Tag: ಕ್ರಿಸ್ಟೀನಾ ಆಸ್ಟೆನ್ ಗೌರ್ಕರ್ನಿ

  • ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ದುರಂತ ಅಂತ್ಯಕಂಡ ನಟಿ

    ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ದುರಂತ ಅಂತ್ಯಕಂಡ ನಟಿ

    ಹಾಲಿವುಡ್ ಮಾದಕ ನಟಿ, ಮಾಡೆಲ್ (Model) ಕಿಮ್ ಕಾರ್ಡಶಿಯಾನ್ (Kim Kardashian) ಜೊತೆ ಹೋಲಿಕೆ ಮಾಡುತ್ತಿದ್ದ ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ (Christina Ashten )ತಮ್ಮ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಈ ಸಾವಿಗೆ (Death) ಅವರು ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ (Plastic Surgery) ಕಾರಣ ಎನ್ನಲಾಗುತ್ತಿದೆ. ಬೇರೆ ಮಾಡೆಲ್ ರೀತಿಯಲ್ಲಿ ಕಾಣುವುದಕ್ಕಾಗಿ ಅವರು ಪ್ಲಾಸ್ಟಿಕ್ ಸರ್ಜರಿಗೆ ಮೊರೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.

    ಹಾಲಿವುಡ್ ನ ಖ್ಯಾತ ಮಾಡೆಲ್ ಕಿಮ್ ಕಾರ್ಡಶಿಯಾನ್ ಜೊತೆ ಹಲವಾರು ವೇದಿಕೆಗಳನ್ನು ಹಂಚಿಕೊಂಡಿದ್ದ ಕ್ರಿಸ್ಟೀನಾ ಥೇಟ್ ಕಿಮ್ ಹಾಗೆಯೇ ಕಾಣಿಸಿಕೊಳ್ಳಬೇಕು ಅನ್ನುವ ಬಯಕೆ ಇತ್ತಂತೆ. ಹಲವರು ಇವರನ್ನು ಜ್ಯೂನಿಯರ್ ಕಿಮ್ ಅಂತಾನೂ ಕರೆಯುತ್ತಿದ್ದರಂತೆ. ಈ ಆಸೆಯೇ ಅವರನ್ನು ಬಲಿ ತಗೆದುಕೊಂಡಿದೆ. ಇದನ್ನೂ ಓದಿ:ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

    ಕಿಮ್ ಹಾಲಿವುಡ್ ನಲ್ಲಿ ಮಾದಕ ನಟಿ ಹಾಗೂ ಮಾಡೆಲ್ ಎಂದೇ ಫೇಮಸ್. ಹಾಟ್ ಹಾಟ್ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ. ಕಿಮ್ ಗೆ ಕೋಟ್ಯಂತರ ಅಭಿಮಾನಿಗಳು ಕೂಡ ಇದ್ದಾರೆ. ಕ್ರಿಸ್ಟೀನಾ ಕೂಡ ಅದೆಲ್ಲವನ್ನೂ ಬಯಸಿದ್ದರು ಎಂದು ಹೇಳಲಾಗುತ್ತಿದೆ.

    ಮೃತ ಕ್ರಿಸ್ಟೀನಾ ಅಂತ್ಯಕ್ರಿಯೆ ಮಾಡಲು ಸಹ ಹಣವಿಲ್ಲ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಫಂಡ್ ಸಂಗ್ರಹಿಸಲು ಅವರು ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಚಿಕ್ಕ ವಯಸ್ಸಿನಲ್ಲೇ ಅಂಥದ್ದೊಂದು ತಪ್ಪು ಮಾರ್ಗ ಹಿಡಿದು, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಕ್ರಿಸ್ಟೀನಾ ಗೌರ್ಕರ್ನಿ.