Tag: ಕ್ರಿಸ್ಟಿಯಾನೋ ರೊನಾಲ್ಡೋ

  • ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

    ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿದ ನಂ.1 ಕ್ರಿಕೆಟಿಗನಾಗಿದ್ದಾರೆ. ಈ ನಡುವೆ ಕೊಹ್ಲಿ ಸೋಶಿಯಲ್ ಮೀಡಿಯಾದಿಂದ ಗಳಿಸುವ ಆದಾಯದ ಬಗ್ಗೆ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಫ್ಲಾಟ್‌ಪಾರ್ಮ್ ಸಂಸ್ಥೆ ಹಾಪರ್ ಎಚ್‌ಕ್ಯೂ ಬಿಡುಗಡೆ ಮಾಡಿದ ವರದಿಯೊಂದು ಚರ್ಚೆಯನ್ನ ಹುಟ್ಟುಹಾಕಿದೆ.

    ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಹಾಗೂ ಲಿಯೊನೆಲ್ ಮೆಸ್ಸಿ (Lionel Messi) ಬಳಿಕ ವಿಶ್ವದಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 3ನೇ ಕ್ರೀಡಾಪಟು ಹಾಗೂ ನಂ.1 ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಎಂದು ಸಂಸ್ಥೆ ತಿಳಿಸಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಇದಕ್ಕೆ ಸ್ವತಃ ವಿರಾಟ್ ಕೊಹ್ಲಿ ಅವರೇ ಸ್ಪಷ್ಟನೆ ಕೊಟ್ಟಿದ್ದು, ತಾನು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ (Instagram Post Earning) 11.45 ಕೋಟಿ ರೂ. ಪಡೆಯುತ್ತೇನೆಂಬುದು ಸುಳ್ಳು ಎಂದು ಹೇಳಿದ್ದಾರೆ.

    ನಾನು ನನ್ನ ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ, ನನ್ನ ಸೋಶಿಯಲ್ ಮೀಡಿಯಾ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಕೊಹ್ಲಿ ಬಗ್ಗೆ ಬಂದ ಸುದ್ದಿ ಏನಿತ್ತು?
    ಕೊಹ್ಲಿ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 11.45 ಕೋಟಿ ರೂ. ಪಡೆಯುತ್ತಾರೆ ಎಂದು ಹಾಪರ್ ಎಚ್‌ಕ್ಯೂ ವರದಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದು, ಮತ್ತೊಬ್ಬ ದಿಗ್ಗಜ ಲಿಯೊನೆಲ್ ಮೆಸ್ಸಿ 2ನೇ ಸ್ಥಾನ ಪಡೆದುಕೊಂಡಿರುವುದಾಗಿ ಹೇಳಿತ್ತು.

    ರೊನಾಲ್ಡೊ ಪೋಸ್ಟ್ ಮಾಡುವ ಪ್ರಾಯೋಜಿತ ಪೋಸ್ಟ್‌ಗೆ ಸುಮಾರು 3.23 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆಯುತ್ತಾರೆ. ಅಂದರೆ ಪ್ರತಿ ಪೋಸ್ಟ್‌ಗೆ ಸುಮಾರು 26.75 ಕೋಟಿ ರೂಗಳನ್ನು ಪಡೆಯುತ್ತಾರೆ. ಅಂತೆಯೇ ಮೆಸ್ಸಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 2.56 ಮಿಲಿಯನ್ (21.49 ಕೋಟಿ ರೂ.) ನಗದನ್ನು ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ

    ವಿರಾಟ್ ಕೊಹ್ಲಿ ಜಾಗತಿಕವಾಗಿ ಟಾಪ್-20 ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಭಾರತೀಯನಾಗಿದ್ದು, ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ 25.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರತಿ ಪೋಸ್ಟ್‌ಗೆ 532,000 ಅಮೆರಿಕನ್ ಡಾಲರ್ (4.40 ಕೋಟಿ ರೂ.) ಹಣವನ್ನು ಪಡೆಯುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಲಿಸ್ಬನ್: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ರೊನಾಲ್ಡೋ ಅವರು ತಮ್ಮ ಗಂಡುಮಗುವನ್ನು ಕಳೆದುಕೊಂಡಿದ್ದಾರೆ.

    ರೊನಾಲ್ಡೋ ತಮ್ಮ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಮ್ಮ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ನಾವು ದುಃಖದಿಂದ ಘೋಷಿಸಬೇಕಾಗಿದೆ. ಇದೀಗ ಹೆಣ್ಣು ಮಗು ಮಾತ್ರವೇ ಹುಟ್ಟಿದ್ದು, ಈ ಕ್ಷಣವನ್ನು ಸ್ವಲ್ಪ ಭರವಸೆಯಿಂದ ಬದುಕಲು ನಮಗೆ ಶಕ್ತಿ ನೀಡಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಟ್ಲರ್ ಬೊಂಬಾಟ್ ಶತಕ – ರಾಜಸ್ಥಾನ್ ರಾಯಲ್ಸ್‌ಗೆ 7ರನ್‌ಗಳ ರೋಚಕ ಜಯ

    ವೈದ್ಯರ ಆರೈಕೆ ಹಾಗೂ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವು ಕುಗ್ಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾನು ನಿಮ್ಮಿಂದ ಶಾಂತಿಯನ್ನು ಬಯಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಗೆಳತಿ ಜಾರ್ಜಿನಾರೊಂದಿಗೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ಅಭಿಮಾನಿಗಳಿಗೂ ದುಃಖ ತಂದಿದೆ.

  • ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ 100ನೇ ಸ್ಥಾನ

    ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ 100ನೇ ಸ್ಥಾನ

    ನವದೆಹಲಿ: 2019ರ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು ಇದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಕಳೆದ 2018 ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು 83 ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ವರ್ಷ ಕೊಹ್ಲಿ ಅವರು 17 ಸ್ಥಾನ ಇಳಿದು 100ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಆಟಗಾರ ಆಗಿದ್ದಾರೆ.

    ಈ ವರ್ಷ ಕೊಹ್ಲಿ ಸಂಭಾವನೆ ರೂಪದಲ್ಲಿ 25 ಮಿಲಿಯನ್ ಡಾಲರ್ (174.27 ಕೋಟಿ) ಪಡೆದಿದ್ದಾರೆ. ಇದರಲ್ಲಿ 21 ಮಿಲಿಯನ್ ಡಾಲರ್ (146.39 ಕೋಟಿ) ಜಾಹೀರಾತಿನಿಂದ ಪಡೆದಿದ್ದಾರೆ. ಇನ್ನುಳಿದ 4 ಮಿಲಿಯನ್ ಡಾಲರ್ (27.88 ಕೋಟಿ) ಹಣವನ್ನು ಕ್ರಿಕೆಟ್ ಸಂಭಾವನೆಯಿಂದ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊಹ್ಲಿ ಈ ವರ್ಷ ಆದಾಯ 6.97 ಕೋಟಿ ಜಾಸ್ತಿಯಾಗಿದೆ.

    ಇನ್ನೂ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಬಾರ್ಸಿಲೋನಾದ ಫುಟ್‍ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಇದ್ದಾರೆ. ಪೋರ್ಚುಗಲ್‍ನ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

    ಫೋರ್ಬ್ಸ್ ನ ಟಾಪ್ 5  ಶ್ರೀಮಂತ ಆಟಗಾರರ ಪಟ್ಟಿ

    1. ಲಿಯೋನಲ್ ಮೆಸ್ಸಿ 127 ಮಿಲಿಯನ್ ಡಾಲರ್ (880.44 ಕೋಟಿ)
    2. ಕ್ರಿಸ್ಟಿಯಾನೋ ರೊನಾಲ್ಡೋ 109 ಮಿಲಿಯನ್ ಡಾಲರ್ ( 755.64 ಕೋಟಿ)
    3. ನೇಮ್ಮಾರ್ 105 ಮಿಲಿಯನ್ ಡಾಲರ್ (727.91 ಕೋಟಿ)
    4. ಅಲ್ವೆರೆಜ್ 94 ಮಿಲಿಯನ್ ಡಾಲರ್ (651.65 ಕೋಟಿ)
    5. ರೋಜರ್ ಫೆಡರರ್ 93.4 ಮಿಲಿಯನ್ ಡಾಲರ್ (647.77 ಕೋಟಿ)