Tag: ಕ್ರಿಸ್ ರಾಕ್

  • ಆಸ್ಕರ್ ಸದಸ್ಯತ್ವಕ್ಕೆ ವಿಲ್ ಸ್ಮಿತ್ ರಾಜೀನಾಮೆ : ಮೊದಲ ಆಸ್ಕರ್ ಸಂಭ್ರಮ ಉಳಿಯಲಿಲ್ಲ

    ಆಸ್ಕರ್ ಸದಸ್ಯತ್ವಕ್ಕೆ ವಿಲ್ ಸ್ಮಿತ್ ರಾಜೀನಾಮೆ : ಮೊದಲ ಆಸ್ಕರ್ ಸಂಭ್ರಮ ಉಳಿಯಲಿಲ್ಲ

    ಜೀವಮಾನದಲ್ಲಿ ಒಂದೇ ಒಂದು ಸಾರಿ ಆಸ್ಕರ್ ಪ್ರಶಸ್ತಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸಾಗಿರುತ್ತದೆ. ಸುದೀರ್ಘ ಸಿನಿಮಾ ಪಯಣದಲ್ಲಿ ಹಾಲಿವುಡ್ ಖ್ಯಾತ ನಟ ವಿಲ್ ಸ್ಮಿತ್ ಮೊದಲ ಬಾರಿಗೆ ಈ ಸಲ ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಆದರೆ, ಆ ಸಂಭ್ರಮ ಇದೀಗ ಮಣ್ಣುಪಾಲಾಗಿದೆ. ಇದನ್ನೂ ಓದಿ : ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿ ಜಾಡಾರ ಬೊಕ್ಕ ತಲೆಯ ಬಗ್ಗೆ ನಟ ಕ್ರಿಸ್ ರಾಕ್ ವೇದಿಕೆಯ ಮೇಲೆ ಲೇವಡಿ ಮಾಡಿದ್ದರು. ಅದೊಂದು ಸಣ್ಣ ಜೋಕ್ ಎನ್ನುವಂತೆ ಕ್ರಿಸ್ ರಾಕ್ ಅಂದುಕೊಂಡಿದ್ದರೆ, ವಿಲ್ ಸ್ಮಿತ್ ಅದನ್ನು ಅವಮಾನದ ರೀತಿಯಲ್ಲಿ ತಗೆದುಕೊಂಡು ವೇದಿಕೆಯ ಮೇಲೆಯೇ ಕ್ರಿಸ್ ಗೆ ಕಪಾಳಮೋಕ್ಷ ಮಾಡಿದ್ದರು. ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ತಮಗೆ ಆಸ್ಕರ್ ಪ್ರಶಸ್ತಿ ಬಂದಿರುವುದನ್ನು ಘೋಷಿಸಿದಾಗ ವೇದಿಕೆಯ ಮೇಲೆ ಬಂದ ವಿಲ್ ಸ್ಮಿತ್ ತಾವು ಆ ರೀತಿ ವರ್ತಿಸಬಾರದಿತ್ತು. ದುಡುಕಿನಿಂದ ಆಯಿತು ಎಂದು ಆಸ್ಕರ್ ಅಕಾಡಮಿಗೆ ಕ್ಷಮೆ ಕೇಳಿದ್ದರು. ವೇದಿಕೆಯ ಮೇಲೆ ಕ್ರಿಸ್ ಗೆ ಕ್ಷಮೆ ಕೇಳದೇ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡು ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ರಿಸ್ ಗೆ ಮನವಿ ಮಾಡಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆಸ್ಕರ್ ಆಯೋಜಕ ಸಂಸ್ಥೆ ಅಕಾಡಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಅಂಡ್ ಸೈನ್ಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್ 

    ‘ಅಂದು ನಾನು ಎಲ್ಲರ ಸಂಭ್ರಮವನ್ನು ಕಿತ್ತುಕೊಂಡಿದ್ದೇನೆ. ಆಸ್ಕರ್ ಇತಿಹಾಸದಲ್ಲೇ ಆಗದೇ ಇರುವಂತಹ ಕೆಟ್ಟ ಘಟನೆ ನನ್ನಿಂದ ನಡೆದು ಹೋಗಿದೆ. ಅದರಿಂದ ತುಂಬಾ ನೊಂದುಕೊಂಡಿದ್ದೇನೆ. ನಾನು ಹಾಗೆ ವರ್ತಿಸಬಾರದಿತ್ತು. ನನ್ನಿಂದ ದೊಡ್ಡ ರೀತಿಯಲ್ಲೇ ಪ್ರಮಾದ ನಡೆದಿದೆ. ಹಾಗಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ. ಅಕಾಡಮಿ ಯಾವುದೇ ಕ್ರಮ ತಗೆದುಕೊಂಡರೂ, ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

  • ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಸ್ಕರ್ ಪ್ರಶಸ್ತಿ 2022 ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್‌ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದರು. ನಂತರ ಪ್ರಶಸ್ತಿ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿದ ಅವರು, ಕ್ರಿಸ್ ರಾಕ್ಗೆ ಕ್ಷಮೆ ಕೇಳಿರಲಿಲ್ಲ. ಈ ಘಟನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರುತ್ತಿತ್ತು. ಕೆಲವರು ಇದು ವೇದಿಕೆಗೆ ತೋರಿಸುವ ಗೌರವವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆ ಸೋಮವಾರ ರಾತ್ರಿ ವಿಲ್ ಸ್ಮಿತ್ ಸೋಶಿಯಲ್ ಮೀಡಯಾದಲ್ಲಿ ಕ್ರಿಸ್ ಅವರಿಗೆ ಕ್ಷಮೆಯಾಚಿಸಿದ್ದಾರೆ.

    Oscars 2022: Chris Rock declines to file police report after Will Smith slap | Hollywood – Gulf News

    ಕ್ರಿಸ್ ರಾಕ್ ಆಸ್ಕರ್ 2022 ನಿರೂಪಣೆ ಮಾಡುತ್ತಿದ್ದು, ವಿಲ್ ಸ್ಮಿತ್ ಅವರಿಗೆ ಪ್ರಶಸ್ತಿ ಘೋಷಣೆಯಾದ ಮೇಲೆ ಅವರು ವೇದಿಕೆಗೆ ಬಂದಿದ್ದಾರೆ. ಈ ವೇಳೆ ಕ್ರಿಸ್, ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಅವರ ಕೂದಲಿನ ಬಗ್ಗೆ ಹಾಸ್ಯ ಮಾಡಿದ್ದಾರೆ. ಇದರಿಂದ ಕೋಪಕೊಂಡ ವಿಲ್ಸ್ಮಿತ್, ಕ್ರಿಸ್‌ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಅವರು ಭಾವನಾತ್ಮಕವಾಗಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಭಾಷಣವನ್ನು ಮಾಡಿದ್ದಾರೆ. ಆದರೆ ಈ ವೇಳೆ ಅವರು ಕ್ರಿಸ್ಗೆ ಕ್ಷಮೆಯಾಚಿಸಿಲ್ಲ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

     

    View this post on Instagram

     

    A post shared by Will Smith (@willsmith)

    ಸೋಮವಾರ ರಾತ್ರಿ ಇನ್ಸ್ಟಾಗ್ರಾಮ್‌ನಲ್ಲಿ ವಿಲ್ ಸ್ಮಿತ್, ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ವೇದಿಕೆ ಮೇಲೆ ಮೀತಿಮೀರಿ ನಡೆದುಕೊಂಡಿದ್ದೆ. ಈ ಘಟನೆಯಿಂದ ನಾನು ಮುಜುಗರಕ್ಕೊಳಗಾಗಿದ್ದೇನೆ. ಶಾಂತಿ ಮತ್ತು ಕರುಣೆಯಿರುವ ಜಗತ್ತಿನಲ್ಲಿ ವೈಲೆನ್‌ಗೆ ಜಾಗವಿರುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

    ಹಿಂಸಾಚಾರದ ಎಲ್ಲ ರೂಪಗಳು ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿಗಳಲ್ಲಿ ನನ್ನ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದು. ಜೋಕ್‌ಗಳು ಅವರ ಕೆಲಸದ ಭಾಗವಾಗಿರುತ್ತೆ. ಆದರೆ ನಾನು ಈ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸಿದೆ. ಇದು ನನ್ನ ತಪ್ಪು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

  • ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಮೆರಿಕಾದ ಲಾಸ್ ಎಂಜಲ್ಸ್‍ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಇದು ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆಯೇ ನಟ ವಿಲ್ ಸ್ಮಿತ್ ಹಾಸ್ಯನಟ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ವಿವಾದಕ್ಕೆ ಸಿಲುಕಿಕೊಂಡಿದ್ದು, ಬಾಲಿವುಡ್ ಕ್ವಿನ್ ಕಂಗನಾ ರಣಾವತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    94ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ಕಪಾಳಮೋಕ್ಷ ವಿವಾದ ಎಲ್ಲಕಡೆ ಭಾರೀ ಸದ್ದು ಮಾಡುತ್ತಿದ್ದು, ಸೋಶಿಯಲ್ ಮೀಡಿಯಾ ಮೂಲಕ ಪ್ರಪಂಚದಾದ್ಯಂತದ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್ ಮತ್ತು ಹಾಲಿವುಡ್‍ನ ಹಲವಾರು ಸೆಲೆಬ್ರಿಟಿಗಳು ಕೂಡ ಈ ಘಟನೆಗೆ ಭಾರೀ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ.

    ಈ ಕುರಿತು ಬಿ’ಟೌನ್ ಕಂಗನಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ, ಯಾವುದೋ ಮೂರ್ಖರು ಕೆಟ್ಟ ಜೋಕ್ ಮಾಡಲು ನನ್ನ ತಾಯಿ ಮತ್ತು ಸಹೋದರಿಯ ಅನಾರೋಗ್ಯವನ್ನು ಬಳಸಿದರೆ ನಾನು ಅವರನ್ನು ವಿಲ್ ಸ್ಮಿತ್ ಮಾಡಿದಂತೆ ಕಪಾಳಮೋಕ್ಷ ಮಾಡುತ್ತೇನೆ. ಅವರು ನನ್ನ ‘ಲಾಕ್ ಅಪ್’ ಶೋಗೆ ಬರಬೇಕು ಎಂದು ಆಫರ್ ಮಾಡಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    Oscars 2022: Chris Rock declines to file police report after Will Smith slap | Hollywood – Gulf News

    ಹಾಸ್ಯನಟ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಮೇಲೆ ಕಾಮಿಡಿ ಮಾಡಿದರು. ಈ ಹಿನ್ನೆಲೆ ಕೋಪಕೊಂಡ ವಿಲ್ ಸ್ಮಿತ್ ವೇದಿಕೆ ಮೇಲೆ ಕ್ರಿಸ್‍ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಎಲ್ಲಕಡೆ ಸುದ್ದಿಯಾಗಿದ್ದು, ತಮ್ಮ ವೈಯಕ್ತಿಕ ಜೀವನಕ್ಕೆ ಯಾರೇ ಮೂಗುತುರಿಸಿದರು ಈ ಪರಿಸ್ಥಿತಿ ಬರುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಕಾರ್ಡಿ ಬಿ, ಮರಿಯಾ ಶ್ರೀವರ್, ಟ್ರೆವರ್ ನೋಹ್ ಸೇರಿದಂತೆ ಹಲವಾರು ಹಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ವೇದಿಕೆ ಮೇಲೆ ನಡೆದ ಈ ಘಟನೆಗೆ ಪ್ರತಿಕ್ರಿಯೆ ಕೊಟ್ಟಿದ್ದರು. ಈ ವೇಳೆ ಸಮಾರಂಭದಲ್ಲಿ ಉಪಸ್ಥಿತರಿಂದ ಹಲವು ತಾರೆಯರು ದಿಗ್ಭ್ರಮೆಗೊಂಡಿದ್ದರು. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

  • ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದು ಹೋಗಿದೆ. ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಅಮೆರಿಕಾದ ಲಾಸ್ ಎಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಸಮಾರಂಭದಲ್ಲಿ ತರ್ಲೆ ತಮಾಷೆಗಳು ನಡೆಯುವುದು ಸಹಜ. ಸೆನ್ಸಾರ್ ಮಾಡಬೇಕಾದ ಪದಗಳು ಕೂಡ ಆಗಾಗ್ಗೆ ಈ ವೇದಿಕೆಯ ಮೇಲೆ ಕೇಳುತ್ತವೆ. ಆದರೆ, ಕಪಾಳಕ್ಕೆ ಹೊಡೆಸಿಕೊಳ್ಳುವಂತಹ ಸನ್ನಿವೇಶ ಇದೇ ಮೊದಲಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಈ ಬಾರಿಯ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ಘೋಷಿಸಲು ಅತೀ ಉತ್ಸುಕರಾಗಿ ನಟ ಕ್ರಿಸ್ ರಾಕ್ ವೇದಿಕೆಗೆ ಬಂದರು. ತಮ್ಮ ಕೈಗೆ ಮೈಕ್ ಸಿಕ್ಕ ತಕ್ಷಣವೇ ಮಾತು ಆರಂಭಿಸಿದರು. ಆ ಮಾತು ಎಲ್ಲಿಗೆ ಹೋಯಿತು ಅಂದರೆ, ವೇದಿಕೆಯ ಮುಂದಿದ್ದ ಹೆಸರಾಂತ ನಟರನ್ನು ತಮಾಷೆಯಾಗಿಯೇ ಕಾಲೆಳೆಯುತ್ತಾ ಹೋದರು. ಇವರ ತಮಾಷೆಗೆ ಹೆಸರಾಂತ ನಟ ವಿಲ್ ಸ್ಮಿತ್ ಪತ್ನಿ ಪಿಂಕೆಟ್ ಸ್ಮಿತ್  ಆಹಾರವಾದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಲ್ ಸ್ಮಿತ್ ತಮ್ಮ ಪತ್ನಿಯನ್ನೂ ಕರೆತಂದಿದ್ದರು. ಸಂಭ್ರಮದಲ್ಲಿದ್ದ ಈ ಜೋಡಿಗೆ ಕ್ರಿಸ್ ರಾಕ್ ಮಾತು ಸರಿ ಅನಿಸಲಿಲ್ಲ. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಕೋಪದಿಂದಲೇ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.

    ಮೊದ ಮೊದಲು ಅದನ್ನು ತಮಾಷೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ತಮಾಷೆ ಆಗಿರಲಿಲ್ಲ. ತಮ್ಮ ಪತ್ನಿಯು ತಲೆಬೋಳಿಸಿಕೊಂಡಿರುವ ವಿಚಾರವನ್ನು ಕ್ರಿಸ್ ರಾಕ್ ತಮಾಷೆ ಮಾಡಿದ್ದಕ್ಕೆ ಅತೀವ ಕೋಪಕೊಂಡಿದ್ದರು ವಿಲ್ ಸ್ಮಿತ್. ‘ನನ್ನ ಪತ್ನಿಯ ಬಗ್ಗೆ ಮಾತಾಡಬೇಡ, ನಿನ್ನ ಕೆಟ್ಟ ಬಾಯಿಂದ ಅವಳ ಹೆಸರು ಹೇಳೂ ಬೇಡ’ ಎಂದು ಕಿರುಚಿದರು. ಸಂಭ್ರಮದಲ್ಲಿದ್ದ ಸಮಾರಂಭ ಕೆಲ ಹೊತ್ತು ಗೊಂದಲಮಯವಾಯಿತು. ಆನಂತರ ವಾತಾವರಣವನ್ನು ತಿಳಿಗೊಳಿಸುವಂತಹ ಎಲ್ಲ ಪ್ರಯತ್ನಗಳೂ ನಡೆದವು.

    ಕ್ರಿಸ್ ರಾಕ್ ಮತ್ತು ವಿಲ್ ಸ್ಮಿತ್ ಜತೆ ಆಯೋಜಕರು ಪ್ರತ್ಯೇಕವಾಗಿ ಮಾತನಾಡಿದರು. ಹಲವರು ಹಲವು ರೀತಿಯಲ್ಲಿ ಸಮಾಧಾನ ಪಡಿಸುವಂತಹ ಪ್ರಯತ್ನಗಳು ನಡೆದವು. ನಂತರ ಮತ್ತೆ ಸಮಾರಂಭ ಶುರುವಾಯಿತು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಅಂದಹಾಗೆ ‘ಕಿಂಗ್ ರಿಚರ್ಡ್ಸ್’ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಕೊನೆಗೆ ಈ ಪ್ರಶಸ್ತಿ ವಿಲ್ ಸ್ಮಿತ್ ಪಾಲಾಯಿತು. ಕಪಾಳಮೋಕ್ಷದ ಘಟನೆ ಇದೀಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.