Tag: ಕ್ರಿಕಟ್

  • ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಹೆಚ್ಚು ಪ್ರತಿಭಾನ್ವಿತರು – ಅಬ್ದುಲ್ ರಜಾಕ್

    ಭಾರತೀಯ ಕ್ರಿಕೆಟಿಗರಿಗಿಂತ ಪಾಕ್ ಕ್ರಿಕೆಟಿಗರು ಹೆಚ್ಚು ಪ್ರತಿಭಾನ್ವಿತರು – ಅಬ್ದುಲ್ ರಜಾಕ್

    ನವದೆಹಲಿ: ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಭಾರತೀಯ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ಪ್ರತಿಭಾನ್ವಿತರು ಅವರನ್ನು ಭಾರತೀಯ ಆಟಗಾರರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಆಟಗಾರ ಅಬ್ದುಲ್ ರಜಾಕ್ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

    ಪಾಕಿಸ್ತಾನದ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ಮೊದಲ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್ ಅವರನ್ನು ಹೋಲಿಕೆ ಮಾಡಬೇಡಿ ಪಾಕಿಸ್ತಾನದ ಆಟಗಾರರು ಭಾರತೀಯ ಆಟಗಾರಿಂದ ಹೆಚ್ಚು ಪ್ರತಿಭಾನ್ವಿತರು ಎಂದು ಹೇಳಿದ್ದಾರೆ.

    ಪಾಕಿಸ್ತಾನ ತಂಡದ ಇತಿಹಾಸ ಗಮನಿಸಿದಾಗ ಮೊಹಮ್ಮದ್ ಯೂಸುಫ್, ಇಂಜಮಾಮ್ ಉಲ್ ಹಕ್, ಸಯೀದ್ ಅನ್ವರ್, ಜಾವೇದ್ ಮಿಯಾಂದಾದ್, ಜಹೀರ್ ಅಬ್ಬಾಸ್ ಮೊದಲಾದ ಆಟಗಾರರು ಭಾರತದ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಿ ತೋರಿಸಿದ್ದಾರೆ ಎಂದು ರಜಾಕ್ ಅಭಿಪ್ರಾಯಪಟ್ಟಿದ್ದಾರೆ.

    ಕೊಹ್ಲಿ ಹಾಗೂ ಬಾಬರ್ ಅಜಾಮ್ ನಡುವೆ ಹೋಲಿಕೆ ಮಾಡಬೇಕಾದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆಯಬೇಕು. ಆ ಸಂದರ್ಭ ಕೊಹ್ಲಿ ಮತ್ತು ಬಾಬರ್ ಅವರ ನಡುವೆ ಯಾರು ಉತ್ತಮ ಆಟಗಾರ ಎಂಬುದನ್ನು ಗಮನಿಸಬಹುದು ಎಂದಿದ್ದಾರೆ.

    ವಿರಾಟ್ ಕೊಹ್ಲಿ ಒಬ್ಬ ಒತ್ತಮ ಆಟಗಾರ ಪಾಕಿಸ್ತಾನ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಇವರೊಂದಿಗೆ ಪಾಕಿಸ್ತಾನದ ಆಟಗಾರರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

  • ಪಿಂಕ್ ಬಾಲ್ ಟೆಸ್ಟ್​ಗೆ ಸಿದ್ಧವಾದ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ

    ಪಿಂಕ್ ಬಾಲ್ ಟೆಸ್ಟ್​ಗೆ ಸಿದ್ಧವಾದ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ

    ಗಾಂಧಿನಗರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾ ಭರ್ಜರಿಯಾಗಿ ಸಿದ್ಧಗೊಂಡಿದೆ.

    ಗುಜರಾತ್‍ನ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, ಈ ಕ್ರೀಡಾಂಗಣದಲ್ಲಿ ನಡೆಯುವ ಡೇ-ನೈಟ್ ಟೆಸ್ಟ್ ಪಂದ್ಯಾಟಕ್ಕಾಗಿ ಇದೀಗ ಆಟಗಾರರು ಕೂಡ ಬಾರಿ ಉತ್ಸಾಹದಲ್ಲಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಪಂದ್ಯ ಫೆಬ್ರವರಿ 24 ರಿಂದ 28 ವರೆಗೆ ನಡೆಯಲಿದ್ದು, ಈಗಾಗಲೇ ಭಾರತೀಯ ಆಟಗಾರರೂ ಮೊಟೆರಾ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

    ಮೂರನೇ ಟೆಸ್ಟ್ ಪಂದ್ಯ ಹಲವು ವಿಶೇಷಗಳಿಂದ ಕೂಡಿದ್ದು, ಈಗಾಗಲೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಶೇ.50 ರಷ್ಟು ಟೆಕೆಟ್ ಕೂಡ ಸೇಲ್ ಆಗಿದೆ. ಒಟ್ಟು 1.10 ಲಕ್ಷ ಪ್ರೇಕ್ಷಕ ಗ್ಯಾಲರಿ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೊರೊನಾ ಕಾರಣದಿಂದಾಗಿ ಶೇ.50 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಒಟ್ಟು 63 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕ್ರೀಡಾಂಗಣದ ಒಳಭಾಗದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ಮೂರು ಅಭ್ಯಾಸ ಮೈದಾನಗಳು ಮತ್ತು ಸುಸಜ್ಜಿತಾ ನಾಲ್ಕು ಡ್ರೆಸ್ಸಿಂಗ್ ರೂಂ ಇದೆ. ಇನ್ನೂ ಹೊನಲು ಬೆಳಕಿನಲ್ಲಿ ಪಂದ್ಯ ನಡೆಯುವ ಕಾರಣ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್‍ಇಡಿ ಬಲ್ಬ್ ಗಳನ್ನು ಹಾಕಲಾಗಿದೆ.

    ಮಳೆ ಬಂದರೆ ಪರಿಹಾರವಾಗಿ ಮೈದಾನವನ್ನು ಒಣಗಿಸಲು ಸಬ್ ಏರ್ ಸಿಸ್ಟಂ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮಳೆ ನಿಂತು ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಈ ಎಲ್ಲ ಸೌಲಭ್ಯಗಳೊಂದಿಗೆ, ವಿಶ್ವದ ಎರಡನೇ ಅತೀ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಮೊಟೆರಾ ಇದೀಗ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಕಾತರದಿಂದ ಕಾಯುತ್ತಿದೆ ಇದೀಗ ಎಲ್ಲರ ಚಿತ್ತ ಮೊಟೆರಾ ಕ್ರೀಡಾಂಗಣದತ್ತ ನೆಟ್ಟಿದೆ.