Tag: ಕ್ರಿಕೆಟ್ ಟೂರ್ನಿ

  • ವೈದಿಕ ಪಂಡಿತರಿಗಾಗಿ ಕ್ರಿಕೆಟ್‌ ಟೂರ್ನಿ – ವಿಜೇತರಿಗೆ ಅಯೋಧ್ಯೆ ಟ್ರಿಪ್‌

    ವೈದಿಕ ಪಂಡಿತರಿಗಾಗಿ ಕ್ರಿಕೆಟ್‌ ಟೂರ್ನಿ – ವಿಜೇತರಿಗೆ ಅಯೋಧ್ಯೆ ಟ್ರಿಪ್‌

    ಭೋಪಾಲ್:‌ ಹಣೆಯ ಮೇಲೆ ಪಟ್ಟೆ ವಿಭೂತಿ ಹಚ್ಚಿ, ಧೋತಿ-ಕುರ್ತಾ ಧರಿಸಿದ್ದ ವೈದಿಕ ಪಂಡಿತರು ಕ್ರಿಕೆಟ್‌ (Cricket) ಅಂಗಳದಲ್ಲಿ ಬ್ಯಾಟ್‌ ಹಿಡಿದು ಅಬ್ಬರಿಸುತ್ತಿದ್ದರು. ವೇದ-ಪಾರಾಯಣಗಳೊಂದಿಗೆ ಕಾಲ ಕಳೆಯುತ್ತಿದ್ದ ಪಂಡಿತರಿಂದು ಉತ್ಸಾಹದಿಂದ ಗ್ರೌಂಡ್‌ನಲ್ಲಿ ಸಿಕ್ಸರ್‌-ಬೌಂಡರಿ ಸಿಡಿಸುತ್ತಾ ಕ್ರಿಕೆಟ್‌ ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಪಡೆದರು.. ಈ ದೃಶ್ಯ ಕಂಡುಬಂದಿದ್ದು ಭೋಪಾಲ್‌ನ ಅಂಕುರ್‌ ಮೈದಾನದಲ್ಲಿ (Ankur Ground) ನಡೆಯುತ್ತಿರುವ ಕ್ರಿಕೆಟ್‌ ಟೂರ್ನಿಯಲ್ಲಿ.

    ಹೌದು. ಪಾಶ್ಚಿಮಾತ್ಯ ದೇಶಗಳಿಗೆ ಅತೀಂದ್ರಿಯ ಧ್ಯಾನದ ಅಭ್ಯಾಸ ಪರಿಚಯಿಸಿದ ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ ಅಂಗವಾಗಿ ಕ್ರಿಕೆಟ್‌ ಟೂರ್ನಿ ಹಮ್ಮಿಕೊಂಡಿದ್ದು, ವಿಜೇತರಿಗೆ ಅಯೋಧ್ಯೆ ಪ್ರವಾಸವನ್ನು (Ayodhya Trip) ಬಹುಮಾನವಾಗಿ ಘೋಷಿಸಲಾಗಿದೆ. ಮಧ್ಯಪ್ರದೇಶದ (Madhya Pradesh) ರಾಜಧಾನಿಯ ಅಂಕುರ್‌ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಈ ಟೂರ್ನಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಭೋಪಾಲ್‌ನ 4 ತಂಡಗಳು ಸೇರಿದಂತೆ ಒಟ್ಟು 12 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿವೆ.

    ಸಂಸ್ಕೃತದಲ್ಲೇ ಕಾಮೆಂಟ್ರಿ: ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಟೂರ್ನಿಯಲ್ಲಿ ಆಟಗಾರರು ಮತ್ತು ಅಂಪೈರ್‌ಗಳು ನಿರರ್ಗಳವಾಗಿ ಸಂಸ್ಕೃತದಲ್ಲಿ ಸಂವಹನ ನಡೆಸಿದರು. ಅಲ್ಲದೇ ಮೈದಾನದಲ್ಲಿ ಆಟಗಾರರ ಸಿಕ್ಸರ್‌, ಬೌಂಡರಿಗಳಿಗೆ ಸಂಸ್ಕೃತದಲ್ಲೇ ಕಾಮೆಂಟ್ರಿ ಮಾಡುತ್ತಾ ಗಮನ ಸೆಳೆದರು.

    ಅಯೋಧ್ಯೆ ಟ್ರಿಪ್‌ ಬಹುಮಾನ:
    ಮಹರ್ಷಿ ಮೈತ್ರಿ ಪಂದ್ಯ ಸಮಿತಿಯ ಸದಸ್ಯ ಅಂಕುರ್ ಪಾಂಡೆ ಅವರು ಹೇಳುವಂತೆ ಈ ಟೂರ್ನಿಯಲ್ಲಿ ವಿಜೇತರಿಗೆ 21 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಜನವರಿ 22ರ ನಂತರ ಅಯೋಧ್ಯೆಗೆ ಪ್ರವಾಸ ಕರೆದುಕೊಂಡು ಹೋಗುವ ಬಹುಮಾನವನ್ನೂ ಘೋಷಿಸಲಾಗಿದೆ. ರನ್ನರ್‌ ಅಪ್‌ಗೆ 11,000 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ. ಬಹುಮಾನಗಳ ಹೊರತಾಗಿ, ಆಟಗಾರರಿಗೆ ವೇದ ಮತ್ತು 100 ವರ್ಷಗಳ ‘ಪಂಚಾಂಗ’ ನೀಡಿ ಗೌರವಿಸಲಾಗುತ್ತಿದೆ.

    ಮತ್ತೊಬ್ಬ ಸಂಘಟಕರು ಈ ಟೂರ್ನಿಯು ವೈದಿಕ ಕುಟುಂಬದಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

  • ಅಪರೂಪದ ಬಹುಮಾನವುಳ್ಳ ಕ್ರಿಕೆಟ್ ಟೂರ್ನಿ ಕ್ಯಾನ್ಸಲ್

    ಅಪರೂಪದ ಬಹುಮಾನವುಳ್ಳ ಕ್ರಿಕೆಟ್ ಟೂರ್ನಿ ಕ್ಯಾನ್ಸಲ್

    – 1 ಕುರಿ, 1 ಕೇಸ್ ಬಿಯರ್, 1 ಬಾಟಲಿ ವಿಸ್ಕಿ

    ಚಿಕ್ಕಮಗಳೂರು: ಫಸ್ಟ್ ಪ್ರೈಸ್ 30 ಕೆಜಿ ತೂಕದ 1 ಕುರಿ, 1 ಕೇಸ್ ಬಿಯರ್, 1 ಬಾಟಲಿ ವಿಸ್ಕಿ. ಸೆಕೆಂಡ್ ಪ್ರೈಸ್ 6 ನಾಟಿ ಕೋಳಿ, 1 ಬಾಟಲಿ ಡ್ರಿಂಕ್ಸ್, 1 ಕೇಸ್ ಬಿಯರ್. ಥರ್ಡ್ ಹಾಗೂ ಸಮಾಧಾನಕರ ಬಹುಮಾನ ಎಲ್ಲರಿಗೂ ಸವೆನ್ ಅಪ್. ಅಪರೂಪದ ಬಹುಮಾನಗಳುಳ್ಳ ಕಾಫಿನಾಡ ವಿಭಿನ್ನ ಕ್ರಿಕೆಟ್ ಟೂರ್ನಿಮೆಂಟ್ ರದ್ದಾಗಿದೆ.

    ಟೂರ್ನಾಮೆಂಟ್ ಗೆ ಬಂದ ತಂಡಗಳ ಸಂಖ್ಯೆ ಕಂಡು ಆಯೋಜಕರೇ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಈ ರೀತಿಯ ರೇರ್ ಟೂರ್ನಿ ಆಯೋಜಿಸಲಾಗಿತ್ತು. ಆದರೆ ಕ್ರಿಕೆಟ್ ತಂಡಗಳು ಎದ್ವಾ-ತದ್ವಾ ಮುಗಿಬಿದ್ದಿದ್ದರಿಂದ ಆಯೋಜಕರೇ ತಾತ್ಕಾಲಿಕವಾಗಿ ಟೂರ್ನಿಯನ್ನ ಕೈಬಿಟ್ಟಿದ್ದಾರೆ.

    ಒಂದೇ ದಿನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 400ಕ್ಕೂ ಹೆಚ್ಚು ತಂಡಗಳು ಫೋನ್ ಮಾಡಿ ಹೆಸರು ನೊಂದಾಯಿಸಲು ಮುಂದಾಗಿದ್ದವು. ಇದರಿಂದ ಗೊಂದಲಕ್ಕೀಡಾದ ಆಯೋಜಕರು ತಾತ್ಕಾಲಿಕವಾಗಿ ಪಂದ್ಯಾವಳಿಯನ್ನ ಮುಂದೂಡಿದ್ದಾರೆ. ಟೂರ್ನಿಮೆಂಟ್ ಸ್ಥಗಿತಗೊಂಡಿರೋದ್ರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿದೆ.

  • ಬೇಡಿಕೆಗಳಿಗೆ ಮಣಿದ ಬಿಸಿಬಿ – ಪ್ರತಿಭಟನೆ ಕೈಬಿಟ್ಟ ಬಾಂಗ್ಲಾ ಕ್ರಿಕೆಟಿಗರು

    ಬೇಡಿಕೆಗಳಿಗೆ ಮಣಿದ ಬಿಸಿಬಿ – ಪ್ರತಿಭಟನೆ ಕೈಬಿಟ್ಟ ಬಾಂಗ್ಲಾ ಕ್ರಿಕೆಟಿಗರು

    ಢಾಕಾ: ಟೀಂ ಇಂಡಿಯಾ ವಿರುದ್ಧದ ಕ್ರಿಕೆಟ್ ಸರಣಿಗೂ ಮುನ್ನ ಬಾಂಗ್ಲಾ ಕ್ರಿಕೆಟ್ ಆಟಗಾರರು ನಡೆಸಿದ್ದ ಪ್ರತಿಭಟನೆಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ಮಣಿದಿದ್ದು, ಆಟಗಾರರ 11 ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

    ಆಟಗಾರ ಬೇಡಿಕೆಗಳಿಗೆ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಬಿಸಿಬಿ ವಕ್ತಾರರು ಸ್ಪಷ್ಟಡಿಸಿದ್ದಾರೆ. ಅಲ್ಲದೇ ಆಟಗಾರರ ಬಯಸಿದ್ದನ್ನು ನೀಡಲು ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.

    ಆಟಗಾರರು ಅಂತಿಮ ಕ್ಷಣದಲ್ಲಿ ಮುಂದಿಟ್ಟ ಹೆಚ್ಚುವರಿ 2 ಬೇಡಿಕೆಗಳಿಗೆ ಬಿಸಿಬಿ ಅನುಮತಿ ನೀಡಿಲ್ಲ ಎಂಬ ಮಾಹಿತಿ ಲಭಿಸಿದ್ದು, ಈ ಕುರಿತು ಮಾತನಾಡಿರುವ ಬಾಂಗ್ಲಾ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್, ಬೋರ್ಡ್ ನಿರ್ಧಾರದಿಂದ ಆಟಗಾರರಿಗೆ ಸಂತಸವಾಗಿದ್ದು, ಬಹುಬೇಗ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಸಂಸ್ಥೆ ತಿಳಿಸಿದೆ. ಆಟಗಾರರು ಶೀಘ್ರವೇ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ದೇಶೀಯ ಕ್ರಿಕೆಟ್ ಆಟಗಾರರ ವೇತನ ಹೆಚ್ಚಳ, ಬೋರ್ಡ್ ಲಾಭಾಂಶದಲ್ಲಿ ಆಟಗಾರರಿಗೂ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಟಗಾರರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಮುಂದಿನ ಬಾಂಗ್ಲಾ ಹಾಗೂ ಟೀಂ ಇಂಡಿಯಾ ನಡುವಿನ ಟೂರ್ನಿಗೆ ಸಮಸ್ಯೆ ಎದುರಾಗಲಿದೆ ಎಂಬ ಅನುಮಾನ ಮೂಡಿತ್ತು. ಭಾರತ 2 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳನ್ನು ಬಾಂಗ್ಲಾ ವಿರುದ್ಧ ಆಡಲಿದ್ದು, ನಂ.3ರಿಂದ ಸರಣಿ ಆರಂಭವಾಗಲಿದೆ.

  • 1 ಎಸೆತಕ್ಕೆ 6 ರನ್ : ರನ್ ಹೊಡೆಯದೇ ಗೆದ್ದು ಬೀಗಿದ್ರು – ವೈರಲ್ ವಿಡಿಯೋ

    1 ಎಸೆತಕ್ಕೆ 6 ರನ್ : ರನ್ ಹೊಡೆಯದೇ ಗೆದ್ದು ಬೀಗಿದ್ರು – ವೈರಲ್ ವಿಡಿಯೋ

    ಮುಂಬೈ: ಕ್ರಿಕೆಟ್ ರೋಚಕತೆಯ ಆಟ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದ್ದು, ಪಂದ್ಯದ ಅಂತಿಮ ಎಸೆತದಲ್ಲಿ 6 ರನ್ ಸಿಡಿಸುವ ಒತ್ತಡದಲ್ಲಿದ್ದ ತಂಡ ಯಾವುದೇ ರನ್ ಹೊಡೆಯದೇ ಜಯ ಗಳಿಸಿದ ಘಟನೆ ಮುಂಬೈ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ನಡೆದಿದೆ.

    ಆದರ್ಶ್ ಕ್ರಿಕೆಟ್ ಕ್ಲಬ್ 2019 ಟೆನ್ನಿಸ್ ಬಾಲ್ ಟೂರ್ನಿಯ ದೇಸಾಯಿ ಹಾಗೂ ಜೂನೈ ದೊಂಬಿವಿಲಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಘಟನೆ ನಡೆದಿದೆ. ದೇಸಾಯಿ ತಂಡದ 5 ಓವರ್ ಗಳಲ್ಲಿ 76 ರನ್ ಗುರಿಯನ್ನು ಬೆನ್ನಟ್ಟಿತ್ತು. ಪಂದ್ಯ ಅಂತಿಮ ಹಂತಕ್ಕೆ ತಲುಪಿದ ವೇಳೆ ಗೆಲುವು ಪಡೆಯಲು ಕೊನೆಯ ಎಸೆತದಲ್ಲಿ 6 ರನ್ ಗಳಿಸುವ ಒತ್ತಡವನ್ನು ಎದುರಿಸಿತ್ತು. ಆದರೆ ಎದುರಾಳಿ ತಂಡದ ಬೌಲರ್ ಮಾಡಿದ ಎಡವಟ್ಟಿನಿಂದ ದೇಸಾಯಿ ತಂಡದ ಬ್ಯಾಟ್ಸ್ ಮನ್ ರನ್ ಸಿಡಿಸುವ ಅಗತ್ಯವಿಲ್ಲದೇ ಜಯ ಪಡೆಯಿತು.

    https://twitter.com/Amit_smiling/status/1082707807307264000?

    ಜೂನಿ ದೊಂಬಿವಿಲಿ ತಂಡದ ಬೌಲರ್ ಕೊನೆಯ ಎಸೆತದ ವೇಳೆ 6 ವೈಡ್ ಬಾಲ್ ಹಾಕುವ ಮೂಲಕ ಎದುರಾಳಿ ತಂಡದ ಗೆಲುವಿಗೆ ಕಾರಣರಾದರು. ಇದರೊಂದಿಗೆ ಒಂದು ಎಸೆತ ಬಾಕಿ ಇರುವಂತೆ ದೇಸಾಯಿ ತಂಡ ಗೆಲುವು ಪಡೆಯಿತು. ಲೆಫ್ಟ್ ಹ್ಯಾಂಡ್ ಬೌಲರ್ ಸತತ ವೈಡ್ ಎಸೆದರೂ ಕೂಡ ಬೌಲಿಂಗ್ ಸೈಡ್ ಬದಲಾವಣೆ ಮಾಡದೇ ಅಚ್ಚರಿ ಮೂಡಿಸಿದ್ದ. ವಿಶೇಷ ಎಂದರೆ ಅಂತಿಮ ಎಸೆತ ಸಿಕ್ಸ್ ನೀಡಬಾರದು ಎಂದು ಬೌಲ್ ಮಾಡಿದ್ದ ವೇಳೆ ಸ್ಟ್ರೈಕ್ ನಲ್ಲಿ ದೇಸಾಯಿ ತಂಡದ ಬೌಲರ್ ಬ್ಯಾಟ್ ಬೀಸುತ್ತಿದ್ದ. ಅಲ್ಲದೇ ವೈಡ್ ಬಾಲಿಗೆ ಔಟ್ ಎಂದು ಕೂಡ ಬೌಲರ್ ಮನವಿ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ – ಸುದೀಪ್

    ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ – ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ಸೇರಿ ಆರಂಭಿಸಿರುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಲೀಗ್ (ಕೆಸಿಸಿ)ನಿಂದ ನಟ ದರ್ಶನ್ ದೂರವೇ ಉಳಿದಿದ್ದು, ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಕಿಚ್ಚ ಸುದೀಪ್ ನಾವು ಯಾರಿಗೂ ಬರಬಾರದು ಎಂದು ಗೇಟ್ ಹಾಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಸತತವಾಗಿ 2ನೇ ಬಾರಿಗೆ ಆಯೋಜನೆಗೊಳ್ಳುತ್ತಿರುವ ಕೆಸಿಸಿ ಟೂರ್ನಿಯ ಸುದ್ದಿಗೋಷ್ಠಿ ಇಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆಯಿತು. ನಟರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ದೊಡ್ಡಣ್ಣ ಸೇರಿದಂತೆ ಹಲವು ಸ್ಟಾರ್ ಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುದೀಪ್, ಕಳೆದ ಬಾರಿ ಕೆಸಿಸಿ ಆರಂಭಿಸಿದಾಗ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇತಿಹಾಸದಲ್ಲೇ ಇಂತಹ ಒಂದು ಪ್ರಯತ್ನ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರು.

    ಈ ವೇಳೆ ನಟ ದರ್ಶನ್ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರು ಬರಬಾರದು ಅಂತ ಯಾರು ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗಬೇಕು. ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ. ಇದು ಒಳ್ಳೆ ವಿಚಾರಕ್ಕಾಗಿ ಆಡುತ್ತಿರುವ ಪಂದ್ಯಾವಳಿ ಎಂದು ತಿಳಿಸಿದರು.

    ಟೂರ್ನಿಗೆ 6 ಅಂತರಾಷ್ಟ್ರೀಯ ಆಟಗಾರರು ಆಹ್ವಾನ ನೀಡಿ ಕಷ್ಟಪಟ್ಟು ಕರೆತಂದಿದ್ದೇವೆ. ಕನ್ನಡ ಚಿತ್ರರಂಗ ಇದಕ್ಕೆ ಸಾಕ್ಷಿಯಾಗಿದ್ದು, ಇಂತಹ ಒಂದು ಯೋಚನೆ ನನ್ನಿಂದ ಆರಂಭವಾದರೂ ಚಿತ್ರರಂಗದವರು ಇದನ್ನು ಬೆಳೆಸಲು ಸಹಾಯ ಮಾಡಿದ್ದಾರೆ. ಇಂದು ಕೆಸಿಸಿ ದೊಡ್ಡದಾಗಿ ಬೆಳೆದಿದ್ದು, ದೊಡ್ಡ ದೊಡ್ಡ ಪ್ರಯೋಜಕರು ನಮ್ಮೊಂದಿಗಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

    ಕೆಸಿಸಿ ಕುರಿತು ಈಗಾಗಲೇ ಅಂತರ್ಜಾಲದಲ್ಲಿ ಬಗ್ಗೆ ಮಾಹಿತಿ ಹೊರಬಿಟ್ಟಿದ್ದೇವೆ. ಇದೇ ತಿಂಗಳ 8 ಮತ್ತು 9 ರಂದು ಕೆಸಿಸಿ ಟೂರ್ನಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸುನಿಲ್ ಶೆಟ್ಟಿ, ಧನುಷ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇದೇ 8 ರಂದು ಕೆಸಿಸಿ 2ನೇ ಟೂರ್ನಿ ಉದ್ಘಾಟನೆಯಾಗಲಿದೆ. ಮೊದಲ ದಿನ 4 ಪಂದ್ಯಗಳು ಹಾಗೂ 2ನೇ ದಿನ 2 ತಂಡಗಳ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

    ಕೆಸಿಸಿ ಟೂರ್ನಿಯ ಪಂದ್ಯಗಳ ಟಿಕೆಟ್ ಸೋಮವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದೇ 5 ರಿಂದ ಎಲ್ಲಾ ಅಂತರಾಷ್ಟ್ರೀಯ ಆಟಗಾರರು ಆಗಮಿಸುತ್ತಿದ್ದು ಅವರೊಂದಿಗೆ ಎಲ್ಲರೂ ಅಭ್ಯಾಸ ಮಾಡಲಿದ್ದೇವೆ. ಟೂರ್ನಿಗೆ ಸಹಕಾರ ನೀಡಿದ ಎಲ್ಲಾ ಆಟಗಾರರು, ನಿರ್ಮಾಪಕರ ಸಂಘ, ನಿರ್ದೇಶಕ ಸಂಘ ಸೇರಿದಂತೆ ಎಲ್ಲಾ ಕಲಾವಿದರು, ತಂತ್ರಜ್ಞಾನರಿಗೂ ಧನ್ಯವಾದ ಎಂದರು.

    ಕೊಡಗು ಸಂತ್ರಸ್ತರಿಗೆ ಸಹಾಯ: ಕೆಸಿಸಿ 2ನೇ ಆವೃತ್ತಿಯಿಂದ ಬರುವ ಲಾಭವನ್ನು ಕೊಡಗು ಸಂತ್ರಸ್ತರಿಗೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುದೀಪ್, ನಿರಾಶ್ರಿತರಿಗೆ ಸಹಾಯ ಮಾಡುವುದು ಖಚಿತ ಎಂದರು. ಆದರೆ ಎಷ್ಟು ಹಣ ಕೊಡುತ್ತಾರೆ ಎಂಬುವುದನ್ನು ಸ್ಪಷ್ಟಪಡಿಸಲಿಲ್ಲ.

    ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನನಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ನಾನು ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಕೆಸಿಸಿ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ನೆಚ್ಚಿನ ಕ್ರಿಕೆಟರ್ ಜಿ. ಆರ್ ವಿಶ್ವನಾಥ್. ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ. ಚೆನ್ನೈನಲ್ಲಿ ಇದ್ದಾಗಲೂ ಬೆಂಗಳೂರು, ಮುಂಬೈಗೆ ಬಂದು ಕ್ರಿಕೆಟ್ ನೋಡುತ್ತಿದ್ದೆ. ಕಳೆದ ಬಾರಿ ಎರಡು ದಿನ ಅಭ್ಯಾಸ ಮಾಡಿ ಟೂರ್ನಿಯಲ್ಲಿ ಭಾಗವಹಿದ್ದೆ. ಆದರೆ ಈ ಬಾರಿ ಹೆಚ್ಚಿನ ಅಭ್ಯಾಸ ನಡೆಸಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಟೂರ್ನಿಯ ರೂವರಿ ಸುದೀಪ್ ಗೆ ಜೊತೆ ನಾವೆಲ್ಲರೂ ಇದ್ದೇವೆ, ಅವರು ಎಲ್ಲೆ ಕರೆದರೂ ಒಗ್ಗಟ್ಟಾಗಿ ಹೋಗಿ ಆಡುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎರಡನೇ ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸುದೀಪ್

    ಎರಡನೇ ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಎರಡನೇ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

    ಸುದೀಪ್ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದು, ಸ್ಯಾಂಡಲ್‍ವುಡ್ ಕ್ರಿಕೆಟ್ ಟೂರ್ನಿಯ ಸಮಾರೋಪದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ಸುದೀಪ್ ಜೊತೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ, ಈ ಎಲೆಕ್ಷನ್‍ನಲ್ಲಿ ನಮ್ಮ ಪರ ಪ್ರಚಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಈ ಹಿಂದೆ ಕೂಡ ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯರನ್ನು ಸುದೀಪ್ ಭೇಟಿ ಮಾಡಿದ್ದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಸುದೀಪ್ ವಿಷ್ಣು ಸಮಾಧಿಯ 100 ಎಕರೆ ಜಾಗವನ್ನ ನಾವೇ ಖರೀದಿ ಮಾಡುತ್ತೇನೆ. ಸಮಾಧಿಯನ್ನು ಸ್ಥಳಾಂತರ ಮಾಡೋದು ಬೇಡ, ಸಮಾಧಿ ಜಾಗವನ್ನ ಪುಣ್ಯಭೂಮಿ ಅಂತಾ ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿದ್ದೇನೆ. ಭಾರತೀಯರ ಆಸೆಯಂತೆ ಇಲ್ಲಿ ಬದಲಾಗಿ ಸ್ಮಾರಕವನ್ನು ಮೈಸೂರಿನಲ್ಲಿ ಮಾಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಜೊತೆಗೆ ಪುಣ್ಯಭೂಮಿ ಮಾಡಿಕೊಡೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಸುದೀಪ್ ಹೇಳಿದರು.