Tag: ಕ್ಯಾಶ್ ಬ್ಯಾಕ್

  • ಕ್ಯಾಶ್‍ಬ್ಯಾಕ್ ಹೆಸರಿನಲ್ಲಿ ವಂಚನೆ- 1 ಲಕ್ಷ ದೋಖಾ!

    ಕ್ಯಾಶ್‍ಬ್ಯಾಕ್ ಹೆಸರಿನಲ್ಲಿ ವಂಚನೆ- 1 ಲಕ್ಷ ದೋಖಾ!

    ಹುಬ್ಬಳ್ಳಿ: ನಿಮ್ಮ ಬ್ಯಾಂಕ್ ಖಾತೆಗೆ 9,800 ರೂಪಾಯಿ ಕ್ಯಾಶ್‍ಬ್ಯಾಕ್ ಹಣ ಜಮೆ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿ ಪಡೆದು ಅಕ್ರಮವಾಗಿ 1.08 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದು, ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಧಾರವಾಡ ಮೂಲದ ಸ್ಮೀತಾ ಅವರಿಗೆ ಬರ್ಕಾ ಶರ್ಮಾ ಎಂಬ ಹೆಸರಿನ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ. ನಾನು ಮುಂಬೈ ಕ್ಯಾಶ್ ಪೇ ಬ್ಯಾಂಕ್ ವಿಭಾಗದಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಕ್ರೇಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್ ಪಾಯಿಂಟ್ಸ್ 9,800 ಆಗಿದ್ದು, ಈ ಪಾಯಿಂಟ್ ಗಳ ಅವಧಿ ಮುಗಿಯುತ್ತಿದೆ. ಹೀಗಾಗಿ ಈ ಕ್ಯಾಶ್‍ಬ್ಯಾಕ್ ಪಾಯಿಂಟ್ ನ 9,800 ರೂಪಾಯಿ ನಿಮ್ಮ ಖಾತೆಗೆ ಜಮೆ ಮಾಡುತ್ತೇನೆ ಎಂದು ನಂಬಿಸಿದ್ದಾರೆ.

    ಕ್ಯಾಶ್ ಬ್ಯಾಕ್ ಹಣದ ವಿಚಾರ ನಂಬಿದ ಸ್ಮಿತಾ, ಎಚ್‍ಡಿಎಫ್‍ಸಿ ಹಾಗೂ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್‍ಗಳ ಸಿವಿವಿ ನಂಬರ್, ವ್ಯಾಲಿಡಿಟಿ ಹಾಗೂ ಒಟಿಪಿ ಮತ್ತಿತ್ತರ ಮಾಹಿತಿ ನೀಡಿದ್ದಾರೆ. ಈ ವಿವರ ಪಡೆದ ಬರ್ಕಾ ಶರ್ಮಾ ತಕ್ಷಣವೇ ಅಕೌಂಟ್ ನಿಂದ 1.08.101 ರೂಪಾಯಿ ಹಣವನ್ನು ಆನ್‍ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.