Tag: ಕ್ರಿಸ್ ಮಸ್

  • ಧಾರ್ಮಿಕ ಭಾವನೆಗೆ ಧಕ್ಕೆ: ನಟ ರಣಬೀರ್ ಕಪೂರ್ ವಿರುದ್ಧ ದೂರು

    ಧಾರ್ಮಿಕ ಭಾವನೆಗೆ ಧಕ್ಕೆ: ನಟ ರಣಬೀರ್ ಕಪೂರ್ ವಿರುದ್ಧ ದೂರು

    ಬಾಲಿವುಡ್ ನ ಹೆಸರಾಂತ ನಟ ರಣಬೀರ್ ಕಪೂರ್ (Ranbir Kapoor) ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಭಾವನೆಗಳಿಗೆ ರಣಬೀರ್ ಕಪೂರ್ ಧಕ್ಕೆ ತಂದಿದ್ದಾರೆ ಎನ್ನುವ ಕಾರಣವನ್ನಿಟ್ಟುಕೊಂಡು ಬಾಂಬೆ ಹೈಕೋರ್ಟ್ ವಕೀಲರಾದ ಪಂಕಜ್ ಮಿಶ್ರಾ ಹಾಗೂ ಆಶಿಷ್ ರಾಜ್ ದೂರು ನೀಡಿದ್ದಾರೆ.

    ಕ್ರಿಸ್ ಮಸ್ (Christmas) ಹಬ್ಬದ ದಿನದಂದು ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಆನಂತರ ಜೈ ಮಾತಾದಿ ಎಂದು ಘೋಷಣೆ ಕೂಗಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ವಿಡಿಯೋವನ್ನು ಗಮನಿಸಿ ರಣಬೀರ್ ಮತ್ತು ಕುಟುಂಬದ ವಿರುದ್ಧ ದೂರು ಸಲ್ಲಿಕೆಯಾಗಿದೆ.

    ಅಗ್ನಿಯು ಹಿಂದುತ್ವದ ಸಂಕೇತ. ಕ್ರಿಸ್ ಮಸ್ ಆಚರಣೆಯ ಸಂದರ್ಭದಲ್ಲಿ ಇನ್ನೊಂದು ಧರ್ಮೀಯರ ಭಾವನೆ ಧಕ್ಕೆ ನೀಡಲಾಗಿದೆ. ಈ ಹಬ್ಬದಲ್ಲಿ ಆಲಿಯಾ ಭಟ್ (Alia Bhatt) ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಕ್ರಿಕೆಟರ್ ಪೃಥ್ವಿ ಶಾ ಜೊತೆ ನಿಮಿಕಾ ಕ್ರಿಸ್ ಮಸ್ ಸಂಭ್ರಮ

    ಕ್ರಿಕೆಟರ್ ಪೃಥ್ವಿ ಶಾ ಜೊತೆ ನಿಮಿಕಾ ಕ್ರಿಸ್ ಮಸ್ ಸಂಭ್ರಮ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಹಾಡೊಂದರ ಮೂಲಕ ವ್ಯಾಪಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್ (Nimika Ratnakar). ಬಣ್ಣದ ಜಗತ್ತಿನ ಭಾಗವಾಗಿದ್ದುಕೊಂಡು, ಸದಾ ಕ್ರಿಯಾಶೀಲವಾಗಿರುವ ನಿಮಿಕಾ ಇದೀಗ ಖ್ಯಾತ ಕ್ರಿಕೆಟ್ ಆಟಗಾರ ಪೃಥ್ವಿ ಶಾ (Prithvi Shah)ರನ್ನು ಭೇಟಿಯಾಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಕ್ರಿಸ್ ಮಸ್ (Christmas) ಹಬ್ಬ.

    ನಿಮಿಕಾ ರತ್ನಾಕರ್ ತಮ್ಮಿಬ್ಬರು ಸಹೋದರರೊಂದಿಗೆ ಕ್ರಿಕೆಟರ್ ಪೃಥ್ವಿ ಶಾರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪೃಥ್ವಿ ಜೊತೆಗೂಡಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮಿಸಿದ್ದಾರೆ.

    ಮಾಡೆಲಿಂಗ್ ಕ್ರೇತ್ರದಲ್ಲಿ ಮಿಂಚುತ್ತಾ, ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ಮಂಗಳೂರು ಮೂಲದ ನಿಮಿಕಾ ಸಿನಿಮಾದಾಚೆಗೂ ಒಂದಷ್ಟು ಸೆಲೆಬ್ರಿಟಿಗಳ ಸ್ನೇಹ ವಲಯದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೊಬ್ಬರಾಗಿರುವ ಪೃಥ್ವಿ ಶಾ ಜೊತೆಗಿನ ಕ್ರಿಸ್ ಮಸ್ ಆಚರಣೆ ನಿಮಿಕಾ ಖುಷಿಗೆ ಕಾರಣವಾಗಿದೆ.

  • ರಾಜ್ಯಾದ್ಯಂತ ಡಿ.30 ರಿಂದ ಜ.2 ರವರೆಗೆ ಮಾಸ್ ಆಚರಣೆಗೆ ನಿರ್ಬಂಧ: ಬೊಮ್ಮಾಯಿ

    ರಾಜ್ಯಾದ್ಯಂತ ಡಿ.30 ರಿಂದ ಜ.2 ರವರೆಗೆ ಮಾಸ್ ಆಚರಣೆಗೆ ನಿರ್ಬಂಧ: ಬೊಮ್ಮಾಯಿ

    ಬೆಳಗಾವಿ: ರಾಜ್ಯಾದ್ಯಂತ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಹೊಸ ವರ್ಷದ ಸಾಮೂಹಿಕ ಆಚರಣೆಗೆ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಸುವರ್ಣಸೌಧದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೆ ಕ್ರಿಸ್ ಮಸ್, ಹೊಸ ವರ್ಷ ಆಚರಣೆ ಬಗ್ಗೆಯೂ ಚರ್ಚಿಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಾಸ್ ಆಚರಣೆಗೆ ಅವಕಾಶವಿಲ್ಲ. ಕ್ರಿಸ್ ಮಸ್ ಗೆ ಯಾವುದೇ ನಿರ್ಬಂಧ ಇಲ್ಲ. ಎಂಜಿ ರೋಡ್ ಬ್ರಿಗೇಡ್ ರೋಡ್ ಗಳೆಲ್ಲ ಡಿಜೆ ಬ್ಯಾನ್ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಏಯ್ ಅಧ್ಯಕ್ಷ ಬಾರಯ್ಯ ಕೂತ್ಕೋ. ನನ್ನ ಜಿಲ್ಲೆಯಲ್ಲಿ ಯಾವುದೇ ಸಭೆ ಮಾಡ್ಬೇಡ – ಡಿಕೆಶಿಗೆ ಸಿದ್ದು ವಾರ್ನಿಂಗ್

    ಒಟ್ಟಿನಲ್ಲಿ ಬಹಿರಂಗ ಹೊಸ ವರ್ಷ ಆಚರಣೆಗೆ ನಿಷೇಧ ಹೇರಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗಿನ ನಿರ್ಬಂಧ ರಾಜ್ಯಾದ್ಯಂತ ಅನ್ವಯವಾಗಲಿದೆ. ಪಬ್ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ 50% ಅವಕಾಶ ನೀಡಲಾಗುತ್ತಿದೆ. ಇನ್ನು ಸಿಬ್ಬಂದಿಗೆ ಡಬಲ್ ಡೋಸ್ ಲಸಿಕೆ ಹಾಕಿಸಿರಬೇಕು ಎಂದು ಹೇಳಿದರು.

  • ಕ್ರಿಸ್‍ಮಸ್ ಹಬ್ಬಕ್ಕೆ ಮಗಳು ತಂದೆಗೆ ನೀಡಿದ ಗಿಫ್ಟ್ ಲಿಸ್ಟ್ ವೈರಲ್

    ಕ್ರಿಸ್‍ಮಸ್ ಹಬ್ಬಕ್ಕೆ ಮಗಳು ತಂದೆಗೆ ನೀಡಿದ ಗಿಫ್ಟ್ ಲಿಸ್ಟ್ ವೈರಲ್

    ನವದೆಹಲಿ: ಮುಂದಿನ ತಿಂಗಳು ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಿದ್ದೇವೆ. ಈ ಮಧ್ಯೆ 10 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಗೆ ಬರೆದುಕೊಟ್ಟ ಗಿಫ್ಟ್ ಲಿಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಟ್ವಿಟ್ಟರ್ ಬಳಕೆದಾರ ಜಾನ್ಸನ್ ಎಂಬವರ ಮಗಳು ತನ್ನದೇ ಕೈಬರಹದಲ್ಲಿ 26 ದುಬಾರಿ ಬೆಲೆಯ ವಸ್ತುಗಳ ಹೆಸರು ಬರೆದುಕೊಂಡಿದ್ದಾಳೆ. ಐಫೋನ್ 11, ಮ್ಯಾಕ್ ಬುಕ್ ಏರ್, ಚಾನೆಲ್ ಪರ್ಸ್, ಗುಚಿ ಸ್ಲೈಡರ್ಸ್, ಜೀವಂತ ಮೊಲ ಹಾಗೂ ಸುಮಾರು 2 ಲಕ್ಷದಷ್ಟು ಹಣ ಮೊದಲಾದವುಗಳು ಸೇರಿ ಒಟ್ಟು 26 ವಸ್ತುಗಳನ್ನು ಬರೆದು ಆ ಲಿಸ್ಟನ್ನು ತಂದೆ ಕೊಟ್ಟು ಇವುಗಳನ್ನು ತನಗೆ ಉಡುಗೊರೆಯಾಗಿ ನೀಡಬೇಕೆಂದು ಹೇಳಿದ್ದಾಳೆ.

    https://twitter.com/a_johnson412/status/1194689352992903169?ref_src=twsrc%5Etfw%7Ctwcamp%5Etweetembed%7Ctwterm%5E1194689352992903169&ref_url=https%3A%2F%2Fwww.indiatoday.in%2Ftrending-news%2Fstory%2Fiphone-11-chanel-purse-real-bunny-4000-10-yr-old-girl-s-christmas-wish-list-is-viral-seen-yet-1620012-2019-11-18

    ಈ ಲಿಸ್ಟನ್ನು ಜಾನ್ಸನ್ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ತನ್ನ 10 ವರ್ಷದ ಮಗಳು ಆಕೆಯ ಮನಸ್ಸಿಗೆ ತೋಚಿದ್ದೆಲ್ಲವೂ ಈ ಕ್ರಿಸ್ ಮಸ್ ಲಿಸ್ಟ್ ನಲ್ಲಿದೆ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇಲ್ಲಿಯವರೆಗೆ ಸುಮಾರು 24 ಸಾವಿರ ಮಂದಿ ರಿ-ಟ್ವೀಟ್ ಮಾಡಿದ್ರೆ, ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ ಸಾವಿರಾರು ಬಾಲಕಿಯ ಪರ-ವಿರೋಧ ಕಾಮೆಂಟ್ ಗಳು ಬರುತ್ತಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು, ಆಕೆಗೆ ನಿಜವಾಗಲೂ ಏನು ಬೇಕೆಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾಳೆ. ಅಲ್ಲದೆ ಅದನ್ನು ಹೇಗೆ ಕೇಳಬೇಕೋ ಹಾಗೆಯೇ ಕೇಳಿದ್ದಾಳೆ. ತುಂಬಾ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ.

    https://twitter.com/itsarifitz/status/1195039103126888448?ref_src=twsrc%5Etfw%7Ctwcamp%5Etweetembed%7Ctwterm%5E1195039103126888448&ref_url=https%3A%2F%2Fwww.indiatoday.in%2Ftrending-news%2Fstory%2Fiphone-11-chanel-purse-real-bunny-4000-10-yr-old-girl-s-christmas-wish-list-is-viral-seen-yet-1620012-2019-11-18

  • ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

    ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

    ಬೆಂಗಳೂರು: ತನ್ನ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊತ್ತಲ್ಲೇ ನಾಡಿನಾದ್ಯಂತ ಇಂದು ಕ್ರಿಸ್ ಮಸ್ ಹಬ್ಬ ಆಚರಿಸುವ ದಿನವೂ ಬಂದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆಗಿರುವ ಸೆಲ್ಫಿ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಯಶ್, ನನ್ನ ಪತ್ನಿಯೇ ನನಗೆ ಬೆಸ್ಟ್ ಸಾಂತಾ ಎಂದು ಹೇಳಿದ್ದಾರೆ.

    ಪೋಸ್ಟ್ ನಲ್ಲೇನಿದೆ..?
    ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನನ್ನ ಪತ್ನಿಯೇ ನನ್ನ ಬೆಸ್ಟ್ ಸಾಂತಾ ಹೇಳಿಕೊಂಡಿದ್ದಾರೆ. ಪುಟ್ಟ ಕಂದಮ್ಮಳನ್ನು ಉಡುಗೊರೆಯಾಗಿ ನೀಡಿ ಈ ಬಾರಿಯ ಕ್ರಿಸ್ ಮಸ್ ಹಬ್ಬವನ್ನು ಅತ್ಯಂತ ಸುಂದರವಾಗಿ ನನಗೆ ಆಚರಿಸಲು ಅವಕಾಶ ಮಾಡಿಕೊಟ್ಟ ನನ್ನ ಸಾಂತಾಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಕೆಜಿಎಫ್ ಚಿತ್ರದ 4 ದಿನದ ಕಲೆಕ್ಷನ್ ಎಷ್ಟು ಗೊತ್ತೆ?

    ಮನೆಗೆ ಹೋಗೋದೆ ಖುಷಿ:
    ತನ್ನ ಅಭಿನಯದ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿದ್ದು, ಈ ಬೆನ್ನಲ್ಲೇ ಅಮೆರಿಕ ಮೂಲದ ಯೂ ಟ್ಯೂಬ್ ಚಾನೆಲ್ ನವರು ಯಶ್ ಅವರನ್ನು ವಿಡಿಯೋ ಮೂಲಕ ಸಂದರ್ಶನ ಮಾಡಿದ್ದರು.

    ಈ ವೇಳೆ ರಾಕಿ, ಕೆಜಿಎಫ್ ಗಿಂತಲೂ ದೊಡ್ಡ ಖುಷಿ ನನಗೆ ಮನೆಗೆ ಹೋದಾಗ ಈಗ ಸಿಗ್ತಿದೆ. ‘ಕೆಲಸದ ಒತ್ತಡ ಎಷ್ಟೇ ಇದ್ದರೂ ಇದೀಗ ನನಗೆ ಮನೆಗೆ ಹೋಗೋದೆ ಒಂದು ಖುಷಿ. ಯಾಕಂದ್ರೆ ನನ್ನ ಮನೆಯಲ್ಲಿ ನನಗೋಸ್ಕರ ಒಬ್ಬಳು ಪುಟ್ಟ ದೇವತೆ ಕಾಯುತ್ತಿರುತ್ತಾಳೆ. ಅವಳೊಂದಿಗೆ ನಾನು ಆಟ ಆಡಬಹುದು ಎಂಬುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರವಾಗಿದೆ. ಅವಳು ನಂಗೆ ಒಂಥರಾ ಅದೃಷ್ಟ ದೇವತೆ’ ಎಂದು ಯಶ್ ತಮ್ಮ ಮಗಳ ಬಗ್ಗೆ ಹೇಳಿಕೊಂಡಿದ್ದರು. ಇದನ್ನೂ ಓದಿ: ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

    ಇದೇ ತಿಂಗಳ 2ರಂದು ಭಾನುವಾರ ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಹೆಣ್ಣು ಮಗುವಿನ ಸಂತಸದಲ್ಲಿರುವ ಹೊತ್ತಲ್ಲೇ ರಾಕಿಂಗ್ ಜೋಡಿಯ 2ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದು, “ಎರಡು ವರ್ಷದ ಹಿಂದೆ ಹೀಗಿದ್ದೆವು. ಇಂದು ಹೀಗಿದ್ದೇವೆ. ನಮ್ಮ ಜೀವನದ ಹೊಸ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ನನ್ನ ಪ್ರೀತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    ಇದಾದ ಬಳಿಕ ಇದೀಗ ಯಶ್ ಅಭಿನಯ ಕೆಜಿಎಫ್ ರಿಲೀಸ್ ಆಗಿದ್ದು, ಎಲ್ಲಡೆ ರಾಕಿ ಭಾಯ್ ಗೆ ಉಘೇ ಎನ್ನಲಾಗುತ್ತಿದೆ. ದೇಶ ಹಾಗೂ ಹೊರದೇಶದಲ್ಲಿ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ನಟ ಶಾರೂಖ್ ಅಭಿನಯದ ಝೀರೋ ಸಿನಿಮಾ ಕೂಡ ಅಂದೇ ತೆರೆಕಂಡಿದ್ದು, ಆದ್ರೆ ಝೀರೋವನ್ನು ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗುತ್ತಿದೆ.

    https://www.instagram.com/p/BrzIPfVgX6g/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲೊಂದು ಚಾಕ್ಲೇಟ್ ಜಂಕ್ಷನ್- ಸಿಹಿ ಪ್ರಿಯರಿಗೆ ಹಬ್ಬವೋ ಹಬ್ಬ

    ಬೆಂಗ್ಳೂರಲ್ಲೊಂದು ಚಾಕ್ಲೇಟ್ ಜಂಕ್ಷನ್- ಸಿಹಿ ಪ್ರಿಯರಿಗೆ ಹಬ್ಬವೋ ಹಬ್ಬ

    ಬೆಂಗಳೂರು: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಹಾಲು ಹಲ್ಲಿನ ಕಂದನಿಂದ ಹಿಡಿದು ಹಲ್ಲು ಬಿದ್ದ ಅಜ್ಜಿವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹೀಗಾಗಿಯೇ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ವೆರೈಟಿ ವೆರೈಟಿ ಚಾಕ್ಲೇಟ್ ಗಳು ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟಿವೆ.

    ಹೌದು. ಹಲಸೂರು ಹತ್ತಿರದ ಚಾಕಲೇಟ್ ಜಂಕ್ಷನ್‍ನಲ್ಲಿ ಪ್ಲೇನ್ ಚಾಕ್ಲೆಟ್, ಆರೆಂಜ್ ಫ್ಲೇವರ್, ನೆಟ್ಸ್, ಬಟರ್ ಸ್ಕಾಚ್, ಡಾರ್ಕ್, ಕಾಫಿ ಸೇರಿ 70 ಬಗೆಯ ಚಾಕ್ಲೇಟ್ಸ್ ಗಳನ್ನು ಕಾಣಬಹುದಾಗಿದೆ.

    ಚಾಕ್ಲೇಟ್ ನಿಂದ ತಯಾರಾಗಿರೋ ಸಾಂತಾಕ್ಲಾಸ್ ಕಲರ್ ಪುಲ್ ಆಗಿ ಮಿಂಚುತ್ತಿದೆ. ತೊಟ್ಟಿಲ ಬುಟ್ಟಿಯಲ್ಲಿ ಅರಳಿನಿಂತ ಜೋಡಿಗಳು, ಅಲ್ಲಲ್ಲಿ ಕಂಡು ಬರೋ ಪುಟ್ ಪುಟಾಣಿ ಗೊಂಬೆಗಳು, ಕಣ್ ಮಿಟುಕಿಸುತ್ತಿರೋ ಪಪ್ಪಿಸ್. ಇವೆಲ್ಲವೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು ಟೇಸ್ಟೂ ಕೂಡ ಬೊಂಬಾಟ್ ಆಗಿದೆ.

    ಕ್ರಿಸ್ ಮಸ್ ಹಬ್ಬ ಆರಂಭವಾಗುತ್ತಿದೆ. ಹೀಗಾಗಿ 100 ರೂ. ನಿಂದ 1,700 ರೂ. ವರೆಗಿನ ಎಲ್ಲಾ ವಿಧದ ಚಾಕ್ಲೇಟ್ ಗಳು ಲಭ್ಯವಿದೆ. ಕ್ರಿಸ್ ಕೇಕ್ ಕೂಡ ಮಾಡಿದ್ದೇವೆ ಅಂತ ಮಾಲೀಕರಾದ ಅನುಪಮಾ ಅಮರನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಈ ಬಾರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಪೆಷಲ್ ಆಗಿ ಸಂತಾಕ್ಲಾಸ್, ಟೆಡ್ಡಿ ಬಿಯರ್, ಪಪ್ಪಿಸ್, ಜೀಸೆಸ್ ಚಾಕ್ಲೇಟ್ ತಯಾರಿಸಲಾಗಿದೆ. ಹಾಗೇ ಚಾಕ್ಲೇಟ್ ಫೋಟೋ ಪ್ರೇಮ್‍ಗಳು ಕಣ್ಣಿಗೆ ಮುದ ನೀಡ್ತಿವೆ. ಭರ್ಜರಿ ವ್ಯಾಪಾರ ನಡೆಯುತ್ತಿದೆ ಅಂತ ಗ್ರಾಹಕಿ ಪುಷ್ಪಾ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಚಾಕ್ಲೇಟ್ ಕರಾಮತ್ತೆ ಹಾಗೆ. ಡಿಸೈನೂ ಡಿಫೆರೆಂಟ್, ಟೆಸ್ಟೂ ಬೊಂಬಾಟ್ ಆಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv