Tag: ಕ್ರೀಡಾಕೂಟ

  • ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

    ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

    ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್.‌ ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

    ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ಒನ್‌ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್‌ ಹಾಗೂ ಜೂನಿಯರ್‌ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ.

    ಆರ್‌ಎಸ್‌ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇದನ್ನೂ ಓದಿ: ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ; ಶರ್ಟ್‌ ಆಯ್ಕೆ ಮಾಡದಂತೆ ಆಟಗಾರರಿಗೆ BCCI ಸೂಚನೆ

    ಪ್ಲಸ್‌ ಒನ್‌ ವಿಜ್ಞಾನ ವಿಭಾಗದಲ್ಲಿ (PCMB) ವಿದ್ಯಾಭ್ಯಾಸ ಮಾಡುತ್ತಿರುವ ಗಣ್ಯ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಯೋಗಾಭ್ಯಾಸದಲ್ಲೂ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯಲ್ಲಿ ಜಯನ್ ಪೊಯಿನಾಚಿ ಅವರಿಂದ ಗಣ್ಯ ತರಬೇತಿ ಪಡೆದಿದ್ದಾರೆ.

    ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿರುವ ಬಿ.ನವೀನ್ ಕುಮಾರ್ ಮತ್ತು ಕಾಸರಗೋಡು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಫ್ರಂಟ್ ಆಫೀಸ್ ಮ್ಯಾನೇಜರ್ ಆಗಿರುವ ರಾಜೇಶ್ವರಿ ದಂಪತಿಯ ಪುತ್ರಿ ಗಣ್ಯ. ಇವರ ಪುತ್ರ ಘನಶ್ಯಾಂ ಯೋಗಾಸನದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಎರಡು ಬಾರಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಸೂರ್ಯ ಬೆಂಕಿ ಆಟ, ಕುಲ್ದೀಪ್‌ ಮಾರಕ ಬೌಲಿಂಗ್‌ಗೆ ಆಫ್ರಿಕಾ ಬರ್ನ್‌ – ಸರಣಿ 1-1 ರಲ್ಲಿ ಸಮ

    ಅ`ಗಣ್ಯʼ ಸಾಧನೆ..!: ಟ್ವೆಕಾಂಡೋ ಮಾತ್ರವಲ್ಲ ಗಣ್ಯಗೆ ಇತರೆ ಕ್ರೀಡೆಗಳಲ್ಲೂ ಆಸಕ್ತಿ ಇದೆ. ಗಣ್ಯಳ ಸಾಧನೆಯ ಕಿರುವಿವರ ಇಲ್ಲಿದೆ ನೋಡಿ.

    • 2022ರಲ್ಲಿ ಕಾಸರಗೋಡು ಜಿಲ್ಲೆಯ ಪಡನ್ನಕ್ಕಾಡ್‌ನಲ್ಲಿ ನಡೆದ 23ನೇ ಕಾಸರಗೋಡು ಜಿಲ್ಲಾ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
    • 2018ರಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಟ್ವೆಕಾಂಡೋ ಸಬ್‌ ಜೂನಿಯರ್‌ ಚಾಂಪಿಯನ್‌ಶಿಪ್‌ (38 ವರ್ಷದೊಳಗಿನ ವಿಭಾಗ) – ಕ್ಯೊರೂಗಿ (Sparring) – ಬೆಳ್ಳಿ ಪದಕ
    • 2019ರಲ್ಲಿ ಕಾಸರಗೋಡು ಜಿಲ್ಲಾಮಟ್ಟದ ಟ್ವೆಕಾಂಡೋ ಸಬ್‌ ಜೂನಿಯರ್‌ (48 ಕೆಜಿಯೊಳಗಿನ ವಿಭಾಗ) – ಚಿನ್ನದ ಪದಕ
    • 2018ರಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್‌ ಶಾಲಾ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ
    • 2019ರಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್‌ ಶಾಲಾ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ – ಕಂಚಿನ ಪದಕ
    • 2022-23ನೇ ಶೈಕ್ಷಣಿಕ ವರ್ಷದಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
    • 2019-2020ನೇ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 800 ಮೀಟರ್‌ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ
    • 2022-23ನೇ ಸಾಲಿನ ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ.
    • 2018-19ರಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ರಾಜ್ಯಮಟ್ಟದ ಶಾಸ್ತ್ರಮೇಳದಲ್ಲಿ ನಂಬರ್‌ ಚಾರ್ಟ್‌ಗೆ ತೃತೀಯ ಸ್ಥಾನ.
    • 2019-20ರಲ್ಲಿ ಜಿಲ್ಲಾ ಮಟ್ಟದ ವೇದಿಕ್‌ ಮ್ಯಾಥ್ಸ್‌ ಪೇಪರ್‌ ಪ್ರೆಸೆಂಟೇಷನ್‌ – ಪ್ರಥಮ ಸ್ಥಾನ
    • ರಾಜ್ಯ ಮಟ್ಟದ ಗಣಿತ ಶಾಸ್ತ್ರ ಮೇಳದಲ್ಲಿ ಗಣಿತ ಪೇಪರ್‌ ಪ್ರೆಸೆಂಟೇಷನ್‌ – ಎ ಗ್ರೇಡ್‌
    • 2019-20ರಲ್ಲಿ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಇಂಗ್ಲಿಷ್‌ ವಾಚನ – ಫಸ್ಟ್‌ ಎ ಗ್ರೇಡ್‌, ಹಿಂದಿ ವಾಚನದಲ್ಲಿ ಎ ಗ್ರೇಡ್.‌
  • ಬಿಎಂಟಿಸಿ ರಜತ ಮಹೋತ್ಸವ- ಸಿಬ್ಬಂದಿಗೆ ಕ್ರೀಡಾಕೂಟ

    ಬಿಎಂಟಿಸಿ ರಜತ ಮಹೋತ್ಸವ- ಸಿಬ್ಬಂದಿಗೆ ಕ್ರೀಡಾಕೂಟ

    ಬೆಂಗಳೂರು: ಬಿಎಂಟಿಸಿಯ (BMTC) ರಜತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ ಬಿಜಿಎಸ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಿತು.

    ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಕ್ರೀಡಾಕೂಟ (Sports Day) ನಡೆಯಿತು. 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಕೆಳಗಿನ ವಯಸ್ಸಿನ ವರ್ಗದಲ್ಲಿ ಕ್ರೀಡಾಕೂಟ ನೆರವೇರಿತು.

    ಮಹಿಳೆಯರಿಗೆ ಖೋ ಖೋ, ಥ್ರೋ ಬಾಲ್ ಹಾಗೂ 75 ಮೀಟರ್ ಓಟದ ಸ್ಪರ್ಧೆ ಮತ್ತು ಪುರುಷ ವಿಭಾಗದಲ್ಲಿ ಕಬಡ್ಡಿ, ಕ್ರಿಕೆಟ್, 100 ಮೀಟರ್ ಓಟ, ಶಾಟ್ಪುಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕ್ರಿಕೆಟ್ ಆಡುವ ಮೂಲಕ ಸಿಬ್ಬಂದಿಯನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರು. ಜಿ.ಸತ್ಯವತಿ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಹಾಗೂ ಅಧಿಕಾರಿಗಳು ಕಬಡ್ಡಿ ಹಾಗೂ ಕ್ರಿಕೆಟ್ ಸ್ಪರ್ಧೆಗಳನ್ನು ವೀಕ್ಷಿಸುವ ಮೂಲಕ ಸ್ಪರ್ಧಾಳುಗಳನ್ನು ಪ್ರೆರೇಪಿಸಿದರು.

    ವಿಜೇತರಿಗೆ ಮಾನ್ಯ ಸಚಿವರು ಬಹುಮಾನಗಳನ್ನು ಪ್ರದಾನ ಮಾಡಿದರು. ಬಳಿಕ ಮಾತನಾಡಿ, ನಮ್ಮ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ತಮ್ಮ ಒತ್ತಡ ಕೆಲಸದ ನಡುವೆಯೂ ಈ ರೀತಿಯ ಕ್ರೀಡೆಗಳಲ್ಲಿ ಅತೀ ಉತ್ಹಾಹದಿಂದ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಸುಮಾರು 800ಕ್ಕೂ ಹೆಚ್ಚು ನೌಕರರು ಭಾಗವಹಿಸಿರುವುದನ್ನು ತಿಳಿದು ಬಹಳ ಸಂತಸವಾಯಿತು. ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳು ಸಾರಿಗೆ ಸಂಸ್ಥೆಯಲ್ಲಿ ಮತ್ತಷ್ಟು ಕ್ರಿಯಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಗುವುದಾಗಿ ತಿಳಿಸಿ, ಬಿಎಂಟಿಸಿಯು ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಉತ್ತಮ ಎಂದು ತಿಳಿಸಿ ಎಲ್ಲರಿಗೂ ಶುಭ ಕೋರಿದರು. ಇದನ್ನೂ ಓದಿ: ರೈತರಿಗೆ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲು ಆದ್ಯತೆ ಕೊಡಿ: ಗೆಹ್ಲೋಟ್‌

    ಎರಡು ದಿನಗಳ ನಡೆದ ಕ್ರೀಡಾ ಕೂಟದಲ್ಲಿ ಬಿಎಂಟಿಸಿ ಪೂರ್ವ ವಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • CWG 2022: 40ರ ಹುಮ್ಮಸ್ಸಿನಲ್ಲೂ TTಯಲ್ಲಿ ಚಿನ್ನ ಗೆದ್ದ ಅಚಂತ ಶರತ್

    CWG 2022: 40ರ ಹುಮ್ಮಸ್ಸಿನಲ್ಲೂ TTಯಲ್ಲಿ ಚಿನ್ನ ಗೆದ್ದ ಅಚಂತ ಶರತ್

    ಲಂಡನ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಕ್ರೀಡಾಪಟುಗಳು ಕೊನೆಯ ದಿನವೂ ಪದಕಗಳ ಬೇಟೆಯಾಡುತ್ತಿದ್ದಾರೆ. ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ 40 ವಯಸ್ಸಿನ ಅಚಂತ್ ಶರತ್ ಕಮಲ್ ಚಿನ್ನ ಗೆದ್ದು ತೋರಿಸಿದ್ದಾರೆ.

    ಶರತ್ ಎನ್‌ಇಸಿ ಅರೇನಾದಲ್ಲಿ 11-13, 11-7, 11-2, 11-6, 11-8 ಅಂಕಗಳ ಮೂಲಕ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿದರು. 2006ರಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದಿದ್ದ ಶರತ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದ್ದಾರೆ.

    TT, ಬ್ಯಾಡ್ಮಿಂಟನ್‌ನಲ್ಲಿ ಕಂಚು:
    ಭಾರತೀಯ ಟೇಬಲ್ ಟೆನ್ನಿಸ್ ಸೆನ್ಸೇಷನ್ ಸತ್ಯನ್ ಜ್ಞಾನಶೇಖರನ್ ಅವರು ಇಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸತ್ಯನ್ ಅವರು ಇಂಗ್ಲೆಂಡ್‌ನ ಪಾಲ್ ಡ್ರಿಂಕ್‌ಹಾಲ್ ಅವರನ್ನು ಸೋಲಿಸಿ, ಪಂದ್ಯವನ್ನು 4-3 ಅಂಕಗಳ ಅಂತರದಲ್ಲಿ ಗೆದ್ದಿದ್ದಾರೆ. ಇದನ್ನೂ ಓದಿ: ಕೈಜಾರಿದ ಚಿನ್ನ – ಹಾಕಿಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಭಾರತ

    ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಶ್ರೀಕಾಂತ್ ಅವರು ಸಿಂಗಾಪುರದ ಜಿಯಾ ಹೆಂಗ್ ತೆಹ್ ಅವರನ್ನು 21-15, 21-18 ರಿಂದ ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್

    Live Tv
    [brid partner=56869869 player=32851 video=960834 autoplay=true]

  • ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ಗೆ ರಾಜ್ಯದ ಐವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಆಯ್ಕೆಯಾಗುವ ಕ್ರೀಡಾಪಟುಗಳಿಗೆ ತಲಾ 10ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ. ಇದನ್ನೂ ಓದಿ:  67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    2020 ರ ಒಲಿಂಪಿಕ್ಸ್ ಕ್ರೀಡಾಕೂಟವು ಜಪಾನ್ ಟೋಕಿಯೋದಲ್ಲಿ ಜುಲೈ 23 ರಿಂದ ಸೆಪ್ಟಂಬರ್ 5ರ ವರೆಗೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಮೂಲಭೂತ ಸೌಕರ್ಯದ ಜೊತೆಗೆ ಆರ್ಥಿಕ ಸಹಾಯ ನೀಡುವುದು ಅತ್ಯಗತ್ಯ. ಭಾರತ ಸರ್ಕಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ನಮ್ಮ ದೇಶದ ಅರ್ಹ ಕ್ರೀಡಾಪಟುಗಳ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದಿದ್ದಾರೆ.

    ರಾಜ್ಯದ ಈಕ್ವೆಸ್ಟ್ರಿಯನ್ ಕ್ರೀಡಾಪಟು ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ರಾಜ್ಯದ ಇನ್ನೂ ನಾಲ್ವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರಿಗೆ ಪ್ರೋತ್ಸಾಹ ಧನ ನೀಡಿ ಬೆಂಬಲಿಸಬೇಕಾಗಿದೆ. ಐವರೂ ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಕೀರ್ತಿಪತಾಕೆಯನ್ನು ಜಪಾನ್‍ನ ಟೋಕಿಯೋದಲ್ಲಿ ಹಾರಿಸಲಿ. ಮತ್ತಷ್ಟು ಕಠಿಣ ಶ್ರಮವಹಿಸಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಬೇಕು. ಆದ್ದರಿಂದ ತಲಾ ರೂ. 10 ಲಕ್ಷ ನೀಡಿ ಪ್ರೋತ್ಸಾಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂತೆಯೆ ರಾಜ್ಯ ಸರ್ಕಾರ ಕರ್ನಾಟಕದಕ್ರೀಡಾ ಪ್ರೋತ್ಸಾಹ ಧನ ಘೋಷಿಸಿ ಆದೇಶಿಸಿ ಶುಭಹಾರೈಸಿದ್ದಾರೆ.

    ಸಂಭವನೀಯ ಪಟ್ಟಿಯಲ್ಲಿರುವ ಕ್ರೀಡಾಪಟುಗಳು:
    ಪೌವಾದ್ ಮಿರ್ಜಾ – ಈಕ್ವೆಸ್ಟ್ರಿಯನ್ – ಆಯ್ಕೆಯಾಗಿದ್ದಾರೆ.
    ಎಸ್.ವಿ. ಸುನೀಲ್ – ಹಾಕಿ – ಸಂಭವನೀಯ
    ರೋಹನ್ ಬೋಪಣ್ಣ – ಟೆನ್ನಿಸ್ – ಸಂಭವನೀಯ
    ಶ್ರೀಹರಿ ನಟರಾಜ್ – ಈಜು – ಸಂಭವನೀಯ
    ಕುಮಾರಿ ಅದಿತಿ ಅಶೋಕ್ – ಗಾಲ್ಫ್ -ಸಂಭವನೀಯ

    ಪ್ರತಿಷ್ಕೃತ ಕ್ರೀಡಾಕೂಟದಲ್ಲಿ ಭಾರತ ತಂಡದ ಪರವಾಗಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪೂರ್ವ ತಯಾರಿ ಮತ್ತು ಬೆಂಬಲದ ದ್ಯೋತಕವಾಗಿ ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳು ತಲಾ ರೂ.10.00 ಲಕ್ಷ ಪ್ರೋತ್ಸಾಹ ಧನ ನೀಡಿವೆ. ಅದೇ ರೀತಿ ಕರ್ನಾಟಕ ಸಹ ಕ್ರೀಡಾಪಟುಗಳಿಗೆ ನಗದು ನೀಡಲಾಗುತ್ತಿದೆ. ಇದನ್ನೂ ಓದಿ:  ಸಿಎಂಗೆ ರೆಬೆಲ್ ಶಾಸಕ ಯತ್ನಾಳ್ ಮತ್ತೆ ಟಾಂಗ್

    ಪ್ರೋತ್ಸಾಹಧನ ನೀಡುವ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ಡಾ. ಗೋಪಾಲಕೃಷ್ಣ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್

    ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್

    ವಾಷಿಂಗ್ಟನ್: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಇಂತಹ ಪತಿಸ್ಥಿತಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ರೀಡಾಕೂಟ ಆರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಟ್ರಂಪ್ ಮಂಗಳವಾರ ಮಾತನಾಡಿ, ನಾವು ನಮ್ಮ ಕ್ರೀಡೆಗಳನ್ನು ಪುನಾರಂಭಿಸಬೇಕಿದೆ. ನಾನು 14 ವರ್ಷ ವಯಸ್ಸಿ ಆಟಗಾರರ ಬೇಸ್‍ಬಾಲ್ ಆಟಗಳನ್ನು ನೋಡುವುದರಿಂದ ಬೇಸತ್ತಿದ್ದೇನೆ ಎಂದು ಹೇಳಿದ್ದಾರೆ.

    ಉತಾಹ್ ಜಾಝ್ ಸೆಂಟರ್‍ನ ರೂಡಿ ಗೊಬರ್ಟ್ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅಂದ್ರೆ ಮಾರ್ಚ್ 11ರಂದು ಎನ್‍ಬಿಎ (ನ್ಯಾಷನಲ್ ಬಾಸ್ಕೆಟ್‍ಬಾಲ್ ಅಸೋಸಿಯೇಷನ್) ಸ್ಥಗಿತಗೊಂಡಿತು. ಅಂದಿನಿಂದ ಯುಎಸ್‍ಎ, ಎನ್‍ಬಿಎ, ನ್ಯಾಷನಲ್ ಹಾಕಿ ಲೀಗ್, ಫುಟ್ಬಾಲ್ ಲೀಗ್ ಮತ್ತು ಬೇಸ್ ಬಾಲ್ ಲೀಗ್ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ ಜಪಾನ್‍ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಮತ್ತು ಭಾರತದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.

    ಫ್ಲೋರಿಡಾದಲ್ಲಿ ಬೇಸ್‍ಬಾಲ್ ಲೀಗ್‍ನಲ್ಲಿ 30 ತಂಡಗಳು ಆಡಲಿವೆ. ಈಗಾಗಲೇ ಪಂದ್ಯ ಆರಂಭವಾಗಿದ್ದರಿಂದ ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆಸಲು ಆಯೋಜಕರು ಮುಂದಾಗಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಮೇಜರ್ ಲೀಗ್ ಸಾಕರ್ (ಎಂಎಲ್‍ಬಿ) ಕಮಿಷನರ್ ರಾಬ್ ಮೆನ್‍ಫ್ರೆಡ್, ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಯಾವುದೇ ಯೋಜನೆಗಳಿಲ್ಲ. ಸಾಕಷ್ಟು ಯೋಜನೆಗಳನ್ನು ಪರಿಗಣಿಸಲಾಗುತ್ತಿದೆ. ಇವುಗಳಲ್ಲಿ ಯಾವುದು ಫಲಿತಾಂಶವಾಗಿ ಬದಲಾಗುತ್ತದೆ ಎಂಬುದನ್ನು ತಿಳಿಯುತ್ತಿಲ್ಲ. ಜನರ ಜೀವನ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದರು.

    ಅಮೆರಿಕಾದಲ್ಲಿ ಬುಧವಾರ ಬೆಳಗ್ಗೆಯವರೆಗೆ ಕೊರೊನಾ ವೈರಸ್‍ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26 ಸಾವಿರಕ್ಕೂ ಅಧಿಕವಾಗಿದೆ. ಸೋಂಕಿತರ ಸಂಖ್ಯೆ 6.14 ಲಕ್ಷ ಮೀರಿದೆ. ವಿಶ್ವದಾದ್ಯಂತ 19,97, 906 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 1,26,604 ಮಂದಿ ಮೃತಪಟ್ಟಿದ್ದಾರೆ.

  • ಮೈಸೂರಿನಲ್ಲಿ ಸ್ಟೂಡೆಂಟ್ಸ್ ವರ್ಸಸ್ ಟೀಚರ್ ಪ್ರತಿಭಟನೆ

    ಮೈಸೂರಿನಲ್ಲಿ ಸ್ಟೂಡೆಂಟ್ಸ್ ವರ್ಸಸ್ ಟೀಚರ್ ಪ್ರತಿಭಟನೆ

    ಮೈಸೂರು: ನಗರದ ಹೊರವಲಯದಲ್ಲಿನ ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಗಲಾಟೆಯಾಗಿದೆ.

    ಮೈಸೂರು-ನಂಜನಗೂಡು ರಸ್ತೆಯ ತಾಂಡವಪುರ ಬಳಿಯಿರುವ ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿ ರಂಜಿತಾ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ತಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕೆ ತಿರುಗಿಬಿದ್ದ ವಿದ್ಯಾರ್ಥಿಗಳು, ತರಗತಿ ಮತ್ತು ಕ್ರೀಡಾಕೂಟ ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿಗಳ ಪರ ನಿಂತ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ನಾಗೇಂದ್ರ ಪ್ರಸಾದ್‍ಗೆ ರಂಜಿತಾ ಪತಿ ಚೇತನ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ಕೂಡ ಆರೋಪಗಳು ಕೇಳಿಬರುತ್ತಿದೆ.

    ಚೇತನ್ ಕಾಲೇಜಿನ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ. ವಿಭಾಗದ ಮುಖ್ಯಸ್ಥರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು ಹಲ್ಲೆ ಪ್ರಕರಣದ ಬಗ್ಗೆ ನಾಗೇಂದ್ರ ಪ್ರಸಾದ್ ನೀಡಿದ ದೂರು ಸ್ವೀಕರಿಸಿದ್ದಾರೆ.

    ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

  • ಪೋಷಕರ ಕ್ರೀಡಾಕೂಟ – ಎಂಜಾಯ್ ಮಾಡಿದ ತಂದೆ, ತಾಯಿಯಂದಿರು

    ಪೋಷಕರ ಕ್ರೀಡಾಕೂಟ – ಎಂಜಾಯ್ ಮಾಡಿದ ತಂದೆ, ತಾಯಿಯಂದಿರು

    ಮಂಡ್ಯ: ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಮಂಡ್ಯ ಜಿಲ್ಲೆಯ ಪಾಂಡವಪುರದ ಬಿಜಿಎಸ್ ಶಾಲೆಯಲ್ಲಿ ಇಂದು ಮಕ್ಕಳ ಪೋಷಕರಿಗೆ ಕ್ರೀಡಾಕೂಟ ನಡೆಸಲಾಯಿತು.

    ವಾರ್ಷಿಕೋತ್ಸವ ಪ್ರಯುಕ್ತ ಮಕ್ಕಳಿಗೆ ಕ್ರೀಡಾಕೂಟ ನಡೆಸುವುದು ಸಾಮಾನ್ಯ. ಹೀಗಾಗಿ ಪೋಷಕರಿಗಾಗಿ ಕ್ರೀಡಾಕೂಟ ನಡೆಸಲಾಯಿತು. ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪೋಷಕರ ಕ್ರೀಡಾಕೂಟದಲ್ಲಿ ಪೋಷಕರು ಎಲ್ಲಾ ಟೆನ್ಷನ್ ಮರೆತು ಫುಲ್ ಎಂಜಾಯ್ ಮಾಡಿದರು. ತಂದೆ-ತಾಯಿಗಳ ಕ್ರೀಡಾಕೂಟ ವೀಕ್ಷಣೆ ಮಾಡಿದ ಮಕ್ಕಳು ಚಪ್ಪಾಳೆ ತಟ್ಟಿಕೊಂಡು ತಮ್ಮ ತಂದೆ-ತಾಯಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಖತ್ ಖುಷಿಪಟ್ಟರು.

    ಈ ಕ್ರೀಡಾಕೂಟದಲ್ಲಿ ಮ್ಯೂಸಿಕಲ್ ಚೇರ್, ಕಾಂಗರೂ ರೇಸ್, ಬಕೆಟ್ ಇನ್ ದ ಬಾಲ್, ರಂಗೋಲಿ ಸ್ಪರ್ಧೆ, ಬೆಂಕಿ ಇಲ್ಲದೇ ಅಡುಗೆ ತಯಾರಿ ಮಾಡುವುದು ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಿಸಲಾಯಿತು.

  • ಮೂಡಬಿದಿರೆಯಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಚಾಲನೆ

    ಮೂಡಬಿದಿರೆಯಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಚಾಲನೆ

    ಮಂಗಳೂರು: ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವರ ಜಂಟಿ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ – 2020 ಅದ್ಧೂರಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು.

    ಜನವರಿ 6ರವರೆಗೆ ನಡೆಯುವ ಈ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಕ್ರೀಡೆಯನ್ನು ಪಠ್ಯೇತರ ವಿಷಯವನ್ನಾಗಿಸುವ ಬದಲು ಅದನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಂದರು.

    ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಸರ್ಕಾರ ಬಹಳಷ್ಟು ಅವಕಾಶ ನೀಡುತ್ತಿದೆ. ಯುವ ಜನತೆಯನ್ನು ಮತ್ತಷ್ಟು ಉತ್ತೇಜಿಸಿ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಆಗಬೇಕು. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ನಾವು ಪದಕ ಗೆಲ್ಲಬೇಕಾಗಿದೆ. ಬಳಿಕ ಪ್ಯಾರಿಸ್, ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಳಲ್ಲೂ ಪದಕ ಜಯಿಸಲು ನಮ್ಮ ದೇಶದ ಕ್ರೀಡಾಪಟುಗಳು ಸೇರಿದಂತೆ ನಾವೆಲ್ಲರೂ ಸಾಕಷ್ಟು ಸಿದ್ಧತೆ ನಡೆಸಬೇಕಿದೆ ಎಂದು ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ನೆರೆದಿದ್ದ ಕ್ರೀಡಾಪಟುಗಳಿಗೆ ಶುಭ ಕೋರಿದರು.

    ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಪಟುಗಳಿಂದ ಪಂಥ ಸಂಚಲನ, ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ನೂರಕ್ಕೂ ಅಧಿಕ ಸಾಂಸ್ಕೃತಿಕ ಕಲಾಪ್ರಕಾರಗಳ ಮೆರವಣಿಗೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್ ಸಚ್ಚಿದಾನಂದ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಶಾಸಕ ಉಮನಾಥ್ ಕೋಟ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಕ್ರೀಡಾಕೂಟದಲ್ಲಿ ದೇಶದ 306 ವಿಶ್ವವಿದ್ಯಾಲಯಗಳ 4,469 ವಿದ್ಯಾರ್ಥಿಗಳು, 1,000 ಕ್ರೀಡಾಧಿಕಾರಿಗಳು ಭಾಗವಹಿಸಿದ್ದಾರೆ. ಈ ಬಾರಿ ಹೊಸತಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ 42 ಕಿ.ಮೀ ಮ್ಯಾರಥಾನ್ ಈ ಕ್ರೀಡಾಕೂಟಕ್ಕೆ ಸೇರ್ಪಡೆ ಆಗಿದೆ.

  • ಕುವೆಂಪು ವಿವಿ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯಬೇಕು: ರಾಘವೇಂದ್ರ

    ಕುವೆಂಪು ವಿವಿ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯಬೇಕು: ರಾಘವೇಂದ್ರ

    – ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು ಕೊಡಿಸಲು ಸಿದ್ಧ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಜಾಗತಿಕ ಮಟ್ಟದ ಸ್ಥಾನಮಾನ ಹೊಂದಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು, ಸಹಕಾರ ಕೊಡಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.

    ಕುವೆಂಪು ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಮಟ್ಟದ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ವಿವಿಗಳ 50 ಅಧಿಕಾರಿಗಳೊಂದಿಗೆ 16 ತಂಡಗಳ 200ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಖೋ-ಖೋ ಸರಳ, ಬೌದ್ಧಿಕ ಕೌಶಲ್ಯ ಹೆಚ್ಚಿಸುವ ಹಾಗೂ ಮನರಂಜನೆಯ ಆಟವಾಗಿದೆ. ಯಾವುದೇ ಕ್ರೀಡೆ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿದೆ. ಯುವ ಸಮೂಹದ ಸದ್ಬಳಕೆಯಾಗಬೇಕಾದರೆ ಸದೃಢ ಮನಸ್ಸುಗಳು ತಯಾರಾಗಬೇಕು. ಆರೋಗ್ಯಕರ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಕಾಣಲು ಸಾಧ್ಯ ಕಿವಿ ಮಾತು ಹೇಳಿದರು.

    ಅತಿಹೆಚ್ಚು ಯುವಶಕ್ತಿ ಹೊಂದಿದ ರಾಷ್ಟ್ರ ನಮ್ಮದು, ಈ ದೇಶದ ಭವಿಷ್ಯ ಯುವಜನತೆಯನ್ನು ಅವಲಂಬಿಸಿದೆ. ದೇಶದ ಹಲವು ಪ್ರತಿಷ್ಠಿತ ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಗುರುತಿಸಿಕೊಂಡಿರುವುದು ಹರ್ಷದ ಸಂಗತಿಯಾಗಿದೆ. ವಿವಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಹೀಗಾಗಿ ದಶಕಗಳ ನಂತರ ದಕ್ಷಿಣ ವಲಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರಕ್ಕಾಗಿ ಓದದೇ ಭವಿಷ್ಯದ ಭವ್ಯ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅಗತ್ಯವಿದೆ. ದೇಶದ ಪ್ರಧಾನಿ ಮೋದಿಯವರ ಫಿಟ್ ಇಂಡಿಯಾ ಕಲ್ಪನೆ ವ್ಯಕ್ತಿ ಹಾಗೂ ದೇಶದ ವಿಕಾಸಕ್ಕೆ ಹೊಸ ಭಾಷ್ಯ ಬರೆದಂತಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ, ಕುಲಸಚಿವ ಡಾ.ಎಸ್.ಎಸ್.ಪಾಟೀಲ್, ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಶೋಭಾ ನಾರಾಯಣ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ, ವೆಂಕಟೇಶ್ವರಲು, ಎಸ್.ಎಂ.ಪ್ರಕಾಶ್, ಜ್ಯೋತಿ ಪ್ರಕಾಶ್, ಎನ್.ಡಿ.ವಿರೂಪಾಕ್ಷ, ಪ್ರೊ.ರಮೇಶ್, ಕಾಂತರಾಜು ಇದ್ದರು.

  • ಪೊಲೀಸ್ ಕ್ರೀಡಾಕೂಟ – ರಿಲ್ಯಾಕ್ಸ್ ಮೂಡ್‍ನಲ್ಲಿ ಆಟವಾಡಿದ ಆರಕ್ಷಕರು

    ಪೊಲೀಸ್ ಕ್ರೀಡಾಕೂಟ – ರಿಲ್ಯಾಕ್ಸ್ ಮೂಡ್‍ನಲ್ಲಿ ಆಟವಾಡಿದ ಆರಕ್ಷಕರು

    ಚಾಮರಾಜನಗರ: ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ಮಗ್ನರಾಗುವ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಒತ್ತಡಕ್ಕೆ ಸಿಲುಕಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಅದರಿಂದ ಸ್ವಲ್ಪ ರಿಲ್ಯಾಕ್ಸ್ ಮಾಡಲು ಪರ್ಯಾಯ ದಾರಿ ಹುಡುಕಿಕೊಳ್ಳಬೇಕು. ಹಾಗೆ ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸರು ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಸ್ವಲ್ಪ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದರು.

    ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಇಂದು ಆರಂಭವಾಯಿತು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆರಂಭಗೊಂಡ ಕ್ರೀಡಾಕೂಟಕ್ಕೆ ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ವಿ. ಪಾಟೀಲ್ ಗುಂಡು ಎಸೆಯುವ ಮೂಲಕ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಮೊದಲು ವಿವಿಧ ಪೊಲೀಸ್ ತುಕಡಿಗಳಿಂದ ಪಥ ಸಂಚಲನದ ಮೂಲಕ ಗೌರವ ವಂದನೆ ಸ್ವೀಕರಿಸಿದರು.

    ಪೊಲೀಸ್ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ಜಿಲ್ಲಾ ನ್ಯಾಯಾಧೀಶರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ನಾವು ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ಮಾನಸಿಕ ಸಾಮರ್ಥ್ಯ ಎಷ್ಟು ಮುಖ್ಯವೋ ದೈಹಿಕ ಸಾಮರ್ಥ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ ಕ್ರೀಡಾ ಚಟುವಟಿಕೆಗಳ ಮೂಲಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.

    ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಎಎಸ್ಪಿ ಅನಿತಾ ಹದ್ದಣ್ಣನವರ್ ಸೇರಿದಂತೆ ಜಿಲ್ಲೆಯ ವಿವಿಧ ಠಾಣಾಧಿಕಾರಿಗಳು ಪ್ರತಿಯೊಬ್ಬರು ಭಾಗವಹಿಸಿದ್ದರು.