ಇಸ್ಲಾಮಾಬಾದ್: ಕ್ರಿಕೆಟ್ ಪಂದ್ಯ (Cricket Match) ನಡೆಯುತ್ತಿದ್ದಾಗಲೇ ಸ್ಟೇಡಿಯಂನಲ್ಲಿ (Stadium) ಸ್ಫೋಟ ಸಂಭವಿಸಿದ ಘಟನೆ ಪಾಕಿಸ್ತಾನದ (Pakistan) ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ.
ಸ್ಫೋಟಕ್ಕೆ ಓರ್ವ ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಬಜೌರ್ ಜಿಲ್ಲೆಯ ಖಾರ್ ತೆಹ್ಸಿಲ್‌ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ.
⚡ BREAKING: 1 person killed and several others injured in an IED blast during a cricket match at Kausar Ground in Khar, Bajaur, northwestern Khyber Pakhtunkhwa province.
Police confirm it was a planted explosive device.#Pakistanpic.twitter.com/6kHlzCqPMM
– ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ನನ್ನದ್ದಲ್ಲ ಎಂದ ಪರಮೇಶ್ವರ್ – ಆರೋಪಿಗಳ ಹೇಳಿಕೆಯನ್ನು ಹೇಳಿದ್ದೆ ಎಂದ ಸಚಿವ
ಮಂಗಳೂರು/ ಬೆಂಗಳೂರು: ಕುಡುಪು (Kudupu) ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏ.27ರ ಭಾನುವಾರ ಸಂಜೆ 5:30ರ ಸುಮಾರಿಗೆ ಮಂಗಳೂರಿನ (Manglauru) ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮೃತದೇಹದ ಮರಣೋತ್ತರ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಗಂಭೀರ ಗಾಯಗೊಂಡ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು
ಅಪರಿಚಿತ ಮೃತದೇಹ ಅನುಮಾನಾಸ್ಪದವಾಗಿ ಸಿಕ್ಕಿದ ಹಿನ್ನಲೆಯಲ್ಲಿ ಬಿಸಿ ಬಿಸಿ ಚರ್ಚೆಗಳು ಅದಾಗಲೇ ಆರಂಭವಾಗಿತ್ತು. ಹಿಂದೂ ಯುವಕರು ಮುಸ್ಲಿಂ ಯುವಕನನ್ನು ಗುಂಪು ಹತ್ಯೆ ನಡೆಸಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಅಂತಾ ಸಿಪಿಐಎಂ, ಎಸ್‌ಡಿಪಿಐ ಪಕ್ಷಗಳು ಆರೋಪ ಮಾಡಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ನೈಜ ವಿಚಾರ ಗೊತ್ತಾಗಿದೆ. ಇದನ್ನೂ ಓದಿ: ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಕೇಂದ್ರ ಸರ್ಕಾರ
ಕೊಲೆಯಾಗಿದ್ದು ಯಾಕೆ?
ಏ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ಸಂದರ್ಭ ವಿಚಾರವೊಂದಕ್ಕೆ ಮೃತ ವ್ಯಕ್ತಿಗೆ ಅಲ್ಲಿದ್ದ ಸಚಿನ್ ಎಂಬಾತನೊಂದಿಗೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಸಚಿನ್ ಆತನಿಗೆ ಥಳಿಸಿದ್ದು, ಬಳಿಕ ಅಲ್ಲಿದ್ದ 25ರಿಂದ 30 ಮಂದಿಯ ಗುಂಪು ಅಪರಿಚಿತ ವ್ಯಕ್ತಿಗೆ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ದೀಪಕ್ ಕುಮಾರ್ ಎಂಬುವವರು 19 ಮಂದಿ ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 37/2025, ಕಲಂ: 103(2), 115(2), 189(2), 190, 191(1), 191(3), 240 ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಇದನ್ನೂ ಓದಿ: 5 ತಿಂಗಳ ಬಳಿಕ ಇಸ್ಕಾನ್‌ನ ಚಿನ್ಮಯ್ ಕೃಷ್ಣದಾಸ್‌ಗೆ ಬಾಂಗ್ಲಾ ಹೈಕೋರ್ಟ್ ಜಾಮೀನು
ಗುಂಪು ಹತ್ಯೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ 2023 (BNS 2023) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಕೃತ್ಯದಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಭಾಗವಹಿಸಿರುವ ಸಂಶಯವಿದೆ. ಮೊದಲಿಗೆ 15 ಮಂದಿ ಹಾಗೂ ಮತ್ತೆ ಐವರು ಸೇರಿ ಒಟ್ಟು 20 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಿ ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿಯ ಹೆಸರು ಥಳಕು ಹಾಕಿಕೊಂಡಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್ ರದ್ದು!
ಯಾವುದೇ ದಾಖಲೆ, ವಿಳಾಸ ಇಲ್ಲದ ಮೃತ ವ್ಯಕ್ತಿಯ ಗುರುತು ಪತ್ತೆ ಬಗ್ಗೆ ಪೊಲೀಸರು ಸಾಕಷ್ಟು ಪರಿಶ್ರಮವಹಿಸಿ 2 ದಿನದ ಬಳಿಕ ಗುರುತು ಪತ್ತೆಯಾಗಿದೆ. ಮಂಗಳೂರಿಗೆ ವಲಸೆ ಕಾರ್ಮಿಕನಾಗಿ ಬಂದಿದ್ದ ಕೇರಳದ ವಯನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಇದೀಗ ಆತನ ಸಂಬಂಧಿಕರು ಮಂಗಳೂರಿಗೆ ಬಂದು ಮೃತದೇಹ ಅಶ್ರಫ್‌ನದ್ದೇ ಎಂದು ಗುರುತಿಸಿದ್ದಾರೆ. ಮೃತದೇಹವನ್ನು ಅಶ್ರಫ್ ಕುಟುಂಬಸ್ಥರಿಗೆ ಇಂದು ಹಸ್ತಾಂತರ ಮಾಡಲಾಗಿದ್ದು, ಸಂಬಂಧಿಕರು ಮೃತದೇಹವನ್ನು ಕೊಂಡು ಹೋಗಿದ್ದಾರೆ. ಕೊಲೆಯಾದ ಅಶ್ರಫ್ ಪಾನಮತ್ತನಾಗಿ ಪಾಕಿಸ್ಥಾನಕ್ಕೆ ಜೈಕಾರ ಕೂಗಿದ್ದಕ್ಕೆ ಗುಂಪು ಆತನ ಮೇಲೆ ಬಿದ್ದಿರುವ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಯುವಕರ ಬಲವಾದ ಏಟಿಗೆ ಅಮಾಯಕ ಪ್ರಾಣ ಚೆಲ್ಲಿರೋದು ನಿಜಕ್ಕೂ ಖಂಡನೀಯವಾಗಿದೆ. ಇದನ್ನೂ ಓದಿ: LKG-UKG ದಾಖಲಾತಿಗೆ ವಯಸ್ಸಿನ ಮಿತಿ ಸಡಿಲ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ
ಹೇಳಿಕೆ ನನ್ನದ್ದಲ್ಲ:
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾರಣ ಎಂದು ಮಂಗಳವಾರ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್ (G.Parameshwar), ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನನ್ನದಲ್ಲ, ಕೊಲೆ ಆರೋಪಿಗಳದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದ್ವೇಷರಹಿತ ಸಮಾಜಕ್ಕೆ ಬಸವಣ್ಣ ಸಂದೇಶ ಅಗತ್ಯ: ದಕ್ಷಿಣ ಕನ್ನಡ ಜಿಪಂ ಸಿಇಒ
ಗುಂಪು ಹಲ್ಲೆ ನಡೆಸಿದ್ದವರ ಪೈಕಿ ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ಪೊಲೀಸರು ವಿಚಾರಣೆ ಮಾಡುವಾಗ ಮೃತಪಟ್ಟ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಎಂದು ಹೇಳಿದರು.
ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ(New Zealand) ಬೇ ಓವಲ್(Bay Oval) ಸ್ಟೇಡಿಯಂನಲ್ಲಿ ಪಾಕಿಸ್ತಾನ(Pakistan) ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದಾಗಲೇ ಕರೆಂಟ್ ಹೋದ ವಿಚಿತ್ರ ಘಟನೆ ನಡೆದಿದೆ.
🚨 Unusual blackout at Bay Oval during New Zealand vs Pakistan match!
Just as Jacob Duffy was about to bowl to Tayyab Tahir, the stadium lights went out, causing a brief halt in play. 😱
Fans and commentators were left in surprise and amusement!
Luckily, the lights came back, and… pic.twitter.com/vhwipSM9NP
ನ್ಯೂಜಿಲೆಂಡ್‌ನ ಬೌಲರ್ ಜಾಕೋಬ್ ಡಫಿ ಬೌಲಿಂಗ್ ಮಾಡುತ್ತಿದ್ದಾಗ ಏಕಾಏಕಿ ಸ್ಟೇಡಿಯಂನಲ್ಲಿ ಕರೆಂಟ್ ಹೋಗಿದೆ. ಆಗ ಪಾಕಿಸ್ತಾನದ ತಹೀರ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಅಚ್ಚರಿ ಏನೆಂದರೆ, ಕರೆಂಟ್ ಹೋಗುವಷ್ಟರಲ್ಲಿ ತಹೀರ್ ಔಟ್ ಆಗಿದ್ದರು. 31 ಎಸೆತಗಳಲ್ಲಿ 33 ರನ್ ಗಳಿಸಿದ್ದ ತಹೀರ್ ಪೆವಿಲಿಯನ್‌ನತ್ತ ಮುಖ ಮಾಡಿದರು. ಈ ಘಟನೆಯು ಸ್ಟೇಡಿಯಂನಲ್ಲಿದ್ದ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು. ಇದನ್ನೂ ಓದಿ: ರಾಮನವಮಿ| ಅಯೋಧ್ಯೆ ಬಾಲರಾಮನ ಹಣೆ ಮೇಲೆ ಮೂಡಿದ ʼಸೂರ್ಯ ತಿಲಕʼ
ಶನಿವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯಿತು. ಮೊದಲು ಕ್ರೀಸ್‌ಗೆ ಇಳಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 264 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಪಾಕ್ ತಂಡ, 40 ಓವರ್‌ಗಳಲ್ಲಿ 221 ರನ್‌ಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು 3-0 ಅಂತರದಲ್ಲಿ ವೈಟ್‌ವಾಶ್ ಮಾಡಿತು. ಇದನ್ನೂ ಓದಿ: ಟಾರ್ಗೆಟ್ ರೀಚ್ ಆಗ್ಲಿಲ್ಲ ಅಂತ ನೌಕರರಿಗೆ ನಾಯಿಯಂತೆ ನಡೆಯುವ, ಬೊಗಳುವ ಶಿಕ್ಷೆ
ಶ್ರೀನಗರ: ಇಂದು ಭಾರತ ಮತ್ತು ಪಾಕ್ ಹೈವೋಲ್ಟೇಜ್ ಕ್ರಿಕೆಟ್ ಮ್ಯಾಚ್ ಹಿನ್ನೆಲೆ ಶ್ರೀನಗರದಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‍ಐಟಿ) ತನ್ನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿವಿಧ ರಾಷ್ಟ್ರಗಳನ್ನೊಳಗೊಂಡ ಕ್ರಿಕೆಟ್ ಸರಣಿ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿದಿದೆ. ಹೀಗಾಗಿ ಆಟವನ್ನು ಆಟದ ರೀತಿ ನೋಡುವಂತೆ ತಿಳಿಸಿದ್ದು, ಹಾಸ್ಟೆಲ್‍ನಲ್ಲಿ ಯಾವುದೇ ರೀತಿಯ ಅಶಿಸ್ತು ಸೃಷ್ಟಿಸದಂತೆ ಸೂಚಿಸಿದೆ.
ಭಾನುವಾರದ ಪಂದ್ಯ ನಡೆಯುವ ವೇಳೆ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ಕೊಠಡಿಗಳಲ್ಲಿಯೇ ಇರಬೇಕು ಮತ್ತು ಇತರ ವಿದ್ಯಾರ್ಥಿಗಳ ಕೊಠಡಿಗಳಿಗೆ ಪ್ರವೇಶಿಸಬಾರದು. ಗುಂಪು ಕಟ್ಟಿಕೊಂಡು ಪಂದ್ಯವನ್ನು ವೀಕ್ಷಿಸಬಾರದು. ಇಂದು ವೇಳೆ ನಿಗದಿ ಪಡಿಸಿರುವ ಕೊಠಡಿಯಲ್ಲಿ ಮ್ಯಾಚ್ ವೀಕ್ಷಿಸಿದರೆ, ಆ ಕೊಠಡಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಹಾಸ್ಟೆಲ್ ವಸತಿಯಿಂದ ಡಿಬಾರ್ ಮಾಡಲಾಗುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕನಿಷ್ಠ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.
2016ರಲ್ಲಿ ಟಿ-20 ವಿಶ್ವಕಪ್ ಸೆಮಿ-ಫೈನಲ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತ ನಂತರ ಹೊರರಾಜ್ಯ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನಡುವೆ ನ್ಯಾಷನಲ್ ಇನ್‍ಸ್ಟಿಟ್ಯೂಟ್‍ನಲ್ಲಿ ಘರ್ಷಣೆಗಳು ಸಂಭವಿಸಿತ್ತು. ಇದರಿಂದ ಕೆಲ ದಿನಗಳವರೆಗೆ ಎನ್‍ಐಟಿ ಕಾಲೇಜನ್ನು ಮುಚ್ಚಲಾಗಿತ್ತು.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಡಿಕ್ಕಿ ಹೊಡೆದುಕೊಂಡಿದ್ದಾರೆ. ಈ ಪರಿಣಾಮ ಆಟಗಾರನೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುಗೆ ದಾಖಲಾಗಿದ್ದಾನೆ.
ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ ಹಾಗೂ ಧಾರವಾಡದ ಎಸ್‍ಡಿಎಂ ಬಿ ತಂಡಗಳ ನಡುವೆ ಪಂದ್ಯದ ನಡೆದ ವೇಳೆ ಈ ಘಟನೆ ಸಂಭಸಿವಿದೆ. 19 ನೇ ಓವರ್‍ನಲ್ಲಿ ಫೀಲ್ಡಿಂಗ್ ಮಾಡುವಾಗ ಕವರ್ಸ್ ಹಾಗೂ ಪಾಯಿಂಟ್ ಕ್ಷೇತ್ರದ ನಡುವೆ ಎಸ್‍ಡಿಎಂ ಬಿ ತಂಡದ ಪ್ರಜ್ವಲ್ ಶಿರೋಳ ಮತ್ತು ಪ್ರಜ್ವಲ್ ಬೋರಣ್ಣ ಡಿಕ್ಕಿಯಾಗಿ, ಪ್ರಜ್ವಲ್ ಶಿರೋಳ ಪ್ರಜ್ಞಾಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಕ್ಲಬ್‍ನ ಸದಸ್ಯರು, ಪಂದ್ಯ ನೋಡುತ್ತಿದ್ದವರು ಮತ್ತು ಕೆಎಸ್‍ಸಿಎ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್
ಕೆಲ ಸಮಯದಲ್ಲಿಯೇ ಸ್ಕ್ಯಾನಿಂಗ್ ಮಾಡಿದಾಗ ಮೆದುಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದು ದೃಢಪಟ್ಟಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದರು. ಅದರಂತೆ ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಈ ಕುರಿತು ಮಾತನಾಡಿದ ಕೆಎಸ್‍ಸಿಎ ಧಾರವಾಡ ವಲಯದ ಚೇರ್ಮನ್ ವೀರಣ್ಣ ಸವಡಿ, ಪ್ರಜ್ವಲ್ ಶಿರೋಳ ಪ್ರಜ್ಞಾಹೀನನಾಗಿದ್ದರಿಂದ ತುರ್ತಾಗಿ ಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಹೇಳಿದ್ದರು. ಪೋಷಕರಿಗೆ ವಿಷಯ ತಿಳಿಸಿ ಒಂದೂವರೆ ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಪ್ರಸ್ತುತ ಪ್ರಜ್ವಲ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಚಿಕಿತ್ಸೆ ಖರ್ಚು ಭರಿಸಲಿರುವ ಕೆಎಸ್‍ಸಿಎ!:
ಗಾಯಗೊಂಡಿರುವ ಪ್ರಜ್ವಲ್ ಶಿರೋಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‍ಸಿಎ) ಭರಿಸಲಿದೆ. ಶನಿವಾರ ಸಂಜೆ ಪ್ರಜ್ವಲ್ ಶಿರೋಳಗೆ ಪ್ರಜ್ಞೆ ಬಂದಿದೆ. ಮಂಗಳವಾರದ ತನಕ ಐಸಿಯುನಲ್ಲಿಯೇ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆತನ ಪೋಷಕರು ಚಿಂತಿಸಬೇಕಿಲ್ಲ. ನಮ್ಮ ಸಂಸ್ಥೆ ಆಟಗಾರನ ಪರ ಇರಲಿದೆ. ಆತನ ಸಂಪೂರ್ಣ ಖರ್ಚು ನೋಡಿಕೊಳ್ಳಲಿದೆ ಎಂದು ಕೆಎಸ್‍ಸಿಎ ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ ತಿಳಿಸಿದರು. ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ
ನವದೆಹಲಿ: ನಾಕೌಟ್ ಹಂತಕ್ಕೆ ತಲುಪಬೇಕಾದರೆ ಗೆಲುವು ಅನಿವಾರ್ಯ ಆಗಿರುವ ಕರ್ನಾಟಕಕ್ಕೆ ದೆಹಲಿಯಲ್ಲಿ ಮಂದ ಬೆಳಕು ಶತ್ರುವಾಗಿದೆ. ಮೊದಲ ದಿನ ಅರ್ಧಕ್ಕೆ ಮೊಟಕುಗೊಂಡಿದ್ದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ, ಎರಡನೇ ದಿನವೂ ಮಂದ ಬೆಳಕಿನಿಂದ ಆಟ ಅರ್ಧಕ್ಕೆ ನಿಂತಿದೆ. ಎರಡನೇ ದಿನವೂ ಸಂಪೂರ್ಣ ಓವರ್ ಕಾಣದೆ ಪಂದ್ಯ ಅರ್ಧಕ್ಕೆ ಮೊಟಕುಗೊಂಡಿದ್ದು, ರೈಲ್ವೇಸ್‍ಗೆ ವರದಾನವಾಗಿದೆ.
ನಿನ್ನೆ ಕೇವಲ 49 ಓವರ್ ಕಂಡಿದ್ದ ಪಂದ್ಯ ಎರಡನೇ ದಿನವಾದ ಇಂದು ಕೂಡಾ ಕ್ರೀಡಾಂಗಣದಲ್ಲಿ ತೇವಾಂಶ ಹಿನ್ನಲೆಯಲ್ಲಿ ತಡವಾಗಿ ಪಂದ್ಯ ಪ್ರಾರಂಭ ಆಯ್ತು. ಇಂದು ಕೂಡಾ ಕೇವಲ 23 ಓವರ್ ಮಾತ್ರ ಬೌಲಿಂಗ್ ಮಾಡಲು ಸಾಧ್ಯವಾಯ್ತು. ನಿನ್ನೆ 98 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದ ರೈಲ್ವೇಸ್ ತಂಡ ಇಂದು ಉತ್ತಮ ಬ್ಯಾಟಿಂಗ್ ನಡೆಸಿತು. ಅರಿಂದಮ್ ಘೋಷ್ ಅರ್ಧ ಶತಕದ 50* (155 ಬಾಲ್ 7 ಬೌಂಡರಿ) ಹಾಗೂ ಅವಿನಾಶ್ ಯಾದವ್ ಅರ್ಧ ಶತಕ 62 (143 ಬಾಲ್, 10 ಬೌಂಡರಿ) ನೆರವಿನಿಂದ ಎರಡನೇ ದಿನದ ಅಂತ್ಯಕ್ಕೆ 72 ಓವರ್ ಗೆ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿದೆ.
ನಿನ್ನೆ ಕರ್ನಾಟಕದ ಬೌಲರ್ ಗಳು ಉತ್ತಮ ದಾಳಿ ನಡೆಸಿದರು. ಇವತ್ತು 23 ಓವರ್ ಮಾಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಅರಿಂದಮ್ ಘೋಷ್ ಹಾಗೂ ಅವಿನಾಶ್ ಯಾದವ್ ಕರ್ನಾಟಕದ ಬೌಲರ್ ಗಳನ್ನು ಕಾಡಿದರು. ಕರ್ನಾಟಕದ ಪರ ರೋನಿತ್ ಮೋರೆ ಒಂದು ವಿಕೆಟ್ ಮಾತ್ರ ಪಡೆದರು. ಇನ್ನೆರಡು ದಿನ ಮಾತ್ರ ಆಟ ಉಳಿದಿದ್ದು ಈ ಪಂದ್ಯ ಫಲಿತಾಂಶ ಕಾಣೋದು ಡೌಟ್ ಆಗಿದೆ. ಹೀಗಾಗಿ ಕರ್ನಾಟಕಕ್ಕೆ ಇದು ಹಿನ್ನಡೆಯಾಗೋ ಸಾಧ್ಯತೆ ಇದೆ.