Tag: ಕ್ರಿಕೆಟ್ ಟೂರ್ನಮೆಂಟ್

  • ಕೋವಿಡ್ ಸೋಂಕಿತ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿ – ಜನರಲ್ಲಿ ಆತಂಕ

    ಕೋವಿಡ್ ಸೋಂಕಿತ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿ – ಜನರಲ್ಲಿ ಆತಂಕ

    ನೆಲಮಂಗಲ: ಕೋವಿಡ್ ಪಾಸಿಟಿವ್ ಇರುವ ಆರೋಗ್ಯ ಸಿಬ್ಬಂದಿಯೊಬ್ಬ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ನಸಿರ್ಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಮೂರ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಇಲ್ಲಾ ಅಂದರೆ ಮನೆಯಲ್ಲಿ ಹೋಮ್ ಐಸೋಲೇಶನ್ ಆಗಬೇಕು. ಅದನ್ನು ಬಿಟ್ಟು ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಭಾಗವಹಿಸಿದ್ದಾನೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

    ನರಸಿಂಹಮೂರ್ತಿ, ಕೊರೊನಾ ಪಾಸಿಟಿವ್ ವರದಿಯಿದ್ದರೂ ಉದ್ದಟತನ ಮೇರೆದಿದ್ದು, ಗ್ರೌಂಡ್‍ನಲ್ಲಿ ಬಿಂದಾಸ್ ಆಗಿ ಓಡಾಡಿದ್ದಾರೆ. 3 ದಿನದ ಹಿಂದೆ ನಡೆದ ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದ್ದಾರೆ. ಈ ಸಿಬ್ಬಂದಿಯಿಂದ ಕ್ರಿಕೆಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಆತಂಕ ಶುರುವಾಗಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ಕೋಳಿ ವ್ಯಾಪಾರ ಜೋರು – ಕೋವಿಡ್ ನಿಯಮ ಉಲ್ಲಂಘನೆ

     

  • ಪ್ರೆಸ್ ಕ್ಲಬ್, ಪಿಇಎಸ್ ಕ್ರಿಕೆಟ್ ಟೂರ್ನಮೆಂಟ್‍ಗೆ ಡಿಕೆ ಶಿವಕುಮಾರ್ ಚಾಲನೆ

    ಪ್ರೆಸ್ ಕ್ಲಬ್, ಪಿಇಎಸ್ ಕ್ರಿಕೆಟ್ ಟೂರ್ನಮೆಂಟ್‍ಗೆ ಡಿಕೆ ಶಿವಕುಮಾರ್ ಚಾಲನೆ

    – ಪ್ರಶಸ್ತಿ ಗೆಲ್ಲಲು 22 ತಂಡಗಳು ತೀವ್ರ ಪೈಪೋಟಿ

    ಬೆಂಗಳೂರು: 2019-20ರ ಪ್ರೆಸ್ ಕ್ಲಬ್ ಹಾಗೂ ಪಿಇಎಸ್ ಯೂನಿವರ್ಸಿಟಿ ಸಹಯೋಗದಲ್ಲಿ ಇಂಟರ್ ಮೀಡಿಯಾ ಟಿ-10 ಕ್ರಿಕೆಟ್ ಟೂರ್ನಮೆಂಟ್ ಗೆ ಇಂದು ಚಾಲನೆ ಸಿಕ್ಕಿತು.

    ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದವರಿಗಾಗಿ ಆಯೋಜನೆಗೊಂಡಿದ್ದ ಈ ಟೂರ್ನಮೆಂಟ್‍ನ್ನು ಕಾಂಗ್ರೆಸ್ಸಿನ ನಾಯಕ ಡಿ.ಕೆ ಶಿವಕುಮಾರ್ ಉದ್ಘಾಟಿಸಿ, ಸಖತ್ ಆಗಿ ಬ್ಯಾಟ್ ಬೀಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಬಳಿಕ ಮಾತನಾಡಿದ ಡಿಕೆಶಿ, ಪ್ರೆಸ್ ಕ್ಲಬ್ ನಿಂದ ಇದೊಂದು ಒಳ್ಳೆಯ ಕೆಲಸ. ಮಾಧ್ಯಮ ದೊಡ್ಡ ಬುನಾದಿ. ನಿಮಗೆ ನಾನು ಗೌರವ ಕೊಡಬೇಕಾದದ್ದಿದೆ. ಹೀಗಾಗಿ ನಿಮ್ಮ ಆಹ್ವಾನಕ್ಕೆ ಬಂದಿದ್ದೇನೆ ಎಂದರು.

    ಮುಂದಿನ ದಿನಗಳಲ್ಲಿ ಈಡೀ ರಾಜ್ಯದ ಎಲ್ಲಾ ಪತ್ರಕರ್ತರನ್ನ ಸೇರಿಸಿಕೊಂಡು ಸ್ಪರ್ಧೆಗೆ ಅವಕಾಶ ಮಾಡಿಕೊಡಿ ಎಂದು ಪ್ರೆಸ್ ಕ್ಲಬ್ ಸದಸ್ಯರಿಗೆ ಮನವಿ ಮಾಡಿಕೊಂಡಿದರು. ನೀವು ಏನೇ ತೋರಿಸಿದರೂ ನಮ್ಮ ಒಳ್ಳೆಯದಕ್ಕಾಗಿ ತೋರಿಸ್ತೀರಿ. ನಮ್ ತರ ನೀವು ಕಿತ್ತಾಡಬೇಡಿ ಎಂದು ಹೇಳಿದರು. ಈ ವೇಳೆ ತಮ್ಮ ಬಾಲ್ಯದ ಜೀವನದ ಬಗ್ಗೆ ಮೆಲಕು ಹಾಕಿದ ಡಿ.ಕೆ.ಶಿವಕುಮಾರ್, ನಾನು ನಮ್ಮ ಹಳ್ಳಿಯಲ್ಲಿ ಕ್ರಿಕೆಟ್ ಜೊತೆಗೆ, ಶಾಟ್ ಪುಟ್, ವಾಲಿಬಾಲ್ ಆಡುತ್ತಿದ್ದೆ ಇವತ್ತು ಬಹಳ ಸಂತೋಷ ಆಯ್ತು. ಬಾಲ್ಯದ ದಿನಗಳು ನೆನಪಾದವು ಅಂತ ಹೇಳಿದರು.

    ಎರಡು ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್‍ನಲ್ಲಿ ಒಟ್ಟು 22 ತಂಡಗಳು ಭಾಗಿಯಾಗಿವೆ. ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಕಪ್ ಗೆಲ್ಲಲು ಎಲ್ಲಾ ತಂಡಗಳು ಫುಲ್ ಜೋಶ್ ನಲ್ಲಿ ಪಂದ್ಯಗಳನ್ನು ಆಡುತ್ತಿವೆ.