Tag: ಕ್ರಿಸ್ಟಿಯಾನೊ ರೊನಾಲ್ಡೊ

  • ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    ರಿಯಾದ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಾಸ್ರ್‌ ಕ್ಲಬ್ ಸೇರಿದ ಬಳಿಕ ಚೊಚ್ಚಲ ಚಾಂಪಿಯನ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

    ಅರಬ್ ಕ್ಲಬ್ ಚಾಂಪಿಯನ್‌ಶಿಪ್ ಕಪ್-2023 ನಲ್ಲಿ (Arab Club Championship Cup 2023) ಅಲ್-ನಾಸ್ರ್ ಮತ್ತು ಅಲ್-ಹಿಲಾಲ್ ನಡುವಿನ ಫೈನಲ್‌ ಪಂದ್ಯದಲ್ಲಿ ಭರ್ಜರಿ ಎರಡು ಗೋಲು ಸಿಡಿಸುವ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್-ನಾಸ್ರ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಅಲ್ಲದೇ ರೊನಾಲ್ಡೊ ಸೌದಿ ಅರೇಬಿಯಾದ (Saudi Arabia) ಕ್ಲಬ್‌ ಸೇರಿದ ಬಳಿಕ ಗೆದ್ದ ಮೊದಲ ಟ್ರೋಫಿಯೂ ಇದಾಗಿದೆ. ಕಳೆದ ವರ್ಷ ರೊನಾಲ್ಡೋ ಸೌದಿ ಅರೇಬಿಯಾ ತಂಡ ಸೇರಿಕೊಂಡರು.

    ಫೈನಲ್‌ ಪಂದ್ಯದಲ್ಲಿ ಗೆಲುವಿನ ಪ್ರಮುಖ ರೂವಾರಿಯಾಗಿದ್ದ ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ದಂತಕಥೆ ಗೆರ್ಡ್ ಮುಲ್ಲರ್‌ ಅವರನ್ನ ಹಿಂದಿಕ್ಕಿ ಅತಿಹೆಚ್ಚು ಹೆಡ್‌ ಗೋಲ್‌ಗಳನ್ನು (145) ಗಳಿಸಿದ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸೋಲು ಖಚಿತವಾಗಿತ್ತು ಎನ್ನುವ ಪಂದ್ಯದಲ್ಲಿ ಗೆದ್ದಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸ ತಂದಿದೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    2022ರ ಡಿಸೆಂಬರ್‌ 31 ರಂದು ರೊನಾಲ್ಡೋ ಸೌದಿ ಅರೇಬಿಯಾದ ಅನ್‌ ನಾಸ್ರ್‌ ಕ್ಲಬ್‌ಗೆ ಸೇರಿಕೊಂಡರು. ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬಾಬರ್‌ ಮೇಲಿನ ಗೌರವ ಇಂದಿಗೂ ಬದಲಾಗಿಲ್ಲ – ಪಾಕ್‌ ಆಟಗಾರನನ್ನ ಬಾಯ್ತುಂಬ ಹೊಗಳಿದ ಕೊಹ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    ದುಬೈ: ಪೋರ್ಚುಗಲ್‌ ಫುಟ್ಬಾಲ್ (Football) ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ (Arabian club Al Nassr) ಪರ ಮುಂದಿನ ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ (Manchester United) ತಂಡವನ್ನು ತೊರೆದಿದ್ದಾರೆ.

    ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ 2022ರ ಫಿಫಾ ವಿಶ್ವಕಪ್‌ನಲ್ಲಿ (FIFA Worldcup) ಸೋತು ಹೊರನಡೆದಿದ್ದರು. ಈದೀಗ 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಕ್ಲಬ್ ಹೇಳಿಕೆ ನೀಡಿದೆ. ಆದ್ರೆ ಹಣಕಾಸು ವ್ಯವಹಾರವನ್ನು ಬಹಿರಂಗಪಡಿಸಿಲ್ಲ. ಆದ್ರೆ ರೊನಾಲ್ಡೊನೊಂದಿಗೆ 200 ಮಿಲಿಯನ್ ಯುರೋಗಿಂತಲೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ತಂದೆಗೆ ಕೊಟ್ಟ ಮಾತಿನಂತೆ ಕಪ್ ಗೆದ್ದು ತಂದ – ದಂತಕತೆಯಾಗಿ ಮರೆಯಾದ ಡ್ರಿಬ್ಲಿಂಗ್ ಗೋಲ್ ಜಾದೂಗಾರ ಪೀಲೆ

    ಬಳಿಕ ಮಾತನಾಡಿದ ರೊನಾಲ್ಡೋ, ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲ ಗುರಿಗಳನ್ನು ಸಾಧಿಸಿದ್ದೇನೆ. ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸುತ್ತೇನೆ. ನನ್ನ ಹೊಸ ತಂಡದ ಸಹ ಆಟಗಾರರ ಜತೆ ಸೇರಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕ್ಲಬ್‌ನ ಯಶಸ್ಸಿಗೆ ನೆರವಾಗಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    37 ವರ್ಷದ ರೊನಾಲ್ಡೋ ಕಳೆದ ತಿಂಗಳು `ನನಗೆ ಕ್ಲಬ್ ದ್ರೋಹ ಬಗೆದಿದೆ. ಡಚ್ ವ್ಯವಸ್ಥಾಪಕ ಎರಿಕ್ ಟೆನ್ ಹಗ್ ಅವರ ಬಗ್ಗೆ ಗೌರವ ಇಲ್ಲ’ ಎಂದು ಹೇಳಿಕೆ ನೀಡಿ ಓಲ್ಡ್ ಟ್ರಾಫರ್ಡ್‌ನಿಂದ ಬೇರ್ಪಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಲಂಡನ್: ಖ್ಯಾತ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ವಲ್ಪ ಸಮಯದವರೆಗೆ ಫಾರ್ಮ್‍ನಿಂದ ಹೊರಗುಳಿದಿರಬಹುದು. ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನಲ್ಲಿ 400 ಮಿಲಿಯನ್ (40 ಕೋಟಿ) ಫಾಲೋವರ್ಸ್‍ಗಳ ಸಂಖ್ಯೆಯನ್ನು ದಾಟಿದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪಟ್ಟಿಯಲ್ಲಿ, ಪೋರ್ಚುಗಲ್ ನಾಯಕ ಕೈಲಿ ಜೆನ್ನರ್ ಅವರು 309 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೊನಾಲ್ಡೊ ಅವರ ಅತಿದೊಡ್ಡ ಫುಟ್‍ಬಾಲ್ ಪ್ರತಿಸ್ಪರ್ಧಿ ಮೆಸ್ಸಿ ಪ್ರಸ್ತುತ 306 ಮಿಲಿಯನ್ ಫಾಲೋವರ್ಸ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಪಾಪ್ ಗಾಯಕಿ ಸೆಲೆನಾ ಗೊಮೆಜ್ ಮತ್ತು ನಟ ಡ್ವೇನ್ ಜಾನ್ಸನ್ ತಲಾ 295 ಮಿಲಿಯನ್ ಫಾಲೋವರ್ಸ್‍ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ – ಸರಣಿ ಕೈವಶಪಡಿಸಿಕೊಂಡ ಟೀಂ ಇಂಡಿಯಾ

    ವರದಿಯ ಪ್ರಕಾರ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನ ಎಲ್ಲಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗೆ (ಯುಎಸ್‍ಡಿ) 1.6 ಮಿಲಿಯನ್ (ಐಎನ್‍ಆರ್ 11.9 ಕೋಟಿ) ಚಾರ್ಜ್ ಮಾಡುತ್ತಾರೆ.

    ಇದರ ಮಧ್ಯೆ ಒಂದೆರಡು ದಿನಗಳ ಹಿಂದೆ ರೊನಾಲ್ಡೊ ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ತಮಗೆ ಶುಭಾಶಯಗಳನ್ನು ಕಳುಹಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.

    ಜೀವನವು ರೋಲರ್ ಕೋಸ್ಟರ್ ಆಗಿದೆ. ಕಠಿಣ ಪರಿಶ್ರಮ, ಹೆಚ್ಚಿನ ವೇಗ, ಗುರಿಗಳು, ಬೇಡಿಕೆಯ ನಿರೀಕ್ಷೆಗಳು. ಆದರೆ ಕೊನೆಯಲ್ಲಿ ಇದು ಕುಟುಂಬ, ಪ್ರೀತಿ, ಪ್ರಾಮಾಣಿಕತೆ, ಸ್ನೇಹ ಎಲ್ಲವನ್ನೂ ಮೌಲ್ಯಯುತವಾಗಿಸುತ್ತದೆ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ತಮ್ಮ ಭವಿಷ್ಯದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ ರೊನಾಲ್ಡೊ, ನಾನು ಫುಟ್‍ಬಾಲ್ ಕ್ಷೇತ್ರದಲ್ಲಿ ಇನ್ನೂ 40ರ ವಯಸ್ಸಿನವರೆಗೂ ಆಡಲು ನಿರ್ಧರಿಸಿದ್ದೇನೆ. ಇದೀಗ ನಾನು ಅಲ್ಪಾವಧಿಯ ಗುರಿಗಳತ್ತ ಗಮನ ಹರಿಸಿದ್ದೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Cristiano Ronaldo (@cristiano)

    ನನಗೆ ಈಗ 30 ವರ್ಷ ವಯಸ್ಸಾಗಿದೆ. ನಾನು ನನ್ನ ದೇಹ ಮತ್ತು ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. 33ರ ವಯಸ್ಸಿನ ನಂತರ ದೇಹವು ಕುಗ್ಗಲಾರಂಭಿಸುತ್ತದೆ. ಆದರೆ ನಾನು ಮಾನಸಿಕವಾಗಿ ಸಧೃಢನಾಗಿದ್ದೇನೆ. ಹಾಗೆ ನೋಡಿದರೆ ನಿಜವಾದ ಜೀವನದ ಯುದ್ಧವು 40ರ ನಂತರ ಪ್ರಾರಂಭವಾಗುತ್ತದೆ. ವಯಸ್ಸು ಕೇವಲ ಎಣಿಕೆಗಾಗಿ. ನಾವು ನಮ್ಮ ದೇಹವನ್ನು ಎಷ್ಟು ಚಟುವಟಿಕೆಯಿಂದ ಇಡುತ್ತೇವೋ ಅಷ್ಟು ಸಧೃಡರಾಗಿರಬಹುದು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದರು.

  • ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

    ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

    ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಅತಿ ಹೆಚ್ಚು ಗಳಿಕೆಯ ಆಟಗಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಆಟಗಾರರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಟಾಪ್-100 ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಟಾಪ್ 100ರಲ್ಲಿ ಗುರುತಿಸಿಕೊಂಡ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.

    ವಿರಾಟ್ ಕೊಹ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಅತಿ ಹೆಚ್ಚು ಗಳಿಕೆಯ ಟಾಪ್-100 ಆಟಗಾರರಲ್ಲಿ 66ನೇ ಸ್ಥಾನದಲ್ಲಿದ್ದಾರೆ. ಅವರು 2019-2020ರಲ್ಲಿ ಮಧ್ಯದಲ್ಲಿ 26 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂ.) ಗಳಿಸಿದ್ದಾರೆ ಎಂದು ತಿಳಿಸಲಾಗಿದೆ.

    ಫೋರ್ಬ್ಸ್ ಪಟ್ಟಿಯಲ್ಲಿ ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಫುಟ್ಬಾಲ್ ತಾರೆ ಪೋರ್ಚುಗಲ್‍ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನ ಹಿಂದಿಕ್ಕಿದ್ದಾರೆ. ಫೆಡರರ್ 106.3 ಮಿಲಿಯನ್ ಡಾಲರ್ (ಸುಮಾರು 802 ಕೋಟಿ ರೂ.) ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಹಾಗೂ ಲಿಯೋನೆಲ್ ಮೆಸ್ಸಿ 104 ಮಿಲಿಯನ್ ಡಾಲರ್ (ಸುಮಾರು 785 ಕೋಟಿ ರೂ.) ಗಳಿಸಿದ್ದಾರೆ.

    ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೊನಾಲ್ಡೊ ಕಳೆದ ವರ್ಷ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಗಳಿಸಿದ್ದರು. ಅದೇ ಸಮಯದಲ್ಲಿ, ಮೆಸ್ಸಿ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ರೊನಾಲ್ಡೊಗಿಂತ ಕೇವಲ 8 ಕೋಟಿ ಕಡಿಮೆ ಗಳಿಸಿದ್ದರು. ಈ ಬಾರಿಯ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 5 95.5 ಮಿಲಿಯನ್ (ಸುಮಾರು 721 ಕೋಟಿ ರೂ.) ಗಳಿಸಿದ್ದಾರೆ.

    ಫೆಡರರ್ ಸಾಧನೆ:
    ಹೆಚ್ಚು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಫೆಡರರ್, ಬ್ರಾಂಡ್ ಅನುಮೋದನೆಯಿಂದ ಸುಮಾರು 7 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಅವರು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದರು. ಫೆಡರರ್ ಮೊದಲ ಸ್ಥಾನಕ್ಕೆ ಜಿಗಿದು ಈ ಸಾಧನೆ ಮಾಡಿದ ಮೊದಲ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಯಾರು, ಗಳಿಕೆ ಎಷ್ಟು?:
    1. ರೋಜರ್ ಫೆಡರರ್- ಸ್ವಿಟ್ಜರ್ಲೆಂಡ್- ಟೆನಿಸ್- 802 ಕೋಟಿ ರೂ.
    2. ಕ್ರಿಸ್ಟಿಯಾನೊ ರೊನಾಲ್ಡೊ- ಪೋರ್ಚುಗಲ್- ಫುಟ್ಬಾಲ್- 793 ಕೋಟಿ ರೂ.
    3. ಲಿಯೋನೆಲ್ ಮೆಸ್ಸಿ- ಅರ್ಜೆಂಟೀನಾ- ಫುಟ್ಬಾಲ್- 785 ಕೋಟಿ ರೂ.
    4. ನೇಮರ್- ಬ್ರೆಜಿಲ್- ಫುಟ್ಬಾಲ್- 721 ಕೋಟಿ ರೂ.
    5. ಲೆಬೋರ್ನ್ ಜೇಮ್ಸ್- ಅಮೆರಿಕ- ಬ್ಯಾಸ್ಕೆಟ್‍ಬಾಲ್- 453 ಕೋಟಿ ರೂ.

    ಮಹಿಳೆಯರಲ್ಲಿ ನವೋಮಿ ಒಸಾಕಾಗೆ ಅಗ್ರಸ್ಥಾನ:
    ಮಹಿಳೆಯರಲ್ಲಿ ಜಪಾನ್‍ನ ಟೆನಿಸ್ ತಾರೆ ನವೋಮಿ ಒಸಾಕಾ ವಿಶ್ವದ ಅತಿ ಹೆಚ್ಚು ಹಣ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಅವರು ಸುಮಾರು 284 ಕೋಟಿ ರೂ. ಗಳಿಸಿದ್ದಾರೆ. ಒಸಾಕಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಒಟ್ಟಾರೆ ಅತಿ ಹೆಚ್ಚು ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನದಲ್ಲಿದ್ದಾರೆ. ಸೆರೆನಾ ಈ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. ಒಸಾಕಾ ಸತತ ಎರಡು ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ. ಅವರು 2018ರಲ್ಲಿ ಯುಎಸ್ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದಿದ್ದರು. ಅದೇ ಸಮಯದಲ್ಲಿ ಸೆರೆನಾ 23 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ.

  • ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ರೋಮ್: ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪ್ರಪಂಚದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

    ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ರೊನಾಲ್ಡೊ ಅವರು ಬುಗಾಟಿ ಸಂಸ್ಥೆ ನಿರ್ಮಿಸಲಾದ 11 ಮಿಲಿಯನ್ ಯುರೋ (85.65 ಕೋಟಿ ರೂ.) ಮೌಲ್ಯದ ಅತ್ಯಂತ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ.

    2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಎಂಬ ಕಾರನ್ನು ಖರೀದಿ ಮಾಡಿದ್ದಾರೆ. ಈಗ ಈ ಕಾರನ್ನು ಖರೀದಿ ಮಾಡಿದರೂ ಕಾರಿನ ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವುದರಿಂದ 2021ಕ್ಕೆ ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡು ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.

    ಬುಗಾಟಿ ಕಂಪನಿ 110ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಈ ಒಂದು ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. 2019ರ ಜಿನಿವಾ ಮೋಟರ್ ಶೋದಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು ಕಂಪನಿಯ 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 260 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮಥ್ರ್ಯ ಹೊಂದಿದೆ.

    ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ನಂತಹ ದುಬಾರಿ ಕಾರಗಳನ್ನು ಹೊಂದಿದ್ದಾರೆ.