋಜನೆಗಳು ಏನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್ ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಟ್ಟಾರೆಯಾಗಿ 237 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ.

    ಹೊಸ ಯೋಜನೆಗಳು:
    ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯವಾಗಿರುವುದರಿಂದ, ಕಳೆದ 4 ವರ್ಷಗಳಲ್ಲಿ ಮಹಿಳಾ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಅಷ್ಟೇ ಅಲ್ಲದೇ, 2018-19ನೇ ಸಾಲಿನಲ್ಲಿ ರಾಜ್ಯದ 5 ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಪ್ರತ್ಯೇಕ ಮಹಿಳಾ ವಸತಿ ನಿಲಯಗಳ ಪ್ರಾರಂಭ.

    `ನಾಡಹಬ್ಬ ದಸರಾ’ ಅಂಗವಾಗಿ ಮೈಸೂರಿನಲ್ಲಿ ಪ್ರತಿ ವರ್ಷ ಆಯೋಜಿಸುವ ರಾಜ್ಯ ದಸರಾ ಕ್ರೀಡಾಕೂಟವನ್ನು, ರಾಷ್ಟ್ರೀಯ ಕ್ರೀಡಾಕೂಟದಂತೆ ವಿವಿಧ ಹಂತಗಳಲ್ಲಿ ಆಯೋಜಿಸಲು ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟವನ್ನು `ದಸರಾ-ಸಿ.ಎಂ. ಕಪ್’ ಆಗಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಲು 7 ಕೋಟಿ ರೂ.ಗಳ ಅನುದಾನ.

    ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಒದಗಿಸಲು ವರ್ಷದ 365 ದಿನವೂ ಕಾರ್ಯನಿರ್ವಹಿಸುವ `ಯುವ ಸಹಾಯವಾಣಿ’ ಆರಂಭ.

    ರಾಜ್ಯದಲ್ಲಿ ಕ್ರೀಡಾ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಪರಿಣಿತ ಮಾನವ ಸಂಪನ್ಮೂಲದ ಅಭಿವೃದ್ಧಿ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ `ಕರ್ನಾಟಕ ಕ್ರೀಡಾ ವಿಶ್ವವಿದ್ಯಾಲಯ’ ದ ಸ್ಥಾಪನೆ.

    ಬೆಂಗಳೂರು ಮಹಾನಗರ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯಗಳನ್ನು ಹೊಂದುವುದು ಅಗತ್ಯ. ಆದುದರಿಂದ ದೇವನಹಳ್ಳಿ, ಹೆಚ್.ಎಸ್.ಆರ್. ಬಡಾವಣೆ, ತಾವರೆಕೆರೆ ಹಾಗೂ ವರ್ತೂರುಗಳಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಸೃಜಿಸಲಾಗುವುದು.

    ಗ್ರಾಮೀಣ ಮಣ್ಣಿನ ಕುಸ್ತಿ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಜಾಗತಿಕ ಮಟ್ಟದ ವಾರ್ಷಿಕ `ಕರ್ನಾಟಕ ಕುಸ್ತಿ ಹಬ್ಬ’ ದ ಆಯೋಜನೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೊರಾಂಗಣ ಜಿಮ್ ಸೌಕರ್ಯ ಕಲ್ಪನೆ.

  • ವಿಡಿಯೋ: ಆರತಕ್ಷತೆಯಲ್ಲಿ ಶಾರೂಖ್ ಜೊತೆ ಕುಣಿದು ಕುಪ್ಪಳಿಸಿದ ವಿರುಷ್ಕಾ

    ವಿಡಿಯೋ: ಆರತಕ್ಷತೆಯಲ್ಲಿ ಶಾರೂಖ್ ಜೊತೆ ಕುಣಿದು ಕುಪ್ಪಳಿಸಿದ ವಿರುಷ್ಕಾ

    ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 11ರಂದು ಯಾರಿಗೂ ತಿಳಿಸದೆ ಇಟಲಿಯಲ್ಲಿ ಮದುವೆಯಾಗಿದ್ದರು. ನಂತರ ಈ ಜೋಡಿ ಸಂಬಂಧಿಕರಿಗಾಗಿ ನವದೆಹಲಿಯಲ್ಲಿ ಆರತಕ್ಷತೆ ಮಾಡಿಕೊಂಡು, ಮಂಗಳವಾರ ಕ್ರಿಕೆಟ್ ಹಾಗೂ ಚಿತ್ರರಂಗದ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನೆರವೇರಿದೆ. ಈ ವೇಳೆ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಜೊತೆ ‘ಚಲೇ ಚೈಯ್ಯ ಚೈಯ್ಯ’ ಹಾಗೂ ‘ಪ್ರೆಟ್ಟಿ ವುಮೆನ್’ ಹಾಡಿಗೆ ವಿರಾಟ್ ಹಾಗೂ ಅನುಷ್ಕಾ ಕುಣಿದು ಕುಪ್ಪಳಿಸಿದ್ದಾರೆ.

    ಮಂಗಳವಾರ ಸಂಜೆ ಮುಂಬೈನ ಸೆಂಟ್ ರೀಜಿಸ್ ನಲ್ಲಿ ವಿರುಷ್ಕಾ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಲಾರಾ ದತ್ತ, ಶಾರೂಖ್ ಖಾನ್ ಹಾಗೂ ಅವರ ಕುಟುಂಬದವರು, ಎ.ಆರ್ ರೆಹಮಾನ್, ಬೋಮನ್ ಇರಾನಿ, ರೇಖಾ, ಮಾಧುರಿ ದೀಕ್ಷಿತ್, ಶ್ರೀದೇವಿ, ಸಿದಾರ್ಥ್ ಮಲ್ಹೋತ್ರ, ರಣ್‍ಬೀರ್ ಕಪೂರ್, ವರುಣ್ ಧವನ್, ಕತ್ರಿನಾ ಕೈಫ್, ವಾಣಿ ಕಪೂರ್, ಪ್ರಿಯಾಂಕಾ ಚೋಪ್ರಾ, ಕಂಗನಾ ರಣೌತ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ರು.

    ಇನ್ನೂ ಕ್ರೀಡಾ ತಾರೆಗಳಾದ ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಸುನೀಲ್ ಗವಾಸ್ಕರ್, ಸೈನಾ ನೆಹ್ವಾಲ್, ಉಮೇಶ್ ಯಾದವ್, ಜಸ್‍ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜ, ಸೌರವ್ ಗಂಗೂಲಿ, ಅಶೀಶ್ ನೆಹೆರಾ ಉಪಸ್ಥಿತರಿದ್ದರು.

    ಖ್ಯಾತ ವಸ್ತ್ರವಿನ್ಯಾಸಕ ಸಭ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಲೆಹೆಂಗಾ ಧರಿಸಿ ಅನುಷ್ಕಾ ಮಿಂಚಿದ್ರು. ಅನುಷ್ಕಾ ಸುಂದರವಾದ ಕಸೂತಿಯುಳ್ಳ ಸ್ಮೊಕಿ ಗ್ರೇ ಲೆಂಹೆಂಗಾ ತೊಟ್ಟು, ರೋಝ್ ಕಟ್ ಡೈಮಂಡ್, ಸೋಲಿಟೈರ್ಸ್, ಬ್ರಿಯೋಲೆಟ್ಸ್ ಮತ್ತು ಜಪಾನೀಸ್ ಬರೋಕ್ ಪರ್ಲ್‍ಗಳಿದ್ದ ನೆಕ್ಲೆಸ್ ಮತ್ತು ಸ್ಟಡ್ ಇಯರಿಂಗ್ಸ್ ಧರಿಸಿದ್ದರು. ವಿರಾಟ್ ಇಂಡಿಗೋ ವೆಲ್‍ವೆಟ್ ಬಂದ್ಗಾಲ ಹಾಗೂ ಸಿಲ್ಕ್ ಪ್ಯಾಂಟ್ ಧರಿಸಿದ್ದರು.

    ಡಿಸೆಂಬರ್ 11 ರಂದು ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

  • ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ ನಲ್ಲಿ ರಾಹುಲ್ ಗಾಂಧಿ `ಬ್ಲ್ಯಾಕ್ ಬೆಲ್ಟ್’-ಫೋಟೋ ನೋಡಿ

    ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ ನಲ್ಲಿ ರಾಹುಲ್ ಗಾಂಧಿ `ಬ್ಲ್ಯಾಕ್ ಬೆಲ್ಟ್’-ಫೋಟೋ ನೋಡಿ

    ನವದೆಹಲಿ: ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ತಾವೊಬ್ಬ ಕ್ರೀಡಾಪಟು ಅಂತಾ ಹೇಳಿ ಎಲ್ಲರು ನಿಬ್ಬೆರಾಗುವಂತೆ ಮಾಡಿದ್ದರು. ಅಂದಿನ ಮಾತಿಗೆ ಸಾಕ್ಷಿ ಎಂಬಂತೆ ಭರದ್ ಎಂಬವರು 2016ರ ರಾಹುಲ್ ಗಾಂಧಿ ಅವರ ಐಕಿಡೋ ತರಬೇತಿಯ ಕೆಲವು ಫೋಟೋಗಳನ್ನು ತಮ್ಮ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಜಪಾನಿನ ಮಾರ್ಷಲ್ ಆಟ್ರ್ಸ್ ಐಕಿಡೋ ಪ್ರಾಕ್ಟಿಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 47 ವರ್ಷದ ರಾಹುಲ್ ಗಾಂಧಿ ಐಕಿಡೋ ತರಬೇತಿಯನ್ನು ಪಾರಿಟೋಸ್ ಕರ್ ಎಂಬವರಿಂದ ಕಳೆದ 15 ವರ್ಷಗಳಿಂದ ಪಡೆಯುತ್ತಿದ್ದಾರೆ ಎಂದು ಐಕಿಡೊ ಐಕಿಕೈ ಪೌಂಡೇಶನ್ ಹೇಳಿದೆ.

    ಪ್ರತಿದಿನ ಒಂದು ಗಂಟೆಯಾದ್ರೂ ರನ್ನಿಂಗ್, ಸ್ವಿಮಿಂಗ್ ನಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ಸ್ ನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದೇನೆ. ಇತ್ತೀಚೆಗೆ ಎರಡು-ಮೂರು ತಿಂಗಳಿನಿಂದ ಅಭ್ಯಾಸದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ನಾನು ಇದೂವರೆಗೂ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.

    ಗುರುವಾರದಂದು ದೆಹಲಿಯಲ್ಲಿ ನಡೆದ 112ನೇ ವಾರ್ಷಿಕ ಅಧಿವೇಶನ ಹಾಗು ಪಿಎಚ್‍ಡಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಈ ವೇಳೆ ಕ್ರೀಡಾಪಟು ವಿಜೇಂದರ್ ಸಿಂಗ್, ಎಂಎಲ್‍ಎ ಮತ್ತು ಎಂಪಿಗಳು ಕೇವಲ ಕಾರ್ಯಕ್ರಮದ ರಿಬ್ಬನ್ ಕಟ್ ಮಾಡುತ್ತಾರೆಯೇ ವಿನಃ ಕ್ರೀಡೆಯಲ್ಲಿ ಭಾಗಿಯಾಗಲ್ಲ ಎಂದು ಹೇಳಿದಾಗ ರಾಹುಲ್ ಗಾಂಧಿ ಮೇಲಿನಂತೆ ಉತ್ತರಿಸಿದ್ದರು.