Tag: ಕ್ರಷರ್

  • ಚಾಮರಾಜನಗರ| ಕ್ರಷರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

    ಚಾಮರಾಜನಗರ| ಕ್ರಷರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

    – ಕೈಗಾರಿಕಾ ಉದ್ದೇಶಕ್ಕೆ ಅನುಮತಿ ಪಡೆದು ಕ್ರಷರ್ ಆರಂಭಿಸಲು ಹೊರಟಿದ್ದಾರೆಂಬ ಆರೋಪ

    ಚಾಮರಾಜನಗರ: ಗ್ರಾಮದ ಹತ್ತಿರ ಕ್ರಷರ್ ನಿರ್ಮಾಣ ಮಾಡುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರಷರ್ ನಿರ್ಮಾಣ ಮಾಡುವುದಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ಗ್ರಾಮದ 300 ಮೀಟರ್ ದೂರದಲ್ಲೇ ಕ್ರಷರ್ ಆರಂಭಕ್ಕೆ ಎ.ಮಧುಸೂದನ್ ಎಂಬವರು ಮುಂದಾಗಿದ್ದಾರೆ. ತನ್ನ 2.18 ಎಕರೆ ಜಮೀನಿನಲ್ಲಿ ಕೈಗಾರಿಕಾ ಉದ್ದೇಶಕ್ಕೆಂದು ಅನುಮತಿ ಪಡೆದು, ಕ್ರಷರ್ ನಿರ್ಮಾಣಕ್ಕೆ ತಯಾರಿ ನಡೆಸಿದ್ದಾರೆ.

    ಜಮೀನಿಗೆ ಬಂದ ಲಾರಿಯನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕ್ರಷರ್ ಮಾಲೀಕರ ಸಹಚರರು ಹಾಗೂ ಗ್ರಾಮಸ್ಥರ ನಡುವೆ ಹೈಡ್ರಾಮಾ ನಡೆದಿದೆ. ಡಾ ಬಿ.ಆರ್.ಅಂಬೇಡ್ಕರ್ ಫೋಟೊ ಹಿಡಿದು ಲಾರಿ ಮುಂದೆ ಪ್ರತಿಭಟನಾಕಾರರು ಮಲಗಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ಕ್ರಷರ್ ಮಾಲೀಕನ ಸಹಚರರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

    ಅಂಬೇಡ್ಕರ್ ಫೋಟೊ ಕಿತ್ತೆಸೆದು ಹಲ್ಲೆ ಮಾಡಿರುವ ಆರೋಪ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಬೇಗೂರು ಆಸ್ಪತ್ರೆಗೆ ರವಾನಿಸಲಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಂಡೆ ಬ್ಲಾಸ್ಟ್ ಮಾಡುವ ವೇಳೆ ಅವಘಡ – ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

    ಬಂಡೆ ಬ್ಲಾಸ್ಟ್ ಮಾಡುವ ವೇಳೆ ಅವಘಡ – ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

    ತುಮಕೂರು: ಬಂಡೆ ಬ್ಲಾಸ್ಟ್ (Rock Blast) ಮಾಡುವ ವೇಳೆ ಅವಘಡವೊಂದು ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು (Workers) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ ಕೌತಮಾರನಹಳ್ಳಿ ಬಳಿಯಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಘಟನೆ ನಡೆದಿದೆ. ಈ ಕ್ರಷರ್ (Crusher) ತುಮಕೂರು ಮೂಲದ ಕೆ.ಎ.ಎಂ ಹನೀಫ್ ಎಂಬವರಿಗೆ ಸೇರಿದ್ದು, ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕ್ರಷರ್‌ನಲ್ಲಿ ಬಂಡೆಗೆ ಡ್ರಿಲ್ ಮಾಡಲು ಬೆಟ್ಟ ಹತ್ತಿದ ಇಬ್ಬರು ಕಾರ್ಮಿಕರು ಆಯತಪ್ಪಿ ಸುಮಾರು 100 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದು ಜೀವತೆತ್ತಿದ್ದಾರೆ. ಇದನ್ನೂ ಓದಿ: ಅತ್ತಿಗೆ ಮೇಲೆ ಗ್ಯಾಂಗ್‌ರೇಪ್ ಮಾಡಿ ಕೊಲೆಗೈದ ಐವರು ಮೈದುನರು – ದುಬೈನಲ್ಲಿರೋ ಮಹಿಳೆಯ ಪತಿಯೇ ಮಾಸ್ಟರ್‌ಮೈಂಡ್

    ಕ್ರಷರ್ ಮಾಲೀಕನ ಬೇಜವಾಬ್ದಾರಿತನಕ್ಕೆ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನ ಕೊಡದೇ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಘಟನೆಯಿಂದ ಗಂಭೀರ ಗಾಯಗೊಂಡ ಮತ್ತೋರ್ವನನ್ನು ಬೆಂಗಳೂರಿನ (Bengaluru) ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

  • ಮುಷ್ಕರ ವಾಪಸ್ ಪಡೆದುಕೊಂಡ ಕ್ವಾರಿ & ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್

    ಮುಷ್ಕರ ವಾಪಸ್ ಪಡೆದುಕೊಂಡ ಕ್ವಾರಿ & ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್

    ಬೆಂಗಳೂರು: ಕ್ವಾರಿ ಮತ್ತು ಕ್ರಷರ್ (Stone crushers) ಸಮಸ್ಯೆಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರ (Strike) ವಾಪಸ್ ಪಡೆಯುವುದಾಗಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ ಪ್ರಕಟಿಸಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಗಣಿ ಸಚಿವ ಹಾಲಪ್ಪ ಆಚಾರ್, ಕಂದಾಯ ಸಚಿವ ಆರ್. ಅಶೋಕ್ ಮತ್ತು ಹಿರಿಯ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಸರ್ಕಾರ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಆಗಲ್ಲ – ಜಲ್ಲಿ ಕೊರತೆ ಇದೆ: BBMP

    ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಮುಷ್ಕರ ಕೊನೆಗೊಂಡಿದೆ. ಇದರಿಂದಾಗಿ ಮನೆ ನಿರ್ಮಿಸಲು, ಸರ್ಕಾರದ ನಿರ್ಮಾಣ ಕಾಮಗಾರಿಗಳ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಕೊನೆಗೊಂಡಿದೆ. ವಿಶೇಷವಾಗಿ ಯಲಹಂಕ ವಾಯುನೆಲೆಯಲ್ಲಿ ಜಾಗತಿಕ ವೈಮಾನಿಕ ಪ್ರದರ್ಶನ ಏರ್ ಶೋ ಕಾಮಗಾರಿ ಮೇಲಿನ ಕರಿನೆರೆಳು ನಿವಾರಣೆಯಾಗಿದೆ.

    ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟೋನ್ ಕ್ರಷರ್ಸ್ & ಕ್ವಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ, ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದೆ. ಎರಡು ಕಡೆಗಳಲ್ಲಿ ರಾಜಧನ ಸಂಗ್ರಹ ಮಾಡುವುದಿಲ್ಲ. ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಮಾಲೀಕರು ಮಾತ್ರವೇ ರಾಜಧನ ಸಂಗ್ರಹಿಸುವ ಕುರಿತು ಭರವಸೆ ನೀಡಿದ್ದಾರೆ. ಹೀಗಾಗಿ ನಾವು ಮುಷ್ಕರ ಹಿಂಪಡೆಯುತ್ತಿದ್ದೇವೆ. ನಾಳೆಯಿಂದ ಎಂದಿನಂತೆ ಕ್ರಷರ್ಸ್‍ಗಳು ಕಾರ್ಯನಿರ್ವಹಿಸಲಿದೆ. ಹದಿನೈದು ದಿನಗಳಲ್ಲಿ ಬೇಡಿಕೆಗಳು ಈಡೇರಲಿವೆ ಎಂದರು. ಇದನ್ನೂ ಓದಿ: ಜೋಶಿಮಠದ ಬಳಿಕ ಕರ್ಣಪ್ರಯಾಗದಲ್ಲಿ ಭೂಮಿ, ಮನೆಯ ಗೋಡೆ ಬಿರುಕು – ಮುಳುಗಡೆ ಭೀತಿ, ಆತಂಕದಲ್ಲಿ ಜನ

    ಇಂದಿನಿಂದ ಜಲ್ಲಿ ಕ್ರಷರ್ಸ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಸರ್ಕಾರದ ಭರವಸೆ ಮೇರೆಗೆ ಮುಷ್ಕರ ಹಿಂಪಡೆಯುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಸ್ಟೋನ್ ಕ್ರಷರ್ಸ್ ಅಂಡ್ ಕ್ವಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸಿದ್ದರಾಜು ಮಾತನಾಡಿ, ಸರ್ಕಾರದ ಭರವಸೆಯ ಮೇರೆಗೆ ಮುಷ್ಕರ ಹಿಂಪಡೆಯುತ್ತಿದ್ದೇವೆ. ಮುಷ್ಕರದಿಂದ ವಿಶೇಷವಾಗಿ ಜನ ಸಾಮಾನ್ಯರಿಗೆ ಉಂಟಾದ ತೊಂದರೆಗಳಿಗೆ ವಿಷಾದಿಸುತ್ತೇವೆ ಎಂದು ನುಡಿದರು.

    ಬೆಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮಾಶಂಕರ್ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಬಗೆಹರಿಸಬೇಕು. ಉದ್ಯಮವನ್ನು ನಂಬಿರುವ ಲಕ್ಷಾಂತರ ಕುಟುಂಬಗಳ ಹಿತ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೊಂದು ಕ್ರಷರ್ ದುರಂತ- ನೂರು ಅಡಿ ಆಳಕ್ಕೆ ಬಿದ್ದು ಕಾರ್ಮಿಕ ದುರ್ಮರಣ

    ಮತ್ತೊಂದು ಕ್ರಷರ್ ದುರಂತ- ನೂರು ಅಡಿ ಆಳಕ್ಕೆ ಬಿದ್ದು ಕಾರ್ಮಿಕ ದುರ್ಮರಣ

    ತುಮಕೂರು: ಜಿಲ್ಲೆಯಲ್ಲಿ ಕಲ್ಲಿನ ಕ್ವಾರಿಗಳು ಕಾರ್ಮಿಕರ ಪಾಲಿಗೆ ಶವಾಗಾರಗಳಾಗುತ್ತಿವೆ. ಸಾಲು ಸಾಲಾಗಿ ಕ್ರಷರ್ (Stone Crusser) ಕಾರ್ಮಿಕರು ಕ್ರಷರ್‍ನಲ್ಲೇ ಬಲಿಯಾಗ್ತಿದ್ದು, ಪ್ರಶ್ನಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (Department of Mines and Earth Sciences) ಗಾಢ ನಿದ್ರೆಗೆ ಜಾರಿದೆ. ಈ ಸಾಲಿಗೆ ಈಗ ಮತ್ತೊಂದು ಅವಘಡ ಸೇರ್ಪಡೆಯಾಗಿದ್ದು, ಕಾರ್ಮಿಕರ ಜೀವಗಳಿಗೆ ಬೆಲೆನೇ ಇಲ್ಲಂದಂತಾಗಿದೆ.

    ಕಲ್ಪತರ ನಾಡು ತುಮಕೂರು ಜಿಲ್ಲೆಯಲ್ಲಿ ಕ್ವಾರಿಗಳಿಗೆ ಲಂಗು ಲಗಾಮು ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಕ್ರಷರ್‍ಗಳಲ್ಲಿ ಸಾಲು-ಸಾಲು ಸಾವು ಸಂಭವಿಸುತ್ತಿದ್ದು, ಈಗ ಮತ್ತೊಬ್ಬ ಕಾರ್ಮಿಕ (Worker) ಸಾವನ್ನಪ್ಪಿದ್ದಾನೆ. ಬದುಕು ಅರಸಿ ಊರು ಬಿಟ್ಟು ಊರು, ಜಿಲ್ಲೆ ಬಿಟ್ಟು ಜಿಲ್ಲೆಗೆ ಬಂದ ಬಡಪಾಯಿ ಕುಟುಂಬ (Family) ಬೀದಿಗೆ ಬಿದ್ದಿದೆ. ಇದನ್ನೂ ಓದಿ: ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ

    ಮೂಲತಃ ಕೊಳ್ಳೆಗಾಲದವರಾದ ಈರಣ್ಣ ಎಂಬವರು ತುಮಕೂರು ತಾಲೂಕಿನ ಹೊಸಳ್ಳಿಯಲ್ಲಿರೋ ಅಕ್ಷಯ ಸ್ಟೋನ್ ಕ್ರಷರ್‍ನಲ್ಲಿ ಕೆಲಸ ಮಾಡುತ್ತಿದ್ದರು,. ಅದರಂತೆ ನಿನ್ನೆ ಕ್ರಷರ್‍ನಲ್ಲಿ ಹಗ್ಗದ ಮೂಲಕ ಕಡಿದಾದ ಬಂಡೆ ಹತ್ತಿದ್ದ ಈರಣ್ಯ ಅಪಾಯವನ್ನ ಲೆಕ್ಕಿಸದೆ ರಂದ್ರ ಕೊರೆಯುತ್ತಿದ್ದರು. ಆದರೆ ಈ ವೇಳೆ ಕಾಲು ಜಾರಿದ ಈರಣ್ಣ ಸುಮಾರು ನೂರು ಅಡಿ ಕೆಳಕ್ಕೆ ಬಿದ್ದು ಅಸುನೀಗಿದ್ದಾರೆ. ಈ ದುರ್ಘಟನೆಯಲ್ಲಿ ಕಾರ್ಮಿಕನ ದೇಹ ಛಿದ್ರ-ಛಿದ್ರವಾಗಿದ್ದು, ದುರಂತಕ್ಕೆ ಸಾಕ್ಷಿಯಾಗಿತ್ತು.

    ಈರಣ್ಣನ ಸಾವೇನು ಅಕ್ಷಯ ಕ್ರಷರ್ ನಲ್ಲಿ ಮೊದಲ ಸಾವಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಬಿಹಾರ ಮೂಲದ ಕಾರ್ಮಿಕ ಇದೇ ರೀತಿ ಇಲ್ಲಿ ಸಾವನ್ನಪ್ಪಿದ್ದ. ಆಗ ಕ್ರಷರ್ ಮಾಲೀಕರು ಮಾತುಕತೆ ಮೂಲಕ ಪ್ರಕರಣ ಮುಚ್ಚಿ ಹಾಕಿದ್ರು. ಇಷ್ಟಾದ್ರೂ ಈಗ ಕ್ರಷರ್‍ನಲ್ಲಿ ಮತ್ತೊಂದು ಸಾವಾಗಿದೆ. ಕಾರ್ಮಿಕರಿಗೆ ಯಾವುದೇ ಮುಂಜಾಗೃತಾ ಸಾಧನ ನೀಡದಿರುವುದೇ ಈ ಸಾವಿನ ಸರಣಿಗೆ ಕಾರಣವಾಗಿದ್ದು, ಸುತ್ತ ಮುತ್ತಲಿನ ಊರಿನವರಿಗೂ ಅಕ್ಷಯ್ ಕ್ರಷರ್ ಸಂಚಕಾರ ತಂದೊಡ್ಡಿದೆ.

    ಅಕ್ಷಯ ಕ್ರಷರ್ ನಿಂದ ಹೊಸಳ್ಳಿ ಗ್ರಾಮದ ಜನರ ಮನೆಗಳೂ ಬಿರುಕು ಬಿಟ್ಟಿವೆ. ದನಕರುಗಳು, ಕುರಿಗಳನ್ನು ಮೇಯಿಸಲು ಅಡ್ಡಿಯಾಗುತ್ತಿದೆ. ಇಷ್ಟಾದ್ರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮವಹಿಸಿಲ್ಲ. ಸದ್ಯ ಅಪಾಯ ತಂದೊಡ್ಡುವ ಕ್ರಷರ್ ಗಳನ್ನು ಮುಚ್ಚುವಂತೆ ಇಲ್ಲಿನ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಲ್ಲು ಕ್ರಷರ್‌ನಲ್ಲಿ ಬ್ಲಾಸ್ಟ್- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ಕಲ್ಲು ಕ್ರಷರ್‌ನಲ್ಲಿ ಬ್ಲಾಸ್ಟ್- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ವಿಜಯಪುರ: ಜಲ್ಲಿ ಕಲ್ಲು ಹಾಗೂ ಕ್ರಷರ್ ಘಟಕದಲ್ಲಿ ಬ್ಲಾಸ್ಟ್ ಆಗಿದ್ದು, ಓರ್ವ ಸಾವನ್ನಪ್ಪಿ, ಇಬ್ಬರಿಗೆ ತೀವ್ರ ಗಾಯಗಾಳಿವೆ.

    ವಿಜಯಪುರದ ಅಲಿಯಾಬಾದ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು, ಗಾಯಾಳುಗಳು ಸದ್ಯ ಖಾಸಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಅಶೋಕ್ ಸಾವಳಗಿ ಅವರಿಗೆ ಸೇರಿದ ಜಲ್ಲಿ ಕಲ್ಲು ಕ್ರಷರ್ ನಲ್ಲಿ ಬ್ಲಾಸ್ಟ್ ಮಾಡಲಾಗಿದೆ. ಈ ವೇಳೆ ಬೈಕ್ ಮೇಲೆ ಜಮೀನಿನಿಂದ ಅಲಿಯಾಬಾದ್ ಕಡೆಗೆ ತೆರಳುತ್ತಿದ್ದಾಗ ವಾಹನ ಸವಾರರಾದ ಮೋಹನ್, ಗಿರೀಶ್, ಸಚಿನ್ ಅವರಿಗೆ ಬ್ಲಾಸ್ಟ್‍ನ ಕಲ್ಲುಗಳು ಸಿಡಿದಿವೆ. ಇದನ್ನೂ ಓದಿ: ಅಪಘಾತವಾಗಿ ನರಳಾಡುತ್ತಿದ್ದ ಗಾಯಾಳು- ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಡಿಕೆಶಿ

    ಬ್ಲಾಸ್ಟ್ ನಿಂದ ಸಿಡಿದ ಕಲ್ಲು ಮೋಹನ್ ತಲೆ, ಕಾಲಿಗೆ ಸಿಡಿದಿದೆ. ಇದರಿಂದ ಮೋಹನ್ ತೀವ್ರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಮೃತಪಟ್ಟಿದ್ದಾರೆ. ಸಚಿನ್ ಹಾಗೂ ಗಿರೀಶ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್‍ಪಿ ಅನುಪಮ್ ಅಗರ್‍ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕ್ರಷರ್ ನ ಮಾಲೀಕ ಅಶೋಕ್ ಸಾವಳಗಿ ಸೇರಿದಂತೆ ಸಿಬ್ಬಂದಿ ಪರಾರಿ ಆಗಿದ್ದಾರೆ. ಇವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಆದಷ್ಟು ಬೇಗ ಅವರನ್ನು ಸೆರೆ ಹಿಡಯಲಾಗುವುದು. ಅಲ್ಲದೆ ಕ್ರಷರ್ ಅಧಿಕೃತವೋ, ಅನಧಿಕೃತವೋ ಎಂಬುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಅನುಪಮ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.

    ಬ್ಲಾಸ್ಟ್ ನಲ್ಲಿ ಮೋಹನ್ ನಾಯಕ್ ರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಶಿಕ್ಷೆಗೆ ಒಳಪಡಿಬೇಕೆಂದು ಆಗ್ರಹಿಸಿದ್ದಾರೆ.

  • ಹುಣಸೋಡು ಘಟನಾ ಸ್ಥಳದಿಂದ ಗ್ರಾಮಕ್ಕೆ ಹಾರಿ ಬಂದ 500, 2000 ರೂ. ನೋಟುಗಳು!

    ಹುಣಸೋಡು ಘಟನಾ ಸ್ಥಳದಿಂದ ಗ್ರಾಮಕ್ಕೆ ಹಾರಿ ಬಂದ 500, 2000 ರೂ. ನೋಟುಗಳು!

    ಶಿವಮೊಗ್ಗ: ಜಿಲ್ಲೆಯ ಹುಣಸೋಡು ಬಳಿ ನಡೆದ ದುರಂತ ಸ್ಥಳದಿಂದ ನೋಟುಗಳು ಹಾರಿ ಬಂದಿವೆ.

    ಹೌದು. ಘಟನಾ ಸ್ಥಳದಿಂದ ಗ್ರಾಮಕ್ಕೆ ನೋಟುಗಳು ಹಾರಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಫೋಟಕ ತುಂಬಿದ ಲಾರಿಯಲ್ಲಿ ಹಣವಿದ್ದ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಗ್ರಾಮಕ್ಕೆ ನೋಟುಗಳು ಹಾರಿ ಬರುತ್ತಿದ್ದಂತೆಯೇ 500 ರೂ. ನೋಟುಗಳನ್ನು ಹುಣಸೋಡು ಗ್ರಾಮಸ್ಥರು ಆಯ್ದುಕೊಂಡಿದ್ದಾರೆ. ಅಲ್ಲದೆ ಗ್ರಾಮಕ್ಕೆ ಬಂದ 500 ರೂ ನೋಟು ನೋಡಿ ಕರೆನ್ಸಿ ಹುಡುಕಿದ್ದಾರೆ. ಒಟ್ಟಿನಲ್ಲಿ ಇದೀಗ 500, 2000 ರೂ. ನೋಟುಗಳು ಬಂದಿದ್ದು ಹೇಗೆ..?, ಸ್ಫೋಟಕ ತುಂಬಿದ ಲಾರಿಯಲ್ಲಿ ಹಣ ಎಷ್ಟಿತ್ತು ಎಂಬ ಪ್ರಶ್ನೆ ಎದ್ದಿದೆ.

    ಘೋರ ದುರಂತಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೂಲ ಮಾಲೀಕ ಅನಿಲ್ ಕುಲಕರ್ಣಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಿಡಿಭಾಗಗಳು ಎಲ್ಲೆಂದರಲ್ಲಿ ಹಾರಿ ಬಿದ್ದಿವೆ. ದುರ್ಘಟನೆಯಲ್ಲಿ ಮೃತಪಟ್ಟ 7 ಮಂದಿಯ ಮೃತದೇಹ ಸದ್ಯ ದೊರಕಿದೆ.

    ಈ ಸಂಬಂಧ ಹುಣಸೋಡು ಗ್ರಾಮದ ಮಹಿಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಳೆದ ರಾತ್ರಿ ನಡೆದ ಘಟನೆಯಿಂದ ನಾವು ಬದುಕುಳಿಯುವುದು ಕೂಡ ಕಷ್ಟವಾಗಿತ್ತು. ಆ ರೀತಿಯಾಗಿ ಶಬ್ದ ಬಂದಿತ್ತು. ಮನೆಯ ಅಂಚುಗಳೆಲ್ಲಾ ನಡುಗಿದವು, ಮನೆಯಲ್ಲಿದ್ದ ಸಾಮಗ್ರಿಗಳೆಲ್ಲ ಕೆಳಗೆ ಬಿದ್ದಿದ್ದವು. ಆ ರೀತಿಯಾಗಿ ಸ್ಪೋಟವಾಯಿತು, ಮಕ್ಕಳು ಮುದುಕರನ್ನು ಕಟ್ಟಿಕೊಂಡು ಅಷ್ಟೊತ್ತಿನಲ್ಲಿ ಹೊರ ಬಂದೆವು. ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಕ್ರಷರ್ ಮಾಲೀಕನ ಬಳಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ!

    ಕ್ರಷರ್ ಮಾಲೀಕನ ಬಳಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ!

    ಮಂಡ್ಯ: ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕ್ರಷರ್ ಮಾಲೀಕನ ಮೇಲೆ ಪಾಂಡವಪುರದಲ್ಲಿ ಪ್ರಕರಣ ದಾಖಲಾಗಿದೆ.

    ಪಾಂಡವಪುರದ ಕ್ರಷರ್ ಮಾಲೀಕ ತೌಫಿಕ್ ಬಳಿ ಪಿಸ್ತೂಲ್ ಗಳಿವೆ ಎಂದು ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕ್ರಷರ್ ಮಾಲೀಕನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ತೌಫಿಕ್ ನ ಇನ್ನೋವಾ ಕಾರಿನಲ್ಲಿ ಒಂದು ಪಿಸ್ತೂಲ್ ಹಾಗೂ ಎರಡು ಸಜೀವ ಗುಂಡುಗಳು ಪತ್ತೆಯಾಗಿದೆ.

    ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಷರ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕ್ರಷರ್ ನಿಂದಾಗಿ ರೈತರ ಬೆಳೆ ಹಾಳಾಗುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಕ್ರಷರ್ ಮಾಲೀಕ ತೌಫಿಕ್ ಹಾಗೂ ಬೆಂಬಲಿಗರು ರೈತರ ಮೇಲೆಯೇ ಹಲ್ಲೆ ನಡೆಸಿದ್ದರು.