Tag: ಕ್ರಿಕೆಟ್‌ ವಿಶ್ವಕಪ್‌

  • Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ

    Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ

    ಅಹಮದಾಬಾದ್‌: ವಿಶ್ವಕಪ್‌ (World Cup) ಟೂರ್ನಿಯ ರೋಚಕ ಇಂಡೋ-ಪಾಕ್‌ (Ind vs Pak) ಸಮರಕ್ಕೆ ಕ್ಷಣಗಣನೆ ಬಾಕಿಯಿದೆ. ಮಧ್ಯಾಹ್ನ 2 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆರಂಭವಾಗಲಿದೆ. ಈ ಪಂದ್ಯ ನೋಡಲು ಮೈದಾನಕ್ಕೆ ಜನಸಾಗರವೇ ಹರಿದು ಬಂದಿದೆ. ಎಲ್ಲ ಟಿಕೆಟ್​ಗಳು ಕೂಡ ಸೋಲ್ಡ್​ ಔಟ್​ ಆಗಿದ್ದು, ಟಿಕೆಟ್​ ಸಿಗದ ಕೆಲವರು ಸ್ಟೇಡಿಯಂನ ಹೊರ ಭಾಗದಲ್ಲಿ ಭಾರತ ತಂಡದ ಜೆರ್ಸಿಯನ್ನು ಹಾಕಿ ಸಂಭ್ರಮಾಚರಣೆ ಮಾಡುವ ಮೂಲಕ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

    ಇನ್ನೇನು ಕೆಲವೇ ಗಂಟೆಗಳಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲಿವುಡ್​ ಗಾಯಕರಾದ ಶಂಕರ್​ ಮಹಾದೇವನ್​, ಸುಖ್ವಿಂದರ್​ ಸಿಂಗ್​, ಅರ್ಜಿತ್​ ಸಿಂಗ್​ ಸಂಗೀತ ಸುಧೆ ಹರಿಸಲಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಹಲವು ಮಾಜಿ ಆಟಗಾರರು ಈ ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಇದನ್ನೂ ಓದಿ: World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    ಟೀಂ ಇಂಡಿಯಾ ಗೆಲುವಿಗೆ ಹೋಮ, ಹವನ:
    ಪ್ರತಿಬಾರಿ ಭಾರತದ ಗೆಲುವಿಗಾಗಿ ದೇಶದ ಹಲವು ಕಡೆಗಳಲ್ಲಿ ಅಭಿಮಾನಿಗಳು ಪೂಜೆ ಮತ್ತು ಪ್ರಾರ್ಥನೆ ನಡೆಸಿದ್ದಾರೆ. ಪಂದ್ಯಕ್ಕೆ ಭಾರೀ ಕಟ್ಟೆಚ್ಚರ ವಹಿಸಿದ್ದು, ಗುಜರಾತ್​ ಪೊಲೀಸ್​, ಎನ್​ಎಸ್​ಜಿ, ಆರ್‌ಎಎಫ್‌​, ಗೃಹರಕ್ಷಣಾ ಪಡೆ ಸಹಿತ ಕ್ರೀಡಾಂಗಣದ ಸುತ್ತ ವಿವಿಧ ಭದ್ರತಾ ಏಜೆನ್ಸಿಗಳಿಂದ ಒಟ್ಟು 11 ಸಾವಿರ ರಕ್ಷಣಾ ಸಿಬ್ಬಂದಿಯನ್ನು ಬಿಗಿಭದ್ರತೆಗಾಗಿ ನಿಯೋಜಿಸಲಾಗಿದೆ. ಇದನ್ನೂ ಓದಿ: Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.

    2016ರಲ್ಲಿ ಕೊನೆಯದ್ದಾಗಿ ಭಾರತಕ್ಕೆ ಬಂದಿದ್ದ ಪಾಕ್ ಈಡನ್ ಗಾರ್ಡನ್‌ನಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಕಣಕ್ಕಿಳಿದಿತ್ತು. ಅಂದು ಮಳೆ ಅಡ್ಡಿಯಾದ್ದರಿಂದ ಪಾಕ್ ತಂಡ ನೀಡಿದ್ದ 119 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ತಲುಪಲು ಭಾರತಕ್ಕೆ ಟಾರ್ಗೆಟ್ ನೀಡಲಾಗಿತ್ತು. ಆದ್ರೆ ಬಲಿಷ್ಠ ಭಾರತ ತಂಡ 15.5 ಓವರ್‌ಗಳಲ್ಲೇ ಈ ಗುರಿ ಪೂರೈಸಿತ್ತು. ಇದೀಗ 7 ವರ್ಷಗಳ ಮತ್ತೆ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಪಾಕ್ ತಂಡವನ್ನು ಬಗ್ಗು ಬಡಿಯಲು ಟೀಂ ಇಂಡಿಯಾ ಸಜ್ಜಾಗಿದೆ. ಇದನ್ನೂ ಓದಿ: ಇಂಡೋ-ಪಾಕ್‌ ವಿಶ್ವ ಸಮರ: ʻಗೆದ್ದು ಬಾ ಭಾರತʼ – ಕೋಟ್ಯಂತರ ಅಭಿಮಾನಿಗಳ ಶುಭ ಹಾರೈಕೆ

    ಚಿಕ್ಕಬಳ್ಳಾಪುರ ಚೌಡೇಶ್ವರಿಗೆ ವಿಶೇಷ ಪೂಜೆ: ಪಾಕ್‌ ವಿರುದ್ಧ ಭಾರತ ಜಯ ಸಾಧಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಚೌಡೇಶ್ವರಿ ದೇವಾಲಯದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚೌಡೇಶ್ವರಿ ದೇವಿ ಬಳಿ ಭಾರತ ಧ್ವಜ ಇಟ್ಟು ಪೂಜೆ ಮಾಡಿಸಿ ಭಾರತ ತಂಡ ಗೆಲ್ಲಲಿ ಅಂತ ಅಭಿಮಾನಿಗಳು ಅಶಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    ಮುಂಬೈ: ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ನಿರ್ಣಾಯಕ ಘಟ್ಟದಲ್ಲಿದ್ದು, (ICC World Cup 2023) ಇಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

    1987 ಮತ್ತು 1996ರಲ್ಲಿ ಪಾಕಿಸ್ತಾನದ (Pakistan) ಜೊತೆಗೆ 2011ರಲ್ಲಿ ಬಾಂಗ್ಲಾದೇಶದ ಜೊತೆಗೆ ಸಹ ಆತಿಥ್ಯದೊಂದಿಗೆ ವಿಶ್ವಕಪ್‌ ಟೂರ್ನಿ ಆಯೋಜಿಸಿದ್ದ ಭಾರತ ಈ ಬಾರಿ ಪೂರ್ಣ ಆತಿಥ್ಯ ವಹಿಸಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನ  ತಂಡಗಳು ಎದುರಾಗುತ್ತಿವೆ ಅಂದ್ರೆ ಸಾಕು ಪ್ರತಿ ಕ್ಷಣವೂ ಮೈ ರೋಮಾಂಚನವಾಗುತ್ತದೆ. ದೇಶದ ಮೂಲೆ ಮೂಲೆಯಲ್ಲಿರುವ ಕ್ರಿಕೆಟ್‌ ಅಭಿಮಾನಿಗಳು (Cricket Fans) ಈ ಪಂದ್ಯಗಳನ್ನು ಕಣ್ತುಂಬಿಕೊಳ್ಳೋದಕ್ಕೆ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಾತ್ರ ಏಕೆ ಇಷ್ಟೊಂದು ಕ್ರೇಜ್‌ ಹೆಚ್ಚಾಗಿದೆ? ಎಂಬುದನ್ನಿಲ್ಲಿ ತಿಳಿಯೋಣ. ಇದನ್ನೂ ಓದಿ: ರೋಹಿತ್‌ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್‌ ಹಿಂದಿಕ್ಕಿದ ಭಾರತ

    ಇತಿಹಾಸವೇ ರೋಚಕ..?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು. ಇದನ್ನೂ ಓದಿ: ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

    ನೆನಪಿದೆಯಾ ಆ ಕರಾಳ ದಿನ..?
    2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ಇಂಡೋ-ಪಾಕ್‌ ಕದನ: 10 ಸೆಕೆಂಡ್‌ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಇದಾದ ಬಳಿಕ 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಪಾಕ್‌ ಉಗ್ರರು, ಭಾರತೀಯ ಯೋಧರನ್ನು ಭೀಕರವಾಗಿ ಬಾಂಬ್‌ ದಾಳಿಯಲ್ಲಿ ಕೊಂದರು. ಇದು ಇನ್ನಷ್ಟು ಭಾರತೀಯರ ನಿದ್ದೆಗೆಡಿಸಿತ್ತು. ಇದನ್ನೂ ಓದಿ: 7-0 ದಾಖಲೆ ಬಗ್ಗೆ ಚಿಂತೆಯಿಲ್ಲ, ಈ ಬಾರಿ ಮುರಿಯುತ್ತೇವೆ: ಅಜಂ ವಿಶ್ವಾಸ

    2016ರ‌ಲ್ಲಿ ಕೊನೆಯದ್ದಾಗಿ ಭಾರತಕ್ಕೆ ಬಂದಿದ್ದ ಪಾಕ್‌ ಈಡನ್‌ ಗಾರ್ಡನ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿತ್ತು. ಅಂದು ಮಳೆ ಅಡ್ಡಿಯಾದ್ದರಿಂದ ಪಾಕ್‌ ತಂಡ ನೀಡಿದ್ದ 119 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ತಲುಪಲು ಭಾರತಕ್ಕೆ ಟಾರ್ಗೆಟ್‌ ನೀಡಲಾಗಿತ್ತು. ಆದ್ರೆ ಬಲಿಷ್ಠ ಭಾರತ ತಂಡ 15.5 ಓವರ್‌ಗಳಲ್ಲೇ ಈ ಗುರಿ ಪೂರೈಸಿತ್ತು. ಇದೀಗ 7 ವರ್ಷಗಳ ಮತ್ತೆ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಪಾಕ್‌ ತಂಡವನ್ನು ಬಗ್ಗು ಬಡಿಯಲು ಟೀಂ ಇಂಡಿಯಾ ಸಜ್ಜಾಗಿದೆ. ಇದನ್ನೂ ಓದಿ: ಇಂಡೋ-ಪಾಕ್‌ ವಿಶ್ವ ಸಮರ: ʻಗೆದ್ದು ಬಾ ಭಾರತʼ – ಕೋಟ್ಯಂತರ ಅಭಿಮಾನಿಗಳ ಶುಭ ಹಾರೈಕೆ

    1992ರಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 1992ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿವೆ. 1992, 1999, 2003, 2011, 2015 ಹಾಗೂ 2019ರಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ. ಅಲ್ಲದೇ ಟಿ20 ವಿಶ್ವಕಪ್‌ನಲ್ಲಿ 7 ಬಾರಿ, ಚಾಂಪಿಯನ್ಸ್‌ ಟ್ರೋಫಿಯಲ್ಲಿ 5 ಬಾರಿ ಒಟ್ಟು 19 ಬಾರಿ ಇತ್ತಂಡಗಳು ಮುಖಾಮುಖಿಯಾಗಿವೆ. ಭಾರತ ಇದುವರೆಗೆ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕ್‌ ವಿರುದ್ಧ ಸೋತಿದೆಯೇ ಹೊರತು ವಿಶ್ವಕಪ್‌ ಟೂರ್ನಿಯಲ್ಲಿ ಸೋತಿಲ್ಲ. ಈ ಬಾರಿಯೂ ಪಾಕ್‌ ವಿರುದ್ಧ ಗೆಲ್ಲುವ ವಿಶ್ವಾಸದಲ್ಲೇ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡೋ-ಪಾಕ್‌ ವಿಶ್ವ ಸಮರ: ʻಗೆದ್ದು ಬಾ ಭಾರತʼ – ಕೋಟ್ಯಂತರ ಅಭಿಮಾನಿಗಳ ಶುಭ ಹಾರೈಕೆ

    ಇಂಡೋ-ಪಾಕ್‌ ವಿಶ್ವ ಸಮರ: ʻಗೆದ್ದು ಬಾ ಭಾರತʼ – ಕೋಟ್ಯಂತರ ಅಭಿಮಾನಿಗಳ ಶುಭ ಹಾರೈಕೆ

    ಅಹಮದಾಬಾದ್: ಭಾರತ ಈಗ ನವರಾತ್ರಿ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಬದ್ಧವೈರಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಶನಿವಾರ (ಅ.14) ವಿಶ್ವಕಪ್ ಸಮರದಲ್ಲಿ ಹುರಿದು ಮುಕ್ಕಿದರೆ ದೇಶದೆಲ್ಲೆಡೆ ಸಂಭ್ರಮ ಇಮ್ಮಡಿಗೊಳ್ಳಲಿದೆ. ಜೊತೆಗೆ ಅಭಿಮಾನಿಗಳಿಗೆ ನವರಾತ್ರಿಗೆ ಗೆಲುವಿನ ಉಡುಗೊರೆಯೂ ಸಿಗಲಿದೆ. ಈ ಪಂದ್ಯಕ್ಕಾಗಿ ಕೇವಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿದೆ.

    ಶನಿವಾರ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. 1.32 ಲಕ್ಷ ಆಸನಗಳ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ಬದ್ಧ ವೈರಿಯನ್ನು ಬಗ್ಗು ಬಡಿದು ಭಾರತ ಸಂಭ್ರಮಿಸಲಿ ಅನ್ನೋದು 140 ಕೋಟಿ ಭಾರತೀಯರ ಪ್ರಾರ್ಥನೆ. ಅಭಿಮಾನಿಗಳ ಬೆಂಬಲವೂ ರೋಹಿತ್‌ ಶರ್ಮಾ ಪಡೆಯ ಬೆನ್ನಿಗೆ ಇರಲಿದೆ. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಗಡಿಪಾರಾದ ಬಳಿಕ ಕ್ಷಮೆ ಕೇಳಿದ ಪಾಕ್‌ ನಿರೂಪಕಿ

    1992 ರಿಂದ 2019ರ ವರೆಗೂ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, 7 ಬಾರಿಯೂ ವಿಜಯದ ಮಾಲೆ ಹಾಕಿಕೊಂಡಿದೆ. ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬಲಾಬಲವನ್ನು ನೋಡಿದಾಗ, ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದ್ದರೆ, ಮೊದಲ ಜಯ ಸಾಧಿಸಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಇದನ್ನೂ ಓದಿ: 7-0 ದಾಖಲೆ ಬಗ್ಗೆ ಚಿಂತೆಯಿಲ್ಲ, ಈ ಬಾರಿ ಮುರಿಯುತ್ತೇವೆ: ಅಜಂ ವಿಶ್ವಾಸ

    ಭಾರತ ತಂಡದಲ್ಲಿರುವ ಬ್ಯಾಟರ್‌ಗಳೆಲ್ಲರೂ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬೌಲರ್‌ಗಳೂ ಒಬ್ಬರಿಗಿಂತ ಒಬ್ಬರು ದೊಡ್ಡ ರೆಕಾರ್ಡ್‌ ಮಾಡಿದವರಿದ್ದಾರೆ. ಈ ಪಂದ್ಯದಲ್ಲಿ ಲಯ, ಸಾಮರ್ಥ್ಯ, ಪ್ರತಿಭೆ ಇವೆಲ್ಲಕ್ಕಿಂತ ಮಿಗಿಲಾಗಿ ಯಾರು ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೋ ಅವರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ. ಹೀಗಾಗಿ ರೋಹಿತ್‌ ಪಡೆಗಿರುವ ಅತಿದೊಡ್ಡ ಸವಾಲು ಭಾವನೆಗಳ ಬಂಧನಕ್ಕೆ ಒಳಗಾಗದಿರುವುದು.

    ಅಫ್ಘಾನಿಸ್ತಾನ ವಿರುದ್ಧ ಸಿಡಿಲಬ್ಬರದ ಆಟವಾಡಿದ್ದ ರೋಹಿತ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮೇಲೆ ತಂಡ ಹೆಚ್ಚು ನಿರೀಕ್ಷೆ ಇಟ್ಟಿದ್ದು, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಸಹ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಇದನ್ನೂ ಓದಿ: ಇಂಡೋ-ಪಾಕ್‌ ಕದನ: 10 ಸೆಕೆಂಡ್‌ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!

    ಅಹಮದಾಬಾದ್‌ನ ಇತ್ತೀಚಿನ ದಾಖಲೆಯನ್ನು ಪರಿಗಣಿಸಿ, ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ಸಿಗಲಿದೆ ಎನ್ನುವ ನಂಬಿಕೆಯೊಂದಿಗೆ ಭಾರತ ಕಣಕ್ಕಿಳಿದರೆ ಮೊಹಮದ್ ಶಮಿಗೆ ಅವಕಾಶ ಸಿಗಬಹುದು. ಶಮಿ ಐಪಿಎಲ್‌ನಲ್ಲಿ ಗುಜರಾತ್ ತಂಡದಲ್ಲಿ ಆಡುವ ಕಾರಣ, ಇಲ್ಲಿನ ಪಿಚ್ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರಲಿದೆ. ಒಂದು ವೇಳೆ ದೊಡ್ಡ ಬೌಂಡರಿಗಳು ಎನ್ನುವ ಅಂಶವನ್ನು ತಲೆಯಲ್ಲಿಟ್ಟುಕೊಂಡು ಆಡುವ ಹನ್ನೊಂದನ್ನು ನಿರ್ಧರಿಸಿದರೆ ಆಗ ಆರ್.ಅಶ್ವಿನ್‌ರನ್ನು ಆಡಿಸಬಹುದು ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡೋ-ಪಾಕ್‌ ಕದನ: 10 ಸೆಕೆಂಡ್‌ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!

    ಇಂಡೋ-ಪಾಕ್‌ ಕದನ: 10 ಸೆಕೆಂಡ್‌ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!

    ಅಹಮದಾಬಾದ್‌: ಏಕದಿನ ವಿಶ್ವಕಪ್‌ (ICC World Cup) ಟೂರ್ನಿಯಲ್ಲಿ ಅಕ್ಟೋಬರ್‌ 14ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಆದ್ರೆ ಪಂದ್ಯದ ನಡುವೆ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಜಾಹೀರಾತಿನ (Advertisement) ಮೌಲ್ಯ ಕೇಳಿದ್ರೆ ನಿಜಕ್ಕೂ ಎದೆ ಬಡಿತ ಹೆಚ್ಚಿಸುತ್ತೆ. ಏಕೆಂದರೆ ಪ್ರತಿ 10 ಸೆಕೆಂಡ್‌ ಜಾಹೀರಾತಿಗೆ ಬರೋಬ್ಬರಿ 25 ರಿಂದ 30 ಲಕ್ಷ ರೂ. ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ (Disney Hot Star) ಸಂಸ್ಥೆಯ ಪ್ರಸಾರ ಒಪ್ಪಂದ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಡಿಸ್ನಿ ಸ್ಟಾರ್‌ ಈ ಪಂದ್ಯದ ಸಂಪೂರ್ಣ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಪಂದ್ಯದ ವೇಳೆ ಪ್ರಸಾರಗೊಳ್ಳುವ ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 25 ರಿಂದ 30 ಲಕ್ಷ ರೂ. ನಿಗದಿಪಡಿಸಲಾಗಿದೆ. ಭಾರತದ ಇತರ ಪಂದ್ಯಗಳ ವೇಳೆ 10 ಸೆಕೆಂಡ್‌ ಜಾಹೀರಾತಿನ ಸ್ಲಾಟ್‌ಗೆ ಅಂದಾಜು 10 ಲಕ್ಷ ರೂ. ನಿಗದಿ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

    ಆರಂಭದಲ್ಲಿ ಉಭಯ ತಂಡಗಳ ಈ ಪಂದ್ಯದ ವೇಳೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ 17 ರಿಂದ 18 ಲಕ್ಷ ರೂ. ಮೊತ್ತ ನಿಗದಿ ಪಡಿಸಲಾಗಿತ್ತು. ಆದ್ರೆ ಬೇಡಿಕೆ ಹೆಚ್ಚಾಗಿದ್ದರಿಂದ ಸಂಸ್ಥೆ ಇದರ ಲಾಭ ಪಡೆಯಲು ಉದ್ದೇಶಿಸಿದ್ದು, ಜಾಹೀರಾತಿನ ಮೌಲ್ಯವನ್ನು 25 ರಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಏಷ್ಯಾಕಪ್‌ ಟೂರ್ನಿ ವೇಳೆಯೂ ಜಿಯೋ ಆಪ್‌ ಇಷ್ಟೇ ಪ್ರಮಾಣದ ದರವನ್ನು ನಿಗದಿ ಮಾಡಿತ್ತು. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಗಡಿಪಾರಾದ ಬಳಿಕ ಕ್ಷಮೆ ಕೇಳಿದ ಪಾಕ್‌ ನಿರೂಪಕಿ

    ಈಗಾಗಲೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅಹಮದಾಬಾದ್​ನ ಬಹುತೇಕ ಹೋಟೆಲ್​ಗಳು ಬುಕ್​ ಆಗಿವೆ. ಕೆಲವು ಹೋಟೆಲ್‌ಗಳು 2 ದಿನಕ್ಕೆ ಸುಮಾರು 1 ಲಕ್ಷ ರೂ.ವರೆಗೂ ವಿಧಿಸಿತ್ತು. ಆದರೂ ಬಹುತೇಕ ಹೋಟೆಲ್‌ಗಳು ಈಗಾಗಲೇ ಹೌಸ್‌ಫುಲ್‌ ಆಗಿದೆ. ಸಾಮಾನ್ಯ ದಿನಗಳಲ್ಲಿ ನಗರದ ಐಷಾರಾಮಿ ಹೋಟೆಲ್‌ಗಳ ದರ ಪ್ರತಿದಿನಕ್ಕೆ 5 ರಿಂದ 8 ಸಾವಿರ ಇರುತ್ತದೆ. ಆದರೆ ಭಾರತ ಮತ್ತು ಪಾಕ್​ ಪಂದ್ಯ ನಡೆಯುವ ದಿನದಂದು ದರ 40,000 ರೂ.ಗೆ ಜಿಗಿದಿದೆ. ಕಡಿಮೆ ಖರ್ಚಿನ ಹೋಟೆಲ್‌ಗಳೂ ಲಭ್ಯವಿದ್ದು, ಅಭಿಮಾನಿಗಳು ದಾಂಗುಡಿಯಿಡುತ್ತಿದ್ದಾರೆ.

    ಈ ಮೊದಲು ಇಂಡೋ ಪಾಕ್‌ ಕದನ ಅಕ್ಟೋಬರ್‌ 15 ರಂದು ನಿಗದಿಯಾಗಿತ್ತು. ಆದ್ರೆ ಅಂದು ನವರಾತ್ರಿ ಉತ್ಸವ ಆರಂಭದ ದಿನವಾದ್ದರಿಂದ ಭದ್ರತಾ ಸಮಸ್ಯೆ ಎದುರಾಗಬಹುದು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿತ್ತು. ಈ ಕಾರಣದಿಂದ ಪಂದ್ಯದ ದಿನಾಂಕವನ್ನು ಬದಲಿಸಿ ಅಕ್ಟೋಬರ್​ 14ಕ್ಕೆ ನಿಗದಿ ಮಾಡಲಾಗಿದೆ. ಇದನ್ನೂ ಓದಿ: World Cup 2023: ಗುಡ್‌ನ್ಯೂಸ್‌ – ಪಾಕ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]