Tag: ಕ್ರಿಸ್ ಪಂಚರ್

  • ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್

    ಲಂಡನ್: ಬ್ರಿಟನ್ ಸರ್ಕಾರದ ಹಣಕಾಸು ಖಾತೆ ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

    ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಭಿನ್ನಾಭಿಪ್ರಾಯದಿಂದ ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸುನಾಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜೀನಾಮೆ ಪತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲದಿನಗಳ ಹಿಂದೆ ಅಮಾನತುಗೊಂಡಿರುವ ಸಂಸದ ಕ್ರಿಸ್ ಪಿಂಚರ್ ವಿರುದ್ಧ ಡೌನಿಂಗ್ ಸ್ಟ್ರೀಟ್‍ನ ಆರೋಪಗಳ ನಿರ್ವಹಣೆ ಬಗ್ಗೆ ಮಾಜಿ ನಾಗರಿಕ ಸೇವಕರು ದನಿಎತ್ತಿದ ಬಳಿಕ ಪ್ರಧಾನಿ ಹಾಗೂ ಸಚಿವರ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಆರಂಭಕೊಂಡಿತ್ತು. ಇದೀಗ ಹಣಕಾಸು ಸಚಿವರು ಹಾಗೂ ಆರೋಗ್ಯ ಕಾರ್ಯದರ್ಶಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ: 6 ತಿಂಗಳಲ್ಲಿ 309 ಸಾಮೂಹಿಕ ಗುಂಡಿನ ದಾಳಿ – ಅಮೆರಿಕದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬಲಿ

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ರಿಷಿ ಸುನಾಕ್, ಸರ್ಕಾರವನ್ನು ಸರಿಯಾದ ರೀತಿಯಲ್ಲಿ ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಸಬೇಕೆಂದು ಸಾರ್ವಜನಿಕರ ನಿರೀಕ್ಷೆ ಆಗಿರುತ್ತದೆ. ಇದು ನನ್ನ ಕೊನೆಯ ಮಂತ್ರಿ ಹುದ್ದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿ ಹೋರಾಡಲು ನಿರ್ಧರಿಸಿದ್ದು ಸರಿಯಾದ ನಿರ್ಧಾರವೆಂದು ನಂಬಿದ್ದೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

    ಬೋರಿಸ್ ಜಾನ್ಸನ್ ಸರ್ಕಾರದ ಸಂಸದರಾಗಿದ್ದ ಕ್ರಿಸ್ ಪಿಂಚರ್ ವಿರುದ್ಧದ ದುರ್ವರ್ತನೆ ಆರೋಪದ ಬಳಿಕ ಉಪ ಮುಖ್ಯ ಸಚೇತಕರಾಗಿ ಸರ್ಕಾರದಲ್ಲಿ ನೀಡಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿಕೆ ನೀಡಿದ ನಂತರ ಬ್ರಿಟನ್‍ನಲ್ಲಿ ರಾಜಕೀಯ ಹೈಡ್ರಾಮಾ ಆರಂಭವಾಗಿದೆ. ಇದೀಗ ಬೋರಿಸ್ ಜಾನ್ಸನ್ ರಾಜಕೀಯ ಒತ್ತಡಕ್ಕೆ ಸಿಲುಕಿದ್ದು, ಸಚಿವರ ರಾಜೀನಾಮೆಯಿಂದ ಕಂಗೆಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]