Tag: ಕ್ರೀಡಾಪಟು

  • ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಜಿಮ್ನಾಸ್ಟಿಕ್ಸ್ ಕೋಚ್ ಬಂಧನ

    ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಜಿಮ್ನಾಸ್ಟಿಕ್ಸ್ ಕೋಚ್ ಬಂಧನ

    ಮಿಚಿಗನ್: ವಿದ್ಯಾರ್ಥಿನಿಯೊಂದಿಗೆ ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಆರೋಪದ ಅಡಿ ಮಿಚಿಗನ್ ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ತರಬೇತುದಾರ ಹಾಗೂ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

    39 ವರ್ಷದ ಸ್ಕೋಟ್ ವೆಟ್ಟರೆ ಬಂಧಿತ ಆರೋಪಿ. ಕಟ್ಟಡವೊಂದರ ಮುಂದೆ ಕಾರ್ ಪಾರ್ಕ್ ಮಾಡಿದ್ದ ಸ್ಕೋಟ್, 18 ವರ್ಷದ ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಸದ್ಯ ಇಬ್ಬರ ವಿರುದ್ಧ ಸಾರ್ವಜನಿಕವಾಗಿ ಅಸಭ್ಯ ಮತ್ತು ಅಶ್ಲೀಲ ಕ್ರಿಯೆಯಲ್ಲಿ ತೊಡಗಿದ್ದ ಆರೋಪದ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

    ಮಿಂಚಿಗನ್ ವಿಶ್ವವಿದ್ಯಾಲಯದ ಕ್ರೀಡಾಪಟು ನಿಯಮದ ಅನುಸಾರ ತರಬೇತುದಾರ ವಿದ್ಯಾರ್ಥಿನಿಯರ ಜೊತೆ ಯಾವುದೇ ಲೈಂಗಿಕ ಹಾಗು ಪ್ರೇಮ ಸಂಬಂಧವನ್ನು ಹೊಂದುವಂತಿಲ್ಲ. ಈ ಕಾರಣದಿಂದ ಆತನನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ. ಮಾಧ್ಯಮ ವರದಿ ಅನ್ವಯ ಸ್ಕೋಟ್ ವೆಟ್ಟೆರೆ ಮಿಚಿಗನ್ ಅತ್ಯುತ್ತಮ ಕ್ರೀಡಾಪಟು ಎನ್ನಲಾಗಿದ್ದು, 2017 ರಲ್ಲಿ ಮಹಿಳೆಯರ ಜಿಮ್ನಾಸ್ಟಿಕ್ ತಂಡಕ್ಕೆ ಸಹಾಯಕ ತರಬೇತುದಾರನಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ 1999 ರಲ್ಲಿ ವಿಶ್ವವಿದ್ಯಾಲಯ ಬೆಸ್ಟ್ ಆಥ್ಲಿಟ್ ಆಗಿ ಹೊರಹೊಮ್ಮಿದ್ದ. ಸ್ಕೋಟ್‍ಗೆ ಈಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

    ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಘಟನೆಯಿಂದ ನಮ್ಮ ಸಿಬ್ಬಂದಿಗಳಿಗೆ ತೀವ್ರ ನೋವಾಗಿದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಮುಖ್ಯ ತರಬೇತುದಾರರಾದ ಬೆಲ್ ಪ್ಲೊಕಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶಕ್ಕೆ ಹಲವು ಬಾರಿ ಸ್ವರ್ಣ ಪದಕ ಕೊಟ್ಟ ಯುವತಿ ಮೇಲೆ ಅತ್ಯಾಚಾರ- ವೈದ್ಯನಿಂದ ವಂಚನೆ

    ದೇಶಕ್ಕೆ ಹಲವು ಬಾರಿ ಸ್ವರ್ಣ ಪದಕ ಕೊಟ್ಟ ಯುವತಿ ಮೇಲೆ ಅತ್ಯಾಚಾರ- ವೈದ್ಯನಿಂದ ವಂಚನೆ

    ಶಿವಮೊಗ್ಗ: ಜಲಕ್ರೀಡೆಯಲ್ಲಿ ದೇಶಕ್ಕೆ ಹಲವು ಬಾರಿ ಸ್ವರ್ಣ ಪದಕ ತಂದಿರುವ ಕೊಲ್ಲಾಪುರದ ಯುವತಿಗೆ ಕರ್ನಾಟಕದ ವೈದ್ಯನಿಂದ ವಂಚನೆ ಆಗಿದೆ ಎಂಬ ಆರೋಪವೊಂದು ಕೇಳಿಬರುತ್ತಿದೆ.

    ವೈದ್ಯ ಯುವತಿಗೆ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಮೋಸ ಮಾಡಿದ್ದಾನೆ ಎಂದು ಕ್ರೀಡಾಪಟು ಕೊಲ್ಲಾಪುರ ಕರವೀರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬೆಂಗಳೂರಿನ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ. ಆಕಾಶ್ ಅವಟಿ ಅತ್ಯಾಚಾರ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ವೈದ್ಯ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಯುವತಿ ಮನೆಗೆ ಬ್ರೋಕರ್ ಬಂದು ಮದುವೆ ಮಾತುಕತೆ ನಡೆಸಿ ಪರಿಚಯ ಮಾಡಿಕೊಂಡಿದ್ದನು. ಎರಡು ವರ್ಷಗಳ ಕಾಲ ಆಕೆಯನ್ನು ಬಳಸಿಕೊಂಡು ಇತ್ತೀಚೆಗೆ ನಾಪತ್ತೆ ಆಗಿದ್ದಾನೆ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ದೂರು ದಾಖಲಿಸಿಕೊಂಡು ಆತನನ್ನು ಹುಡುಕುತ್ತಿದ್ದರು. ಇದೇ ಸಮಯದಲ್ಲಿ ಶಿವಮೊಗ್ಗದ ಯುವತಿಯೊಂದಿಗೆ ವೈದ್ಯ ಮದುವೆ ನಿಶ್ಚಯ ಮಾಡಿಕೊಂಡಿದ್ದನು. ಗುರುವಾರ ಶಿವಮೊಗ್ಗದಲ್ಲಿ ಮದುವೆ ಕೂಡ ಆಗಬೇಕಿತ್ತು. ಅಷ್ಟರಲ್ಲಿ ಕ್ರೀಡಾಪಟು ಯುವತಿಗೆ ಈ ವಿಷಯ ತಿಳಿದಿದೆ. ಮಾಹಿತಿ ತಿಳಿದ ಯುವತಿ ಮಹಾರಾಷ್ಟ್ರ ಪೊಲೀಸರ ಸಮೇತ ಶಿವಮೊಗ್ಗದ ಮದುವೆ ಮನೆಗೆ ಬಂದಿದ್ದಾರೆ. ಈ ವಿಷಯ ತಿಳಿದ ವರ ಮದುವೆಗೆ ಬರದೆ ಪರಾರಿಯಾಗಿದ್ದಾನೆ. ಈ ಬಗ್ಗೆ ತುಂಗಾ ನಗರ ಠಾಣೆಯಲ್ಲೂ ಈ ಕ್ರೀಡಾಪಟು ದೂರು ದಾಖಲಿಸಿದ್ದಾರೆ.

    ಮೊದಲ ದೂರು ದಾಖಲಿಸಿಕೊಂಡಿದ್ದ ಮಹಾರಾಷ್ಟ್ರ ಪೊಲೀಸರು ವೈದ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಆತ ಬೆಂಗಳೂರು, ಕಲ್ಬುರ್ಗಿ, ಬಾಂಬೆ ಅಲ್ಲಿಂದಿಲ್ಲಿಗೆ-ಇಲ್ಲಿಂದ ಅಲ್ಲಿಗೆ ಓಡಿ ನಾಪತ್ತೆ ಆಗುತ್ತಿದ್ದಾನೆ ಎಂದು ಯುವತಿ ದೂರಿದ್ದಾರೆ.