ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಗಳನ್ನ ರೂಪಿಸುವಲ್ಲಿ (Charges Framing) ವರ್ಷಗಳೇ ಕಳೆಯುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಚಿಂತಿಸಿದೆ.
ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಅರವಿಂದ್ ಕುಮಾರ್ ಮತ್ತು ಎನ್‌ವಿ ಅಂಜಾರಿಯಾ ಅವರ ಪೀಠವು ಈ ಬಗ್ಗೆ ಪ್ರಸ್ತಾಪಿಸಿದೆ.ಕ್ರಿ ಮಿನಲ್ ಪ್ರಕರಣಗಳಲ್ಲಿ ಆರೋಪಗಳ ಚೌಕಟ್ಟು (ಫ್ರೇಮಿಂಗ್ ಆಫ್ ಚಾರ್ಜಸ್) ರೂಪಿಸುವಲ್ಲಿ ಅನಾವಶ್ಯಕ ವಿಳಂಬವು ನ್ಯಾಯ ವ್ಯವಸ್ಥೆಯ ಮೇಲೆ ಹೊರೆಯಾಗುತ್ತಿದೆ ಮತ್ತು ಆರೋಪಿಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಆರೋಪಗಳನ್ನು ರೂಪಿಸುವುದು ಒಂದು ಸರಳ ಪ್ರಕ್ರಿಯೆಯಾಗಿರಬೇಕು, ಆದರೆ ಇದಕ್ಕೆ ವರ್ಷಗಳೇ ತೆಗೆದುಕೊಳ್ಳುತ್ತಿರುವುದು ಯಾಕೆ? ಎಂದು ಪೀಠ ಪ್ರಶ್ನಿಸಿದೆ.
ಇದರಿಂದಾಗಿ ಆರೋಪಿಗಳಿಗೆ ದೀರ್ಘಕಾಲದವರೆಗೆ ಸಮಸ್ಯೆಯಾಗುತ್ತದೆ. ಜೊತೆಗೆ ನ್ಯಾಯದ ವೇಗವು ಕುಂಠಿತವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ದೇಶಾದ್ಯಂತ ಏಕರೂಪದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು, ಇದಕ್ಕಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 227 ಮತ್ತು 228ರ ಅಡಿಯಲ್ಲಿ ಆರೋಪಗಳ ರೂಪಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ, ಅಟಾರ್ನಿ ಜನರಲ್ ಮತ್ತು ಇತರ ಪಾಲುದಾರರು ಸಲಹೆ ನೀಡಬೇಕು ಎಂದು ಹೇಳಿದೆ.
ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ ಪಡೆದಿದ್ದಾರೆ. ಇಡಿ (ED) ಬಂಧನ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಯಾರು ಏನು ಮಾಡಲಿಲ್ಲ. ಕೆಲವು ಕೇಸ್ ದಬಾವಣೆ ಮೇಲೆ ಬಿಜೆಪಿಯವರು ಹಾಕಿಸಿದ್ರು. ನನ್ನ ಮೇಲೆ, ಸಿಎಂ ಮೇಲೆ ಬೇಕಾದಷ್ಟು ಕೇಸ್ ಹಾಕಿಸಿದ್ರು. ನಾವು ನೋಡಿಕೊಂಡು ಕೂರಬೇಕಾ? ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಕೊಂದವರು ಯಾರು? – ಧರ್ಮಸ್ಥಳ ಪ್ರಕರಣದ ಬಗ್ಗೆ ಮಹಿಳಾ ಸಂಘಟನೆಗಳಿಂದ ಸೋನಿಯಾ ಗಾಂಧಿಗೆ ಪತ್ರ
ನನ್ನ ಮೇಲಿನ ಇಡಿ ಕೇಸ್ ವಜಾ ಆಗಿದೆ, ನಾನು ಬಂಧನ ಆಗಿದ್ದ ಕೇಸ್ ವಜಾ ಆಗಿದೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ (Supreme Court) ವಜಾ ಆಯ್ತು ನನಗೆ ನ್ಯಾಯಕೊಡುವವರು ಯಾರು..? ಜೈಲಿನಿಂದ ಬಿಡುಗಡೆ ಆಗಿ ಬಂದಾಗ, ದೊಡ್ಡ ಸಂಭ್ರಮಾಚರಣೆ ಅಂದ್ರು. ಯಾರೆಲ್ಲ ಟೀಕೆ ಮಾಡಿದ್ರು, ಕೇಸ್ ವಜಾ ಮಾಡಿದಾಗ ಯಾಕೆ ಅಭಿನಂದನೆ ಸಲ್ಲಿಸಲಿಲ್ಲ…? ಇದೊಂದೇ ಅಲ್ಲ ನೂರಾರು ಕೇಸ್ ವಜಾ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ʻಬುರುಡೆʼ ಕೇಸ್ | ಮತ್ತೊಂದು ರಹಸ್ಯ ಸ್ಫೋಟ – ಕೇರಳದ ಯೂಟ್ಯೂಬರ್ ಮನಾಫ್‌ಗೆ SIT ನೋಟಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಬಿಜೆಪಿ ನಾಯಕರ ಆಕ್ಷೇಪ ವಿಚಾರ ಕುರಿತು ಮಾತನಾಡಿ, ಕರ್ನಾಟಕ ಸರ್ಕಾರದ ತೀರ್ಮಾನ ಬಿಜೆಪಿಗೆ ಯಾಕೆ ಆತಂಕ? ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸರ್ಕಾರಕ್ಕೆ ಅವಕಾಶ ಇದೆ. ಕಾನೂನಲ್ಲೇ ಇದೆ ಅವರ ಅವಧಿಯಲ್ಲೇ ಮಾಡಿದಂತ ಕಾನೂನಿನಲ್ಲೇ ಇದೆ. ಬ್ಯಾಲೆಟ್ ಅಥವಾ ಇವಿಎಂನಲ್ಲಿ ಚುನಾವಣೆ ಮಾಡಬಹುದು ಅಂತ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಅಂತ ಸರ್ಕಾರ ತೀರ್ಮಾನಿಸಿದೆ. ಗಾಬರಿ ಯಾಕೆ ಆಗುತ್ತಿದೆ ನಿಮಗೆ? ಕಳ್ಳನ ಮನಸ್ಸು ಹುಳ್ಳುಹುಳ್ಳಗೆ ಅಂದಾಗೆ ನೋಡಿಕೊಳ್ಳುತ್ತಿದ್ದೀರಾ? ಅಂತ ಕುಟುಕಿದ್ದಾರೆ.
ನಾವು ಪಾರ್ಲಿಮೆಂಟ್ ಎಲೆಕ್ಷನ್ ಎಲ್ಲ ತನಿಖೆ ಮಾಡಿದ್ದೇವೆ. ಆದ್ರ ಬಗ್ಗೆ ನಾನು ಚರ್ಚೆ ಮಾಡಲ್ಲ. ಸೊಸೈಟಿಗೆ ಚುನಾವಣೆ ಮಾಡಲ್ವ ಅದೇ ರೀತಿ ಮಾಡಬೇಕು ಅಂದುಕೊಂಡಿದ್ದೇವೆ. ಸೆಂಟ್ರಲ್ ಎಲೆಕ್ಷನ್ ಕಮಿಷನ್ ಸ್ಟೇಟ್, ಪಾರ್ಲಿಮೆಂಟ್, ಅಸೆಂಬ್ಲಿದು ಅವರು ಏನು ತೀರ್ಮಾನ ಮಾಡ್ತಾರೋ ಮಾಡಲಿ. ಸರ್ಕಾರದ ತೀರ್ಮಾನ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಅಂತ ಸ್ಪಷ್ಟಪಡಿಸಿದರು.
– ಪೊಲೀಸ್, ಕಾನೂನು ಇಲಾಖೆಗಳ ವಿರೋಧದ ನಡುವೆಯೂ ಕೇಸ್ ವಾಪಸ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಬೆಂಬಲಿಗರ ವಿರುದ್ಧದ 12 ಪ್ರಕರಣವೂ ಸೇರಿ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಮಿತಿ (Congress Cabinet) ಒಪ್ಪಿಗೆ ಸೂಚಿಸಿದೆ.
ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು 2019 ರಲ್ಲಿ ಡಿಕೆಶಿವಕುಮಾರ್ ಅವರನ್ನು ಬಂಧಿಸಿದಾಗ ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕ್ಯಾಬಿನೆಟ್ ತೆಗೆದುಕೊಂಡಿತು.
ಕೇಸ್ ವಾಪಸ್‌ಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿವೆ. ಸಂಪುಟ ಸಭೆಯ ಟಿಪ್ಪಣಿಯಲ್ಲಿ ಎರಡೂ ಇಲಾಖೆಗಳ ಅಭಿಪ್ರಾಯ ಕೇಳಲಾಗಿತ್ತು. ಈ ವೇಳೆ ಇವು ವಾಪಸ್ ಪಡೆಯಲು ಅರ್ಹವಾದ ಪ್ರಕರಣಗಳಲ್ಲ ಎಂದು ಡಿಜಿ ಮತ್ತು ಐಜಿಪಿ ಅಭಿಪ್ರಾಯ ಪಟ್ಟರೆ, ಸಾರ್ವಜನಿಕ ಹಿತಾಸಕ್ತಿ ಇಲ್ಲ, ಕೇಸ್ ಹಿಂದಕ್ಕೆ ಪಡೆಯಲು ಸೂಕ್ತ ಅಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ಪಟ್ಟಿದೆ. ಆದಾಗ್ಯೂ ಎರಡೂ ಇಲಾಖೆಯ ಅಭಿಪ್ರಾಯ ಬದಿಗೊತ್ತಿ ಸಂಪುಟ ಸಭೆಯಲ್ಲಿ ಕೇಸ್ ವಾಪಸ್‌ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದನ್ನೂ ಓದಿ: ಸಮೀರ್ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್
– 3 ಪ್ರಮುಖ ಹೈವೊಲ್ಟೇಜ್ ಬಿಲ್ ಮಂಡನೆ – ಮಸೂದೆ ಹರಿದು ಅಮಿತ್ ಶಾ ಕಡೆಗೆ ಎಸೆದ ವಿಪಕ್ಷ ನಾಯಕರು
ನವದೆಹಲಿ: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು ಬಂಧನಕ್ಕೊಳಗಾದರೆ, ಅವರನ್ನು ಪದಚ್ಯುತಗೊಳಿಸುವ ಮಸೂದೆಗಳನ್ನು (Criminal MP’s Removal Bill) ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ- 2025 ಅನ್ನು ಮಂಡಿಸಿ ಈ ಮೂರೂ ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
ಮೂರು ಮಸೂದೆಗಳ ಮಂಡನೆ ಬೆನ್ನಲ್ಲೇ ಲೋಕಸಭೆಯಲ್ಲಿ (Lok Sabha) ಕೋಲಾಹಲ ಸೃಷ್ಟಿಯಾಯಿತು. ವಿರೋಧ ಪಕ್ಷದ ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಅಮಿತ್ ಶಾ ಕಡೆಗೆ ಎಸೆದರು. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ವಿರೋಧ ಪಕ್ಷಗಳ ವರ್ತನೆಗೆ ಸ್ಪೀಕರ್ ಓಂ ಬಿರ್ಲಾ ಆಕ್ರೋಶ ಹೊರ ಹಾಕಿದರು.
ಅಮಿತ್ ಶಾ ಅವರನ್ನು ಬಂಧಿಸಿದಾಗ ಅವರು ತಮ್ಮ ನೈತಿಕತೆಯನ್ನು ಪ್ರದರ್ಶಿಸಿದ್ದಾರೆಯೇ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನನ್ನ ವಿರುದ್ಧ ಆರೋಪಗಳು ಕೇಳಿ ಬಂದಾಗ, ಬಂಧನಕ್ಕೂ ಮುನ್ನ ನಾನು ನೈತಿಕವಾಗಿ ರಾಜೀನಾಮೆ ನೀಡಿದ್ದೇನೆ. ನ್ಯಾಯಾಲಯದಿಂದ ನಾನು ನಿರಪರಾಧಿ ಎಂದು ಸಾಬೀತಾಗುವವರೆಗೆ ನಾನು ಯಾವುದೇ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಂಡಿಲ್ಲ ಎಂದು ಹೇಳಿದರು.
ಮಸೂದೆಯಲ್ಲಿ ಏನಿದೆ?
* ಗಂಭೀರ ಸ್ವರೂಪದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದಾಗ ಅಂಥಹವರನ್ನು ಹುದ್ದೆಗಳಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ
* 30 ದಿನಗಳ ಕಾಲ ನಿರಂತರ ಬಂಧನದಲ್ಲಿದ್ದವರನ್ನು 31ನೇ ದಿನ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ.
* ಬಂಧನದಿಂದ ಬಿಡುಗಡೆ ಆದವರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ನೇಮಿಸಲು ಯಾವುದೇ ನಿರ್ಬಂಧ ಇರುವುದಿಲ್ಲ
* ಇದಕ್ಕಾಗಿ ಸಂವಿಧಾನದ 75ನೇ ವಿಧಿಗೆ ಸೆಕ್ಷನ್ 5(ಎ) ಅನ್ನು ಸೇರ್ಪಡೆ ಮಾಡಲಾಗುತ್ತಿದೆ
* ಈ ನಿಯಮದ ಪ್ರಕಾರ, ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧಕ್ಕಾಗಿ ಸತತ 30 ದಿನಗಳಿಂದ ಬಂಧನದಲ್ಲಿರುವ ಅಥವಾ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಯು 31ನೇ ದಿನದಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬೇಕು.
* ಪ್ರಧಾನಿಯು, ಶಿಫಾರಸು ಮಾಡದಿದ್ದರೂ ಅಂಥಹ ಸಚಿವರು 31ನೇ ದಿನದಂದು ಅಧಿಕಾರ ಕಳೆದುಕೊಳ್ಳುತ್ತಾರೆ.
* ಇದೇ ನಿಯಮ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅನ್ವಯಿಸಲಿದೆ.
* ರಾಜ್ಯಗಳಲ್ಲಿ ರಾಜ್ಯಪಾಲರು ಪದಚ್ಯುತಗೊಳಿಸುವ ಅಧಿಕಾರ ಹೊಂದಿರುತ್ತಾರೆ.
* ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ.
* ಹಾಲಿ ಇರುವ ನಿಯಮಗಳ ಅನ್ವಯ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ತಮ್ಮ ಜನಪ್ರತಿನಿಧಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ. ಜೊತೆಗೆ ಶಿಕ್ಷೆ ಮುಗಿದ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.
ಚಿಕ್ಕಬಳ್ಳಾಪುರ: ನೊಂದ ಬಾಲಕಿಯರು, ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬಾಳಿಗೆ ಬೆಳಕಾಗಬೇಕಾದ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿಯೇ ಅವರ ಪಾಲಿಗೆ ವಿಲನ್ ಆಗಿದ್ದಾರೆ. ಬಾಲಕಿಯರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದ, ಅಧೀಕ್ಷಕಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿ ಸರ್ಕಾರಿ ಬಾಲಕಿಯರ ಮಂದಿರವೊಂದಿದೆ. ಚಿಕ್ಕಬಳ್ಳಾಪುರ ನಗರದ .ಬಿಬಿ ರಸ್ತೆಯಲ್ಲಿ ಮಂದಿರ ಇದೆ. ಇದೆ ಬಾಲಕಿಯರ ಮಂದಿರ ಈಗ ಬಾಲಕಿಯರಿಗೆ ನರಕವಾಗಿದೆ. ಬಾಲಮಂದಿರಕ್ಕೆ ಬರುವ ನೊಂದ ಬಾಲಕಿಯರಿಗೆ ಧೈರ್ಯ ಹೇಳುವುದರ ಬದಲು ಬಾಲಕಿಯರಿಗೆ ಸಕಾಲಕ್ಕೆ ಅನ್ನ ಆಹಾರ ನೀಡದೆ, ದೈಹಿಕ ಕಿರುಕುಳ, ಮಾನಸಿಕ ಕಿರುಕುಳ ದೈಹಿಕ ಹಲ್ಲೆ, ನಡೆಸಿ ಕಿಟಕಿಯ ಸರಳುಗಳಿಗೆ ಕಟ್ಟಿ ಹಾಕುವುದು, ಕೂಡಿ ಹಾಕುವುದು, ಬರೆ ಹಾಕಿರುವ ಪ್ರಕರಣಗಳು ಬಯಲಾಗಿವೆ.
ಸ್ವತಃ ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ ಬಾಲಕಿಯರಿಗೆ ಸಾಂತ್ವನ ಹೆಳುವುದರ ಬದಲು ಕ್ಷುಲ್ಲಕ ಕಾರಣಕ್ಕೆ ಬಾಲಕಿಯರನ್ನು ಕಿಟಕಿ ಸರಳು, ಕಂಬಗಳಿಗೆ ಕಟ್ಟಿಹಾಕಿ, ರೂಮ್‌ಗಳಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ವತಃ ನೊಂದ ಬಾಲಕಿಯರು ಅವಲತ್ತುಕೊಂಡಿದ್ದರು. ಮಾಹಿತಿ ಅರಿತ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ದೂರು ಆಲಿಸಿ ತನಿಖೆಗೆ ಸೂಚಿಸಿದರು.
ಆಗ ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರ ಕರ್ಮಕಾಂಡ ಬಯಲಾಗಿವೆ. ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿಯಾಗಿರುವ ಮಮತಾ ಹಾಗೂ ಬಾಲಮಂದಿರದ ಸಹಾಯಕಿ ಸರಸ್ವತಮ್ಮ ಬಾಲಕಿಯರಿಗೆ ಚಿತ್ರಹಿಂಸೆ ನೀಡಿ, ದೈಹಿಕ ಹಲ್ಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇದರಿಂದ ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕ ಸಂಘದ ಅಧ್ಯಕ್ಷರಾದ ಪಿ.ಎನ್ ರವೀಂದ್ರರವರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವತಾಜ್‍ಬಿ, ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದರಿಂದ ಮಹಿಳಾ ಠಾಣೆಯ ಪೊಲೀಸರು ಮಮತಾ ಹಾಗೂ ಸರಸ್ವತಿ ವಿರುದ್ಧ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಾಯ್ದೆ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಮತಾರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಮುಂಬೈ: 15 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ (Aarka Sports and Management Limited) ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ (Criminal Case) ದಾಖಲಿಸಿದ್ದಾರೆ.
ರಾಂಚಿಯಲ್ಲಿ 2017ರ ಕ್ರಿಕೆಟ್ ಅಕಾಡೆಮಿ ಒಪ್ಪಂದಕ್ಕೆ ಸಂಬಂಧಿಸಿ ಆಗಿರುವ ವಂಚನೆ ವಿರುದ್ಧ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿವಾಕರ್ ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್
ಏನಿದು ಷರತ್ತು? – ಉಲ್ಲಂಘನೆಯಾಗಿದ್ದು ಹೇಗೆ?
ದಿವಾಕರ್ ಅವರು ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸಲು 2017ರಲ್ಲಿ ಧೋನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಷರತ್ತುಗಳನ್ನ ಪಾಲಿಸಲಿಲ್ಲ. ಅಲ್ಲದೇ ಆರ್ಕಾ ಸ್ಪೋರ್ಟ್ಸ್ನ ಶುಲ್ಕ ಮತ್ತು ಷೇರುಗಳನ್ನೂ ಧೋನಿ ಅವರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್ ಕಮ್ಮಿನ್ಸ್ ನಾಯಕತ್ವಕ್ಕೆ ಮೆಚ್ಚುಗೆ!
ಒಪ್ಪಂದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಉಲ್ಲಂಘನೆ ಕಾರಣ ಆಗಸ್ಟ್ 15, 2021ರಂದು ಧೋನಿ ಅರ್ಕಾ ಸ್ಪೋರ್ಟ್ಸ್‌ಗೆ ನೋಟಿಸ್ ಕಳುಹಿಸಿದ್ದರು. ಇಂತಹ ನೋಟಿಸ್ಗಳನ್ನು ಹಲವು ಬಾರಿ ಕಳುಹಿಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ವಿಧಿ ಅಸೋಸಿಯೇಟ್ಸ್ನ ದಯಾನಂದ್ ಸಿಂಗ್ ಮಾಹಿತಿ ನೀಡಿದ್ದಾರೆ. ಮೋಸ ಮಾಡಿರುವ ಮತ್ತು 15 ಕೋಟಿ ರೂ. ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ. ಇದನ್ನೂ ಓದಿ: ಎರಡೇ ದಿನಗಳಿಗೆ 33 ವಿಕೆಟ್ ಉಡೀಸ್; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ
ನವದೆಹಲಿ: ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಇತ್ತೀಚಿನ ವಿಶ್ಲೇಷಣೆಯಲ್ಲಿ ಭಾರತದಾದ್ಯಂತ ವಿವಿಧ ರಾಜ್ಯಗಳ ವಿಧಾನಸಭೆಯ ಶಾಸಕರಲ್ಲಿ (MLA)ಸುಮಾರು 44% ರಷ್ಟು ಶಾಸಕರು ತಮ್ಮ ಮೇಲೆ ಕ್ರಿಮಿನಲ್ ಕೇಸ್‌ಗಳು (Criminal Case) ಇರುವುದಾಗಿ ಘೋಷಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.
ರಾಷ್ಟ್ರವ್ಯಾಪಿ ರಾಜ್ಯ ವಿಧಾನಸಭೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಶಾಸಕರು ಸಲ್ಲಿಸಿರುವ ಪ್ರಮಾಣಪತ್ರವನ್ನು ಪರಿಶೀಲಿಸಿದ ಎಡಿಆರ್ ಈ ಮಾಹಿತಿಗಳನ್ನು ತಿಳಿಸಿದೆ.
ಇತ್ತೀಚಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಮೊದಲು ಶಾಸಕರು ಸಲ್ಲಿಸಿರುವ ಡೇಟಾಗಳನ್ನು ಹೊರತೆಗೆಯಲಾಗಿದೆ. 28 ರಾಜ್ಯ ವಿಧಾನಸಭೆಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ 4,033 ವ್ಯಕ್ತಿಗಳ ಪೈಕಿ ಒಟ್ಟು 4,001 ಶಾಸಕರನ್ನು ಈ ವಿಶ್ಲೇಷಣೆ ಒಳಗೊಂಡಿದೆ.
ವಿಶ್ಲೇಷಿಸಿದ ಶಾಸಕರಲ್ಲಿ 1,136 ಎಂದರೆ 28% ರಷ್ಟು ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಇತರ ಆರೋಪಗಳೂ ಸೇರಿವೆ.
ರಾಜ್ಯವಾರು ನೋಡುವುದಾದರೆ ಕೇರಳದಲ್ಲಿ 135 ಶಾಸಕರ ಪೈಕಿ 95 ಶಾಸಕರು ಎಂದರೆ 70% ನಷ್ಟು ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅದೇ ರೀತಿ ಬಿಹಾರದಲ್ಲಿ 242 ಶಾಸಕರಲ್ಲಿ 161 (67%), ದೆಹಲಿಯಲ್ಲಿ 70 ಶಾಸಕರಲ್ಲಿ 44 (63%), ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 175 (62%), ತೆಲಂಗಾಣದಲ್ಲಿ 118 ಶಾಸಕರ ಪೈಕಿ 72 (61%), ಮತ್ತು ತಮಿಳುನಾಡಿನಲ್ಲಿ 224 ಶಾಸಕರಲ್ಲಿ 134 (60%) ತಮ್ಮ ಅಫಿಡವಿಟ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ
ಇನ್ನು ದೆಹಲಿಯಲ್ಲಿ 70 ಶಾಸಕರಲ್ಲಿ 37 (53%), ಬಿಹಾರದಲ್ಲಿ 242 ಶಾಸಕರಲ್ಲಿ 122 (50%), ಮಹಾರಾಷ್ಟ್ರದಲ್ಲಿ 284 ಶಾಸಕರಲ್ಲಿ 114 (40%), ಜಾರ್ಖಂಡ್‌ನಲ್ಲಿ 79 ಶಾಸಕರಲ್ಲಿ 31 (39%), ತೆಲಂಗಾಣದಲ್ಲಿ 118 ಶಾಸಕರಲ್ಲಿ 46 (39%), ಮತ್ತು ಉತ್ತರ ಪ್ರದೇಶದಲ್ಲಿ 403 ಶಾಸಕರಲ್ಲಿ 155 (38%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ತಿಳಿಸಿದೆ.
ಆಸ್ತಿ ವಿವರ: ಕ್ರಿಮಿನಲ್ ಕೇಸ್‌ಗಳು ಮಾತ್ರವಲ್ಲದೇ ಶಾಸಕರ ಆಸ್ತಿಯ ವಿವರವನ್ನೂ ಎಡಿಆರ್ ಕಲೆಹಾಕಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಶ್ರೀಮಂತ ಶಾಸಕರು ಇದ್ದಾರೆ ಎಂಬುದು ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ. ಕರ್ನಾಟಕದ 223 ಶಾಸಕರ ಸರಾಸರಿ ಆಸ್ತಿಯ ಮೌಲ್ಯ 64.39 ಕೋಟಿ ರೂ. ಆಗಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆಂಧ್ರಪ್ರದೇಶ 174 ಶಾಸಕರಿಗೆ 28.24 ಕೋಟಿ ರೂ., ಮಹಾರಾಷ್ಟ್ರ 284 ಶಾಸಕರಿಗೆ 23.51 ಕೋಟಿ ರೂ.,ಇದೆ. ಇದನ್ನೂ ಓದಿ: ಖರೀದಿ ಹಾಲಿಗೆ ಲೀಟರ್‌ಗೆ 1.75 ರೂ. ಕಡಿತ ಮಾಡಿದ ಮನ್ಮುಲ್
ತೆಲುಗು ನಟ (Telugu Film Actor) ರಾಣಾ ದಗ್ಗುಬಾಟಿ ಮತ್ತು ಅವರ ತಂದೆ ದಗ್ಗುಬಾಟಿ ಸುರೇಶ್ ಬಾಬು ವಿರುದ್ಧ ಜಾಗವೊಂದರ ವಿಚಾರಕ್ಕೆ ಜಗಳ ನಡೆದಿತ್ತು. ಉದ್ಯಮಿ ಪ್ರಮೋದ್ ಕುಮಾರ್ ರಾಣಾ ದಗ್ಗುಬಾಟಿ ಮತ್ತು ಕೆಲವರ ವಿರುದ್ಧ ದೂರು ನೀಡಿದ್ದರು. ಆದರೆ ಪೊಲೀಸರು (Police) ಕೇಸ್ ದಾಖಲಿಸದ ಕಾರಣ ಪ್ರಮೋದ್ ಕೋರ್ಟ್ ಮೆಟ್ಟಿಲೇರಿ ನೋಟಿಸ್ ತಂದು ದೂರು ನೀಡಿದ್ದರು. ರಾಣಾ ಮತ್ತು ಅವರ ತಂದೆ ಇಬ್ಬರೂ ಸ್ಥಳ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಣಾ ದಗ್ಗುಬಾಟಿ, ತಂದೆ ಸುರೇಶ್ ಬಾಬು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದೆ. ನಾಂಪಲ್ಲಿ ನ್ಯಾಯಾಲಯ ಸಮನ್ಸ್ ಕೂಡ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೂರುದಾರ ಉದ್ಯಮಿಯು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: `ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ
ರಾಣಾ ದಗ್ಗುಬಾಟಿ ವಿರುದ್ಧ ಕ್ರಿಮಿನಲ್ ಆರೋಪ ಇದೇ ಮೊದಲೇನಲ್ಲ. ಈ ಹಿಂದೆ 2017ರ ಔಷಧ ಹಗರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಿಜೆಪಿ (BJP) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ (40 Percent Commission) ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (ಕೆಂಪೇಗೌಡ) (Kempanna) ಅವರನ್ನು ಬೆಂಗಳೂರಿನ (Bengaluru) ವೈಯಾಲಿಕಾವಲ್ ಪೊಲೀಸರು (Police) ಬಂಧಿಸಿದ್ದಾರೆ.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಇತರ 18 ಮಂದಿ ಗುತ್ತಿಗೆದಾರರ ವಿರುದ್ಧ ಸಚಿವ ಮುನಿರತ್ನ (Munirathna) 50 ಕೋಟಿ ಮಾನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ (FIR) ದಾಖಲಾಗಿತ್ತು. ಡಿಸೆಂಬರ್ 23 ರಂದು ಕೆಂಪಣ್ಣನಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಈ ಸಂಬಂಧ ಯಾವುದೇ ಉತ್ತರ ನೀಡದೇ ಇರುವುದರಿಂದ ಇಂದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ
ಕೆಂಪಣ್ಣ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಆಧಾರ ರಹಿತ ಆರೋಪ ಮಾಡಿದ್ದಕ್ಕೆ ನಾನು 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಆದರೆ ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಸೆಕ್ಷನ್ 227 ಅನ್ವಯ ರಿಟ್ ಅರ್ಜಿ ಹಾಕುತ್ತಿದ್ದೇವೆ. ಪ್ರಕರಣದ ಆರೋಪಿಗಳು ಯಾವುದೇ ಆಸ್ತಿ ಪರಭಾರೆ ಮಾಡುವಂತಿಲ್ಲ. ಯಾವುದೇ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಿದ್ದರೆ ಅದರ ಬಿಲ್ ಬಿಡುಗಡೆ ಆಗಬಾರದು. ಅವರ ಕುಟುಂಬದಲ್ಲಿ ಯಾವುದೇ ವಿಲ್ ಮಾಡುವಂತಿಲ್ಲ. ಎಲ್ಲದಕ್ಕೂ ತಡೆಯಾಜ್ಞೆ ತರಲಾಗಿದ್ದು, ಎಲ್ಲಾ 18 ಮಂದಿಗೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 35 ಕ್ರಿಮಿನಲ್ ಕೇಸ್‌ಗಳನ್ನು (Criminal Case) ಹಿಂಪಡೆಯಲು ರಾಜ್ಯ ಸರ್ಕಾರ (Karnataka Government) ನಿರ್ಧರಿಸಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP Workers), ಹಿಂದೂ ಕಾರ್ಯಕರ್ತರು (Hindu Activists), ರೈತ ಮುಖಂಡರು ಮತ್ತು ಕನ್ನಡ ಪರ ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸಂಪುಟ ಉಪಸಮಿತಿ ಶಿಫಾರಸುಗಳನ್ನು ಆಧರಿಸಿ ಹಿಂಪಡೆಯಲು ನಿರ್ಧರಿಸಲಾಯ್ತು. ಆದರೆ ಯಾವ ಯಾವ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ
11,133 ಪೌರ ಕಾರ್ಮಿಕರಿಗೆ (Civic Workers) ಖಾಯಂ ನೌಕರಿ: ಸಿಹಿ ಸುದ್ದಿ ಅಂದ್ರೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳಲು ಸಂಪುಟ ನಿರ್ಧರಿಸಿದೆ. ಇದನ್ನೂ ಓದಿ: ಬಾಲಿವುಡ್‌ನ ಈ ನಟನ ಜೊತೆ ಹಸೆಮಣೆ ಏರಲು ರೆಡಿಯಾದ `ಗೂಗ್ಲಿ’ ನಟಿ
ಈ ನೌಕರರಿಗೆ 17,000-28,980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಅನೇಕ ದಿನಗಳಿಂದ ಹೋರಾಟ ಮಾಡ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಈ ಮಧ್ಯೆ ಮಹತ್ವದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಎಸ್‌ಎಸ್‌ಎಲ್‌ಸಿ ಬೋರ್ಡ್‌ನಲ್ಲಿ ಪಿಯುಸಿ ಬೋರ್ಡ್ ವಿಲೀನ ಮಾಡುವ ವಿಧೇಯಕವನ್ನು ನಾಳೆ ಸದನದಲ್ಲಿ ಮಂಡಿಸಲಾಗುತ್ತದೆ. ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಇದು ಕೂಡ ನಾಳೆ ಸದನದಲ್ಲಿ ಮಂಡನೆ ಆಗಲಿದೆ.
Live Tv
[brid partner=56869869 player=32851 video=960834 autoplay=true]