Tag: ಕ್ರಿಸ್ಟೋಫರ್ ನೋಲನ್

  • ಆಸ್ಕರ್ ಪ್ರಶಸ್ತಿ ಬಾಚಿಕೊಂಡ ‘ಓಪನ್ ಹೈಮರ್’ ಜಿಯೊ ಸಿನಿಮಾದಲ್ಲಿ ಲಭ್ಯ

    ಆಸ್ಕರ್ ಪ್ರಶಸ್ತಿ ಬಾಚಿಕೊಂಡ ‘ಓಪನ್ ಹೈಮರ್’ ಜಿಯೊ ಸಿನಿಮಾದಲ್ಲಿ ಲಭ್ಯ

    ಭಾರತದ ಮುಂಚೂಣಿಯ ಸ್ಟ್ರೀಮಿಂಗ್ ಪ್ಲಾಟ್ ಫಾರಂ ಜಿಯೊ ಸಿನಿಮಾ ತನ್ನ ಅಸಾಧಾರಣ ಮನರಂಜನೆಯನ್ನು ಒದಗಿಸುವ ಧ್ಯೇಯವನ್ನು ಮುಂದುವರಿಸಿದ್ದು 2023ರ ಅತ್ಯಂತ ಚರ್ಚೆಗೆ ಒಳಗಾದ ಬಯೋಗ್ರಾಫಿಕಲ್ ಥ್ರಿಲ್ಲರ್ ಓಪನ್ ಹೈಮರ್ ಅನ್ನು ಪ್ರದರ್ಶಿಸುತ್ತಿದೆ. ಈ 96ನೇ ಅಕಾಡೆಮಿ (Oscar) ಪ್ರಶಸ್ತಿಗಳಲ್ಲಿ ಹದಿಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು ಮತ್ತು ಶ್ರೇಷ್ಠ ಚಿತ್ರ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ನಟ ಮತ್ತು ಶ್ರೇಷ್ಠ ಪೋಷಕ ನಟ ಪ್ರಶಸ್ತಿಗಳನ್ನು ಗೆದ್ದಿತು.

    ಓಪನ್ ಹೈಮರ್ ಬಾಕ್ಸ್-ಆಫೀಸ್ ನಲ್ಲಿ ಅಪಾರ ಯಶಸ್ಸು ಗಳಿಸಿದ್ದಲ್ಲದೆ ವಿಮರ್ಶಕರ ಪ್ರಶಂಸೆಯನ್ನೂ ಪಡೆಯಿತು. ಕಠಿಣ ಪರಿಶ್ರಮ, ದೃಢ ನಿರ್ಧಾರ ಮತ್ತು ಯಶಸ್ಸಿನ ಈ ಕುತೂಹಲಕಾರಿ ಕಥೆಯನ್ನು ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ್ದಾರೆ ಮತ್ತು ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ಫ್ಲೋರೆನ್ಸ್ ಪುಗ್ ರಾಬರ್ಟ್ ಡೌನೀ ಜೂನಿಯರ್ ಮತ್ತಿತರರು ನಟಿಸಿದ್ದು ಮಾರ್ಚ್ 21ರಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸಾರವಾಗಲು ಸಜ್ಜಾಗಿದೆ.

    ಈ ಕುತೂಹಲಕಾರಿ ಥ್ರಿಲ್ಲರ್ ದ್ವಿತೀಯ ಮಹಾಯುದ್ಧದಲ್ಲಿ ಅಣುಬಾಂಬ್ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕಾದ ಮೇಧಾವಿ ಭೌತಶಾಸ್ತ್ರಜ್ಞ ಜೆ.ರಾಬರ್ಟ್ ಓಪನ್ ಹೈಮರ್ ಜೀವನದ ಕುರಿತಾಗಿದೆ. ಇದು ಅಣುಬಾಂಬ್ ಪಿತಾಮಹ ಎಂದು ಗುರುತಿಸಲಾದ ಓಪನ್ ಹೈಮರ್ ಅವರ ಅಸಾಧಾರಣ ಜೀವನ ಕುರಿತಾಗಿದೆ. ಮ್ಯಾನ್ ಹಟ್ಟನ್ ಪ್ರಾಜೆಕ್ಟ್ ನಲ್ಲಿ ಲಾಸ್ ಅಲಮೊಸ್ ಲ್ಯಾಬೊರೇಟರಿಯಲ್ಲಿ ಅವರ ನೇತೃತ್ವವು ಇತಿಹಾಸವನ್ನೇ ಬದಲಾಯಿಸಿತು. ಸಿಲಿಯನ್ ಮರ್ಫಿ ಈ ಪ್ರಮುಖ ಪಾತ್ರದಲ್ಲಿ ಅಸಾಧಾರಣೆ ನಟನೆ ನೀಡಿದ್ದು ಅವರು ಈ ಮಹೋನ್ನತ ವಿಜ್ಞಾನಿಯ ಸಂಕೀರ್ಣತೆ ಮತ್ತು ನೈತಿಕ ದ್ವಂದ್ವಗಳನ್ನು ಅಭಿವ್ಯಕ್ತಿಸುವಲ್ಲಿ ಆಕರ್ಷಕ ನಟನೆ ನೀಡಿದ್ದಾರೆ.

    ಈ ಚಲನಚಿತ್ರವು ಅಪಾರ ಪ್ರಶಂಸೆ ಪಡೆದಿದ್ದು 96ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಏಳು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದು ಅದರಲ್ಲಿ ಶ್ರೇಷ್ಠ ಸಂಕಲನ, ಶ್ರೇಷ್ಠ ಹಿನ್ನೆಲೆ ಸಂಗೀತ ಮತ್ತು ಶ್ರೇಷ್ಠ ಛಾಯಾಗ್ರಹಣ ಮತ್ತಿತರೆ ವಿಭಾಗಗಳು ಒಳಗೊಂಡಿವೆ. ಇದು ಗೋಲ್ಡನ್ ಗ್ಲೋಬ್ಸ್ ನಲ್ಲಿ 8 ಪ್ರಶಸ್ತಿಗಳನ್ನು ಗೆದ್ದಿದ್ದು ಅದರಲ್ಲಿ ಶ್ರೇಷ್ಠ ಡ್ರಾಮಾ ಮೋಷನ್ ಪಿಕ್ಚರ್, ಮೋಷನ್ ಪಿಕ್ಚರ್ ನ ಶ್ರೇಷ್ಠ ನಿರ್ದೇಶಕ ಮತ್ತು ಮೋಷನ್ ಪಿಕ್ಚರ್ ನಲ್ಲಿ ಶ್ರೇಷ್ಠ ಆಕ್ಟರ್ ಡ್ರಾಮಾ ಒಳಗೊಂಡಿದೆ. ಬಾಫ್ತಾ ಚಲನಚಿತ್ರ ಪ್ರಶಸ್ತಿಗಳಲ್ಲಿ ಓಪನ್ ಹೀಮರ್ ಏಳು ಗೆಲುವುಗಳನ್ನು ಸಾಧಿಸಿದ್ದು ಶ್ರೇಷ್ಠ ಚಲನಚಿತ್ರ ಮತ್ತು ಶ್ರೇಷ್ಠ ನಿರ್ದೇಶಕ ಒಳಗೊಂಡಿವೆ. ಹೆಚ್ಚುವರಿಯಾಗಿ ಇದು ಎಂಟು ವಿಭಾಗಗಳಲ್ಲಿ 2024ರ ವಿಮರ್ಶಕರ ಆಯ್ಕೆಯ ಪ್ರಶಸ್ತಿಗಳನ್ನು ಗೆದ್ದಿದೆ. ಕ್ರಿಸ್ಟೋಫರ್ ನೋಲನ್ ಅವರ ಕಥೆ ಹೇಳುವ ಕಲೆಗಾರಿಕೆ ಮತ್ತು ಫ್ಲಾರೆನ್ಸ್ ಪುಗ್, ರಾಬರ್ಟ್ ಡೌನೀ ಜೂನಿಯರ್, ಗ್ಯಾರಿ ಓಲ್ಡ್ ಮನ್, ರಮಿ ಮಲೆಕ್ ಮತ್ತು ಕೆನೆತ್ ಬ್ರಾನಾಗ್ ಒಳಗೊಂಡ ತಾರಾಗಣವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

    ಅಣುಬಾಂಬ್ ಶಕ್ತಿಯ ಪ್ರಾಬಲ್ಯ ಸಾಧಿಸಲು ನಡೆಯುತ್ತಿರುವ ಹಣಾಹಣಿಯ ಪ್ರಾರಂಭವನ್ನು ಓಪನ್ ಹೈಮರ್ ನೊಂದಿಗೆ ಜಿಯೊ ಸಿನಿಮಾದಲ್ಲಿ ಮಾರ್ಚ್ 21, 2024ರಂದು ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ವೀಕ್ಷಿಸಲು ಮರೆಯದಿರಿ.

  • 2 ಸಾವಿರಕ್ಕೆ ʼಆಪನ್ ಹೈಮರ್’ ಚಿತ್ರದ ಟಿಕೆಟ್ ಸೇಲ್- ಬೆಂಗಳೂರಿನಲ್ಲಿ ಹೆಚ್ಚಿದ ಡಿಮ್ಯಾಂಡ್

    2 ಸಾವಿರಕ್ಕೆ ʼಆಪನ್ ಹೈಮರ್’ ಚಿತ್ರದ ಟಿಕೆಟ್ ಸೇಲ್- ಬೆಂಗಳೂರಿನಲ್ಲಿ ಹೆಚ್ಚಿದ ಡಿಮ್ಯಾಂಡ್

    ಸಿನಿಮಾದ ಕಂಟೆಂಟ್ ಮತ್ತು ಮೇಕಿಂಗ್ ಚೆನ್ನಾಗಿ ಇದ್ದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ, ಆಪನ್ ಹೈಮರ್ ಸಿನಿಮಾ ಸಾಕ್ಷಿಯಾಗಿದೆ. ಹಾಲಿವುಡ್‌ನ ಈ ಚಿತ್ರಕ್ಕಾಗಿ ಜನರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ ಹೈಮರ್’ (Oppen Heimer) ಸಿನಿಮಾ ಜುಲೈ 21ರಂದು ತೆರೆಗೆ ಅಬ್ಬರಿಸುತ್ತಿದೆ. ಕೆಲವು ಕಡೆಗಳಲ್ಲಿ ಟಿಕೆಟ್ ಬೆಲೆ ದುಬಾರಿ ಆಗಿದೆ. ಚಿತ್ರದ ಟಿಕೆಟ್‌ಗೆ 2 ಸಾವಿರ ರೂ. ಕೊಟ್ಟು ಖರೀದಿ ಮಾಡ್ತಿದ್ದಾರೆ.

    ಹಾಲಿವುಡ್‌ನ ಪ್ರತಿಭಾನ್ವಿತ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ (Christopher Nolan) ಅವರು ಅಭಿಮಾನಿಗಳಿಗೆ ಹೊಸತನ ನೀಡುತ್ತಾರೆ. ಮೇಕಿಂಗ್ ವಿಚಾರದಲ್ಲಿ ಅವರು ಎಂದಿಗೂ ಕಾಂಪ್ರಮೈಸ್ ಆಗದೇ ಹೊಸ ವಿಚಾರವನ್ನೇ ತಮ್ಮ ಸಿನಿಮಾದಲ್ಲಿ ತೋರಿಸುತ್ತಾರೆ. ಹಾಗಾಗಿ ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡಿರುವ ‘ಆಪನ್ ಹೈಮರ್’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ.

    ಈ ಸಿನಿಮಾದಲ್ಲಿ ಕಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್, ಎಮಿಲಿ ಬ್ಲಂಟ್, ಮ್ಯಾಟ್ ಡೇಮನ್ ಅನೇಕರು ಅಭಿನಯಿಸಿದ್ದಾರೆ. ಜೆ.ರಾಬರ್ಟ್ ‘ಆಪನ್ ಹೈಪರ್’ ಅವರ ಪಾತ್ರವನ್ನು ಕಿಲಿಯನ್ ಮರ್ಫಿ ನಿಭಾಯಿಸಿದ್ದಾರೆ. ರಾಬರ್ಟ್ ಡೌನಿ ಜೂನಿಯರ್ ಅವರು ಡಿಫರೆಂಟ್ ಗೆಟಪ್‌ನಲ್ಲಿ ಬರುತ್ತಿದ್ದಾರೆ. ಟ್ರೈಲರ್‌ಗೆ ನೋಡಿ ಫ್ಯಾನ್ಸ್ ಫಿದಾ ಅಗಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಕೌತುಕ ಮೂಡಿದೆ. ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಭಾರತದಲ್ಲಿ ಸೋಲ್ಡ್ ಔಟ್ ಆಗಿದೆ.

    2ನೇ ಮಹಾಯುದ್ಧದಲ್ಲಿ ಅಮೆರಿಕವು ಜಪಾನ್ ಮೇಲೆ 2 ಬಾರಿ ಆಟಂ ಬಾಂಬ್ ಹಾಕಿತ್ತು. ಅದರ ಹಿಂದಿರುವ ವಿವರಗಳನ್ನು ‘ಆಪನ್ ಹೈಮರ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೆಹಲಿ, ಮುಂಬೈನಲ್ಲೂ ಈ ಚಿತ್ರದ ಕ್ರೇಜ್ ಜೋರಾಗಿದೆ. ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ. ಒಂದು ವರದಿ ಪ್ರಕಾರ, ಮುಂಬೈನ ಕೆಲವು ಮಲ್ಟಿಫ್ಲೆಕ್ಸ್‌ನಲ್ಲಿ ಮೊದಲ ದಿನದ ಟಿಕೆಟ್‌ಗಳು 2,450 ರೂಪಾಯಿಗೆ ಸೇಲ್ ಆಗಿದೆ. ಬೆಂಗಳೂರಿನ ಪಿವಿಆರ್‌ನಲ್ಲಿ 2 ಸಾವಿರಕ್ಕೆ ಟಿಕೆಟ್ ಸೇಲ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]