Tag: ಕ್ರಿಶ್ಚಿಯನ್ನರು

  • ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್

    ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್

    ಚೆನ್ನೈ: ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರ ಆಗುತ್ತಿತ್ತು ಎಂದು ಹೇಳುವ ಮೂಲಕ ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ವಿವಾದವನ್ನು ಸೃಷ್ಟಿಸಿದ್ದಾರೆ.

    ಕಳೆದ ತಿಂಗಳು ಜೂನ್ 28 ರಂದು ಅಪ್ಪಾವು ಮತ್ತು ಡಿಎಂಕೆ ಎಲ್‍ಎಂಎ ಇನಿಗೊ ಇರುದಯರಾಜ್ ಅವರು, ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್

    ಈ ವೇಳೆ ಮಾತನಾಡಿದ ಅಪ್ಪಾವು ಅವರು, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತೆ ಆಗುತ್ತಿತ್ತು. ನಾನು ಇಂದು ಈ ಸ್ಥಾನಕ್ಕೆ ಬೆಳೆಯಲು ಕ್ಯಾಥೋಲಿಕ್ ಫಾದರ್ ಮತ್ತು ಸಿಸ್ಟರ್ ಮಾತ್ರ ಸಹಾಯ ಮಾಡಿದ್ದರು. ತಮಿಳುನಾಡು ಸರ್ಕಾರ ನಿಮ್ಮ ಸರ್ಕಾರ. ನಿಮ್ಮಿಂದ ಈ ಸರ್ಕಾರವನ್ನು ರಚಿಸಲಾಯಿತು. ನಿಮ್ಮ ಪ್ರಾರ್ಥನೆ ಮತ್ತು ಉಪವಾಸವೇ ಈ ಸರ್ಕಾರ ರಚನೆಗೆ ಕಾರಣ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಫಾದರ್‍ಗಳು ಸಾಮಾಜಿಕ ನ್ಯಾಯ ಮತ್ತು ದ್ರಾವಿಡ ಮಾದರಿ ಸರ್ಕಾರ ರಚಿಸಲು ಮುಖ್ಯ ಕಾರಣರಾಗಿದ್ದಾರೆ ಎಂದು ಹೇಳಿದರು.

    ನೀವು (ಕ್ಯಾಥೋಲಿಕ್ ಕ್ರಿಶ್ಚಿಯನ್ನರು) ಯಾರ ಮೇಲೂ ಅವಲಂಬನೆಯಾಗುವ ಅಗತ್ಯವಿಲ್ಲ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗಳಿಗೆ ಕೊಡಿ. ಅವರು ಯಾವುದನ್ನೂ ನಿರಾಕರಿಸುವುದಿಲ್ಲ. ಎಲ್ಲವನ್ನೂ ಪರಿಹರಿಸುತ್ತಾರೆ. ಏಕೆಂದರೆ ಈ ಸರ್ಕಾರ ರಚನೆಗೆ ನೀವೇ ಕಾರಣ ಎಂದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಇದು ನಿಮ್ಮ ಸರ್ಕಾರ. ಅವರು ನಿಮ್ಮ ಮುಖ್ಯಮಂತ್ರಿ. ಅಲ್ಲದೇ ನಾನು ನಿಮ್ಮೊಂದಿಗೆ ಇದ್ದೇನೆ. ತಮಿಳುನಾಡಿನಿಂದ ಕ್ರೈಸ್ತರನ್ನು ತೊಲಗಿಸಿದರೆ ಅಭಿವೃದ್ಧಿ ಆಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಮುಖ್ಯ ಕಾರಣ ಕ್ಯಾಥೋಲಿಕ್ ಕ್ರಿಶ್ಚಿಯನ್ನರು. ಇಂದಿನ ತಮಿಳುನಾಡು ನಿಮ್ಮಿಂದಲೇ ನಿರ್ಮಾಣವಾಗಿದೆ ಎಂದು ಹೊಗಳಿದರು. ಇದನ್ನೂ ಓದಿ: ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ

    MK Stalin (1)

    ಇದೀಗ ಅಪ್ಪಾವು ಅವರ ಹಳೆಯ ಭಾಷಣದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮಿಳುನಾಡು ವಿಧಾನಸಭಾ ಸ್ಪೀಕರ್‌ನ ಈ ಹೇಳಿಕೆಯನ್ನು ಖಂಡಿಸಿ ಡಿಎಂಕೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಅಲ್ಲದೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ವಕ್ತಾರ ನಾರಾಯಣನ್ ಅವರು, ಇದೇನಾ ಡಿಎಂಕೆಯ ಸೆಕ್ಯುಲರಿಸಂ? ತಮ್ಮನ್ನು ಜಾತ್ಯಾತೀತ ಪಕ್ಷ ಎಂದು ಕರೆದುಕೊಳ್ಳುವ ಹಕ್ಕು ಕಳೆದುಕೊಂಡಿದ್ದಾರೆ. ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಈಗ ಸಾಬೀತಾಗಿದೆ ಟೀಕಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಪ್ಪಾವು ಅವರು, ಬಿಜೆಪಿ ನನ್ನ ಭಾಷಣವನ್ನು ಪ್ರಚಾರ ಮಾಡುತ್ತಿರುವುದು ಒಳ್ಳೆಯದು, ನಾನು ಆ ರೀತಿ ಹೇಳಿಲ್ಲ ಎಂದು ಹೇಳುವುದಿಲ್ಲ. ಹೌದು, ನಾನು ಹೇಳಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಎಡಿಟ್ ಮಾಡಿರುವ ದೃಶ್ಯಗಳನ್ನು ಮಾತ್ರ ಹರಿಬಿಡಲಾಗುತ್ತಿದೆ. ನಾನು ಏನೇ ಮಾತನಾಡಿದ್ದರೂ, ಕೇವಲ ಇತಿಹಾಸದಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ತಿಳಿಸಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಮೋದಿ ಸರ್ಕಾರ ಕ್ರೈಸ್ತರನ್ನು ಟಾರ್ಗೆಟ್ ಮಾಡಿದೆ: ಪಿ. ಚಿದಂಬರಂ

    ಮೋದಿ ಸರ್ಕಾರ ಕ್ರೈಸ್ತರನ್ನು ಟಾರ್ಗೆಟ್ ಮಾಡಿದೆ: ಪಿ. ಚಿದಂಬರಂ

    ಕೋಲ್ಕತ್ತಾ: ಮೋದಿ ಸರ್ಕಾರವು ತನ್ನ ಬಹುಮತದ ಅಜೆಂಡಾವನ್ನು ಮುಂದುವರಿಸಲು ಕ್ರಿಶ್ಚಿಯನ್ನರನ್ನು ಗುರಿಯಾಗಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

    ಕೋಲ್ಕತ್ತಾದಲ್ಲಿ ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ವಿಚಾರವಾಗಿ ಪಿ.ಚಿದಂಬರಂ ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ದೃಷ್ಟಿಯಿಂದ ನೀಡುತ್ತಿರುವ ವಿದೇಶಿ ಕೊಡುಗೆಗಳನ್ನು ನಿರಾಕರಿಸುತ್ತಿರುದಕ್ಕಿಂತ ಆಘಾತಕಾರಿ ವಿಚಾರ ಮತ್ತೊಂದಿಲ್ಲ. ಭಾರತದಲ್ಲಿರುವ ಬಡವರು ಮತ್ತು ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮದರ್ ತೆರೇಸಾ ಅವರ ಸ್ಮರಣೆಗೆ ಅತ್ಯಂತ ದೊಡ್ಡ ಅವಮಾನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಎಫ್‌ಸಿಆರ್‌ಎ ನೋಂದಣಿಯ ನವೀಕರಣಕ್ಕಾಗಿ ಮಿಷನರೀಸ್ ಆಫ್ ಚಾರಿಟಿಯು ನೀಡಿದ್ದ ಅರ್ಜಿಯನ್ನು ಡಿಸೆಂಬರ್ 25ರಂದು ಗೃಹ ಸಚಿವಾಲಯ ನಿರಾಕರಿಸಿತ್ತು. ಈ ಬಗ್ಗೆ ಚಿದಂಬರಂ ಟ್ವೀಟ್‌ ಮಾಡಿ, ಎಂಎಚ್‍ಎ ತನ್ನ ಕೌಶಲಗಳನ್ನು ಕೋಮು ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಬಳಸಬೇಕೇ ಹೊರತು ಕ್ರಿಶ್ಚಿಯನ್ ಧರ್ಮಾರ್ಥ ಮತ್ತು ಮಾನವೀಯ ಕಾರ್ಯಗಳನ್ನು ನಿಗ್ರಹಿಸಲು ಅಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    2021ನೇ ವರ್ಷ ಕೊನೆಗೊಳ್ಳುತ್ತಿದ್ದಂತೆ, ಮೋದಿ ಸರ್ಕಾರ ಕ್ರಿಶ್ಚಿಯನ್ನರನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಬಿಜೆಪಿ ತಮ್ಮ ಬಹುಮತದ ಅಜೆಂಡಾವನ್ನು ಮುಂದುವರೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.