Tag: ಕ್ಯೂಆರ್ ಕೋಡ್

  • ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ – ಆದೇಶ ಎತ್ತಿ ಹಿಡಿದ ಸುಪ್ರೀಂ

    ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ – ಆದೇಶ ಎತ್ತಿ ಹಿಡಿದ ಸುಪ್ರೀಂ

    – ಯುಪಿ, ಉತ್ತರಾಖಂಡ ಸರ್ಕಾರದ ಆದೇಶಕ್ಕೆ ತಡೆ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಕನ್ವರ್ ಯಾತ್ರೆಯ (Kanwar Yatra) ಮಾರ್ಗದಲ್ಲಿರುವ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್‌ಗಳನ್ನು (QR Code) ಕಡ್ಡಾಯವಾಗಿ ಪ್ರದರ್ಶಿಸುವಂತೆ ಆದೇಶಿಸಿದ್ದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸರ್ಕಾರಗಳ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

    ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಯಾತ್ರಿಗಳಿಗೆ ಆಹಾರ ಸೇವೆಗಳ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಲು ಈ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಸರ್ಕಾರಗಳು ವಾದಿಸಿವೆ. ಈ ಕೋಡ್‌ಗಳ ಮೂಲಕ ಗ್ರಾಹಕರು ಆಹಾರ ಮಳಿಗೆಗಳ ಗುಣಮಟ್ಟ, ಪರವಾನಗಿ ಮತ್ತು ಶುಚಿತ್ವದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಇದನ್ನೂ ಓದಿ: ಅಮೆರಿಕದಿಂದ ಮೂರು ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಆಗಮನ

    ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರು ಈ ಆದೇಶವು ವ್ಯಾಪಾರಿಗಳ ಮೇಲೆ ಅನಗತ್ಯ ಒತ್ತಡವನ್ನುಂಟುಮಾಡುತ್ತದೆ ಮತ್ತು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ವಾದಿಸಿದರು. ಆದರೆ, ಸರ್ಕಾರದ ಪರ ವಕೀಲರು, ಈ ಯೋಜನೆಯು ಯಾತ್ರಿಗಳ ಸುರಕ್ಷತೆಗಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಜಾರಿಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಅಣ್ಣ ಬುದ್ಧಿ ಹೇಳಿದ್ದಕ್ಕೆ ಮಗುವನ್ನು ಬರ್ಬರವಾಗಿ ಕೊಂದ ಚಿಕ್ಕಪ್ಪ

    ನ್ಯಾಯಾಲಯವು ಈ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದರೂ, ವಿಷಯದ ಸಂಪೂರ್ಣ ವಿಚಾರಣೆಗೆ ಒಪ್ಪಿಗೆ ನೀಡಿದೆ ಮತ್ತು ಮುಂದಿನ ವಿಚಾರಣೆಯನ್ನು ಶೀಘ್ರದಲ್ಲಿ ನಿಗದಿಪಡಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್

  • ಸಿಇಟಿ ಬಳಿಕ ಕಾಲೇಜು ಅಡ್ಮಿಷನ್‌ಗೂ QR ಕೋಡ್ ಕಣ್ಗಾವಲು

    ಸಿಇಟಿ ಬಳಿಕ ಕಾಲೇಜು ಅಡ್ಮಿಷನ್‌ಗೂ QR ಕೋಡ್ ಕಣ್ಗಾವಲು

    – ಸೀಟ್ ಬ್ಲಾಕ್ ದಂಧೆ ತಡೆಗೆ ಕೆಇಎಯಿಂದ ಹದ್ದಿನ ಕಣ್ಣು

    ಬೆಂಗಳೂರು: ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ (CET Exam) ಕ್ಯೂಆರ್ ಕೋಡ್ (QR Code) ಕಣ್ಗಾವಲಿನ ಮೂಲಕ ಕೆಇಎ (KEA) ಹದ್ದಿನ ಕಣ್ಣು ಇಟ್ಟಿತ್ತು. ಇದೀಗ ಅದನ್ನೇ ಮುಂದುವರಿಸಿಕೊಂಡು, ಕಾಲೇಜು ಅಡ್ಮಿಷನ್ ಪ್ರಕ್ರಿಯೆಯಲ್ಲಿಯೂ ಕ್ಯೂಆರ್ ಕೋಡ್ ಬಳಸಲು ಮುಂದಾಗಿದೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಇದೀಗ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಅಡ್ಮಿಷನ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಸೀಟ್ ಬ್ಲಾಕ್ ದಂಧೆ ತಡೆಯೋದಕ್ಕೆ ಕೆಇಎ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಇದಕ್ಕೂ ಮುನ್ನ ಏ.15,16 ಹಾಗೂ 17ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಕೆಇಎ ಕ್ಯೂಆರ್ ಕೋಡ್ ತಂತ್ರಜ್ಞಾನ ಬಳಸಿ, ಯಶಸ್ವಿಯಾಗಿತ್ತು.ಇದನ್ನೂ ಓದಿ: ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್‌ ಗಾಯಬ್ ಪೋಸ್ಟರ್‌ ಡಿಲೀಟ್‌ – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಹಂಚಿಕೆಯಾಗುವ ವೃತ್ತಿಪರ ಕೋರ್ಸ್‌ಗಳಲ್ಲಿ ಒಂದೇ ಒಂದು ಸೀಟು ಅಕ್ರಮ ಆಗದಂತೆ ನೋಡಿಕೊಳ್ಳಲು ಕೆಇಎ ಈ ಮಾಸ್ಟರ್ ಪ್ಲ್ಯಾನ್ ಮಾಡಿದೆ.

    ಕಾಲೇಜ್ ಅಡ್ಮಿಷನ್‌ಗೆ ಕ್ಯೂಆರ್ ಕೋಡ್ ಹೇಗೆ ಬಳಸಲಾಗುತ್ತೆ?
    > ಕೆಇಎಯಿಂದ ಹಂಚಿಕೆ ಆಗುವ ಪ್ರತಿ ಸೀಟುಗಳನ್ನ ಮಾನಿಟರ್ ಮಾಡಲಾಗುತ್ತದೆ.
    > ಕೆಇಎಯಿಂದ ವಿದ್ಯಾರ್ಥಿಗೆ ಸೀಟ್ ಅಲಾಟ್ ಆದ ಮೇಲೆ ಅದಕ್ಕೆ ದಾಖಲಾತಿಯನ್ನು ಕೆಇಎ ಕೊಡುತ್ತದೆ.
    > ದಾಖಲಾತಿ ಪ್ರತಿ ತೆಗೆದುಕೊಂಡ ವಿದ್ಯಾರ್ಥಿ, ಹಂಚಿಕೆ ಆಗಿರುವ ಕಾಲೇಜಿಗೆ ಹೋಗಿ ಅಡ್ಮಿಷನ್ ಮಾಡಿಕೊಳ್ಳಬೇಕು.
    > ಅಡ್ಮಿಷನ್ ಸಮಯದಲ್ಲಿ ಕಾಲೇಜಿಗೆ ಕೆಇಎ ಒಂದು ಆ್ಯಪ್ ಕೊಟ್ಟಿರುತ್ತದೆ. ಆ ಆ್ಯಪ್‌ನಿಂದ ವಿದ್ಯಾರ್ಥಿಯನ್ನು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ.
    > ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ.
    > ಸೀಟು ಹಂಚಿಕೆ ಆಗಿದ್ದು ನಿಜವಾದ ವಿದ್ಯಾರ್ಥಿನಾ? ಪರೀಕ್ಷೆ ಬರೆದಿದ್ದು ಅದೇ ವಿದ್ಯಾರ್ಥಿನಾ? ದಾಖಲಾತಿ ಆಗುತ್ತಿರುವುದು ಅದೇ ವಿದ್ಯಾರ್ಥಿನಾ ಎಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ದೃಢವಾಗಲಿದೆ.
    > ಈ ಮೂಲಕ ಅಕ್ರಮ ತಡೆಗೆ ಕೆಇಎ ಪ್ಲ್ಯಾನ್ ಮಾಡಿದೆ.ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚಳ – ಕೆರೆಯಲ್ಲಿ ಕೋತಿಗಳ ನೀರಾಟ

  • ಸಿಇಟಿ ಎಕ್ಸಾಂ QR ಕೋಡ್ ಸ್ಕ್ಯಾನ್ ಯಶಸ್ವಿ – ಹೆಚ್.ಪ್ರಸನ್ನ

    ಸಿಇಟಿ ಎಕ್ಸಾಂ QR ಕೋಡ್ ಸ್ಕ್ಯಾನ್ ಯಶಸ್ವಿ – ಹೆಚ್.ಪ್ರಸನ್ನ

    ಬೆಂಗಳೂರು: ಏ.15 ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಿಇಟಿ (CET ) ಪರೀಕ್ಷೆಯಲ್ಲಿ ಬಳಸಿದ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಯಶಸ್ವಿಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಹೇಳಿದರು.

    ಸಾಮಾನ್ಯ ಪ್ರವೇಶ ಪರೀಕ್ಷೆ (CET) ನಡೆಯುತ್ತಿರುವ ಬೆಂಗಳೂರಿನ (Bengaluru) ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಕೇಂದ್ರಕ್ಕೆ ಹೆಚ್.ಪ್ರಸನ್ನ ಅವರು ಗುರುವಾರ ಭೇಟಿ ನೀಡಿ, ಖುದ್ದು ಪರಿಶೀಲಿಸಿದರು.ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

    ಕೆಇಎ (KEA) ಅಭಿವೃದ್ಧಿಪಡಿಸಿರುವ ಹಾಗೂ ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಕ್ಯೂಆರ್ ಕೋಡ್ ಮೂಲಕ ಮುಖ ಚಹರೆ ಪತ್ತೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಸ್ವತಃ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಭಾವಚಿತ್ರ ತೆಗೆದು ನೈಜತೆ ತುಲನೆಮಾಡಿದರು.

    ಈ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು, ಎಲ್ಲ ಅಭ್ಯರ್ಥಿಗಳ ನೈಜತೆಯನ್ನು ಇದರ ಮೂಲಕವೇ ಪರಿಶೀಲಿಸಿ, ಅಭ್ಯರ್ಥಿಗಳನ್ನು ಒಳಗೆ ಬಿಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಹಾಜರಿದ್ದರು.ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

  • ಕ್ಯೂಆರ್ ಕೋಡ್‌ಗೆ ಭರ್ಜರಿ ರೆಸ್ಪಾನ್ಸ್ – ಬಿಎಂಟಿಸಿಗೆ ಒಂದು ದಿನಕ್ಕೆ 1 ಕೋಟಿ ರೂ. ಆದಾಯ

    ಕ್ಯೂಆರ್ ಕೋಡ್‌ಗೆ ಭರ್ಜರಿ ರೆಸ್ಪಾನ್ಸ್ – ಬಿಎಂಟಿಸಿಗೆ ಒಂದು ದಿನಕ್ಕೆ 1 ಕೋಟಿ ರೂ. ಆದಾಯ

    – 16 ದಿನಗಳಲ್ಲಿ 16 ಕೋಟಿ ರೂ. ಆದಾಯ

    ಬೆಂಗಳೂರು: ಈಗೇನಿದ್ದರೂ ಡಿಜಿಟಲ್ ಜಮಾನ. ಅದರಂತೆ ಬಿಎಂಟಿಸಿ ಸಹ ಡಿಜಿಟಲ್ ಪೇಮೆಂಟ್ (Digital Payment) ಮೊರೆ ಹೋಗಿದ್ದು, ಬಿಎಂಟಿಸಿಯ ಆರು ಸಾವಿರ ಬಸ್‌ಗಳಲ್ಲೂ ಕ್ಯೂಆರ್ ಸಿಸ್ಟಮ್ ಮೂಲಕ ಟಿಕೆಟ್ ಪೇಮೆಂಟ್ ನೀಡುವ ವ್ಯವಸ್ಥೆ ಜಾರಿ ಮಾಡಿದೆ. ಈ ಕ್ಯೂಆರ್ ಕೋಡ್ (QR Code) ಸಿಸ್ಟಮ್‌ಗೆ ಬಿಎಂಟಿಸಿ (BMTC) ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಒಂದು ದಿನಕ್ಕೆ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿಗೆ ಒಂದು ಕೋಟಿ ರೂ. ಆದಾಯ ಗಳಿಸುತ್ತಿದೆ. ಆನ್‌ಲೈನ್ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿ ಫೆಬ್ರವರಿ 1-16ರವರೆಗೆ 16 ಕೋಟಿ ರೂ. ಆದಾಯ ಪಡೆದಿದೆ. ಕೋವಿಡ್ ನಂತರ 2021ರಿಂದ ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ ಮಾಡಿದ್ದು, ವಾಯುವಜ್ರ ಹಾಗೂ ವಜ್ರ ಬಸ್‌ಗಳ ಪ್ರಯಾಣಿಕರು ಹೆಚ್ಚು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ. 2024ರಲ್ಲಿ ಕ್ಯೂಆರ್ ಕೋಡ್‌ನಿಂದ 100 ಕೋಟಿ ರೂ. ಆದಾಯ ಬಂದಿದೆ. ಇದನ್ನೂ ಓದಿ: ಸ್ಯಾಮ್‌ ಪಿತ್ರೋಡಾ ಮತ್ತೊಮ್ಮೆ ವಿವಾದ – ಬಿಜೆಪಿಯಿಂದ ಖಂಡನೆ.. ಅಂತರ ಕಾಯ್ದುಕೊಂಡ ಕಾಂಗ್ರೆಸ್

    ಇತ್ತೀಚೆಗೆ ಜನವರಿ 5ರಿಂದ ಬಸ್ ದರ ಏರಿಕೆಯಾದಾಗಿನಿಂದ ಚಿಲ್ಲರೆ ಸಮಸ್ಯೆ ತಪ್ಪಿಸಲು ಹೆಚ್ಚು ಜನ ಡಿಜಿಟಲ್ ಪೇಮೆಂಟ್ ಗೆ ಮೊರೆ ಹೋಗಿದ್ದಾರೆ. ಇದ್ರಿಂದ ಕಂಡಕ್ಟರ್ & ಪ್ರಯಾಣಿಕರು ಇಬ್ಬರೂ ನಿರಾಳವಾಗಿದ್ದಾರೆ.ಕ್ಯೂ ಆರ್ ಕೋಡ್ ಮೂಲಕ ಬಿಎಂಟಿಸಿಯ ಒಟ್ಟು ಆದಾಯದಲ್ಲಿ ಶೇಕಡಾ 35% ಆದಾಯ ಬರುತ್ತಿದೆ ಅಂತಾ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿ ವಿವಾದ ಮೈಮೇಲೆ ಎಳೆದುಕೊಂಡ ರಾಹುಲ್ ಗಾಂಧಿ

  • ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯಿಂದ ಕ್ಯೂಆರ್‌ ಕೋಡ್ ಪ್ಲ್ಯಾನ್‌

    ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯಿಂದ ಕ್ಯೂಆರ್‌ ಕೋಡ್ ಪ್ಲ್ಯಾನ್‌

    – 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್, 41 ಕೆರೆಗಳ ಗುರುತಿಸಿದ ಪಾಲಿಕೆ

    ಬೆಂಗಳೂರು: ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯು (BBMP) ವಿನೂತನ ಪ್ಲ್ಯಾನ್‌ ಒಂದು ಮಾಡಿದ್ದು, ಸಾರ್ವಜನಿಕರು ಕ್ಯೂಆರ್‌ ಕೋಡ್ (QR Code) ಬಳಸುವ ಮೂಲಕ ಗಣೇಶನ ವಿಸರ್ಜನೆ ಸ್ಥಳದ ವಿವರ ಪಡೆಯಬಹುದಾಗಿದೆ.

    ಗಣಪತಿ ವಿಸರ್ಜನೆ (Ganapati Dissolution) ಯಾವ ಸ್ಥಳದಲ್ಲಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡುವ ಮೂಲಕ ಪಡೆಯಬಹುದಾಗಿದೆ. ಗಣೇಶ ವಿಸರ್ಜನೆಗಾಗಿಯೇ 41 ಕೆರೆಗಳ ಶಾಶ್ವತ ಕಲ್ಯಾಣಿ ಸೇರಿದಂತೆ ಒಟ್ಟು 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಕಲ್ಯಾಣಿಯಿಲ್ಲದ ಕೆರೆಯ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ

    ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿಯು ಪ್ರತಿ ವಾರ್ಡಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸುವ ಮೂಲಕ ಆಯಾ ವಾರ್ಡ್‌ ನೋಡಲ್ ಅಧಿಕಾರಿಗಳ ವಿವರಗಳನ್ನೂ ಸಹ ಪಡೆಯಬಹುದಾಗಿದೆ.

    ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕಂದಾಯ ಉಪಕಚೇರಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳು ತೆರೆಯಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಒಟ್ಟು 462 ತಾತ್ಕಾಲಿಕ ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಕೆರೆ ಹಾಗೂ ಕಲ್ಯಾಣಿ ಬಳಿ ಪೊಲೀಸ್, ಬ್ಯಾರಿಕೇಡ್, ಅಗ್ನಿಶಾಮಕ, ಬೆಸ್ಕಾಂ, ವಿದ್ಯುತ್ ದೀಪದ ವ್ಯವಸ್ಥೆ, ಈಜುಗಾರರು, ಧ್ವನಿವರ್ಧಕ ಜೊತೆಗೆ ಎನ್‌ಡಿಆರ್‌ಎಫ್ (NDRF) ತಂಡ ನಿಯೋಜನೆ ಮಾಡಲಾಗಿದೆ.

    ದುರ್ಘಟನೆಯ ಮುನ್ನೆಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್, ವ್ಯೆದ್ಯರು ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಲು ಶುಶ್ರೂಕಿಯರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹೆಚ್ಚುವರಿಯಾಗಿ ಅಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ ಮಾಡಿದೆ.ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. https://apps.bbmpgov.in/ganesh2024/ ಪಾಲಿಕೆ ವೆಬ್‌ಸೈಟ್ ಲಿಂಕ್ ಮೂಲಕ ಮಾಹಿತಿ ಪಡೆಯಲು ಅವಕಾಶ ಇದೆ.

    ವಲಯವಾರು ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳ ವಿವರ

    ವಲಯ                      ಮೊಬೈಲ ಟ್ಯಾಂಕರ್                   ಕಲ್ಯಾಣಿ

    ಪೂರ್ವ                            138                                         01
    ಪಶ್ಚಿಮ                            84                                          01
    ದಕ್ಷಿಣ                              43                                           02
    ಬೊಮ್ಮನಹಳ್ಳಿ                  60                                           05
    ಆರ್‌ಆರ್ ನಗರ                 74                                          07
    ಮಹದೇವಪುರ                  40                                           14
    ದಾಸರಹಳ್ಳಿ                      19                                          01
    ಯಲಹಂಕ                         4                                          10

    ಒಟ್ಟು                             462                                       41

  • ಶೀಘ್ರವೇ LPG ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ – ಗ್ಯಾಸ್‌ ಕಳ್ಳತನಕ್ಕೆ ಬೀಳುತ್ತೆ ಬ್ರೇಕ್‌

    ಶೀಘ್ರವೇ LPG ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ – ಗ್ಯಾಸ್‌ ಕಳ್ಳತನಕ್ಕೆ ಬೀಳುತ್ತೆ ಬ್ರೇಕ್‌

    ನವದೆಹಲಿ: ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ (LPG Cylinders) ಶೀಘ್ರವೇ ಕ್ಯೂಆರ್‌ ಕೋಡ್‌ ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲ್‌ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ತಿಳಿಸಿದ್ದಾರೆ.

    ಕಡಿಮೆ ಗ್ಯಾಸ್‌ ತುಂಬಿಸಿ ಸಿಲಿಂಡರ್‌ ವಿತರಿಸಿ ಗ್ರಾಹಕರಿಗೆ ಮೋಸ ಮಾಡುವವರನ್ನು ಸುಲಭವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕೋಡ್-ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ಉಪಕ್ರಮವು ಕಳ್ಳತನದ ಸಮಸ್ಯೆ ಪರಿಹರಿಸಲು ಪೂರಕವಾಗಿದೆ. ಅಲ್ಲದೇ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆ ಪತ್ತೆ ಮತ್ತು ಖಚಿತಪಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಇದನ್ನೂ ಓದಿ: ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

    ಈ ಕ್ಯೂಆರ್ ಕೋಡ್ ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ. ಇದು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮಾಡುತ್ತದೆ. ಜೊತೆಗೆ ಉತ್ತಮ ದಾಸ್ತಾನು ನಿರ್ವಹಣೆ ಸರಿಯಾಗಿ ಆಗುತ್ತಿಯೇ ಎಂಬುದನ್ನು ಖಚಿತಪಡಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಈ ಕುರಿತು ಸಚಿವರು ಟ್ವಿಟ್ಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶ್ವ ಎಲ್‌ಪಿಜಿ ವೀಕ್ 2022’ ಕಾರ್ಯಕ್ರಮದ ವೀಡಿಯೋ ಇದಾಗಿದೆ. ವೀಡಿಯೋದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಕ್ಯೂಆರ್‌ ಕೋಡ್‌ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುತ್ತಿರುವ ದೃಶ್ಯವಿದೆ. ಇದನ್ನೂ ಓದಿ: 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    Live Tv
    [brid partner=56869869 player=32851 video=960834 autoplay=true]

  • ಕಸಕ್ಕೂ ಹೈಟೆಕ್ ಟೆಕ್ನಾಲಜಿ – ಬಿಬಿಎಂಪಿಯಿಂದ ಹೊಸ ಆ್ಯಪ್

    ಕಸಕ್ಕೂ ಹೈಟೆಕ್ ಟೆಕ್ನಾಲಜಿ – ಬಿಬಿಎಂಪಿಯಿಂದ ಹೊಸ ಆ್ಯಪ್

    ಬೆಂಗಳೂರು: ಸಿಲಿಕಾನ್ ಸಿಟಿ ಕಸದ ವಿಚಾರದಲ್ಲಿ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದು, ನಗರದ ಮನೆ ಮನೆಗಳಲ್ಲಿ ಕಸ ಸಂಗ್ರಹಣೆಯ ಇಂಚಿಂಚು ಮಾಹಿತಿ ಕಲೆ ಹಾಕಲು ಹೊಸ ಪ್ಲ್ಯಾನ್ ಸಿದ್ಧಗೊಂಡಿದೆ.

    ಹೌದು. ನಿಮ್ಮ ಮನೆ ಕಸ ವಿಂಗಡಿಸ್ತಾ ಇದ್ದೀರಾ? ಹಸಿ ಕಸ ಎಷ್ಟು? ಒಣ ಕಸ ಎಷ್ಟು ಎಂಬ ಮಾಹಿತಿ ಯಾರಿಗೂ ಇರಲ್ಲ. ಕೆಲವರಂತೂ ಕಸವನ್ನ ಎಲ್ಲೆಂದರಲ್ಲಿ ಬಿಸಾಡ್ತಾರೆ. ಇಂತಹ ಜನರನ್ನು ಕಂಡು ಹಿಡಿಯಲು ಬಿಬಿಎಂಪಿ ಕ್ಯೂಆರ್ ಕೋಡ್ ಕಸ ಎಂಬ ಹೊಸ ಆ್ಯಪ್ ಟೆಕ್ನಾಲಜಿ ಪರಿಚಯಿಸುತ್ತಿದೆ.

    ನಗರದ ಹತ್ತು ವಾರ್ಡಗಳ ಪ್ರತಿ ಮನೆಗೂ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಇದರಿಂದ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪೌರಕಾರ್ಮಿಕರು ಹಾಗೂ ಸಹಾಯಕರು ಯಾವ ಮನೆಯಲ್ಲಿ ಕಸ ಹಾಕಿದ್ರು? ಹಸಿ, ಒಣ ಕಸ ವಿಂಗಡಿಸಿದ್ರಾ? ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಸುಲಭವಾಗಲಿದೆ. ಅಷ್ಟೇ ಅಲ್ಲದೆ ಹೊಸ ಬಿಬಿಎಂಪಿ ಸಿದ್ಧಪಡಿಸೊ ಆ್ಯಪ್‍ನಲ್ಲಿ ಎಲ್ಲಾ ಮಾಹಿತಿಯನ್ನ ಅಪ್ಲೋಡ್ ಮಾಡಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಸ್ಮಾರ್ಟ್ ಸಿಟಿ ಅಡಿಯಲ್ಲಿ ಕ್ಯೂಆರ್ ಕೋಡ್ ಬರಲಿದು, ಪ್ರತಿ ಕೋಡ್ ಅಳವಡಿಕೆಗೂ 4 ರೂಪಾಯಿಂದ 16 ರೂಪಾಯಿ ಆಗೊ ಸಾಧ್ಯತೆಯೂ ಇದೆ. ಈ ಮೂಲಕ ಬಿಬಿಎಂ ಕಸ ವಿಲೇವಾರಿ ವಿಚಾರದಲ್ಲಿ ಸ್ಮಾರ್ಟ್ ಆಗುತ್ತಿದ್ದು, ಸಾರ್ವಜನಿಕರು ಬಿಬಿಎಂಪಿ ಹೊಸ ಪ್ರಯತ್ನಕ್ಕೆ ಸಹಕರಿಸಬೇಕಿದೆ.

  • ನಿಮಗೂ ಈ ರೀತಿ ಆಗಬಹುದು ಎಚ್ಚರ – ಗೂಗಲ್ ಪೇ ಮೂಲಕ 1 ರೂಪಾಯಿ ಹಾಕಿ 97 ಸಾವಿರ ಎಗರಿಸಿದ

    ನಿಮಗೂ ಈ ರೀತಿ ಆಗಬಹುದು ಎಚ್ಚರ – ಗೂಗಲ್ ಪೇ ಮೂಲಕ 1 ರೂಪಾಯಿ ಹಾಕಿ 97 ಸಾವಿರ ಎಗರಿಸಿದ

    ಬೆಂಗಳೂರು: ಆನ್‍ಲೈನ್ ವ್ಯವಹಾರವನ್ನು ಖದೀಮರು ಹೇಗೆ ಬಂಡವಾಳ ಮಾಡಿಕೊಂಡು ಅಮಾಯಕರ ಹಣವನ್ನ ದೋಚುತ್ತಿದ್ದಾರೆ ಅನ್ನೋದಕ್ಕೆ ಈ ಘಟನೆ ನೈಜ ಉದಾರಣೆಯಾಗಿದೆ.

    ಮಹಿಳೆಯ ಗೂಗಲ್ ಪೇ ಖಾತೆಗೆ ಒಂದು ರೂಪಾಯಿ ಹಾಕಿ ಒರೋಬ್ಬರಿ 97 ಸಾವಿರ ಹಣವನ್ನ ದೋಚಿರುವ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ. ಬ್ರಿಂದಾ ದೇಸಾಯಿ ಎಂಬವರು ಪೀಠೋಪಕರಣಗಳನ್ನು ಮಾರಾಟ ಮಾಡಲೆಂದು ಒಎಲ್‍ಎಕ್ಸ್ ನಲ್ಲಿ ಹಾಕಿದ್ದಾರೆ. ಬೆಳಗ್ಗೆ ಹಾಕಿ ಸಂಜೆಗೆ ವ್ಯಕ್ತಿಯೊಬ್ಬ ಕರೆ ಮಾಡಿ ನೀವು ಒಎಲ್‍ಎಕ್ಸ್ ನಲ್ಲಿ ಹಾಕಿರುವ ಪೀಠೋಪಕರಣವನ್ನು ಖರಿದೀಸುವುದಾಗಿ ಹೇಳಿದ್ದಾನೆ.

    ನನ್ನ ಹೆಸರು ದೀಪಕ್ ಕಪೂರ್, ನಾನು ಮಿಲಿಟರಿ ಕ್ಯಾಂಟಿನ್‍ನಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಮಹಿಳೆ ಹಣ ಹೇಗೆ ಕೊಡುತ್ತೀರಾ ಎಂದು ದೀಪಕ್ ಕಪೂರ್ ಗೆ ಕೇಳಿದ್ದಾರೆ. ಗೂಗಲ್ ಪೇ ಮೂಲಕ ಕಳಿಸಿಕೊಡುವುದಾಗಿ ಹೇಳಿ ಮಹಿಳೆಯ ಗೂಗಲ್ ಪೇ ಗೆ ಒಂದು ರೂಪಾಯಿ ಕಳಿಸಿಕೊಟ್ಟಿದ್ದಾನೆ. ನಂತರ ಮತ್ತೊಂದು ಕ್ಯೂಆರ್ ಕೋಡ್ ಕಳಿಸಿದ್ದಾನೆ. ಮಹಿಳೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮತ್ತೊಂದು ರೂಪಾಯಿ ಮಹಿಳೆಯ ಗೂಗಲ್ ಪೇಗೆ ಬಂದಿದೆ.

    ನಂತರ 10 ಸಾವಿರದ ಕ್ಯೂಆರ್ ಕೋಡ್ ಕಳಿಸಿ ಇದನ್ನು ಸ್ಕ್ಯಾನ್ ಮಾಡಿ ಪಿನ್ ನಂಬರ್ ಕಳಿಸಲು ಮಹಿಳೆಗೆ ಹೇಳಿದ್ದಾನೆ. ಮಹಿಳೆ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮಹಿಳೆಯ ಅಕೌಂಟ್‍ನಿಂದ ಹತ್ತು ಸಾವಿರ ಹಣ ಆತನ ಖಾತೆಗೆ ವರ್ಗಾವಣೆ ಆಗಿದೆ. ಮಹಿಳೆ ಕಟ್ಟಾದ ಹಣದ ಬಗ್ಗೆ ಕರೆಮಾಡಿ ಕೇಳಿದಾಗ ಮರಳಿ ನಿಮ್ಮ ಅಕೌಂಟಿಗೆ ಕಳುಹಿಸುವುದಾಗಿ ಹೇಳಿ ಎಂಟು ಬಾರಿ ಕ್ಯೂಆರ್ ಕೋಡ್ ಕಳಿಸಿ ಬರೋಬ್ಬರಿ 97 ಸಾವಿರ ಹಣ ಎಗರಿಸಿಕೊಂಡು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

    ಸದ್ಯ ಈ ಸಂಬಂಧ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.