Tag: ಕ್ರಿಕೆಟ್ ಬಾಲ್

  • 5 ವರ್ಷದ ಹಿಂದಿನ ಬಾಲ್ ಬಳಸಿ ಇಂಗ್ಲೆಂಡ್ ಗೆದ್ದ ಆರೋಪ – ಆಂತರಿಕ ತನಿಖೆ ಮಾಡ್ತೀನಿ ಎಂದ ಬಾಲ್ ತಯಾರಕ

    5 ವರ್ಷದ ಹಿಂದಿನ ಬಾಲ್ ಬಳಸಿ ಇಂಗ್ಲೆಂಡ್ ಗೆದ್ದ ಆರೋಪ – ಆಂತರಿಕ ತನಿಖೆ ಮಾಡ್ತೀನಿ ಎಂದ ಬಾಲ್ ತಯಾರಕ

    ಲಂಡನ್: ಇಂಗ್ಲೆಂಡ್-ಆಸ್ಟ್ರೇಲಿಯಾ (England-Australia) ನಡುವಿನ ಆಶಸ್ ಟೂರ್ನಿಯ (Ashes Test) ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿತು. ಈ ಪಂದ್ಯದ ಕೊನೆಯಲ್ಲಿ ಚೆಂಡನ್ನು ಬದಲಾವಣೆ ಮಾಡಿದ್ದು ದೊಡ್ಡಮಟ್ಟದಲ್ಲಿ ಚರ್ಚೆಗೆ (Ball Change Controversy) ಗ್ರಾಸವಾಗಿದೆ. 2018-19ರಲ್ಲಿ ತಯಾರಿಸಲಾದ ಬಾಲ್ ಬಳಕೆ ಮಾಡಲಾಗಿದೆ. ಇದರಿಂದ ಇಂಗ್ಲೆಂಡ್ ತಂಡ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಆರೋಪಿಸಿವೆ.

    ಈ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಡ್ಯೂಕ್ ಬಾಲ್ (Duke Ball) ತಯಾರಿಕ ಮಾಲೀಕ ದಿಲೀಪ್ ಜಜೋಡಿಯಾ, ಪಂದ್ಯದಲ್ಲಿ ಬದಲಿಸಿದ ಚೆಂಡು ಐದು ವರ್ಷದಲ್ಲ. ಅದರ ಸಾಧ್ಯತೆ ತುಂಬಾ ಕಡಿಮೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಅಂಪೈರ್‌ಗಳು ಬದಲಿಸುವ ಚೆಂಡಿನ ಮೇಲೆ ದಿನಾಂಕದ ಮುದ್ರೆ ಇರುತ್ತದೆ. ಯಾರೂ ಕೂಡ ಅಷ್ಟು ವರ್ಷಗಳ ಹಳೆಯ ಚೆಂಡನ್ನು ಬಳಸುವುದಿಲ್ಲ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ವಿವಾದದ ಬಗ್ಗೆ ನಾನೇ ತನಿಖೆ ಮಾಡುತ್ತೇನೆ. ಇಲ್ಲವಾದರೆ ನನ್ನ ಹೆಸರಿಗೆ ಧಕ್ಕೆಯುಂಟಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ: ಓವೈಸಿ ಕಿಡಿ

    ನಿರ್ದಿಷ್ಟ ಋತುವಿನಲ್ಲಿ ನಾವು ತಯಾರಿಸುವ ಚೆಂಡಿನ ಮೇಲೆ ದಿನಾಂಕದ ಮುದ್ರೆ ಹಾಕಿರುತ್ತೇವೆ. ಆಶಸ್ ಟೂರ್ನಿಯಲ್ಲಿ ಬಳಸಲಾದ ಚೆಂಡಿನ ಮೇಲೂ 2023 ರಂದು ಗುರುತಿಸಲಾಗಿದೆ. ನಾವು ಚೆಂಡುಗಳನ್ನ ಗ್ರೌಂಡ್‌ಗಳಿಗೆ ಪೂರೈಕೆ ಮಾಡುತ್ತೇವೆ. ಆದ್ರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಗಲಿ, ಐಸಿಸಿ ಆಗಲಿ ಬಾಲ್‌ಗಳನ್ನ ಕಂಟ್ರೋಲ್ ಮಾಡೋದಿಲ್ಲ. ಕ್ರೀಡಾ ಪ್ರಾಧಿಕಾರ ಇದನ್ನ ನೋಡಿಕೊಳ್ಳುತ್ತೆ. ಗ್ರೌಂಡ್‌ಗೆ ಪೂರೈಕೆ ಮಾಡಿದ ಬಳಿಕ ಪರಿಶೀಲಿಸುವಾಗ ಅನುಮಾನ ಬಂದರೆ ಮೇಲ್ಪದರವನ್ನ ಪರಿಶೀಲಿಸುವ ಅಧಿಕಾರ ಕ್ರೀಡಾಪ್ರಾಧಿಕಾರಕ್ಕಿದೆ. ಆದ್ರೆ ಆ ಕೆಲಸವನ್ನ ಸರಿಯಾಗಿ ಮಾಡಿದ್ದಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಇದು ನಮ್ಮಿಂದಾಗಿರುವ ತಪ್ಪಲ್ಲ. ಆದ್ರೂ ಈ ಬಗ್ಗೆ ಸ್ವತಃ ತನಿಖೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    5 ವರ್ಷಗಳ ಹಳೆಯ ಬಾಲ್ ಬಳಕೆ ಆರೋಪ:
    ಚೆಂಡು ಬದಲಾದ ನಂತರ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಈ ಕುರಿತು ವರದಿ ಪ್ರಕಟಿಸಿದ್ದವು. ಅಂಪೈರ್?ಗಳು ಬಳಸಿದ ಚೆಂಡು ತುಂಬಾ ಹಳೆಯದ್ದು. ಆನ್‌ಫೀಲ್ಡ್‌ ಅಂಪೈರ್‌ಗಳು ಬಲಿಸಿದ ಚೆಂಡು, 5 ವರ್ಷಗಳ ಹಿಂದಿನ ಹಳೆಯ ಡ್ಯೂಕ್ಸ್ ಬಾಲ್. 2018 ಅಥವಾ 2019ರಲ್ಲಿ ತಯಾರಿಸಿದ ಈ ಚೆಂಡು ಇದಾಗಿದೆ. ಕಾರಣ ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಸ್ವಿಂಗ್ ಆಗುತ್ತಿತ್ತು ಎಂದು ವರದಿಯಾಗಿತ್ತು. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    ಐಸಿಸಿ ಸ್ಪಷ್ಟನೆ ಏನು?
    ಈ ವಿವಾದದಿಂದ ಅಂಪೈರ್‌ಗಳ ಮೇಲೆ ಪ್ರಶ್ನೆ ಎದ್ದಿದೆ. ಅಂಪೈರ್?ಗಳದ್ದೇ ತಪ್ಪು ಎನ್ನುವ ರೀತಿ ಬಿಂಬಿಸಲಾಗುತ್ತಿದೆ. ಹಾಗಾಗಿ ಇದಕ್ಕೆ ಐಸಿಸಿ ಸ್ಪಷ್ಟನೆ ನೀಡಿದೆ. ಪಂದ್ಯದ ಮೊದಲೇ ಚೆಂಡನ್ನು ಆಯ್ಕೆ ಮಾಡಲಾಗುತ್ತದೆ. ಚೆಂಡು ಆಯ್ಕೆಯ ವಿಚಾರದಲ್ಲಿ ಅಂಪೈರ್?ಗಳದ್ದೇ ನಿರ್ಧಾರ. ಒಂದು ವೇಳೆ ಬದಲಿಸುವಾಗ ಈ ಹಿಂದಿನ ಚೆಂಡಿನಂತೆಯೇ ಇರುವ ಚೆಂಡನ್ನು ಆಯ್ಕೆ ಮಾಡಿದರೆ ಅದು ಸಹ ಅಂಪೈರ್‌ಗಳ ತೀರ್ಮಾನಕ್ಕೆ ಬಿಟ್ಟಿರುತ್ತದೆ. ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಐಸಿಸಿ ಸ್ಪಷ್ಟನೆ ನೀಡಿದೆ.

    37ನೇ ಓವರ್‌ನಲ್ಲಿ ನಡೆದಿದ್ದೇನು?
    ಆಶಸ್ ಟೂರ್ನಿ 5ನೇ ಟೆಸ್ಟ್‌ನ ಕೊನೆಯ ದಿನದಾಟದಲ್ಲಿ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಚೆಂಡನ್ನು ಬದಲಾವಣೆ ಮಾಡಲಾಗಿತ್ತು. ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ಬೌಲಿಂಗ್‌ನಲ್ಲಿ ಚೆಂಡು ಎಡಗೈ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಹೆಲ್ಮೆಟ್‌ಗೆ ಬಡಿದಿತ್ತು. ಈ ಹೊಡೆತಕ್ಕೆ ಚೆಂಡಿನ ಆಕಾರವೇ ಬದಲಾಗಿತ್ತು. ಹಾಗಾಗಿ ಫೀಲ್ಡ್ ಅಂಪೈರ್‌ಗಳು ಚೆಂಡು ಬದಲಿಸಲು ತೀರ್ಮಾನಿಸಿದರು. ಚೆಂಡು ಬದಲಾದ ನಂತರ ಆಸಿಸ್ ಬ್ಯಾಟರ್‌ಗಳು ಒಬ್ಬೊಬ್ಬರಾಗಿ ವಿಕೆಟ್ ಒಪ್ಪಿಸಿದರು. ಕೊನೆಯದಾಗಿ ಇಂಗ್ಲೆಂಡ್ 49 ರನ್ ಗಳಿಂದ ಆಸಿಸ್ ತಂಡವನ್ನ ಮಣಿಸಿ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 2-2 ಅಂತರದಲ್ಲಿ ಸಮಬಲ ಸಾಧಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರಿಕೆಟ್ ಬಾಲ್ ತರಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ

    ಕ್ರಿಕೆಟ್ ಬಾಲ್ ತರಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ

    ಬೆಂಗಳೂರು: ಕ್ರಿಕೆಟ್ ಬಾಲ್ ತರಲು ಕೆರೆಗೆ ಇಳಿದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

    ಪ್ರಿಯಾಂಶು (13) ಮೃತ ದುರ್ದೈವಿ ಬಾಲಕ. ಈತ ಸರ್ಜಾಪುರದ ಕೊಡತಿ ಕೆರೆ ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದನು. ಈ ವೇಳೆ ಕೆರೆಯಲ್ಲಿ ಬಿದ್ದ ಬಾಲ್ ತರಲು ಹೋದಾಗ ಈ ದುರ್ಘಟನೆ ನಡೆದಿದೆ.

    ಬುಧವಾರ ಶಾಲೆ ಮುಗಿಸಿ ಮನೆಗೆ ಬಂದ ಬಾಲಕ, ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದಾನೆ. ಈ ವೇಳೆ ಬಾಲ್ ಕೆರೆಯಲ್ಲಿ ಬಿದ್ದಿದೆ. ಇದನ್ನು ತರಲೆಂದು ಬಾಲಕ ಕೆರೆಗೆ ಇಳಿದಿದ್ದಾನೆ. ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸಂಜೆ ಕೆರೆಯಲ್ಲಿ ಮುಳುಗಿದ ಬಾಲಕನಿಗಾಗಿ ಎನ್.ಡಿ.ಆರ್.ಎಫ್ ತಂಡ ರಕ್ಷಣಾ ಕಾರ್ಯ ನಡೆಸಿ ರಾತ್ರಿ ವೇಳೆಗೆ ಬಾಲಕನ ಶವವನ್ನು ಹೊರತೆಗೆದಿದ್ದಾರೆ.

    ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.