Tag: ಕ್ರಿಕೆಟ್ ಆಟಗಾರ

  • ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್

    ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್

    ನವದೆಹಲಿ: ಭಾರತ ಕ್ರಿಕೆಟ್ ಟೀಮ್‌ನ ಆಲ್‌ರೌಂಡರ್ ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಬುಧವಾರ ತಮ್ಮ ಗೆಳತಿಯೊಂದಿಗೆ ವಿವಾಹವಾದ ಚಹರ್, ಗುರುವಾರ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಪತ್ನಿ ಬಗ್ಗೆ ತಮ್ಮ ಮನದಾಳದ ಮಾತನ್ನು ವಿವರಿಸಿದ್ದಾರೆ.

    ನಾನು ನಿನ್ನನ್ನು ಮೊದಲ ಬಾರಿ ಭೇಟಿಯಾದಾಗ ನನ್ನ ಜೀವನಕ್ಕೆ ನೀನೇ ಸರಿಯಾದ ವ್ಯಕ್ತಿ ಎಂದು ತಿಳಿದಿದ್ದೆ. ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಜೊತೆಯಲ್ಲಿ ಆನಂದಿಸಿದ್ದೇವೆ ಹಾಗೂ ನಿನ್ನನ್ನು ಯಾವಾಗಲೂ ಹೀಗೇ ಸಂತೋಷವಾಗಿಡಲು ಬಯಸುತ್ತೇನೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಮಗೆ ಎಲ್ಲರ ಆಶೀರ್ವಾದ ಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

     

    View this post on Instagram

     

    A post shared by Deepak Chahar (@deepak_chahar9)

    ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ ದೀಪಕ್ ಜಯಾಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ್ದರು. ದೀಪಕ್ ತಮ್ಮ ಗೆಳತಿಗೆ ಪ್ರೇಮನಿವೇದನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಿಎಸ್‌ಕೆ ತಂಡದಲ್ಲಿದ್ದ ದೀಪಕ್ ಪಂಜಾಬ್ ತಂಡದ ವಿರುದ್ಧ ಪಂದ್ಯವನ್ನು ಗೆದ್ದ ಬಳಿಕ ಎಲ್ಲರೆದುರು ಗೆಳತಿಗೆ ಉಂಗುರ ತೊಡಿಸಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

    ಜಯಾ ಬಾರದ್ವಾಜ್ ನಟ ಹಾಗೂ ಬಿಗ್‌ಬಾಸ್ 13ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿದ್ದು, ದೆಹಲಿಯ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

  • ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ: ಅನುಷ್ಕಾ ಶೆಟ್ಟಿ

    ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ: ಅನುಷ್ಕಾ ಶೆಟ್ಟಿ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಕ್ರಿಕೆಟ್ ಆಟಗಾರನ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿ ಬಗ್ಗೆ ಸ್ವತಃ ಅನುಷ್ಕಾ ಸ್ಪಷ್ಟನೆ ನೀಡಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

    ಅನುಷ್ಕಾ ಉತ್ತರ ಭಾರತ ಮೂಲದ ಕ್ರಿಕೆಟ್ ಆಟಗಾರನ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅನುಷ್ಕಾ ಇದೆಲ್ಲಾ ಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅನುಷ್ಕಾ, ನಾನು ಯಾವ ಕ್ರಿಕೆಟ್ ಆಟಗಾರನನ್ನು ಮದುವೆ ಆಗುತ್ತಿಲ್ಲ. ಯಾವುದಾದರು ವಿಷಯ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಪರಿಶೀಲಿಸಿ. ನನ್ನ ಮದುವೆಯ ನಿರ್ಧಾರವನ್ನು ನಾನು ನನ್ನ ಪೋಷಕರಿಗೆ ಬಿಟ್ಟಿದ್ದೇನೆ. ನನ್ನ ತಂದೆ-ತಾಯಿ ಆಯ್ಕೆ ಮಾಡಿದ ಹುಡುಗನನ್ನು ನಾನು ಮದುವೆ ಆಗುತ್ತೇನೆ. ನಾನು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ. ಆದರೆ ಯಾವುದೇ ಕ್ರಿಕೆಟ್ ಆಟಗಾರನನ್ನು ನಾನು ಮದುವೆ ಆಗುತ್ತಿಲ್ಲ ಎಂದರು. ಇದನ್ನೂ ಓದಿ:  ಕ್ರಿಕೆಟ್ ಆಟಗಾರನ ಜೊತೆ ಅನುಷ್ಕಾ ಮ್ಯಾರೇಜ್

    ಸದ್ಯಕ್ಕೆ ಅನುಷ್ಕಾ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.

  • ಕ್ರಿಕೆಟ್ ಆಟಗಾರನ ಜೊತೆ ಅನುಷ್ಕಾ ಮ್ಯಾರೇಜ್

    ಕ್ರಿಕೆಟ್ ಆಟಗಾರನ ಜೊತೆ ಅನುಷ್ಕಾ ಮ್ಯಾರೇಜ್

    ಹೈದರಾಬಾದ್: ‘ಬಾಹುಬಲಿ’ ಸಿನಿಮಾ ರಿಲೀಸ್ ಆದಗಿನಿಂದ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಇಬ್ಬರ ಮದುವೆ ಸುದ್ದಿಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇದೀಗ ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಒಂದು ಸುರ್ಪ್ರೈಸ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಹೌದು..ಇಷ್ಟು ದಿನ ಪ್ರಭಾಸ್ ಮತ್ತು ಅನುಷ್ಮಾ ತುಂಬಾ ಆತ್ಮೀಯರಾಗಿದ್ದಾರೆ. ಹೀಗಾಗಿ ಇವರಿಬ್ಬರು ಸದ್ಯದಲ್ಲೇ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಅನುಷ್ಕಾ ಶೆಟ್ಟಿ ಅವರು ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

    ಇದುವರೆಗೂ ಅನುಷ್ಕಾ ಶೆಟ್ಟಿ ಯಾವ ಕ್ರಿಕೆಟ್ ಆಟಗಾರನ ಜೊತೆಯೂ ಕಾಣಿಸಿಕೊಂಡಿಲ್ಲ. ಆದರೂ ಅನುಷ್ಕಾ ಶೆಟ್ಟಿ ಈಗ ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಅಚ್ಚರಿ ತಂದಿದೆ. ಉತ್ತರ ಭಾರತ ಮೂಲದ ಆಟಗಾರನ ಜೊತೆ ವಿವಾಹವಾಗಲು ಅನುಷ್ಕಾ ಶೆಟ್ಟಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಅನುಷ್ಕಾ ಶೆಟ್ಟಿ ಮದುವೆ ಕಿಕ್ರೆಟ್ ಆಟಗಾರನ ಜೊತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಆಟಗಾರ ಯಾರು ಎಂಬುದರ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಆದರೆ ಅಭಿಮಾನಿಗಳಂತೂ ಉತ್ತರ ಭಾರತದ ಆಟಗಾರ ಯಾರಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಡುತ್ತಿದ್ದಾರೆ.

    ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಪ್ರಭಾಸ್ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಬಗ್ಗೆ ಮಾತನಾಡಿ, “ನಾನು ಮತ್ತು ಅನುಷ್ಕಾ ಒಳ್ಳೆಯ ಗೆಳೆಯ-ಗೆಳತಿ ಅಷ್ಟೇ. ಆಕೆ ಜೊತೆ ನಾನು ಯಾವತ್ತೂ ಡೇಟಿಂಗ್ ಮಾಡಿಲ್ಲ. ಬಾಹುಬಲಿಯಲ್ಲಿ ಆಕೆ ನನಗೆ ತಾಯಿಯಾಗಿದ್ದಾಳೆ, ಪ್ರೇಯಸಿಯೂ ಆಗಿದ್ದಾಳೆ. ಈಗ ನೀವೇ ಹೇಳಿ ತಾಯಿಯನ್ನು ಯಾರಾದರೂ ಮದುವೆ ಆಗೋಕೆ ಸಾಧ್ಯನಾ?” ಎಂದು ಹೇಳಿದ್ದರು.

    ಸದ್ಯಕ್ಕೆ ಅನುಷ್ಕಾ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.

  • ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಅಜಾದ್ ಕಾಂಗ್ರೆಸ್ ಸೇರ್ಪಡೆ

    ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಅಜಾದ್ ಕಾಂಗ್ರೆಸ್ ಸೇರ್ಪಡೆ

    ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿದ್ದ ಕೀರ್ತಿ ಅಜಾದ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

    ಬಳಿಕ ಮಾತನಾಡಿದ ಅವರು, ಇಂದು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದೇನೆ. ಸಾಂಪ್ರದಾಯಿಕ ಮಿಥಿಲಾ ಶೈಲಿಯಲ್ಲಿ ಅವರನ್ನು ನಾನು ಸನ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.

    ಕೀರ್ತಿ ಅಜಾದ್ ಮಾಜಿ ಕ್ರಿಕೆಟ್ ಆಟಗಾರಾಗಿದ್ದು, 1983ರಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದಾರೆ. ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದ ಅವರು 1999ರಲ್ಲಿ ಮೊದಲ ಬಾರಿಗೆ ದರ್ಭಂಗ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಈ ಮೂಲಕ ಅವರು ಮೂರು ಬಾರಿ ಬಿಜೆಪಿಯಿಂದ ಜಯಗಳಿದ್ದರು.

    ಅಜಾದ್ ಅವರು ಫೆಬ್ರವರಿ 15ರಂದು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದರು. ಆದರೆ ಪುಲ್ವಾಮಾದ ಉಗ್ರರ ದಾಳಿಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹೀಗಾಗಿ ಇಂದು ಅಧಿಕೃತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

    ಅಮಾನತು ಮಾಡಿದ್ದು ಯಾಕೆ?:
    ಅಜಾದ್ ಅವರ ವಿರುದ್ಧ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ)ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಹೀಗಾಗಿ ಬಿಜೆಪಿ 2015ರಲ್ಲಿ ಅಮಾನತು ಮಾಡಿತ್ತು. ಬಳಿಕ ಆಮ್ ಆದ್ಮಿ ಪಕ್ಷ ಸೇರಿದ್ದರು. ಆದರೆ ಈಗ ಅಲ್ಲಿಂದ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv