Tag: ಕ್ಯೂಆರ್‌ಕೋಡ್

  • ರಾಜ್ಯೋತ್ಸವಕ್ಕೆ ಗಿಫ್ಟ್ – ನಾಳೆಯಿಂದ ಮೊಬೈಲ್‌ನಲ್ಲೇ ಮೆಟ್ರೋ ಟಿಕೆಟ್ ಖರೀದಿಸಿ

    ರಾಜ್ಯೋತ್ಸವಕ್ಕೆ ಗಿಫ್ಟ್ – ನಾಳೆಯಿಂದ ಮೊಬೈಲ್‌ನಲ್ಲೇ ಮೆಟ್ರೋ ಟಿಕೆಟ್ ಖರೀದಿಸಿ

    ಬೆಂಗಳೂರು: ಕನ್ನಡ ರಾಜ್ಯೋತ್ಸವದ (Kannada Rajyotsava) ಹಿನ್ನಲೆಯಲ್ಲಿ ಬೆಂಗಳೂರಿನ (Bengaluru) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡಿದೆ.

    ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದ ಪ್ರಯಾಣಿಕರ ಸಮಯ ಉಳಿತಾಯ ಮಾಡಲು ಮೊಬೈಲ್‌ನಲ್ಲೇ (Mobile) ಕ್ಯೂಆರ್ ಕೋಡ್ (QRcode) ಬಳಸಿ ಟಿಕೆಟ್ ಖರೀದಿಸುವ ವಿಶೇಷ ಸೌಲಭ್ಯವನ್ನು ಜಾರಿಗೆ ತಂದಿದೆ. ಇದನ್ನೂ ಓದಿ: ನ.1ರಿಂದ ಕಾರಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ

    ಮಂಗಳವಾರದಿಂದ (ನವೆಂಬರ್ 1) ಮೊಬೈಲ್‌ನಲ್ಲಿ (Mobile) ಟಿಕೆಟ್ ಖರೀದಿಸಬಹುದಾಗಿದ್ದು, ಕ್ಯೂ ಆರ್ ಕೋಡ್ ಮೂಲಕ ಎಂಟ್ರಿ-ಎಕ್ಸಿಟ್ ಅವಕಾಶ ಪಡೆಯಬಹುದಾಗಿದೆ. ಇದು ಪ್ರಯಾಣಿಕರ ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ದೂರಮಾಡುವ ಉದ್ದೇಶವನ್ನೂ ಹೊಂದಿದೆ. ಇದನ್ನೂ ಓದಿ: ರಸ್ತೆಗುಂಡಿಗಳಿಂದಾದ ಸಾವನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ: ಕಾಂಗ್ರೆಸ್

    ಮೊಬೈಲ್ ಅಪ್ಲಿಕೇಶನ್ ಬಳಸಿ ಟಿಕೆಟ್ ಖರೀದಿಸಿ, ಮೊಬೈಲ್ ನಲ್ಲೇ ಎಂಟ್ರಿ ಅಥವಾ ಎಕ್ಸಿಟ್ ಗೇಟ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ಪ್ರವೇಶ ಪಡೆಯಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

    ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

    ನವದೆಹಲಿ: ಇನ್ಮುಂದೆ ನೀವು ತೆಗೆದುಕೊಳ್ಳುವ ಔಷಧಿ (Medicine) ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ನಕಲಿ ಔಷಧ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Government) ಶೀಘ್ರದಲ್ಲೇ ಟ್ರ‍್ಯಾಕ್ ಮತ್ತು ಟ್ರೇಸ್ (Track And Trace) ಜಾರಿ ಮಾಡಲು ಮುಂದಾಗಿದೆ.

    ಹೌದು. ನೀವು ತೆಗೆದುಕೊಳ್ಳುತ್ತಿರುವ ಔಷಧಿ ಸುರಕ್ಷಿತವಾಗಿದೆಯೋ ಇಲ್ಲವೋ? ಅದು ನಕಲಿಯೋ ಅಸಲಿಯೋ? ಎಂಬುದನ್ನು ತಿಳಿದುಕೊಳ್ಳುವ ಜೊತೆಗೆ ಕಳಪೆ ಹಾಗೂ ನಕಲಿ ಔಷಧ (Medicine) ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಟ್ರ‍್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನ ಪರಿಚಯಿಸಲಿದೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಪ್ರಾರಂಭಿಕ ಹಂತದಲ್ಲಿ 300 ಔಷಧ ತಯಾರಕರು ತಮ್ಮ ಉತ್ಪನ್ನ ಔಷಧಗಳಿಗೆ ಕ್ಯೂಆರ್‌ಕೋಡ್ ಅನ್ನು ಬಳಸಬೇಕಾಗುತ್ತದೆ. ಇದರಿಂದ ಆಂಟಿಬಯೊಟಿಕ್‌ನ ಪ್ರತಿ ಸ್ಟ್ರಿಪ್‌ 100 ರೂ.ಗಳ ಎಂಆರ್‌ಪಿ (MRP)ಗಿಂತ ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಟ್ರ‍್ಯಾಕ್ ಅಂಡ್ ಟ್ರೇಸ್ ಮಾಡೋದು ಹೇಗೆ?

    • ಮೊದಲು ಸರ್ಕಾರಿ ವೆಬ್‌ಸೈಟ್ ಮೂಲಕ ತೆರಳಿ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಬೇಕಾಗುತ್ತದೆ.
    • ಈ ಕೋಡ್ ಔಷಧದ ಬಗೆಗಿನ ಮಾಹಿತಿಯನ್ನು ದೃಢೀಕರಿಸುತ್ತದೆ. ಔಷಧದ ಸರಿಯಾದ ಹೆಸರು, ಬ್ರ‍್ಯಾಂಡ್, ತಯಾರಕರ ಹೆಸರು, ವಿಳಾಸ, ಬ್ಯಾಚ್ ಸಂಖ್ಯೆ, ಇದರೊಂದಿಗೆ ಉತ್ಪಾದನೆ ಹಾಗೂ ಮುಕ್ತಾಯಗೊಳ್ಳುವ ದಿನಾಂಕ ಹಾಗೂ ಉತ್ಪಾದನಾ ಪರವಾನಗಿ ದಿನಾಂಕವನ್ನೂ ತೋರಿಸುತ್ತದೆ.
    • ಇದು ಗ್ರಾಹಕರೇ ಸರ್ಕಾರಿ ಪೋರ್ಟಲ್‌ನಲ್ಲಿ ಯುನಿಕ್ ಐಡಿ ಸಂಖ್ಯೆಯನ್ನು ನಮೂದಿಸಲು ಹಾಗೂ ಮೊಬೈಲ್ ಮೂಲಕ ಅದನ್ನು ಟ್ರ‍್ಯಾಕ್ ಮಾಡಲು ಸಹಕಾರಿಯಾಗುತ್ತದೆ.
    • ಮೊದಲ ಹಂತದಲ್ಲಿ ಅತಿಹೆಚ್ಚು ಮಾರಾಟವಾಗುವ 300 ಔಷಧಗಳನ್ನು ಬಾರ್‌ಕೋಡ್‌ನೊಂದಿಗೆ ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.
    • ಈ ಕ್ರಮದಿಂದಾಗಿ ಉತ್ಪಾದನಾ ವೆಚ್ಚ ಶೇ.3-4 ರಷ್ಟು ಹೆಚ್ಚಳವಾಗಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]