Tag: ಕ್ರೀಡಾಂಗಣ

  • ಸ್ನೇಹಿತನ ಎದುರೇ, ಹಗ್ & ಕಿಸ್- ಕಾಲೇಜಿಗೆ ಚಕ್ಕರ್ ಸ್ಟೇಡಿಯಂನಲ್ಲಿ ಹಾಜರ್

    ಸ್ನೇಹಿತನ ಎದುರೇ, ಹಗ್ & ಕಿಸ್- ಕಾಲೇಜಿಗೆ ಚಕ್ಕರ್ ಸ್ಟೇಡಿಯಂನಲ್ಲಿ ಹಾಜರ್

    ಶಿವಮೊಗ್ಗ: ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಆಟಗಾರರು ತರಬೇತಿಗೆ ಬರುತ್ತಾರೆ. ಆದರೆ ನಗರದ ನೆಹರು ಕ್ರೀಡಾಂಗಣದಲ್ಲಿ ಪ್ರೇಮಿಗಳು ಬಂದು ಹಾಡಹಾಗಲೇ ಕಿಸ್ ಮಾಡಿ, ತಬ್ಬಿಕೊಂಡು ರೊಮ್ಯಾನ್ಸ್ ಮಾಡಿರುವ ಘಟನೆ ನಡೆದಿದೆ. ಇದನ್ನೂ ಓದಿ:  ಪ್ರಯಾಣಿಕರಿದ್ರೂ ಸರ್ಕಾರಿ ಬಸ್‍ನಲ್ಲಿ ಪ್ರೇಮಿಗಳ ರೊಮ್ಯಾನ್ಸ್- ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಕ್ರೀಡಾಂಗಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಪ್ರಾಧಿಕಾರದ ಕಚೇರಿಯ ಅಣತಿ ದೂರದಲ್ಲಿ ಯುವ ಜೋಡಿಯೊಂದು ರೊಮ್ಯಾಂಟಿಕ್ ಮೂಡ್‍ನಲ್ಲಿ ಹಾಡಹಗಲೇ, ಸಾರ್ವಜನಿಕ ಸ್ಥಳದಲ್ಲಿ ಅಪ್ಪಿಕೊಂಡು ಮುತ್ತು ಕೊಡುತ್ತಾ ಮೈ ಮರೆತಿದೆ. ಕಾಲೇಜಿಗೆ ಚಕ್ಕರ್ ಹಾಕಿ ಸ್ಟೇಡಿಯಂನಲ್ಲಿ ಹಾಜರಾಗಿ, ಸ್ನೇಹಿತನ ಎದುರೇ ಹಗ್ ಆ್ಯಂಡ್ ಕಿಸ್ ಕೊಡುತ್ತಾ, ಯಾರ ಭಯವೂ ಇಲ್ಲದೇ ಮೈಮರೆತಿದ್ದಾರೆ.

    ಇದು ಇಲ್ಲಿನ ಕ್ರೀಡಾಂಗಣದಲ್ಲಿ ಸೂಕ್ತ ಸೆಕ್ಯುರಿಟಿ ವ್ಯವಸ್ಥೆ ಇಲ್ಲದೇ ಇರುವುದು ತೋರ್ಪಡಿಸುತ್ತದೆ. ಸ್ಟೇಡಿಯಂನಲ್ಲಿ ಸಾರ್ವಜನಿಕರು ವಾಕಿಂಗ್ ಮಾಡುವ ಜಾಗದಲ್ಲಿ, ಅದರಲ್ಲೂ ಕಾಲೇಜು ಸಮವಸ್ತ್ರದಲ್ಲಿಯೇ ರೊಮ್ಯಾನ್ಸ್ ಮಾಡಿದ ಪ್ರೇಮಿಗಳ ವರ್ತನೆಯನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದಾರೆ.

    ಅಲ್ಲದೇ ಕ್ರೀಡಾಪಟುಗಳು ದೇವಾಲಯವೆಂದು ಪೂಜಿಸುವ ಕ್ರೀಡಾಂಗಣದಲ್ಲಿ ಈ ರೀತಿ ಪ್ರೇಮಿಗಳ ಅಸಭ್ಯ ವರ್ತನೆಗೆ ಇಲ್ಲಿನ ವಾಯುವಿಹಾರಿಗಳು ಮತ್ತು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಪರೀಕ್ಷಾ ಕೇಂದ್ರ ರಣಾಂಗಣ ಅಲ್ಲ ಕ್ರೀಡಾಂಗಣ: ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಕಿವಿಮಾತು

    ಪರೀಕ್ಷಾ ಕೇಂದ್ರ ರಣಾಂಗಣ ಅಲ್ಲ ಕ್ರೀಡಾಂಗಣ: ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಕಿವಿಮಾತು

    ಕಾರವಾರ: ಮಕ್ಕಳು ಪರೀಕ್ಷಾ ಕೇಂದ್ರವನ್ನು ರಣಾಂಗಣ ಎಂದು ಭಯಪಡದೇ ಕ್ರೀಡಾಂಗಣ ಎಂದು ತಿಳಿಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

    ಹೊನ್ನಾವರ ನ್ಯೂ ಇಂಗ್ಲಿಷ್ ಶಾಲೆಗೆ ಶನಿವಾರ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆ ಇನ್ನು ಕೇವಲ 92 ದಿನಗಳಿದ್ದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ರಣಾಂಗಣ ಎಂದು ಭಾವಿಸದೆ ಕ್ರೀಡಾಂಗಣ ಎಂದು ಪರಿಗಣಿಸಬೇಕು. ಪರೀಕ್ಷೆಗೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

    ಪ್ರಸಕ್ತ ವರ್ಷ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವ ಕೇಂದ್ರದಲ್ಲೇ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವಾತಾವರಣ ಪರಿಚಿತವಾಗಿರುವುದರಿಂದ ಧೈರ್ಯವಾಗಿ ಎದುರಿಸಲು ಇದು ಸಹಕಾರಿಯಾಗಲಿದೆ. ನೆರೆ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲೂ ವಿದ್ಯಾರ್ಥಿಗಳ ಪೋಷಕರು ಪರೀಕ್ಷೆ ಮುಗಿಯುವವರೆಗೂ ಓದುವ ಸಮಯದಲ್ಲಿ ಟಿವಿ ನೋಡುವುದನ್ನು ನಿಲ್ಲಿಸುವ ಸಂಕಲ್ಪ ಮಾಡಬೇಕು ಎಂದರು.

    ವಿದ್ಯಾರ್ಥಿಗಳು ಸಹ ಪರೀಕ್ಷೆ ಮುಗಿಯುವವರೆಗೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಅವರ ಸಲಹೆ ನೀಡಿದರು. ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

  • ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಹೈದರಾಬಾದ್: ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ ಡೆಲ್ಲಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿತ್ತು. ಪಂದ್ಯದಲ್ಲಿ ತಂಡದ ಸೋಲುತ್ತಿದಂತೆ ತಂಡದ ಕೋಚ್ ಟಾಮ್ ಮೂಡಿ ಕ್ರೀಡಾಂಗಣದಲ್ಲೇ ದುಃಖದಿಂದ ಅತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಬಳಗ ರಿಷಬ್ ಪಂತ್, ಪೃಥ್ವಿ ಶಾರ ಅಬ್ಬರ ಬ್ಯಾಟಿಂಗ್ ನಿಂದ 2 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ತಮ್ಮ ಮುಂದಿನ ಜರ್ನಿಯನ್ನು ಜೀವಂತವಾಗಿರಿಸಿ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು.

    2016ರ ಟೈಟಲ್ ಗೆದ್ದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ 2ನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, 2017ರಲ್ಲೂ ಪ್ಲೇ ಆಪ್ ಹಂತದಲ್ಲಿ ಚೆನ್ನೈ ವಿರುದ್ಧ ಸೋತು ತಂಡ ಟೂರ್ನಿಯಿಂದ ನಿರ್ಗಮಿಸಿತ್ತು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಡೆಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಂತಸದಿಂದ ಸಂಭ್ರಮಿಸುತ್ತಿದ್ದರೆ, ಇತ್ತ ಡಗೌಟ್ ನಲ್ಲಿ ಕುಳಿತ್ತಿದ್ದ ಟಾಮ್ ಮೂಡಿ ಮಾತ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

  • ಬೆಂಗ್ಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ರೀಡಾಂಗಣ ಆಯ್ತು ಮದ್ಯ ಬಾಟಲಿಗಳ ತಾಣ

    ಬೆಂಗ್ಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ರೀಡಾಂಗಣ ಆಯ್ತು ಮದ್ಯ ಬಾಟಲಿಗಳ ತಾಣ

    ಬೆಂಗಳೂರು: ನಗರದ ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣ ಮದ್ಯ ಬಾಟಲಿಗಳ ರಾಶಿಗಳು, ಕಸದ ರಾಶಿಗಳಿಂದ ತುಂಬಿದೆ.

    ಮಂಗಳವಾರ ಸೆಂಟ್ರಲ್ ಕಾಲೇಜ್ ಕ್ರೀಡಾಂಗಣದಲ್ಲಿ ಇಂಡೋ-ನೇಪಾಳಿ ಹಬ್ಬ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ರೀಡಾಂಗಣವನ್ನು ಬಾಡಿಗೆಗೆ ಕೊಟ್ಟು ಈಗ ಅದ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಬಂದ ಜನರು ಕುಡಿದು ಕುಣಿದು ಕುಪ್ಪಳಿಸಿ ಬಾಟಲಿಗಳನ್ನ ಕ್ರೀಡಾಂಗಣದಲ್ಲೇ ಎಸೆದು ಹಾಳು ಮಾಡಿದ್ದಾರೆ.

    ಬೇರೆ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನ ಬಾಡಿಗೆಗೆ ನೀಡುವ ನಿಯಮವಿಲ್ಲ. ಆದರೆ ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಜಾಫೆಟ್ ಹಣಕ್ಕಾಗಿ ಕ್ರೀಡಾಂಗಣವನ್ನ ಬಾಡಿಗೆ ನೀಡಿದ್ದಾರೆ. ಇದೀಗ ಕ್ರೀಡಾಂಗಣದಲ್ಲಿ ತುಂಬಿದ್ದ ಕಸ, ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv