Tag: ಕ್ರಿಕೆಟ್ ತಂಡ

  • ಕನ್ನಡಿಗ ಅರುಣ್ ಕುಮಾರ್ ಈಗ ಅಮೆರಿಕ ಕ್ರಿಕೆಟ್ ತಂಡದ ಕೋಚ್

    ಕನ್ನಡಿಗ ಅರುಣ್ ಕುಮಾರ್ ಈಗ ಅಮೆರಿಕ ಕ್ರಿಕೆಟ್ ತಂಡದ ಕೋಚ್

    ಬೆಂಗಳೂರು: ಕರ್ನಾಟಕ ತಂಡದ ಮಾಜಿ ಆಟಗಾರ, ತಂಡದ ಮಾಜಿ ಯಶಸ್ವಿ ಕೋಚ್ ಜೆ ಅರುಣ್ ಕುಮಾರ್ ಅವರು ಅಮೆರಿಕ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದಾರೆ.

    ಯುಎಸ್‍ಎ ಕ್ರಿಕೆಟ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐಯಾನ್ ಹಿಗ್ಗಿನ್ಸ್ ತಂಡದ ಅಧಿಕೃತ ವೆಬ್‍ಸೈಟ್‍ನಲ್ಲಿ ಅರುಣ್ ಕುಮಾರ್ ಆಯ್ಕೆಯಾದ ವಿಚಾರವನ್ನು ತಿಳಿಸಿದ್ದಾರೆ. ಕೆಲ ದಿನಗಳಿಂದ ಕೋಚ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಐಪಿಎಲ್ ಮಾಜಿ ಆಟಗಾರ, ಕೋಚ್ ಅರುಣ್ ಕುಮಾರ್ ಸೂಕ್ತ ವ್ಯಕ್ತಿ ಎಂದು ಭಾವಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಕೋವಿಡ್-19 ನಿಂದಾಗಿ ಸ್ವಲ್ಪ ತಡವಾದರೂ ಮುಂದೆ ಹ್ಯೂಸ್ಟನ್ ನಲ್ಲಿ ಕ್ಯಾಂಪ್ ನಲ್ಲಿ ಆಟಗಾರರಿಗೆ ತರಬೇತಿ ನೀಡಲಿದ್ದಾರೆ ಎಂದು ಐಯಾನ್ ಹಿಗ್ಗಿನ್ಸ್ ಹೇಳಿದ್ದಾರೆ.

     

     

    ಈ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಕುಮಾರ್, ಅಮೆರಿಕದಲ್ಲಿ ಕೊರೊನಾ ವೈರಸ್ ಕಡಿಮೆಯಾಗಿ ವೀಸಾ ಸಿಕ್ಕಿದ ನಂತರ ಅಲ್ಲಿಗೆ ತೆರಳುತ್ತೇನೆ. ಟೆಸ್ಟ್ ಗೆ ಅಮೆರಿಕ ತಂಡವನ್ನು ತಯಾರಿ ಮಾಡುವುದು ನನ್ನ ಮೊದಲ ಗುರಿ. ಸಿಕ್ಕಿರುವ ಕಡಿಮೆ ಅವಧಿಯಲ್ಲಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಗೆಲ್ಲುವಂತೆ ಮಾಡಬೇಕಿದೆ. ತಂಡದ ಗುಣಮಟ್ಟವನ್ನು ಹೆಚ್ಚಿಸಿ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

    ಕರ್ನಾಟಕ ರಣಜಿ ತಂಡದಲ್ಲಿ ‘ಜಾಕ್’ ಎಂದೇ ಪ್ರಸಿದ್ಧಿ ಪಡೆದಿದ್ದ 45 ವರ್ಷದ ಅರುಣ್ ಕುಮಾರ್ 1993 ರಲ್ಲಿ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. 2008ರಲ್ಲಿ ಕೊನೆಯ ಬಾರಿಗೆ ಟಿ20 ಕ್ರಿಕೆಟ್ ಆಡಿದ್ದರು. ಅರುಣ್ ಕುಮಾರ್ ಪ್ರಥಮದರ್ಜೆ ಕ್ರಿಕೆಟ್‍ನಲ್ಲಿ 7,208 ರನ್, ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲೂ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅರುಣ್ ಕುಮಾರ್, ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ನೀಡಿದ ಬಳಿಕ ರಾಜ್ಯ ತಂಡದ ಪರ ಕೋಚ್ ಆಗಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಹಲವು ಫ್ರಾಂಚೈಸಿಗಳಿಗೆ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

    2013-14 ಮತ್ತು 2014-15ರ ಅವಧಿಯಲ್ಲಿ ಸತತ ಎರಡು ಬಾರಿ ಕರ್ನಾಟಕ ತಂಡ ರಣಜಿ ಚಾಂಪಿಯನ್ ಆಗಿತ್ತು. ಈ ವೇಳೆ ಕರ್ನಾಟಕದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ವಿಜಯ್ ಹಜಾರೆ, ಇರಾನಿ ಕಪ್ ಗೆಲ್ಲುವಂತೆ ಮಾಡಿದ್ದರು.

    2019-20ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‍ನಲ್ಲಿ ಪಾಂಡಿಚೇರಿ ತಂಡದ ಕೋಚ್ ಆಗಿಯೂ ಅರುಣ್ ಕುಮಾರ್ ಕೆಲಸ ಮಾಡಿದರು. ಪ್ಲೇಟ್ ಗ್ರೂಪ್‍ನಲ್ಲಿ ಪಾಂಡಿಚೇರಿ 2ನೇ ಸ್ಥಾನ ಗಳಿಸುವಂತೆ ಮಾಡಿದ್ದರು. ಆದರೆ ಕೇವಲ 2 ಅಂಕಗಳ ಅಂತರದಲ್ಲಿ ಪಾಂಡಿಚೇರಿ ತಂಡ ನಾಕ್‍ಔಟ್ ಪ್ರವೇಶ ತಪ್ಪಿ ಹೋಗಿತ್ತು.

     

  • ನ್ಯೂಜಿಲೆಂಡ್‍ನ 2 ಮಸೀದಿಗಳಲ್ಲಿ ಗುಂಡಿನ ದಾಳಿ- ಕ್ರಿಕೆಟ್ ಟೀಂ ಬಚಾವ್

    ನ್ಯೂಜಿಲೆಂಡ್‍ನ 2 ಮಸೀದಿಗಳಲ್ಲಿ ಗುಂಡಿನ ದಾಳಿ- ಕ್ರಿಕೆಟ್ ಟೀಂ ಬಚಾವ್

    ವೆಲ್ಲಿಂಗ್‍ಟನ್: ನ್ಯೂಜಿಲೆಂಡ್‍ನ ಕ್ರಿಸ್ಟ್ ಚರ್ಚ್ ನಗರದ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಬಾಂಗ್ಲಾದೇಶದ ಕ್ರಿಕೆಟ್ ಟೀಂ ಪ್ರಾಣಾಪಾಯದಿಂದ ಪಾರಾಗಿದೆ.

    ಬಾಂಗ್ಲಾದೇಶದ ಕ್ರಿಕೆಟ್ ತಂಡ ಶನಿವಾರ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಬೇಕಿತ್ತು. ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ನಮಾಜ್ ಮಾಡಲು ಹೋಟೆಲ್‍ನಿಂದ ಹಾಗ್ಲೇ ಓವೆಲ್ ಸ್ಟೇಡಿಯಂ ಬಳಿಯಿರುವ ಮಸೀದಿಗೆ ಹೊರಟ್ಟಿದ್ದರು. ಈ ವೇಳೆ ಅಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದ್ದು, ಓರ್ವ ಮುಸುಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ.

    ಈ ಬಗ್ಗೆ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟ್ಟರಿನಲ್ಲಿ, “ನ್ಯೂಜಿಲೆಂಡ್‍ನ ಕ್ರೈಸ್ಟ್ ಚರ್ಚ್ ನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಗುಂಡಿನ ದಾಳಿ ಘಟನೆ ನಡೆದ ನಂತರ ಸುರಕ್ಷಿತವಾಗಿ ಹೋಟೆಲ್‍ಗೆ ತೆರಳಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟ್ ತಂಡದ ಜೊತೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಟ್ವೀಟ್ ಮಾಡಿದೆ.

    ಈ ಘಟನೆ ನಡೆದ ನಂತರ ಆಟಗಾರರು ಭಯಗೊಂಡಿದ್ದರು. ಆದರೆ ಈಗ ಅವರು ಕ್ಷೇಮವಾಗಿದ್ದಾರೆ. ಘಟನೆಯ ಸ್ವಲ್ಪ ಹೊತ್ತಿನ ನಂತರ ಬಾಂಗ್ಲಾದೇಶದ ಕಂಡಿಶಿಂಗ್ ಕೋಚ್ ಮರಿಯೋ ವಿಲ್ಲಾವರಾಯೇನ್ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಬಾಂಗ್ಲಾದೇಶದ ಆಟಗಾರರು ಗುಂಡಿನ ದಾಳಿ ಶಬ್ಧ ಕೇಳಿದ್ದಾರೆ ಹೊರತು ಅದನ್ನು ನೋಡಲಿಲ್ಲ. ಗುಂಡಿನ ದಾಳಿಯ ಶಬ್ಧ ಕೇಳುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅವರು ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಮರಿಯೋ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv