Tag: ಕ್ರಿಸ್ ಕ್ರೇನ್ಸ್

  • ನ್ಯೂಜಿಲೆಂಡ್ ಮಾಜಿ ಆಲ್‍ರೌಂಡರ್ ಕ್ರಿಸ್ ಕೈರ್ನ್ಸ್  ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ನ್ಯೂಜಿಲೆಂಡ್ ಮಾಜಿ ಆಲ್‍ರೌಂಡರ್ ಕ್ರಿಸ್ ಕೈರ್ನ್ಸ್ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಸಿಡ್ನಿ: ನ್ಯೂಜಿಲೆಂಡ್ ತಂಡದ ಮಾಜಿ ಆಲ್‍ರೌಂಡರ್ ಆಟಗಾರ ಕ್ರಿಸ್ ಕೈರ್ನ್ಸ್ ಆರೋಗ್ಯ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದವಾರ ಹೃದಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 51 ವರ್ಷ ಕ್ರಿಸ್ ಕೈರ್ನ್ಸ್ ಅವರನ್ನು ಸಿಡ್ನಿ ಆಸ್ಪತ್ರೆಗೆ ದಾಖಲಿಸಿದ್ದು ಈಗ ತುರ್ತು ನಿಗಾ ಘಟಕದಲ್ಲಿದ್ದಾರೆ.

    2000ರ ದಶಕದ ಆರಂಭದಲ್ಲಿ ವಿಶ್ವದ ಅಗ್ರ ಆಲ್‍ರೌಂಡರ್ ಆಟಗಾರರಲ್ಲಿ ಒಬ್ಬರಾಗಿದ್ದ ಕೈರ್ನ್ಸ್ ಅವರಿಗೆ ಕಳೆದ ವಾರ ಗಂಭೀರ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಈಗ ಜೀವನ್ಮರಣ ಹೋರಾಟದಲ್ಲಿದ್ದು ಆರೋಗ್ಯದ ಬಗ್ಗೆ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಕೈರ್ನ್ಸ್ ಆರೋಗ್ಯ ಸುಧಾರಣೆಯಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಭಾರತ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಟ್ವೀಟ್ ಮಾಡಿ ಚೇತರಿಕೆಯಾಗಲಿ ಎಂದು ಶುಭ ಹಾರೈಸಿದ್ದಾರೆ.  ಇದನ್ನೂ ಓದಿ: ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

    ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಕೈರ್ನ್ಸ್ 215 ಏಕದಿನ ಪಂದ್ಯಗಳ 193 ಇನ್ನಿಂಗ್ಸ್ ಆಡಿ 4,950 ರನ್ ಹೊಡೆದಿದ್ದಾರೆ. 29.46 ಸರಾಸರಿ ಹೊಂದಿರುವ ಇವರು 4 ಶತಕ, 26 ಅರ್ಧಶತಕ ಹೊಡೆದಿದ್ದಾರೆ. 345 ಬೌಂಡರಿ, 153 ಸಿಕ್ಸ್, 66 ಕ್ಯಾಚ್ ಹಿಡಿದಿದ್ದಾರೆ.

    ಬೌಲಿಂಗ್‍ನಲ್ಲೂ ಕೈರ್ನ್ಸ್ ಸಾಧನೆ ಉತ್ತಮವಾಗಿದೆ. ಒಟ್ಟು 201 ವಿಕೆಟ್ ಪಡೆದಿದ್ದಾರೆ. 42 ರನ್ ನೀಡಿ 5 ವಿಕೆಟ್ ಪಡೆದಿರುವುದು ಅತ್ಯುತ್ತಮ ಸಾಧನೆಯಾಗಿದೆ. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 3 ಸಾವಿರ ಗಡಿ ದಾಟುವುದರ ಜೊತೆಗೆ 200 ವಿಕೆಟ್ ಪಡೆದ 6ನೇ ಆಟಗಾರ ಕೈರ್ನ್ಸ್ ಆಗಿದ್ದಾರೆ.