Tag: ಕ್ರಿಕೆಟ್‌ ಅಭಿಮಾನಿಗಳು

  • Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ

    ಮೈಸೂರು: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಮೈಸೂರಿನಲ್ಲಿ (Mysuru) ಕ್ರಿಕೆಟ್ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಕ್ರಿಕೆಟ್ ಪ್ರೇಮಿಗಳಿಗಿಂದು ಸೂಪರ್ ಸಂಡೇಯಾಗಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತದ ಗೆಲುವಿಗಾಗಿ ಮೈಸೂರಿನಲ್ಲಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಅಗ್ರಹಾರದ ಗಣಪತಿ ದೇಗುಲದಲ್ಲಿ 101 ಈಡುಗಾಯಿ ಹೊಡೆದು ಹರಕೆ ಪೂರೈಸಿದರು. ಇದನ್ನೂ ಓದಿ: Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರ ಪೋಸ್ಟರ್ ಹಿಡಿದು ಘೋಷಣೆ ಕೂಗಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಪೋಸ್ಟರ್ ಹಿಡಿದು ಘೋಷಣೆ ಹಾಕಿದರು. ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಶಕ್ತಿ ನೀಡುವಂತೆ ವಿಘ್ನ ನಿವಾರಕನಿಗೆ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ

    ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಂದು ಭಾರತ ಪಡೆ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ. 25 ವರ್ಷಗಳ ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಎರಡು ತಂಡಗಳು ಸೆಣಸಾಡಲಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರೇಯಸಿ, ಆಕೆಯ ಮಗನನ್ನ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

    ಇಡೀ ವಿಶ್ವದ ಚಿತ್ತವೇ ಇವತ್ತು ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಪಟ್ಟಕ್ಕಾಗಿ ಇಂದು ದುಬೈ ರಣಾಂಗಣದಲ್ಲಿ ಮಹಾಕದನವೇ ನಡೆಯಲಿದೆ. ಒಂದೆಡೆ ಸೋಲಿಗೆ ಪ್ರತೀಕಾರವಾದರೆ, ಮತ್ತೊಂದೆಡೆ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಲು ಟೀಂ ಇಂಡಿಯಾ ಸನ್ನದ್ಧವಾಗಿದೆ.

  • ಧರ್ಮಶಾಲಾ ಅಂಗಳದಲ್ಲಿ ವಂದೇ ಮಾತರಂ ಝೇಂಕಾರ – ಅದ್ಭುತ ವೀಡಿಯೋ ನೀವೇ ನೋಡಿ

    ಧರ್ಮಶಾಲಾ ಅಂಗಳದಲ್ಲಿ ವಂದೇ ಮಾತರಂ ಝೇಂಕಾರ – ಅದ್ಭುತ ವೀಡಿಯೋ ನೀವೇ ನೋಡಿ

    ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂನಲ್ಲಿ (Dharamshala HPCA Stadium) ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪಂದ್ಯದ ವೇಳೆ ದೇಶಭಕ್ತಿಗೆ ಸಾಕ್ಷಿಯಾಗುವ ಬೆಳವಣಿಗೆಯೊಂದು ಕಂಡುಬಂದಿತು.

    ಆಸ್ಟ್ರೇಲಿಯಾ ಹಾಗೂ ಕಿವೀಸ್‌ (Aus Vs Nz) ನಡುವಿನ ಪಂದ್ಯ ಮುಕ್ತಾಯಗೊಂಡು ಆಸೀಸ್‌ ತಂಡ ರೋಚಕ ಜಯದ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಸ್ಟೇಡಿಯಂನಲ್ಲಿ ಬಣ್ಣಗಳ ಬೆಳಕಿನೊಂದಿಗೆ ವಂದೇ ಮಾತರಂ ಗೀತೆ ಪ್ರಸಾರ ಮಾಡಲಾಗಿತ್ತು. 23 ಸಾವಿರ ಆಸನಗಳ ಸಾಮರ್ಥ್ಯವುಳ್ಳ ಧರ್ಮಶಾಲಾ ಕ್ರೀಡಾಂಗಣ ಸಂಪೂರ್ಣ ತುಂಬಿ ತುಳುಕುತ್ತಿತ್ತು. ಬಗೆ-ಬಗೆಯ ಬಣ್ಣಗಳ ಬೆಳಕಿನೊಂದಿಗೆ (Lightshow) ವಂದೇ ಮಾತರಂ ಗೀತೆ (Vande Mataram Song) ಪ್ರಸಾರವಾಗುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮಳೆಗರೆದ ಅಭಿಮಾನಿಗಳು ಎದ್ದು ನಿಂತು ಗೌರವ ಸೂಚಿಸಿದರು. ತಾವೂ ಸಹ ದನಿಗೂಡಿಸಿ ಹಾಡಿದರು. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: 23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    ಹಿಮದ ಅಂಗಳದಲ್ಲಿ ರನ್‌ ಪ್ರವಾಹ: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ತಂಡವು 49.2 ಓವರ್‌ಗಳಿಗೆ 388 ರನ್‌ಗಳಿಗೆ ಆಲೌಟ್‌ ಆಯಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 383 ರನ್‌ ಗಳಿಸಿ ವಿರೋಚಿತ ಸೋಲಿಗೆ ತುತ್ತಾಯಿತು. ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ 345 ರನ್‌ ಚೇಸ್‌ ಮಾಡಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆದ್ರೆ ಕಿವೀಸ್‌ 383 ರನ್‌ವರೆಗೂ ಚೇಸ್‌ ಮಾಡಿ ಹೊಸ ದಾಖಲೆ ಸೃಷ್ಟಿಸಿತು. ಇದನ್ನೂ ಓದಿ: World Cup 2023: ರೋಚಕ ಪಂದ್ಯದಲ್ಲಿ ಆಸೀಸ್‌ಗೆ 5 ರನ್‌ಗಳ ಜಯ – ಹೋರಾಡಿ ಸೋತ ಕಿವೀಸ್‌

    ಕಿವೀಸ್‌ ಮತ್ತು ಆಸೀಸ್‌ ನಡುವಿನ ಪಂದ್ಯದಲ್ಲಿ ಒಟ್ಟು 32 ಸಿಕ್ಸರ್‌ ಹಾಗೂ 65 ಬೌಂಡರಿಗಳು ಸಿಡಿದಿವೆ. ಆಸೀಸ್‌ ಪರ 20 ಸಿಕ್ಸರ್‌, 32 ಬೌಂಡರಿ ದಾಖಲಾದರೆ, ಕಿವೀಸ್‌ ಪರ 33 ಬೌಂಡರಿ ಹಾಗೂ 12 ಸಿಕ್ಸರ್‌ಗಳು ಮಾತ್ರ ದಾಖಲಾಯಿತು. ಅಲ್ಲದೇ ಈ ಪಂದ್ಯದಲ್ಲಿ ಇತ್ತಂಡಗಳಿಂದಲೂ 771 ರನ್‌ ದಾಖಲಾಗಿದ್ದು, ವಿಶ್ವಕಪ್‌ನಲ್ಲೇ ದಾಖಲಾದ ಗರಿಷ್ಠ ಸ್ಕೋರ್‌ ಆಗಿದೆ. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]